Site icon Vistara News

Doggy Birthday Accessories Trend: ಮುದ್ದು ಶ್ವಾನಗಳ ಬರ್ತ್ ಡೇ ಸೆಲೆಬ್ರೇಷನ್‌ಗೆ ಬಂತು ಫ್ಯಾಷನಬಲ್‌ ಆಕ್ಸೆಸರೀಸ್‌

Doggy Birthday Accessories Trend

ಶೀಲಾ ಸಿ. ಶೆಟ್ಟಿ, ಬೆಂಗಳೂರು
ಮುದ್ದು ಶ್ವಾನಗಳ ಬರ್ತ್ ಡೇ ಸೆಲೆಬ್ರೇಷನ್‌ಗೆ ಸಾಥ್‌ ನೀಡುವ ವೆರೈಟಿ ಫ್ಯಾಷನಬಲ್‌ ಪೆಟ್‌ ಬರ್ತ್ ಡೇ ಆಕ್ಸೆಸರೀಸ್‌ಗಳು (Doggy Birthday Accessories trend) ಲಗ್ಗೆ ಇಟ್ಟಿವೆ. ಇಂದು ಮನೆಯ ಸಾಕು ಪ್ರಾಣಿ ಶ್ವಾನಗಳ ಬರ್ತ್ ಡೇ ಸೆಲೆಬ್ರೇಷನ್‌ ಮಾಡುವುದು ಸಾಮಾನ್ಯವಾಗುತ್ತಿದೆ. ಇನ್ನು ಮಕ್ಕಳಂತೆ ಇವನ್ನು ಪ್ರೀತಿಸುವ ಪೋಷಕರು, ಅವುಗಳ ಹುಟ್ಟು ಹಬ್ಬವನ್ನು ಆಚರಿಸುವುದು, ಅದಕ್ಕೆ ತಕ್ಕಂತೆ ಥೀಮ್‌ ಹಾಗೂ ಕಾನ್ಸೆಪ್ಟ್‌ಗೆ ಹೊಂದುವಂತೆ ಡೆಕೋರೇಷನ್‌ ಮಾಡಿ ಸಂಭ್ರಮಿಸುವುದು ಕಾಮನ್‌ ಆಗಿದೆ. ಇದಕ್ಕೆ ಪೂರಕ ಎಂಬಂತೆ, ವೈವಿಧ್ಯಮಯ ಫ್ಯಾಷೆನಬಲ್‌ ಆಕ್ಸೆಸರೀಸ್‌ಗಳು ಪೆಟ್‌ ಶಾಪ್‌ಗಳಿಗೆ ಎಂಟ್ರಿ ನೀಡಿವೆ ಮಾತ್ರವಲ್ಲ, ಆನ್‌ಲೈನ್‌ ಪೆಟ್‌ ಶಾಪ್‌ಗಳಲ್ಲೂ ದೊರೆಯುತ್ತಿವೆ. ಎನ್ನುತ್ತಾರೆ ಪೆಟ್‌ ಎಕ್ಸ್‌ಪಟ್ರ್ಸ್.

ಶ್ವಾನಗಳಿಗೂ ಬರ್ತ್ ಡೇ ಸೆಲೆಬ್ರೇಷನ್‌

“ಸಾಕು ಪ್ರಾಣಿ ಶ್ವಾನಗಳು, ಇಂದು ಮನುಷ್ಯರ ಜೀವನದಲ್ಲಿ ತಮ್ಮದೇ ಆದ ಪಾತ್ರವಹಿಸುತ್ತಿವೆ. ಮನೆಯ ಮಕ್ಕಳಂತಾಗಿವೆ. ಮಕ್ಕಳಿಗೆ ಬರ್ತ್ ಡೇ ಸೆಲೆಬ್ರೇಟ್‌ ಮಾಡುವಂತೆ ಇವುಗಳ ಹುಟ್ಟುಹಬ್ಬವನ್ನು ಆಚರಿಸುವುದು ಕಂಡು ಬರುತ್ತಿದೆ. ಹಾಗಾಗಿ, ಈ ಶ್ವಾನಗಳನ್ನು ಸಿಂಗರಿಸುವ ಆಕ್ಸೆಸರೀಸ್‌ನಿಂದಿಡಿದು ಇವುಗಳು ಸವಿಯುವ ಕೇಕ್‌, ಬಿಸ್ಕಟ್‌ ಹಾಗೂ ಡೆಕೋರೇಟಿವ್‌ ಐಟಂಗಳನ್ನು ಖರೀದಿಸಿ ಸಿಂಗರಿಸುವುದು ಹೆಚ್ಚಾಗಿದೆ. ಅಷ್ಟೇಕೆ! ಮಾಲೀಕರು ತೆರೆದಿರುವ ಸಾಕಷ್ಟು ಶ್ವಾನಗಳ ಸೋಷಿಯಲ್‌ ಮೀಡಿಯಾ ಅಕೌಂಟ್‌ಗಳಲ್ಲೂ ಕೂಡ ಈ ಚಿತ್ರಣವನ್ನು ಕಾಣಬಹುದು ಎನ್ನುತ್ತಾರೆ ಪೆಟ್‌ ಶಾಪ್‌ನ ಮ್ಯಾನೇಜರ್‌.

ಬರ್ತ್ ಡೇ ಆಕ್ಸೆಸರೀಸ್‌ನಲ್ಲಿ ಏನೇನಿವೆ ?

ಬರ್ತ್ ಡೇ ಬಾಂದಾನಾ ಸೆಟ್‌, ಡಾಗ್‌ ಹ್ಯಾಪಿ ಬರ್ತ್ ಡೇ ಬ್ಯಾನರ್‌, ಬರ್ತ್ ಡೇ ಕೇಕ್‌ ಟಾಪರ್‌, ಬಂಟಿಂಗ್‌ ಡೆಕೋರೇಷನ್‌ ಐಟಂ, ಬರ್ತ್ ಡೇ ಪಾರ್ಟಿ ಥೀಮ್‌ ಸ್ವಿರ್ಲ್, ಕಟೌಟ್ಸ್, ಪಪ್‌ಟೇಲ್‌ ಡಾಗ್‌ ಸೂಟ್‌, ಡಾಗ್‌ ಬೋ ಟೈ, ರಾಯಲ್ ಬೋ, ಟೆಕ್ಸ್ಟ್ ಫಾಯಿಲ್‌ ಬಲೂನ್‌ ಸೆಟ್‌, ಪಪ್ಪಿ ಮಾಸ್ಕ್‌ಗಳು, ಫಂಕಿ ಪಾರ್ಟಿ ಬ್ಯಾನರ್‌, ಡಾಗ್‌ ಬೋನ್‌ ಫಾಯಿಲ್‌ ಬಲೂನ್ಸ್, ಡಾಗ್‌ ಥೀಮ್‌ ಬರ್ತ್ ಡೇ ಬಲೂನ್ಸ್, ಬರ್ತ್ ಡೇ ಬಾಯ್‌ ಸ್ಕಾರ್ಫ್, ಡಾಗ್‌ ಫ್ರೆಂಡ್ಲಿ ಪ್‌ ಕೇಕ್ಸ್, ಡಾಗ್ಗಿ ಐಸ್‌ಕ್ರೀಮ್ಸ್, ಡಾಗ್ಗಿ ಫೋಟೋ ಬೂತ್‌, ಡಾಗ್‌ ಟಾಯ್ಸ್, ಬೈಟ್‌ ಸೈಝ್‌ ಟ್ರೀಟ್ಸ್, ಕಾಲರ್‌ ಆಕ್ಸೆಸರೀಸ್‌ ಸೇರಿದಂತೆ ನಾನಾ ಬಗೆಯವು ಪೆಟ್‌ ಶಾಪ್‌ನಲ್ಲಿ ಮಾತ್ರವಲ್ಲ, ಆನ್‌ಲೈನ್‌ ಶಾಪ್‌ಗಳಲ್ಲೂ ಲಭ್ಯವಿದೆ. ಆಯಾ ಡಿಸೈನ್‌ಗೆ ತಕ್ಕಂತೆ ದರ ನಿಗಧಿಯಾಗಿರುತ್ತದೆ.

ಡಾಗ್‌ ಬರ್ತ್ ಡೇ ಆಕ್ಸೆಸರೀಸ್‌ ಆಯ್ಕೆ

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Denim Co Ord Set Fashion: ವಿಂಟರ್‌ ಫ್ಯಾಷನ್‌ನಲ್ಲಿ ಬಂತು ಬೆಚ್ಚಗಿಡುವ ಡೆನಿಮ್‌ ಕೋ ಆರ್ಡ್ ಸೆಟ್‌

Exit mobile version