ಶೀಲಾ ಸಿ. ಶೆಟ್ಟಿ, ಬೆಂಗಳೂರು
ಫ್ಯಾಷೆನಬಲ್ ಆಗುವುದು ಸುಲಭ! ಆದರೆ, ಪರಿಸರ ಸ್ನೇಹಿ ಫ್ಯಾಷನ್ (Eco Friendly Fashion) ಅಳವಡಿಸಿಕೊಳ್ಳುವುದು ಸುಲಭವೇನಲ್ಲ! ಈ ಬಾರಿಯ ಪರಿಸರ ದಿನಾಚಾರಣೆಯಲ್ಲಿ ತಾವೂ ಕೂಡ ಪರಿಸರ ಸ್ನೇಹಿಯಾಗುವ ಬಗ್ಗೆ ಯೋಚಿಸಿ. ನಿಮ್ಮ ಫ್ಯಾಷನ್ ಲೈಫ್‌ನಲ್ಲೂ ಕೊಂಚ ಬದಲಾವಣೆ ತನ್ನಿ. ಇದಕ್ಕಾಗಿ ನೀವು ನಿಮ್ಮ ವಾರ್ಡ್ರೋಬ್ನಲ್ಲಿ ಮಾತ್ರವಲ್ಲ, ಧರಿಸುವ ಫ್ಯಾಷನ್‌ವೇರ್‌ಗಳಲ್ಲೂ ಬದಲಾವಣೆ ತರಬೇಕಾಗುತ್ತದೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು. ಈ ಬಗ್ಗೆ ಫ್ಯಾಷನ್ ಪ್ರೇಮಿಗಳಿಗೆ ಸಿಂಪಲ್ಲಾಗಿ 5 ಐಡಿಯಾ ನೀಡಿದ್ದಾರೆ. ವಿವರ ಕೆಳಕಂಡಂತಿದೆ.
ಇಕೋ ಫ್ರೆಂಡ್ಲಿ ಔಟ್‌ಫಿಟ್‌ಗೆ ಆದ್ಯತೆ
ಇನ್ಮುಂದೆ ನೀವು ಡಿಸೈನರ್‌ವೇರ್‌ಗಳನ್ನು ಖರೀದಿಸಬೇಕಾದಲ್ಲಿ ಆದಷ್ಟೂ ಪರಿಸರ ಸ್ನೇಹಿಯಾಗಿರುವಂತಹ ಔಟ್‌ಫಿಟ್‌ಗಳಿಗೆ ಆದ್ಯತೆ ನೀಡಿ. ಮೊದಲೇ ಬ್ರಾಂಡ್ ಎಕೋ ಫ್ರೆಂಡ್ಲಿಯಾಗಿದೆಯೇ ಎಂಬುದನ್ನು ತಿಳಿದುಕೊಳ್ಳಿ. ಪರಿಸರ ಸ್ನೇಹಿ ಬ್ರಾಂಡ್‌ಗಳನ್ನು ಚೂಸ್ ಮಾಡಿ.
ದೇಸಿ ಫ್ಯಾಬ್ರಿಕ್ ಆಯ್ಕೆ ಮಾಡಿ
ಆದಷ್ಟೂ ದೇಸಿ ಬ್ರಾಂಡ್ ಹಾಗೂ ಫ್ಯಾಷನ್ ಉತ್ಪನ್ನಗಳಿಗೆ ಮಾನ್ಯತೆ ನೀಡಿ. ಇದರಿಂದ ಲೋಕಲ್ ಬ್ರಾಂಡ್‌ಗಳನ್ನು ಪ್ರೋತ್ಸಾಹಿಸಿದಂತಾಗುವುದಲ್ಲದೇ, ಪರಿಸರಕ್ಕೆ ನಿಮ್ಮದೊಂದು ಚಿಕ್ಕ ಕೊಡುಗೆ ನೀಡಿದಂತಾಗುವುದು. ನಿಮಗೆ ಗೊತ್ತೇ! ಸಮೀಕ್ಷೆಯೊಂದರ ಪ್ರಕಾರ, ಸಾಕಷ್ಟು ದೇಸಿ ಬ್ರಾಂಡ್‌ಗಳು ಅತಿ ಹೆಚ್ಚು ಪರಿಸರ ಸ್ನೇಹಿ ಫ್ಯಾಷನ್‌ವೇರ್‌ಗಳನ್ನು ಉತ್ಪಾದಿಸುತ್ತವಂತೆ.
ಕಾಟನ್-ಖಾದಿ-ಲಿನಿನ್ ಡಿಸೈನರ್‌ವೇರ್‌ಗಳ ಚಾಯ್ಸ್
ನಿಮಗೆ ದೇಸಿ ಬ್ರಾಂಡ್ ದೊರೆಯದಿದ್ದಲ್ಲಿ ಚಿಂತೆ ಬೇಡ! ಯಾವುದೇ ಬ್ರಾಂಡ್‌ನದ್ದಾದರೂ ಸರಿಯೇ ಆದಷ್ಟೂ ಕಾಟನ್-ಖಾದಿ-ಲಿನಿನ್‌ನಂತಹ ಪರಿಸರ ಸ್ನೇಹಿ ಫ್ಯಾಬ್ರಿಕ್‌ನಿಂದ ಸಿದ್ಧಗೊಂಡ ಔಟ್‌ಫಿಟ್‌ಗಳನ್ನು ಖರೀದಿಸಲು ಪ್ರಾಮುಖ್ಯತೆ ನೀಡಿ.
ವೆಜಿಟೆಬಲ್ ಡೈಯಿಂಗ್ ಔಟ್‌ಫಿಟ್ಸ್
ಇನ್ನು, ನಾನಾ ವಿಧಾನಗಳಿಂದ ಸಿದ್ಧಪಡಿಸಲಾದ ವೆಜಿಟೆಬಲ್ ಡೈಯಿಂಗ್ ಔಟ್‌ಫಿಟ್ಸ್‌ಗಳು ಈ ಸೀಸನ್‌ಗೆ ತಕ್ಕಂತೆ ಟ್ರೆಂಡಿ ಡಿಸೈನ್ಸ್‌ಗಳಲ್ಲಿ ಲಭ್ಯ. ಅಂತಹವನ್ನು ಖರೀದಿ ಮಾಡಿ ನೋಡಿ. ದೇಸಿ ಫ್ಯಾಬ್ರಿಕ್‌ಗೆ ಆದ್ಯತೆ ನೀಡಿ.
ಪ್ಲಾಸ್ಟಿಕ್ ಆಕ್ಸೆಸರೀಸ್ ಆವಾಯ್ಡ್ ಮಾಡಿ
ಪ್ಲಾಸ್ಟಿಕ್ ಕಿವಿಯೊಲೆ, ಇಯರಿಂಗ್ಸ್ ಸೇರಿದಂತೆ ನಾನಾ ಬಗೆಯ ಫ್ಯಾಷನಬಲ್ ಪ್ಲಾಸ್ಟಿಕ್ ಆಕ್ಸೆಸರೀಸ್ ಖರೀದಿಸುವುದನ್ನು ನಿಲ್ಲಿಸಿ. ಪ್ಲಾಸ್ಟಿಕ್‌ನಲ್ಲಿ ಸಿದ್ಧಪಡಿಸಿದ ಫ್ಯಾಷನ್ ಉತ್ಪನ್ನಗಳನ್ನು ವಿರೋಧಿಸಿ. ನಿಮ್ಮ ಫ್ಯಾಷನ್ ಲೈಫ್‌ನಲ್ಲಿ ಬದಲಾವಣೆ ತನ್ನಿ. ಪರಿಸರ ರಕ್ಷಣೆಗೆ ನಿಮ್ಮದೊಂದು ಚಿಕ್ಕ ಕೊಡುಗೆ ನೀಡಿದಂತಾಗುವುದು.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Summer Fashion: ಕಾರ್ಪೊರೇಟ್ ಕ್ಷೇತ್ರದ ಯುವತಿಯರನ್ನು ಆಕರ್ಷಿಸಿದ ಲಿನಿನ್ ಪ್ಯಾಂಟ್ ಸೆಟ್