ಶೀಲಾ ಸಿ. ಶೆಟ್ಟಿ, ಬೆಂಗಳೂರು
ಮಲ್ಟಿಪಲ್ ಇಯರ್ ಪಿಯರ್ಸಿಂಗ್ (Ear Piercing Fashion) ಫ್ಯಾಷನ್ ಮತ್ತೆ ಮರಳಿದೆ. ಹೌದು. ಒಂದಕ್ಕಿಂತ ಹೆಚ್ಚು ಕಡೆ ಕಿವಿ ಚುಚ್ಚಿಸುವ ಈ ಫ್ಯಾಷನ್ ಇದೀಗ ಹೊಸ ಕಾನ್ಸೆಪ್ಟ್ನೊಂದಿಗೆ ಮರಳಿದ್ದು, ಎಥ್ನಿಕ್ ಲುಕ್ ಬದಲು ವೆಸ್ಟರ್ನ್ ಲುಕ್ಗೆ ಮ್ಯಾಚ್ ಆಗುವಂತೆ ಈ ಜನರೇಷನ್ನ ಹುಡುಗಿಯರನ್ನು ಸೆಳೆದಿದೆ.
ಏನಿದು ಮಲ್ಟಿಪಲ್ ಇಯರ್ ಪಿಯರ್ಸಿಂಗ್
ಸಾಮಾನ್ಯವಾಗಿ ಎಲ್ಲರೂ ಚಿಕ್ಕ ವಯಸ್ಸಿನಲ್ಲಿಯೇ ಕಿವಿಯ ಅಂದಕ್ಕಾಗಿ ಕಿವಿ ಚುಚ್ಚಿಸಿಕೊಂಡು ಕಿವಿಯೊಲೆಗಳನ್ನು ಧರಿಸುವುದು ಸಾಮಾನ್ಯ. ಆದರೆ, ಕೆಲವರು ಮಲ್ಟಿಪಲ್ ಅಂದರೇ, ಕಿವಿಯ ಒಂದು ಜಾಗಕ್ಕಿಂತ ಹೆಚ್ಚು ಕಡೆ ಚುಚ್ಚಿಸಿಕೊಂಡು ನಾನಾ ಬಗೆಯ ಕಿವಿಯೊಲೆಗಳನ್ನು ಧರಿಸುತ್ತಾರೆ. ಇದು ಅವರವರ ಆಯ್ಕೆ ಕೂಡ. ಈ ಫ್ಯಾಷನ್ ರೆಟ್ರೊ ಫ್ಯಾಷನ್ನಲ್ಲಿತ್ತು. ಎರಡು ದಶಕಗಳ ಹಿಂದೇ ಈ ಶೈಲಿಯಲ್ಲಿ ಒಂದಕ್ಕಿಂತ ಹೆಚ್ಚು ಕಿವಿಯೊಲೆಗಳನ್ನು ಅಥವಾ ರಿಂಗ್ಗಳನ್ನು ಧರಿಸುವುದು ಜ್ಯುವೆಲರಿ ಫ್ಯಾಷನ್ನ ಟಾಪ್ ಲಿಸ್ಟ್ಗೆ ಸೇರಿತ್ತು. ಬರಬರುತ್ತಾ ಈ ಫ್ಯಾಷನ್ ಮರೆಯಾಗಿತ್ತು.
ವೆಸ್ಟರ್ನ್ ಔಟ್ಫಿಟ್ಗೆ ಪ್ರಯೋಗಾತ್ಮಕ ಮ್ಯಾಚಿಂಗ್
ಎಥ್ನಿಕ್ ಫ್ಯಾಷನ್ಗಿಂತ ಇದೀಗ ವೆಸ್ಟರ್ನ್ ಔಟ್ಫಿಟ್ಗೆ ಮ್ಯಾಚ್ ಮಾಡುವ ಕಿವಿಯ ಒಲೆ, ರಿಂಗ್ ಅಥವಾ ಸ್ಟಡ್ಸ್ ಧರಿಸುವುದು ಹೆಚ್ಚಾಗಿದೆ. ನೋಡಲು ಬಿಂದಾಸ್ ಲುಕ್ ನೀಡುವ ಈ ಮಲ್ಟಿಪಲ್ ಇಯರಿಂಗ್ಗಳು ಆಕರ್ಷಕವಾಗಿ ಕಾಣುವುದರೊಂದಿಗೆ ಈ ಜನರೇಷನ್ನ ಚಾಯ್ಸ್ನಲ್ಲಿ ಸೇರಿವೆ ಎನ್ನುತ್ತಾರೆ ಸ್ಟೈಲಿಸ್ಟ್ಗಳು.
ಬಗೆಬಗೆಯ ಫಂಕಿ ಇಯರಿಂಗ್ಗಳು
ಮಲ್ಟಿಪಲ್ ಇಯರ್ ಪಿಯರ್ಸಿಂಗ್ ಮಾಡಿಸಿದ ಹುಡುಗಿಯರು ಇತ್ತೀಚೆಗೆ ಫಂಕಿ ಲುಕ್ ನೀಡುವ ಜಂಕ್ ಜ್ಯುವೆಲರಿಗಳನ್ನುಧರಿಸುವುದು ಸಾಮಾನ್ಯವಾಗಿದೆ. ಅದು ಬ್ಲಾಕ್ ಮೆಟಲ್, ವೈಟ್ ಮೆಟಲ್, ಪ್ಲಾಸ್ಟಿಕ್, ಫೈಬರ್ನದ್ದಾಗಬಹುದು. ಇಲ್ಲವೇ ಮಿಕ್ಸ್ ಮ್ಯಾಚ್ ಮಾಡಿರುವ ಸೆಟ್ ಆಗಬಹುದು. ಒಟ್ಟಾರೆ ಒಂದೇ ಬಗೆಯ ಕಿವಿಯೊಲೆಗಳಿಗಿಂತ ಭಿನ್ನ-ವಿಭಿನ್ನ ಶೈಲಿಯವನ್ನು ಧರಿಸುವುದನ್ನು ಈ ಕಾಲದ ಹುಡುಗಿಯರು ಹೆಚ್ಚು ಇಷ್ಟಪಡುತ್ತಿದ್ದಾರೆ ಎನ್ನುತ್ತಾರೆ ಸ್ಟೈಲಿಸ್ಟ್ ಜನ್ನತ್.
ಮಲ್ಟಿಪಲ್ ಇಯರ್ ಪಿಯರ್ಸಿಂಗ್ ಪ್ರಿಯರಿಗೆ ತಿಳಿದಿರಲಿ
- ಸ್ಕಿನ್ ಅಲರ್ಜಿ ಇದ್ದಲ್ಲಿ ಹೆಚ್ಚು ಪಿಯರ್ಸಿಂಗ್ ಮಾಡಿಸುವುದು ಬೇಡ.
- ನಾಲ್ಕಕ್ಕಿಂತ ಹೆಚ್ಚು ಪಿಯರ್ಸಿಂಗ್ ನಾಟ್ ಓಕೆ.
- ಅತಿ ಭಾರದ ಇಯರಿಂಗ್ಗಳು ಚರ್ಮಕ್ಕೆ ನೋವುಂಟು ಮಾಡಬಹುದು.
- ಲೈಟ್ವೈಟ್ ಇಯರಿಂಗ್ಸ್ ಧರಿಸುವುದು ಉತ್ತಮ.
- ಒಮ್ಮೆ ಪಿಯರ್ಸಿಂಗ್ ಮಾಡಿಸಿದಲ್ಲಿ ಮತ್ತೆ ತೂತು ಮುಚ್ಚಲಾಗದು ನೆನಪಿರಲಿ. ಸದಾ ಇಯರಿಂಗ್ಸ್ ಧರಿಸಬೇಕಾಗುತ್ತದೆ. ಗೊತ್ತಿರಲಿ.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Pearl Necklace Fashion: ಜ್ಯುವೆಲರಿ ಲೋಕದಲ್ಲಿ ಟ್ರೆಂಡಿಯಾದ 3 ಶೈಲಿಯ ಪರ್ಲ್ ನೆಕ್ಲೇಸ್