ಶೀಲಾ ಸಿ. ಶೆಟ್ಟಿ, ಬೆಂಗಳೂರು
ಗ್ರ್ಯಾಂಡ್ ಲುಕ್ ನೀಡುವ ಬಾಂದನಿ ದುಪಟ್ಟಾಗಳು ಇಂದು ಫ್ಯಾಷನ್ ಲೋಕದಲ್ಲಿ ಹೊಸ ರೂಪ ಹಾಗೂ ಡಿಸೈನ್‌ನಲ್ಲಿ ಬಿಡುಗಡೆಗೊಂಡಿವೆ. ಮೂಲತಃ ನಾರ್ತ್ ಇಂಡಿಯನ್ ಎಥ್ನಿಕ್ ಉಡುಪಿನ ಲಿಸ್ಟ್‌ನಲ್ಲಿದ್ದ ಬಾಂದನಿ ದುಪಟ್ಟಾಗಳು, ಮೊದಲಿನಿಂದಲೂ ಗ್ರ್ಯಾಂಡ್ ಲುಕ್‌ಗೆ ಸಾಥ್ ನೀಡುತ್ತಾ ಬಂದಿವೆ. ಇದೀಗ ದಕ್ಷಿಣ ಭಾರತೀಯರಿಗೂ ಪ್ರೀತಿ ಪಾತ್ರವಾಗಿವೆ. ಪ್ರತಿ ಬಾರಿಯಂತೆ ಈ ಬಾರಿಯೂ ಕೂಡ ಕಲರ್‌ಫುಲ್ ಬಾಂದನಿ ದುಪಟ್ಟಾಗಳು ಮಾರುಕಟ್ಟೆಗೆ ಆಗಮಿಸಿದ್ದು, ಮತ್ತಷ್ಟು ಕಲರ್‌ಫುಲ್ ಡಿಸೈನ್‌ನಲ್ಲಿ ಬಿಡುಗಡೆಗೊಂಡಿವೆ.
ಹೆವಿ ವಿನ್ಯಾಸದ ಬಾಂದನಿ ದುಪಟ್ಟಾ
ಒಂದಲ್ಲ, ಎರಡಲ್ಲ, ಊಹೆಗೂ ಮೀರಿದ ಕಲರ್‌ನ ಪ್ರಿಂಟೆಡ್ ವರ್ಷನ್ ಇರುವಂತಹ ಬಾಂದನಿ ದುಪಟ್ಟಾಗಳು ಇದೀಗ ಡಿಸೈನರ್ ಹಾಗೂ ಬ್ರೈಡಲ್ ಕಲೆಕ್ಷನ್‌ನಲ್ಲಿಯೂ ಬಂದಿದ್ದು, ಮತ್ತಷ್ಟು ರಂಗುರಂಗಾಗಿವೆ. ಇವುಗಳ ಕಲರ್‌ನಲ್ಲಿ ಗೋಲ್ಡನ್ ಹಾಗೂ ಸಿಲ್ವರ್ ಲೈನ್ಸ್, ಸ್ಟ್ರೈಪ್ಸ್ ಹಾಗೂ ಮೋಟಿಫ್ ಇರುವಂತವು ಪ್ರಚಲಿತದಲ್ಲಿವೆ.
ಡಿಸೈನರ್ ಬಾಂದನಿ ದುಪಟ್ಟಾ
ಸಾದಾ ಉಡುಪಿಗೂ ಗ್ರ್ಯಾಂಡ್ ಲುಕ್ ನೀಡಬಲ್ಲ ಬಾಂದನಿ ದುಪಟ್ಟಾಗಳು ಇದೀಗ ಡಿಸೈನರ್‌ಗಳ ಕೈಯಲ್ಲಿ ಮತ್ತಷ್ಟು ವಿನ್ಯಾಸಗೊಂಡಿವೆ. ಜೈಪುರಿ ಬಾಂದನಿ ದುಪಟ್ಟಾ, ಹೆವ್ವಿ ಡಿಸೈನ್ ದುಪಟ್ಟಾ, ಬ್ರೈಡಲ್ ಬಾಂದನಿ ಹೀಗೆ ನಾನಾ ಹೆಸರಲ್ಲಿ ಹೊಸ ರೂಪದಲ್ಲಿ ಎಂಟ್ರಿ ನೀಡಿ ಮಹಿಳೆಯರನ್ನು ಬರ ಸೆಳೆದಿವೆ.
ಬಾಂದನಿ ಫ್ಯಾಬ್ರಿಕ್‌ನಲ್ಲಿ ಇಂಡೋ-ವೆಸ್ಟರ್ನ್ ಉಡುಪುಗಳು
ಇನ್ನು ಜೀನ್ಸ್‌ಗೆ ಬಾಂದನಿ ಸ್ಟೋಲ್, ಬಾಂದನಿ ಕಫ್ತಾನ್, ಬಾಂದನಿ ಶ್ರಗ್, ಬಾಂದನಿ ವೇಸ್‌ಕೋಟ್ ಸೇರಿದಂತೆ ನಾನಾ ವೆಸ್ಟರ್ನ್ ಉಡುಪುಗಳ ಜತೆಗೂ ಇವು ಕಾಣಿಸಿಕೊಂಡಿವೆ.
ಲೆಹೆಂಗಾ-ಅನಾರ್ಕಲಿ-ಕಮೀಝ್‌ಗೆ ಬಾಂದನಿ ದುಪಟ್ಟಾ
ಲೆಹೆಂಗಾ ಜತೆಗೂ ಬಾಂದನಿ ದುಪಟ್ಟಾ ಬಳಸುವವರು ಹೆಚ್ಚಾಗಿದ್ದಾರೆ. ಗ್ರ್ಯಾಂಡ್ ಲುಕ್ ನೀಡುವ ಇವು ಇದೀಗ ಅನಾರ್ಕಲಿಯೊಂದಿಗೂ ಧರಿಸುವುದನ್ನು ಕಾಣಬಹುದು. ಬಾಂದನಿ ದುಪಟ್ಟಾದಲ್ಲಿ ಮೈಕಾ ಮಿರರ್ ವರ್ಕ್‌ನವು ಬೇಡಿಕೆಯಲ್ಲಿವೆ. ಇವು ಒಂದಕ್ಕಿಂತ ಒಂದು ನೋಡಲು ವಿಭಿನ್ನ ಹಾಗೂ ಚಿತ್ರ-ವಿಚಿತ್ರ ಡಿಸೈನ್‌ಗಳನ್ನೊಳಗೊಂಡಿವೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.
ಬಾಂದನಿ ದುಪಟ್ಟಾ ಪ್ರಿಯರು ಪಾಲಿಸಬೇಕಾದ ನಿಯಮಗಳು
- ಬಾಂದಿನಿ ಫ್ಯಾಬ್ರಿಕ್ ದುಪಟ್ಟಾಗಳನ್ನು ನೀರಿನಲ್ಲಿ ಅದ್ದುವಂತಿಲ್ಲ.
- ಡ್ರೈವಾಶ್ ಮಾತ್ರ ಮಾಡಬೇಕು.
- ಬಾಂದನಿ ದುಪಟ್ಟಾವನ್ನು ಮದುವೆ ಸಮಾರಂಭಗಳಿಗೂ ಧರಿಸಬಹುದು.
- ಸಾದಾ ಉಡುಪುಗಳ ಮೇಲೆ ಬಾಂದನಿ ದುಪಟ್ಟಾ ಆಕರ್ಷಕವಾಗಿ ಕಾಣುತ್ತದೆ.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ| Fashion News | ಜಪಾನಿಯರ ಮನ ಗೆದ್ದ ಕನ್ನಡತಿ ಶರಧಿ ಶೆಟ್ಟಿಯ ಒರಿಗಾಮಿ ಡಿಸೈನರ್ ವೇರ್