Site icon Vistara News

Sankranti Fashion: ಸಂಕ್ರಾಂತಿ ಹಬ್ಬದ ಫ್ಯಾಷನ್‌ಗೆ ಲಗ್ಗೆ ಇಟ್ಟ ಎಥ್ನಿಕ್‌ ಔಟ್‌ಫಿಟ್ಸ್

Sankranti Fashion

ಶೀಲಾ ಸಿ. ಶೆಟ್ಟಿ, ಬೆಂಗಳೂರು
ಈ ವರ್ಷದ ಮೊದಲ ಸಡಗರ-ಸಂಭ್ರಮದ ಹಬ್ಬ ಸಂಕ್ರಾಂತಿಗೆ ಈಗಾಗಲೇ ಫ್ಯಾಷನ್‌ (Sankranti Fashion) ಲೋಕ ಸಜ್ಜಾಗಿದ್ದು, ಎಲ್ಲಾ ವಯಸ್ಸಿನ ಮಹಿಳೆಯರು, ಪುರುಷರು ಹಾಗೂ ಮಕ್ಕಳ ಫ್ಯಾಷನ್‌ನಲ್ಲಿ ಊಹೆಗೂ ಮೀರಿದ ಎಥ್ನಿಕ್‌ ಔಟ್‌ಫಿಟ್‌ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಈ ಕುರಿತಂತೆ ಇಲ್ಲಿದೆ ವರದಿ.

ಸಂಕ್ರಾಂತಿಗೆ ಟ್ರೆಡಿಷನಲ್‌ ಎಥ್ನಿಕ್‌ ಔಟ್‌ಫಿಟ್ಸ್

ಪ್ರತಿಬಾರಿಯೂ ಸಂಕ್ರಾಂತಿಗೆ ನಮ್ಮ ಸಂಪ್ರದಾಯಕ್ಕೆ ಸಾಥ್‌ ನೀಡುವ ಟ್ರೆಡಿಷನಲ್‌ ಔಟ್ಫಿಟ್‌ಗಳು ಆಗಮಿಸಿವೆ. ಒಂದಿಷ್ಟು ವರ್ಷಗಳು ಕೇವಲ ತೀರಾ ಟ್ರೆಡಿಷನಲ್‌ ಡ್ರೆಸ್‌ಗಳು ಮಾತ್ರ ಮಾರುಕಟ್ಟೆಗೆ ಬರುತ್ತಿದ್ದವು. ಆದರೆ, ಇತ್ತೀಚೆಗೆ ಎಲ್ಲಾ ವಯಸ್ಸಿನ ಹುಡುಗಿಯರು, ಮಾನಿನಿಯರು ಹಾಗೂ ಮಕ್ಕಳನ್ನು ಗಮನದಲ್ಲಿಟ್ಟುಕೊಂಡು ಟ್ರೆಡಿಷನಲ್‌ ಔಟ್‌ಫಿಟ್‌ಗಳನ್ನು ಹಾಗೂ ಎಥ್ನಿಕ್‌ ಡ್ರೆಸ್‌ಗಳನ್ನು ಡಿಸೈನ್ ಮಾಡಲಾಗುತ್ತಿದೆ. ಅದರಲ್ಲೂ ಇತರೇ ಕಾರ್ಯಕ್ರಮ ಹಾಗೂ ಸಮಾರಂಭಗಳಲ್ಲೂ ಧರಿಸಬಹುದಾದ ಡಿಸೈನ್‌ನಲ್ಲಿ ಸಿದ್ಧಪಡಿಸಲಾಗುತ್ತಿರುವುದು ಮಾರಾಟದಲ್ಲೂ ಏರಿಕೆ ಕಂಡಿದೆ ಎನ್ನುತ್ತಾರೆ ಶಾಪಿಂಗ್‌ ಸೆಂಟರ್‌ವೊಂದರ ಸೇಲ್ಸ್ ಮ್ಯಾನೇಜರ್‌. ಅವರ ಪ್ರಕಾರ, ಒಂದೇ ಬಗೆಯ ಎಥ್ನಿಕ್‌ ಡ್ರೆಸ್‌ಗಳನ್ನು ಧರಿಸುವ ಬದಲು ಬಗೆಬಗೆಯ ವೆರೈಟಿ ಡಿಸೈನ್‌ನ ಉಡುಪುಗಳನ್ನು ಧರಿಸಲು ಜನರು ಇಷ್ಟಪಡತೊಡಗಿದ್ದಾರೆ. ಇದು ಒಂದು ಕಾರಣ ಎನ್ನುತ್ತಾರೆ.

ಟ್ರೆಂಡ್‌ನಲ್ಲಿರುವ ಸಂಕ್ರಾಂತಿ ಉಡುಪುಗಳು

ಪ್ರತಿಬಾರಿಯಂತೆ ಈ ಬಾರಿಯೂ ಕೂಡ ನಾನಾ ಬಗೆಯ ಟ್ರೆಡಿಷನಲ್‌ ಲುಕ್‌ ನೀಡುವ ಮಿಕ್ಸ್‌ ಮ್ಯಾಚ್‌ ಡಿಸೈನ್‌ನ ಇಂಡಿಯನ್‌ ಉಡುಪುಗಳು, ಇಂಡೋ-ವೆಸ್ಟರ್ನ್ ಶೈಲಿಯ ಔಟ್‌ಫಿಟ್‌ಗಳು ಬಂದಿವೆ. ನಾರ್ತ್ ಇಂಡಿಯನ್‌ ಸ್ಟೈಲ್‌ ಲಂಗ-ದಾವಣಿ, ಉದ್ದ ಲಂಗ, ಲಾಂಗ್‌ ಸ್ಕರ್ಟ್, ಬಾರ್ಡರ್‌ ಗೌನ್‌, ಬಾರ್ಡರ್‌ ಫ್ರಾಕ್‌, ರೇಷ್ಮೆಯ ಜಂಪ್‌ಸೂಟ್‌, ರೇಷ್ಮೆಯ ಡಿಸೈನರ್‌ ಲೆಹೆಂಗಾ ಹುಡುಗಿಯರಿಗೆ ಮಕ್ಕಳಿಗೆ ಲೆಕ್ಕವಿಲ್ಲದಷ್ಟು ಡಿಸೈನ್‌ನಲ್ಲಿಬಂದಿವೆ.

ಪುರುಷರಿಗೆ ಶಾರ್ಟ್ ಜುಬ್ಬಾ

ಇನ್ನು ಯುವಕರಿಗೆ ಟ್ರೆಡಿಷನಲ್‌ ಜುಬ್ಬಾ-ಪೈಜಾಮ, ಪಂಚೆ-ಶಲ್ಯ ಎಂದಿನಂತೆ ಮತ್ತೊಮ್ಮೆ ಹೊಸ ರೂಪದಲ್ಲಿ ಲಗ್ಗೆ ಇಟ್ಟಿವೆ. ಇನ್ನು ಎಥ್ನಿಕ್‌ ಲುಕ್‌ ನೀಡುವ ಸಿಂಗಲ್‌ ದೇಸಿ ಶಾರ್ಟ್ ಜುಬ್ಬಾಗಳು ಬಂದಿವೆ. ಹಿರಿಯರಿಗೆ ಅವರ ವಯಸ್ಸಿಗೆ ಅನುಗುಣವಾಗಿ ಲೈಟ್‌ವೈಟ್‌ ರೇಷ್ಮೆಯ ಮೋದಿ ಕೋಟ್‌, ವೇಸ್ಕೋಟ್‌ ಹಾಗೂ ಜುಬ್ಬಾ-ಪೈಜಾಮ ಬಂದಿವೆ. ಮಕ್ಕಳಿಗಂತೂ ದೊಡ್ಡವರ ಡಿಸೈನರ್‌ವೇರ್‌ಗಳ ರಿಪ್ಲಿಕಾ ಆಗಮಿಸಿವೆ ಎನ್ನುತ್ತಾರೆ ಡಿಸೈನರ್ಸ್.

ಸಂಕ್ರಾಂತಿ ಡಿಸೈನರ್‌ವೆರ್ಸ್ ಆಯ್ಕೆ

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Jhumka Neck Chain Fashion: ಯುವತಿಯರ ಕುತ್ತಿಗೆ ಅಲಂಕರಿಸಲು ಬಂತು ಜುಮ್ಕಾ ಸರಗಳು!

Exit mobile version