Site icon Vistara News

Edible Gold: ‘ಚಿನ್ನ’ ತಿಂದು ಆರೋಗ್ಯ ಚೆನ್ನಾಗಿಟ್ಟುಕೊಳ್ಳಿ!

Edible Gold Good for health

ನ್ನೇನು ಅಕ್ಷಯ ತೃತೀಯ ಬಂತಲ್ಲಾ… ಚಿನ್ನ ಖರೀದಿಸುವ ಉದ್ದೇಶ ಬಹಳಷ್ಟು ಮಂದಿಗಿರುತ್ತದೆ. ಖರೀದಿಸಿದ್ದನ್ನು ಏನು ಮಾಡುತ್ತೀರಿ ಎಂದರೆ, ಕೇಳಿದವರ ಕಡೆಗೊಂದು ವಿಚಿತ್ರ ನೋಟ ತೂರಿ ಬರಬಹುದು. ಕಾರಣ, ಕಿವಿಗೆ, ಕೈಗೆ, ಕುತ್ತಿಗೆಗೆ- ಎಲ್ಲಿ ಬೇಕಾದರೂ ಹಾಕಿಕೊಳ್ಳಬಹುದು. ದೇವರ ವಿಗ್ರಹವೋ, ದೀಪವೋ ಮತ್ತೊಂದೊ ಕೊಳ್ಳಬಹುದು- ಇದರಲ್ಲಿ ಕೇಳುವುದೇನು? ಆದರೆ ಅಕ್ಷಯವಾಗಲೆಂಬ ಉದ್ದೇಶದಿಂದ ಖರೀದಿಸಿದ ಚಿನ್ನವನ್ನು ತಿನ್ನಬಹುದೇ? ಚಿನ್ನ, ಬೆಳ್ಳಿಯನ್ನು ತೃಣ ಪ್ರಮಾಣದಲ್ಲಿ ಔಷಧಿಗಾಗಿ ಬಳಸುವುದನ್ನು ಕೇಳಿರುತ್ತೇವೆ. ಆದರೆ ತಿನ್ನುವುದಕ್ಕೆ ಚಿನ್ನವೇ? ಇದೆಂಥಾ ಚೋದ್ಯ ಎಂದರೆ, ಹೌದು! ದೇಹದ ಒಟ್ಟಾರೆ ಆರೋಗ್ಯ ಸುಧಾರಣೆಗಾಗಿ ಚಿನ್ನವನ್ನು ತಿನ್ನುವುದಕ್ಕೂ ಬಳಸುವವರಿದ್ದಾರೆ. ಇದರ ಬಗ್ಗೆ (Edible gold) ಇನ್ನಷ್ಟು ವಿವರಗಳು ಇಲ್ಲಿವೆ.

ತಿನ್ನುವ ಚಿನ್ನವೆಂದರೇನು?

ಕೆಲವು ಸಿಹಿ ಖಾದ್ಯಗಳ ಮೇಲೆ ಬೆಳ್ಳಿಯ ಜರಿಯನ್ನು ಅಂಟಿಸುವುದು ಮಾಮೂಲಿ. ಅಂಥದ್ದನ್ನೇ ನಿಜವಾದ ಚಿನ್ನದಲ್ಲೂ ಮಾಡಿ ಅಂಟಿಸಬಹುದು, ಅದೇ ತಿನ್ನುವ ಚಿನ್ನ. ಅದನ್ನು ಮಾಡುವುದಕ್ಕೆ ಕ್ರಮವೂ ಇದೆ. ಶುದ್ಧ ಚಿನ್ನವನ್ನು ೨೦೦೦ ಡಿಗ್ರಿ ಫ್ಯಾ. ಗಿಂತಲೂ ಹೆಚ್ಚಿನ ಶಾಖದಲ್ಲಿ ಕರಗಿಸಿ, ಕುದಿಸಿ, ಬಾರ್‌ ರೀತಿಯಲ್ಲಿ ಮಾಡಲಾಗುತ್ತದೆ. ಈ ಬಾರ್‌ ನಿಗದಿತ ಗಾತ್ರಕ್ಕೆ ತಲುಪಿದ ಮೇಲೆ, ಅದನ್ನು ತಟ್ಟಿ, ಕುಟ್ಟಿ ೦.೦೦೦೧ ಮಿಲಿ ಮೀ. ಗಾತ್ರಕ್ಕೆ, ಅಂದರೆ ತೆಳ್ಳಾತಿತೆಳ್ಳನೆಯ ಹಾಳೆಯಂತೆ ಮಾಡಲಾಗುತ್ತದೆ. ಇದನ್ನೇ ಅಪರೂಪದ ಖಾದ್ಯಗಳಲ್ಲಿ ತಿನ್ನುವ ಚಿನ್ನವಾಗಿ (Edible gold) ಬಳಸಲಾಗುತ್ತದೆ. ಚಿನ್ನ ತಿನ್ನುವುದೇನೋ ಸರಿ, ಆದರೆ ಏನಿದರ ಲಾಭಗಳು?

ಉತ್ಕರ್ಷಣ ನಿರೋಧಕ

ಚಿನ್ನವನ್ನು ದಿನವೂ ತಿನ್ನುವುದು ಅಸಾಧ್ಯ, ಅನವಶ್ಯಕ ಮತ್ತು ಅನಗತ್ಯ ಹೌದಾದರೂ, ಅಪರೂಪಕ್ಕೊಮ್ಮೆ ತಿನ್ನುವುದು ಆರೋಗ್ಯಕ್ಕೆ ಹಲವು ರೀತಿಯ ಲಾಭಗಳನ್ನು ತರುತ್ತದೆ. ಚಿಕ್ಕ ಮಕ್ಕಳಿಗೂ ಆಯುರ್ವೇದದಲ್ಲಿ ಸ್ವರ್ಣ ಪ್ರಾಶನ ಮಾಡಿಸುವ ಕ್ರಮವಿದೆ. ಕಾರಣ, ತಿನ್ನುವ ಚಿನ್ನದಲ್ಲಿ ಹಲವು ರೀತಿಯ ಉತ್ತಮ ಉತ್ಕರ್ಷಣ ನಿರೋಧಕ ಗುಣಗಳಿವೆ. ದೇಹದಲ್ಲಿ ಇರಬಹುದಾದ ಯಾವುದೇ ರೀತಿಯ ಉರಿಯೂತವನ್ನು ಕಡಿಮೆ ಮಾಡಿ, ವೃದ್ಧಾಪ್ಯದಲ್ಲಿ ಬರಬಹುದಾದ ಮರೆವಿನಂಥ ನರರೋಗಳನ್ನು ಮುಂದೂಡಲು ಸ್ವರ್ಣ ನೆರವಾಗುತ್ತದೆ.

ಖನಿಜಗಳ ಖನಿ

ದೇಹಕ್ಕೆ ಅಗತ್ಯವಾದ ಹಲವಾರು ರೀತಿಯ ಖನಿಜಗಳು ಮತ್ತು ಜೀವಸತ್ವಗಳು ಇದರಲ್ಲಿವೆ. ಇದು ವಿಟಮಿನ್‌ ಎ, ಸಿ, ಇ ಅಂಶಗಳು, ಮೆಗ್ನೀಶಿಯಂ, ಕಬ್ಬಿಣ, ಜಿಂಕ್‌ ಸತ್ವಗಳಿಂದ ಸಮೃದ್ಧವಾಗಿದೆ. ಇದರಿಂದ ದೇಹದ ಒಟ್ಟಾರೆ ಸ್ವಾಸ್ಥ್ಯ ಹೆಚ್ಚಾಗಿ, ರೋಗ ನಿರೋಧಕ ಶಕ್ತಿ ವೃದ್ಧಿಯಾಗುತ್ತದೆ. ಇದರಲ್ಲಿ ನಾರಿನಂಶವೂ ಇದ್ದು, ಜೀರ್ಣಾಂಗಗಳ ಆರೋಗ್ಯ ಸುಧಾರಿಸುವುದಕ್ಕೂ ಸಹಕಾರಿ ಆಗುತ್ತದೆ.

ತಾರುಣ್ಯ ಕಾಪಾಡುತ್ತದೆ

ಹೊಳೆಯುವ ಲೋಹದ ಲಾಭಗಳು ಇಲ್ಲಿಗೇ ನಿಲ್ಲುವುದಿಲ್ಲ. ಚರ್ಮವನ್ನೂ ಹೊಳೆಯಿಸಿ, ತಾರುಣ್ಯ ಮರುಕಳಿಸುವಂತೆ ಮಾಡುವ ಸಾಮರ್ಥ್ಯ ಇದರಲ್ಲಿದೆ ಎನ್ನುತ್ತವೆ ಅಧ್ಯಯನಗಳು. ತ್ವಚೆಯ ಮೇಲಿನ ಸುಕ್ಕು ಮಾಯವಾಗಿಸಿ, ಚರ್ಮದ ಹಿಗ್ಗುವ ಸಾಮರ್ಥ್ಯವನ್ನು ಹಿಗ್ಗಿಸಿ, ನಯವಾದ ಮತ್ತು ತಾರುಣ್ಯಭರಿತ ರೂಪನ್ನು ಮರಳಿಸುತ್ತದೆ. ಹಾಗಾಗಿ ಫೇಶಿಯಲ್‌ ಮಾಡುವಾಗಲೂ ಚಿನ್ನ ಮಿಶ್ರಿತ ಫೇಶಿಯಲ್‌ ಸಾಧನಗಳು ಲಭ್ಯವಿವೆ.

ಇದನ್ನೂ ಓದಿ: Health Tips: ಜೀರ್ಣಕ್ರಿಯೆಯ ಸಮಸ್ಯೆಗಳಿಗೆ ರಾಮಬಾಣ: ಇಂಗು ಹಾಗೂ ಓಮದ ನೀರು!

ಐಷಾರಾಮಿ ಖಾದ್ಯ

ಅಲ್ಲವೇ ಮತ್ತೆ? ಬೆಳ್ಳಿಯ ಬಟ್ಟಲಲ್ಲಿ ಊಟ ಮಾಡುವುದನ್ನೇ ಐಷಾರಾಮಿ, ರಾಜಭೋಜನ ಎಂದು ಕರೆಯುವಾಗ, ತಿನ್ನುವ ಖಾದ್ಯಗಳಿಗೆ ಚಿನ್ನದ ಲೇಪ ಮಾಡಿದರೆ, ಅದನ್ನು ಸವಿಯುವವರ ಘನತೆ ಮುಗಿಲು ಮುಟ್ಟಬೇಡವೇ? ಕಣ್ಣಿಗೂ ತಂಪು, ಹೊಟ್ಟೆಗೂ ಹಿತ, ಜೇಬಿನ ವಿಷಯ ಈಗ ಮಾತಾಡುವುದು ಬೇಡ.

ಹಲವು ರೀತಿಯ ಆರೋಗ್ಯಕರ ಪ್ರಯೋಜನಗಳನ್ನು ನೀಡುವ ಖಾದ್ಯ ಕನಕವು, ಸವಿಯುವವರ ಸ್ವಾದ, ಸ್ವಾಸ್ಥ್ಯ ಮತ್ತು ಸೌಂದರ್ಯವನ್ನೂ ಹೆಚ್ಚಿಸಬಲ್ಲದು. ಹಾಗಾಗಿ ತಡಬೇಕೆ, ಒಮ್ಮೆ ಸವಿದು ನೋಡುವುದಕ್ಕೆ?

Exit mobile version