Site icon Vistara News

Hair Dryer Effects: ನಿತ್ಯ ಹೇರ್‌ ಡ್ರೈಯರ್‌ ಬಳಸುತ್ತೀರಾ? ಹಾಗಾದಲ್ಲಿ ಈ ಎಚ್ಚರಿಕೆ ವಹಿಸಿ!

Hair Dryer Effects

ಶೀಲಾ ಸಿ. ಶೆಟ್ಟಿ, ಬೆಂಗಳೂರು

ಅತಿ ಹೆಚ್ಚಾಗಿ ಹಾಗೂ ಪದೇಪದೇ ಹೇರ್‌ ಡ್ರೈಯರ್ ಬಳಕೆ (Hair Dryer Effects) ನಿಮ್ಮ ಕೂದಲಿನ ಆರೋಗ್ಯ ಹದಗೆಡಿಸಬಹುದು ಎನ್ನುತ್ತಾರೆ ಹೇರ್‌ ಎಕ್ಸ್ಪರ್ಟ್ ಜಾನ್‌. ಹೌದು. ನೀವೇನಾದರೂ ಪ್ರತಿದಿನ ಕೂದಲು ಒಣಗಿಸಲು ಅಥವಾ ಸೆಟ್‌ ಮಾಡಲು ಹೇರ್‌ ಡ್ರೈಯರ್ ಬಳಸುವುದಾದಲ್ಲಿ, ಆದಷ್ಟು ಬಳಕೆ ಕಡಿಮೆ ಮಾಡಿ, ಕೂದಲಿನ ಆರೋಗ್ಯ ಕಾಪಾಡಿಕೊಳ್ಳಿ ಎಂದು ಸಲಹೆ ನೀಡುತ್ತಾರೆ ಅವರು.

ಸಂಸ್ಥೆಯ ಸಮೀಕ್ಷೆಯೊಂದರ ಪ್ರಕಾರ, ಹೇರ್‌ ಡ್ರೈಯರ್‌ನ ಅತ್ಯಧಿಕ ಬಳಕೆದಾರರಿಗೆ ಅತಿ ಹೆಚ್ಚು ಕೂದಲಿನ ಸಮಸ್ಯೆಗಳು ಕಂಡು ಬರುತ್ತವಂತೆ. ಕೂದಲನ್ನು ಒಣಗಿಸಲು ಹಾಗೂ ತೀರಾ ಹೆಚ್ಚಾಗಿ ಪ್ರತಿದಿನ ಬಳಸುವ ಹೇರ್‌ ಡ್ರೈಯರ್‌ನಿಂದ ದುಷ್ಪಾರಿಣಾಮಗಳೇ ಹೆಚ್ಚಂತೆ. ನಾನಾ ಸಮಸ್ಯೆಗಳನ್ನು ಹುಟ್ಟು ಹಾಕುತ್ತವಂತೆ.

ಹೇರ್‌ ಡ್ರೈಯರ್‌ ಬಳಕೆ ಹೆಚ್ಚಾದಂತೆ ಕೂದಲು ನಿಸ್ತೇಜ

ಹೆಚ್ಚು ಬಳಕೆಯಿಂದ ಕೇಶ ನಿಸ್ತೇಜವಾಗುವುದರೊಂದಿಗೆ, ಕೇಶದ ಆರೈಕೆ ಮಾಡಿದರೂ, ಕೂದಲು ಮಾತ್ರ ಜೀವವಿಲ್ಲದಂಗೆ ಕಾಣಿಸುತ್ತದೆ. ಇದರೊಂದಿಗೆ ಕೂದಲಿಗೆ ಬಳಸುವ ನಾನಾ ರಾಸಾಯನಿಕ ಸೌಂದರ್ಯ ವರ್ಧಕಗಳು ಕೂಡ ಕೂದಲನ್ನು ಒಣಗಿದ ಪೊರಕೆಯಂತೆ ಬಿಂಬಿಸುತ್ತದಂತೆ.

ಕೆಮಿಕಲ್‌ ಬ್ಲೀಚ್‌ನಿಂದಲೂ ಧಕ್ಕೆ

ಇನ್ನು, ಕೆಮಿಕಲ್‌ ಬ್ಲೀಚ್‌ ಹೆಚ್ಚಾಗಿ ಮಾಡಿಸುವುದರಿಂದಲೂ ಕೂದಲಲ್ಲಿನ ಮಾಯಿಶ್ಚರೈಸರ್‌ ಅಂಶ ಕಡಿಮೆಯಾಗಿ, ಒಣಗಿ ನಿಸ್ತೇಜವಾದಂತೆ ಕಾಣುತ್ತದೆ ಎನ್ನುತ್ತಾರೆ ಹೇರ್‌ ಸ್ಟೈಲಿಸ್ಟ್‌ ಸುಗುಣ.

ಸಾಮಾನ್ಯ ದುಷ್ಪಾರಿಣಾಮಗಳು

ಕೂದಲಿನ ಮಾಯಿಶ್ಚರೈಸರ್‌ ಅಂಶ ಕಡಿಮೆಯಾಗುತ್ತದೆ. ರಫ್‌ ಆಗಬಹುದು. ತಲೆ ಬುರುಡೆಯು ಒಣಗಿದಂತಾಗಿ ಹೊಟ್ಟು ಉಂಟಾಗಬಹುದು. ಕೂದಲಿನ ಬಣ್ಣ ಮಾಸಬಹುದು. ಉದುರಲೂ ಬಹುದು. ಇವೆಲ್ಲವನ್ನು ಗಮನದಲ್ಲಿಟ್ಟುಕೊಂಡು ಬಳಕೆ ಮಾಡಿ ಎಂದು ಸಲಹೆ ನೀಡುತ್ತಾರೆ ಹೇರ್‌ ಎಕ್ಸ್‌ಪಟ್ರ್ಸ್ ಸುಗುಣ.

ಅಪರೂಪಕ್ಕೆ ಬಳಸಿ

ನೀವು ಹೇರ್‌ ಡ್ರೈಯರ್‌ ಬಳಸಲೇ ಬೇಕಿದ್ದಲ್ಲಿ ಆದಷ್ಟೂ ಹೊರಗಡೆ ಹೋಗುವಾಗ, ಅಪರೂಪಕ್ಕೆ ಕಾರ್ಯಕ್ರಮಗಳಿಗೆ ರೆಡಿಯಾಗುವಾಗ ಬಳಸಿ. ಮನೆಯಲ್ಲಿರುವಾಗ ಬಳಕೆ ಮಾಡಬೇಡಿ.

ನ್ಯಾಚುರಲ್‌ ಪರಿಹಾರ ಕಂಡುಕೊಳ್ಳಿ

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Colour Shoes Fashion: ಬಣ್ಣ ಬಣ್ಣದ ಮಿಸ್‌ ಮ್ಯಾಚಿಂಗ್‌ ಶೂಗಳ ಹೊಸ ಟ್ರೆಂಡ್‌!

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version