ಶೀಲಾ ಸಿ. ಶೆಟ್ಟಿ, ಬೆಂಗಳೂರು
ಚಳಿಗಾಲದಲ್ಲಿ ಕೆಲವು ಬಗೆಯ ಲಿಪ್‌ಸ್ಟಿಕ್ ಹಚ್ಚಲೇಕೂಡದು ಎನ್ನುತ್ತಾರೆ ಸೌಂದರ್ಯ ತಜ್ಞರು. ಹೌದು. ವಿಂಟರ್ ಸೀಸನ್‌ನಲ್ಲಿ ಕಂಡ ಕಂಡ ಲಿಪ್‌ಸ್ಟಿಕ್ ಹಚ್ಚಲು ಸಾಧ್ಯವಿಲ್ಲ! ಹಚ್ಚಿದರೂ ನಿಮ್ಮ ತುಟಿಯು ಬಿರುಕು ಮೂಡುವುದಂತೂ ಗ್ಯಾರಂಟಿ. ಅದಕ್ಕಾಗಿ ಈ ಸೀಸನ್‌ನಲ್ಲಿ ನೀವು ಯಾವ ಬಗೆಯ ಲಿಪ್‌ಸ್ಟಿಕ್ ಹಚ್ಚುವುದು ಉತ್ತಮ, ಯಾವುದು ಬೇಡ? ಎಂಬುದರ ಬಗ್ಗೆ ಸೌಂದರ್ಯ ತಜ್ಞರು ಇಲ್ಲಿ ತಿಳಿಸಿದ್ದಾರೆ. ಫಾಲೋ ಮಾಡಿ ನೋಡಿ.
ಮ್ಯಾಟ್ ಲಿಪ್‌ಸ್ಟಿಕ್ ಆವಾಯ್ಡ್ ಮಾಡಿ
ಮ್ಯಾಟ್ ಲಿಪ್‌ಸ್ಟಿಕ್‌ಗಳನ್ನು ಆದಷ್ಟೂ ಚಳಿಗಾಲದಲ್ಲಿ ಹಚ್ಚುವುದನ್ನು ಆವಾಯ್ಡ್ ಮಾಡಿ. ಇಲ್ಲವಾದಲ್ಲಿ ತುಟಿಯ ಆರೋಗ್ಯಕ್ಕೆ ಧಕ್ಕೆಯುಂಟಾಗುವುದು. ಯಾಕೆಂದರೇ, ಮ್ಯಾಟ್ ಲಿಪ್‌ಸ್ಟಿಕ್‌ಗಳು ತುಟಿಯನ್ನು ಡ್ರೈ ಆಗಿರಿಸುತ್ತವೆ. ಇವುಗಳಲ್ಲಿ ಗ್ಲೋಸಿ ಅಂಶವಿರುವುದಿಲ್ಲ. ಹಚ್ಚಿದ ನಂತರ ತುಟಿಗಳು ಒಣಗಿದಂತಾಗುತ್ತವೆ.
ಲಾಂಗ್ ಲಾಸ್ಟಿಂಗ್ ಲಿಪ್‌ಸ್ಟಿಕ್ಸ್ ಬೇಡ
ಲಾಂಗ್ ಲಾಸ್ಟಿಂಗ್ ಹೆಸರಲ್ಲಿ ಬರುವ ಲಿಪ್‌ಸ್ಟಿಕ್‌ಗಳನ್ನು ಈ ಸೀಸನ್‌ನಲ್ಲಿ ಅತಿ ಹೆಚ್ಚಾಗಿ ಹಚ್ಚಬೇಡಿ. ಇದು ಇಡೀ ದಿನವೇನೋ ನಿಮ್ಮ ತುಟಿಯಲ್ಲಿ ಉಳಿದಿರುತ್ತದೆ. ಆದರೆ, ಕೊನೆಯಲ್ಲಿ ರಾತ್ರಿ ಲಿಪ್‌ಸ್ಟಿಕ್ ತೆಗೆದ ನಂತರ ಒಣಗಿದಂತಾಗಿರುತ್ತದೆ.
ವಾಟರ್ ಪ್ರೂಫ್ ಲಿಪ್‌ಸ್ಟಿಕ್ಸ್ ಗೆ ನೋ ಹೇಳಿ
ವಾಟರ್ ಪ್ರೂಫ್ ಲಿಪ್‌ಸ್ಟಿಕ್‌ಗಳನ್ನು ಆದಷ್ಟೂ ಬಳಸಬೇಡಿ. ಮಾನ್ಸೂನ್‌ನ ಮಳೆಗಾಲಕ್ಕೆ ಹೊಂದುವ ಇವು ಚಳಿಗಾಲದ ಚಳಿ-ಗಾಳಿಗೆ ಹೊಂದುವುದಿಲ್ಲ! ಬದಲಿಗೆ ಮತ್ತಷ್ಟು ತುಟಿಯ ಚರ್ಮವನ್ನು ಒಣಗಿಸಿ, ಪದರ ಪದರದಂತೆ ಬಿರುಕು ಮೂಡುತ್ತದೆ. ಹಾಗಾಗಿ ಎಚ್ಚರವಹಿಸಿ.
ಮತ್ತ್ಯಾವ ಲಿಪ್‌ಸ್ಟಿಕ್ಸ್ ಸೂಕ್ತ?
ಗ್ಲೋಸಿ ಲಿಪ್‌ಸ್ಟಿಕ್ಸ್ ಬೆಸ್ಟ್. ಇವು ನ್ಯಾಚುರಲ್ ಲುಕ್ ನೀಡುವುದರೊಂದಿಗೆ ಇದರೊಳಗಿರುವ ಪೆಟ್ರೊಲಿಯಂ ಜೆಲ್ಲಿ ಅಂಶಗಳು ತುಟಿಯನ್ನು ಮಾಯಿಶ್ಚರೈಸರ್‌ನಂತೆ ಕಾಪಾಡುತ್ತವೆ. ಒಣಗಲು ಬಿಡುವುದಿಲ್ಲ. ಸುಕೋಮಲವಾಗಿರುವಂತೆ ಬಿಂಬಿಸುತ್ತವೆ.
- ಪ್ರತಿದಿನ ತುಟಿಗೆ ಲಿಪ್ಬಾಮ್ ಹಚ್ಚಿ.
- ಮನೆಗೆ ಬಂದ ನಂತರ ಲಿಪ್‌ಸ್ಟಿಕ್ ತೆಗೆದು ಬಿಡಿ.
- ಈ ಸೀಸನ್‌ನಲ್ಲಿ ಗ್ಲೋಸಿ ಲಿಪ್‌ಸ್ಟಿಕ್ಸ್ ಬಳಸಿ.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Fashion Show: ಕೇರಳದ ಬ್ರೈಡಲ್ ಫ್ಯಾಷನ್ ವೀಕ್‌ನಲ್ಲಿ ಕನ್ನಡತಿ ಚಂದನಾ ಶೋ ಸ್ಟಾಪರ್ ವಾಕ್
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ