Site icon Vistara News

Ethnic Fashion: ಡಿಸೈನರ್‌ ಸಲ್ವಾರ್ ಸೂಟ್ ನ ರೀ ಎಂಟ್ರಿ

ಶ್ರದ್ಧಾ ಆರ್ಯ, ಕಿರುತೆರೆ ನಟಿ

ಶೀಲಾ ಸಿ. ಶೆಟ್ಟಿ, ಬೆಂಗಳೂರು

ಡಿಸೈನರ್‌ ಸಲ್ವಾರ್‌ ಸೂಟ್‌ ಫ್ಯಾಷನ್‌ನ ರೀ ಎಂಟ್ರಿಯಾಗಿದೆ. ಅದರಲ್ಲೂ ಡಿಸೈನರ್‌ ಸಲ್ವಾರ್‌ ಕಮೀಜ್‌, ಪಟಿಯಾಲ ಸಲ್ವಾರ್‌, ಪಂಜಾಬಿ ಸೂಟ್‌, ಅನಾರ್ಕಲಿ ಸೂಟ್‌ ಹೀಗೆ ನಾನಾ ಶೈಲಿಯಲ್ಲಿ ಹೊಸ ರೂಪದಲ್ಲಿ ಇಂದು ಎಥ್ನಿಕ್‌ ವಿಭಾಗಕ್ಕೆ ಕಾಲಿಟ್ಟಿದೆ.

ಕಾಲಕ್ಕೆ ತಕ್ಕಂತೆ ಬದಲಾವಣೆ:

“ಎಂದಿನಂತೆ ಪಾಶ್ಚಿಮಾತ್ಯ ಶೈಲಿಯ ಉಡುಪುಗಳು ಹೊಸ ವಿನ್ಯಾಸದಲ್ಲಿ ರೂಪುಗೊಂಡು, ಭಾರತೀಯ ಸಾಂಪ್ರದಾಯಿಕ ಉಡುಪುಗಳ ಮಧ್ಯೆ ಆಗಾಗ ನುಸುಳಿದರೂ ಸಲ್ವಾರ್‌ ಕಮೀಜ್‌ ಹಾಗೂ ಚೂಡಿದಾರ್‌ಗಳ ಟ್ರೆಂಡ್‌ಗೆ ಎಂದಿಗೂ ವಿರಾಮ ಬಿದ್ದಿಲ್ಲ. ಬದಲಿಗೆ ಇವುಗಳ ವಿನ್ಯಾಸ ಕಾಲಕ್ಕೆ ತಕ್ಕಂತೆ ನಾನಾ ಬಗೆಯಲ್ಲಿ ಬದಲಾವಣೆಗಳಾಗಿವೆ” ಎನ್ನುತ್ತಾರೆ ಡಿಸೈನರ್‌ ಕವಿತಾ. ಅವರ ಪ್ರಕಾರ: ಸಲ್ವಾರ್‌ ಪ್ಯಾಂಟ್‌ಗಳು ಪಟಿಯಾಲ, ಪಲ್ಹಾಜೋ, ಬ್ಯಾಗಿ, ಪಂಜಾಬಿ, ಪುಶ್‌ಬ್ಯಾಕ್‌, ಧೋತಿ ಸ್ಟೈಲ್‌ ಹೀಗೆ ಕಮೀಜ್‌ಗೆ ಸೂಟ್‌ ಆಗುವಂತಹ ಶೈಲಿಯಲ್ಲಿ ಮಾರುಕಟ್ಟೆಗೆ ಲಗ್ಗೆ ಹಾಕಿವೆ.

ಸಲ್ವಾರ್‌ ಸೂಟ್‌ನ ಹೊಸ ರೂಪ:

ಇನ್ನು ಎಂಬ್ರಾಯ್ಡರಿ ವರ್ಕ್‌, ಥ್ರೆಡ್‌ ವರ್ಕ್‌, ಕಾಟನ್‌ ಮಿಕ್ಸ್‌ ಸಿಲ್ಕ್‌, ಪ್ರಿಂಟೆಡ್‌, ಬ್ರೊಕೇಡ್‌, ಸಿಲ್ಕ್‌ ಝರಿ ವರ್ಕ್‌, ಕ್ರೇಪ್‌, ಸಾಫ್ಟ್‌ ನೆಟ್‌, ಮಲ್ಟಿ ಡಿಸೈನ್‌, ಹ್ಯಾಂಡ್‌ಮೇಡ್‌ ಡಿಸೈನ್‌ ಸೇರಿದಂತೆ ಹಲವು ಬಗೆಯ ಫ್ಯಾಬ್ರಿಕ್‌ನಲ್ಲಿ ಹೊಸ ಬಗೆಯ ನೆಕ್‌ಲೈನ್‌ಗಳಲ್ಲಿ ಕಮೀಜ್‌ ಫ್ಯಾಬ್ರಿಕ್‌ಗಳು ಡಿಸೈನ್‌ಗಳು ಮಹಿಳೆಯರನ್ನು ಆಕರ್ಷಿಸಿವೆ. ಯುವತಿಯರು ಮಾತ್ರವಲ್ಲದೆ ಎಲ್ಲ ವಯೋಮಾನದವರೂ ಇಷ್ಟಪಡುವ ಹೊಸ ಡಿಸೈನ್‌ನ ಸ್ಟ್ರೈಟ್‌ ಕಟ್‌ ಹಾಗೂ ಮಾನೋಕ್ರೋಮ್‌ ಡಿಸೈನರ್‌ ಸಲ್ವಾರ್‌ಗಳು ಈ ಸೀಸನ್‌ನಲ್ಲಿ ಹೆಚ್ಚು ಪ್ರಚಲಿತದಲ್ಲಿವೆ. ಇನ್ನು ಫುಲ್‌ ಸ್ಟಿಚ್ಡ್‌ ಹಾಗೂ ಸೆಮಿ ಸ್ಟಿಚ್ಡ್‌ಗಳಲ್ಲಿಯೂ ಈ ಸಲ್ವಾರ್‌ ಸೂಟ್‌ಗಳು ಲಭ್ಯ ಇರುವುದರಿಂದ ಸೈಜ್‌ ಬಗ್ಗೆ ಯಾವುದೇ ರೀತಿಯಲ್ಲಿತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ.

ಶ್ರದ್ಧಾ ಆರ್ಯ, ಕಿರುತೆರೆ ನಟಿ

ಈ ಹಿಂದೆ ಸಲ್ವಾರ್‌ ಸೂಟ್‌ ಅಥವಾ ಕಮೀಜ್‌ ಹಾಗೂ ಚೂಡಿದಾರ್‌ಗಳಿಗೆ ನಿರ್ದಿಷ್ಟ ವಿನ್ಯಾಸಗಳನ್ನು ರೂಪಿಸಲಾಗಿತ್ತು. ಈಗ ಮೊದಲಿನಂತಿಲ್ಲ. ಸೆಮಿ ಎಥ್ನಿಕ್‌ ಶೈಲಿಗಳು ಸೂಕ್ಷ್ಮ ರೀತಿಯಲ್ಲಿಸಮ್ಮಿಲನಗೊಂಡಿವೆ. ಪರಿಣಾಮ, ಇವುಗಳ ವಿನ್ಯಾಸ ಕಾಲೇಜು ಹುಡುಗಿಯರಿಂದ ಹಿಡಿದು ಮಧ್ಯವಯಸ್ಕ ಮಹಿಳೆಯರಿಗೂ ಪ್ರಿಯವಾಗತೊಡಗಿವೆ.

ಧಾರಾವಾಹಿಗಳು ಸ್ಫೂರ್ತಿ:

ಸಲ್ವಾರ್‌ ಹಾಗೂ ಚೂಡಿದಾರ್‌ ಇಂದು ಹೆಚ್ಚು ಪ್ರಚಲಿತಗೊಳ್ಳಲು ಕಾರಣ ಹಿಂದಿ ಹಾಗೂ ಕನ್ನಡ ಟಿವಿ ಧಾರಾವಾಹಿಗಳು ಎಂದರೂ ತಪ್ಪೇನಿಲ್ಲ! ನಟಿಯರು ವೈವಿಧ್ಯಮಯ ಸಲ್ವಾರ್ ಸೂಟ್‌ಗಳನ್ನು ಪ್ರಾಯೋಗಿಕವಾಗಿ ಬಳಸಿ, ಚಾಲ್ತಿಗೆ ಬರುವಂತೆ ಮಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದಾರೆ ಎನ್ನಬಹುದು.

ಟ್ರೆಂಡಿ ಸಲ್ವಾರ್‌ ಸೂಟ್‌ ಆಯ್ಕೆ ಹೀಗಿರಲಿ:

ಆಫೀಸ್‌ ವೇರ್‌ಗಾದಲ್ಲಿ ಹ್ಯಾಂಡ್‌ ಎಂಬ್ರಾಯ್ಡರಿ ಇಲ್ಲವೇ ಸಿಂಪಲ್‌ ಲೈಟ್‌ ಶೇಡ್‌ಗಳನ್ನು ಆಯ್ಕೆ ಮಾಡಬಹುದು. ಸಣ್ಣ ಪಾರ್ಟಿಗಳಿಗೆ ಧರಿಸುವುದಾದಲ್ಲಿ ಹೆವಿ ಎಂಬ್ರಾಯ್ಡಡರಿ, ಸ್ಟೋನ್‌ ವರ್ಕ್‌ ಇಲ್ಲವೇ ಝರಿ ಸೇರಿದಂತೆ ಡಾರ್ಕ್‌ ಕಲರ್‌ ಹಾಗೂ ಸ್ವಲ್ಪ ರಿಚ್‌ ಲುಕ್‌ ನೀಡುವ ಸ್ಟ್ರೈಟ್‌ ಕಟ್‌ ಅಥವಾ ಅನಾರ್ಕಲಿ ಡಿಸೈನರ್‌ ಸಲ್ವಾರ್‌ ಖರೀದಿಸಬಹುದು.

ನಿರ್ವಹಣೆ ಅಗತ್ಯ:

ಸಿಂಪಲ್‌ ವಿನ್ಯಾಸದ ಸಲ್ವಾರ್‌ ಸೂಟ್‌ ನಿರ್ವಹಣೆ ಸುಲಭ. ಇನ್ನು ಸಮಾರಂಭಗಳಿಗೆ ಧರಿಸುವ ಹೆವ್ವಿ ಎಂಬ್ರಾಯ್ಡಡರಿ, ಸ್ಟೋನ್‌ ವರ್ಕ್‌ ಇರುವ ಸಲ್ವಾರ್‌ ಸೂಟ್‌ನ ನಿರ್ವಹಣೆಯಲ್ಲಿ ಜಾಗರೂಕತೆ ವಹಿಸುವುದು ಮುಖ್ಯ. ಇಲ್ಲವಾದರೆ ಸ್ಟೋನ್‌ಗಳು ಬಿದ್ದು ಹೋಗಿ ಹಳತಾಗಿ ಕಾಣಬಹುದು. ಎಂಬ್ರಾಯ್ಡಡರಿ ವರ್ಕ್‌ ಜಾಸ್ತಿ ಇದ್ದಲ್ಲಿ ಡ್ರೈಕ್ಲೀನ್‌ಗೆ ನೀಡುವುದು ಉತ್ತಮ.

(ಲೇಖಕಿ ಫ್ಯಾಷನ್ ಪತ್ರಕರ್ತೆ)

ಇದನ್ನೂ ಓದಿ| Glamorous Fashion: ಸೆಲೆಬ್ರೆಟಿ ಲುಕ್‌ಗಾಗಿ ಬಾರ್ಡೋಟ್‌ ಡ್ರೆಸ್‌

Exit mobile version