ಶೀಲಾ ಸಿ. ಶೆಟ್ಟಿ, ಬೆಂಗಳೂರು
ದೇಸಿ ಉಡುಪುಗಳಿಗೆ ಎಥ್ನಿಕ್ ಲುಕ್ ನೀಡುವ ಆಕರ್ಷಕ ಪಾದರಕ್ಷೆಗಳು (Ethnic Footwear Fashion) ಈ ಸೀಸನ್‌ನ ಟ್ರೆಂಡಿ ಫುಟ್‌ವೇರ್ ಲಿಸ್ಟ್‌ಗೆ ಸೇರಿವೆ. ಹೌದು. ಈ ಸೀಸನ್‌ನ ಫುಟ್‌ವೇರ್ ಲೋಕದಲ್ಲಿ ಇದೀಗ ಏನಿದ್ದರೂ, ಗ್ರ್ಯಾಂಡ್ ಡಿಸೈನ್ ಇರುವ ದೇಸಿ ಪಾದರಕ್ಷೆಗಳದ್ದೇ ಕಾರುಬಾರು! ನೋಡಲು ಮನಮೋಹಕ ಡಿಸೈನ್‌ಗಳಲ್ಲಿ ಮಾರುಕಟ್ಟೆಗೆ ಲಗ್ಗೆ ಇಟ್ಟಿರುವ ಇವು ಟ್ರೆಡಿಷನಲ್, ಸೆಮಿ ಫಾರ್ಮಲ್ ಉಡುಪುಗಳಿಗೆ ಹಾಗೂ ಹಬ್ಬದ ಡಿಸೈನರ್‌ವೇರ್‌ಗಳಿಗೆ ಸಾಥ್ ನೀಡುತ್ತಿವೆ.
ದೇಸಿ ಲುಕ್ ನೀಡುವ ಫುಟ್‌ವೇರ್ಸ್
ಮಾರುಕಟ್ಟೆಯಲ್ಲಿ ಲೆಕ್ಕವಿಲ್ಲದಷ್ಟು ಬಗೆಯ ಎಥ್ನಿಕ್ ಫುಟ್‌ವೇರ್ಸ್ ಕಾಲಿಟ್ಟಿವೆ. ಅವುಗಳಲ್ಲಿ ಕಂಪ್ಲೀಟ್ ಇಂಡಿಯನ್ ಲುಕ್ ನೀಡುವ ನಾನಾ ಬಗೆಯ ಸ್ಯಾಂಡಲ್ಸ್, ಹಾಫ್ ಶೂ ಹಾಗೂ ಫ್ಲಾಟ್ ವಿ ಬಾರ್ ಚಪ್ಪಲ್‌ಗಳು ಅತಿ ಹೆಚ್ಚು ಟ್ರೆಂಡ್‌ನಲ್ಲಿವೆ. ಇನ್ನು ಒಂದರ ಮೇಲೊಂದರಂತೆ ಫೆಸ್ಟಿವ್ ಸೀಸನ್ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ, ಗ್ರ್ಯಾಂಡ್ ಡಿಸೈನರ್‌ವೇರ್‌ಗಳಿಗೆ ಮ್ಯಾಚ್ ಆಗುವಂತಹ ಹೈ ಹೀಲ್ಸ್ ಶಿಮ್ಮರಿಂಗ್ ವೆಡ್ಜೆಸ್, ವಿ ಶೇಪ್ ಡಿಸೈನರ್ ಚಪ್ಪಲ್, ಜಗಮಗಿಸುವ ಹಾಫ್ ಶೂ, ಎಂಬ್ರಾಯ್ಡರಿ ಮಾಡಿದ ಹಾಫ್ ಶೂ, ಜ್ಯುವೆಲ್‌ಗಳನ್ನು ಅಟ್ಯಾಚ್ ಮಾಡಿರುವ ಪಾದರಕ್ಷೆಗಳು ಬಂದಿವೆ ಎನ್ನುತ್ತಾರೆ ಮಾರಾಟಗಾರರು.
ಹಂಗಾಮ ಎಬ್ಬಿಸಿರುವ ಜೂತಿ ಶೂಗಳು
ಎಂಬ್ರಾಯ್ಡರಿ, ಮಿರರ್, ಕ್ಲಾಸಿಕ್ ಡಿಸೈನ್, ಝರಿ, ಶಿಮ್ಮರಿಂಗ್ ಹೀಗೆ ನಾನಾ ಬಗೆಯ ದೇಸಿ ವರ್ಕ್ ಇರುವಂತಹ ಜೂತಿ ಶೂಗಳು ಕೂಡ ಇದೀಗ ಸಖತ್ ಹಂಗಾಮ ಎಬ್ಬಿಸಿವೆ. ಮೊದಲೆಲ್ಲಾ ನಾರ್ತ್ ಇಂಡಿಯಾದಲ್ಲಿ ಹೆಚ್ಚು ಫ್ಯಾಷನ್‌ನಲ್ಲಿದ್ದ ಇವು ಇದೀಗ ಸೌತ್ ಇಂಡಿಯನ್ ಮಹಿಳೆಯರಿಗೆ ಪೂರಕವಾಗಿ ಇಷ್ಟವಾಗುವಂತಹ ಡಿಸೈನ್‌ಗಳಲ್ಲಿ ಬಿಡುಗಡೆಗೊಂಡಿವೆ.
ಜ್ಯುವೆಲ್ ವಿನ್ಯಾಸದ ಚಪ್ಪಲ್
ಫ್ಲಾಟ್ ಚಪ್ಪಲ್‌ಗಳಲ್ಲಿ ಇದೀಗ ಊಹೆಗೂ ಮೀರಿದ ವಿನ್ಯಾಸದವು ದೊರೆಯುತ್ತಿವೆ. ಗೋಲ್ಡ್ ಬಾರ್‌ಗಳಿಂದಿಡಿದು, ದೇಸಿ ಲುಕ್ ನೀಡುವ ಲೋಕಲ್ ಡಿಸೈನ್ಸ್, ಬೀಡ್ಸ್, ಎಂಬ್ರಾಯ್ಡರಿ ಸೇರಿದಂತೆ ಅಬ್‌ಸ್ಟ್ರಾಕ್ಟ್ ವಿನ್ಯಾಸದ ಚಪ್ಪಲ್‌ಗಳು ಪ್ರಚಲಿದಲ್ಲಿವೆ.
ಭಾರಿ ವಿನ್ಯಾಸದಲ್ಲಿ ವೆಡ್ಜೆಸ್
- ಇನ್ನು ವೆಡ್ಜೆಸ್ಗಳಲ್ಲೂ ಎಥ್ನಿಕ್ ಲುಕ್ ನೀಡುವಂತಹ ಶಿಮ್ಮರಿಂಗ್ ಹಾಗೂ ಕಲರ್ಫುಲ್ ವಿನ್ಯಾಸದವು ಆಗಮಿಸಿವೆ. ಅವುಗಳಲ್ಲಿ ಗೋಲ್ಡನ್ ಹಾಗೂ ಸಿಲ್ವರ್ನವು ಹೆಚ್ಚು ಟ್ರೆಂಡಿಯಾಗಿವೆ.
- ಎಥ್ನಿಕ್ ಫುಟ್‌ವೇರ್ ಖರೀದಿಸುವಾಗ ನಿಮ್ಮ ದೇಸಿ ಉಡುಪುಗಳಿಗೆ ಮ್ಯಾಚ್ ಆಗುತ್ತವೆಯೇ ನೋಡಿಕೊಳ್ಳಿ.
- ಮ್ಯಾಚಿಂಗ್ ಫುಟ್ವೇರ್ಗಳಲ್ಲೂ ಎಥ್ನಿಕ್ ವಿನ್ಯಾಸದವು ದೊರೆಯುತ್ತವೆ.
- ಆದಷ್ಟೂ ಕಾಮನ್ ಶೇಡ್ನದ್ದನ್ನು ಕೊಂಡರೇ ಒಂದಕ್ಕಿಂತ ಹೆಚ್ಚು ಡ್ರೆಸ್ಗಳಿಗೆ ಧರಿಸಬಹುದು.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Paris Fashion Week: ಪ್ಯಾರಿಸ್ ಫ್ಯಾಷನ್ ವೀಕ್‌ನಲ್ಲಿ ಬಾಲಿವುಡ್ ನಟಿ ಖುಷಿ ಕಪೂರ್