ಶೀಲಾ ಸಿ. ಶೆಟ್ಟಿ, ಬೆಂಗಳೂರು
ಡಬ್ಬಲ್ ತ್ರಿಬಲ್ ನೆಕ್ ಚೈನ್‌ಗಳು (Double Triple Neck Chain) ಇದೀಗ ಜೆನ್ ಜಿ ಹುಡುಗಿಯರ ಜ್ಯುವೆಲರಿ ಲಿಸ್ಟ್‌ನಲ್ಲಿ ಟ್ರೆಂಡಿಯಾಗಿವೆ. ನೋಡಲು ಲೇಯರ್ಡ್ ಲುಕ್‌ನಂತೆ ಕಾಣುವ ಈ ಚೈನ್‌ಗಳು ಟ್ರೆಡಿಷನಲ್ ಚೈನ್ ಲುಕ್‌ನೊಂದಿಗೆ ವೆಸ್ಟರ್ನ್ ಕಾನ್ಸೆಪ್ಟ್ ಇರುವ ಮಿಕ್ಸ್ ಮ್ಯಾಚ್ ಡಿಸೈನ್‌ಗಳನ್ನು ಹೊಂದಿವೆ. ಡಿಫರೆಂಟ್ ಥೀಮ್ ಹಾಗೂ ಕಾನ್ಸೆಪ್ಟ್ ಹೊಂದಿರುವ ಇವು ಈ ಸೀಸನ್‌ನ ಜ್ಯುವೆಲರಿ ಲಿಸ್ಟ್ಗೆ ಸೇರಿವೆ.
ಏನಿದು ಡಬ್ಬಲ್ ತ್ರಿಬಲ್ ನೆಕ್ ಚೈನ್ಸ್
ಒಂದಕ್ಕಿಂತ ಹೆಚ್ಚು ಲೈನ್ ಹೊಂದಿರುವ ಇವು ನೆಕ್ಲೇಸ್ ಅಲ್ಲ! ತೆಳುವಾದ ಅಥವಾ ಟ್ರೆಂಡಿ ಚೈನ್‌ನಂತಹ ಡಿಸೈನ್ ಹೊಂದಿರುವ ಅಥವಾ ಇವುಗಳೊಂದಿಗೆ ಟೈನಿ ಪೆಂಡೆಂಟ್ ಹೊಂದಿರುವ ಡಬ್ಬಲ್ ತ್ರಿಬಲ್ ನೆಕ್‌ಚೈನ್‌ಗಳಿವು. ವೈಟ್ ಮೆಟಲ್, ಬ್ಲಾಕ್ ಮೆಟಲ್ ಹಾಗೂ ಪ್ಲಾಟೆನಿಯಂ ಕೋಟೇಡ್, ಗೋಲ್ಡನ್ ಕೋಟೆಡ್‌ನಲ್ಲಿ ದೊರೆಯುತ್ತಿವೆ. ಊಹೆಗೂ ಮೀರಿದ ಮಿಕ್ಸ್ ಮ್ಯಾಚ್ ಫಂಕಿ ಡಿಸೈನ್‌ಗಳಲ್ಲಿ ಇವು ಲಭ್ಯ ಎನ್ನುತ್ತಾರೆ ಜ್ಯುವೆಲ್ ಡಿಸೈನರ್ ರೀಟಾ. ಅವರ ಪ್ರಕಾರ, ಕೆಲವೊಮ್ಮೆ ಈ ಚೈನ್‌ಗಳೊಂದಿಗೆ ಲಿಂಕ್ಸ್, ಪರ್ಲ್ ಹಾಗೂ ಬೀಡ್ಸ್ ವಿನ್ಯಾಸವೂ ಸೇರಿರಬಹುದು. ಇಂತಹದ್ದೇ ಎಂದು ಹೇಳಲಾಗುವುದಿಲ್ಲ. ಇವನ್ನು ಜಂಕ್ ಜ್ಯುವೆಲರಿ ಎಂದೂ ಕೂಡ ಕರೆಯಬಹುದು ಎನ್ನುತ್ತಾರೆ.
ಯಾವುದಕ್ಕೆ ಹೆಚ್ಚು ಬೇಡಿಕೆ
ಒಂದೆಳೆ ಚೈನ್, ಇನ್ನೊಂದೆಳೆ ಇನ್ನೊಂದು ಡಿಸೈನ್ ಲಿಂಕ್ ಚೈನ್, ಕ್ರಿಸ್ಟಲ್ ಒಂದೆಳೆ, ಇದರೊಂದಿಗೆ ಚಿಕ್ಕ ಟೈನಿ ಪೆಂಡೆಂಟ್ ಇರುವಂತಹ ನೆಕ್‌ಚೈನ್ಸ್, ಕೆಲವು ತ್ರಿಬಲ್ ಅಲ್ಲ, ನಾಲ್ಕೈದು ಎಳೆಯವು ಕೂಡ ಚಾಲ್ತಿಯಲ್ಲಿವೆ. ಮಲ್ಟಿ ಲೇಯರ್ಡ್ ನೆಕ್‌ಚೈನ್ ಎಂದೆನಿಸಿಕೊಳ್ಳುವ ಇವು ಕೆಲವೊಮ್ಮೆ ಕ್ರಿಸ್ಟಲ್, ಪರ್ಲ್, ಬೀಡ್ಸ್, ಸ್ಟೋನ್ಸ್, ಲಿಂಕ್ಸ್ ಹೀಗೆ ನಾನಾ ವಿನ್ಯಾಸದ ಎಳೆಗಳನ್ನು ಹೊಂದಿರುತ್ತವೆ. ಇವಕ್ಕೆ ಇದೀಗ ಹೆಚ್ಚು ಬೇಡಿಕೆ.
ಎಲ್ಲೆಲ್ಲಿ ಲಭ್ಯ
ಉದ್ಯಾನನಗರಿಯ ಸ್ಟ್ರೀಟ್ ಶಾಪಿಂಗ್ ಮಾಡುವವರಿಗೆ ಈ ಕುರಿತು ಹೆಚ್ಚು ತಿಳಿದಿರುತ್ತದೆ. ಕಮರ್ಷಿಯಲ್ ಸ್ಟ್ರೀಟ್ಸ್, ಮಲ್ಲೇಶ್ವರ, ಜಯನಗರ ಬಿಡಿಎ ಕಾಂಪ್ಲೇಕ್ಸ್, ಗಾಂಧಿಬಜಾರ್ ಹಾಗೂ ಮಾಲ್‌ಗಳಲ್ಲಿ ನಡೆಯುವ ಫ್ಲೀ ಮಾರ್ಕೆಟ್‌ಗಳ ಸ್ಟಾಲ್‌ಗಳಲ್ಲೂ ದೊರೆಯುತ್ತವೆ.
ಮಿಕ್ಸ್ ಮ್ಯಾಚ್ ಮಾಡುವುದು ಹೀಗೆ
- ಫಂಕಿ ಲುಕ್ ಡ್ರೆಸ್ಗಳಿಗೆ ಮ್ಯಾಚಿಂಗ್ ಬೆಸ್ಟ್.
- ಸೆಮಿ ಎಥ್ನಿಕ್ ಉಡುಪುಗಳಿಗೆ ಪರ್ಲ್, ಬೀಡ್ಸ್ ಎಳೆಗಳಿರುವ ನೆಕ್‌ಚೈನ್ ಹೊಂದುತ್ತವೆ.
- ವೆಸ್ಟರ್ನ್ ಔಟ್ಫಿಟ್ಗಳಿಗೆ ಕಂಪ್ಲೀಟ್ ಸೂಟ್ ಆಗುತ್ತವೆ.
- ವೈಡ್ ನೆಕ್ಲೈನ್ ಇರುವಂತಹ ಔಟ್ಫಿಟ್ಗಳಿಗೆ ಮತ್ತಷ್ಟು ಚನ್ನಾಗಿ ಕಾಣುತ್ತವೆ.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Fashion Pageant Awareness: ಫ್ಯಾಷನ್ ಪೇಜೆಂಟ್‌ನಲ್ಲಿ ಭಾಗವಹಿಸುತ್ತಿದ್ದೀರಾ! ಹೆಸರು ನೊಂದಾಯಿಸುವ ಮುನ್ನಇದನ್ನು ಓದಿ ಬಿಡಿ