Site icon Vistara News

Pet Winter Wear Fashion: ಕ್ರಿಸ್ಮಸ್‌ ಸೀಸನ್‌ನಲ್ಲಿ ಶ್ವಾನಕ್ಕೂ ಬಂತು ಚಳಿಗಾಲದ ಉಡುಗೆ!

Pet Winterwear Fashion

ಶೀಲಾ ಸಿ. ಶೆಟ್ಟಿ, ಬೆಂಗಳೂರು
ಇದೀಗ ಕ್ರಿಸ್ಮಸ್‌ ಸೀಸನ್‌ನಲ್ಲಿ ಸಾಕಿದ ಮುದ್ದಿನ ನಾಯಿಮರಿಗಳಿಗೆ ಈ ವಿಂಟರ್‌ ಸೀಸನ್‌ನಲ್ಲಿ ಬೆಚ್ಚಗಿಡುವಂತಹ ನಾನಾ ಬಗೆಯ ಕ್ಯೂಟ್‌ ವಿಂಟರ್‌ವೇರ್ಸ್‌ ಹಾಗೂ ಡೆಕೋರೇಟಿವ್‌ ಆಕ್ಸೆಸರೀಸ್‌ಗಳು (Pet Winter wear Fashion) ಆಗಮಿಸಿವೆ. ಇವು ಕೇವಲ ಸಾಕು ಪ್ರಾಣಿಗಳ ಪ್ರಾಡಕ್ಟ್‌ಗಳ ಶಾಪ್‌ಗಳಲ್ಲಿ ಮಾತ್ರವಲ್ಲ, ಆನ್‌ಲೈನ್‌ನಲ್ಲೂ ದೊರೆಯುತ್ತಿದ್ದು, ಈಗಾಗಲೇ ಸಾಕಷ್ಟುಬೇಡಿಕೆ ಹೆಚ್ಚಿಸಿಕೊಂಡಿವೆ.

ಕ್ಯೂಟ್‌ ಪಪ್ಪಿಗಳ ಶೃಂಗಾರ

“ಮುದ್ದಿನ ನಾಯಿಮರಿಗಳನ್ನು ಶೃಂಗಾರಗೊಳಿಸುವ ಬಗೆಬಗೆಯ ವಿಂಟರ್‌ವೆರ್ಸ್, ಕ್ರಿಸ್ಮಸ್‌ ವೇರ್ಸ್‌ ಹಾಗೂ ಕ್ಯೂಟ್‌ ಆಕ್ಸೆಸರೀಸ್‌ಗಳು ಮಾರುಕಟ್ಟೆಯಲ್ಲಿ ಕಾಲಿಟ್ಟಿವೆ. ತಮ್ಮ ಮನೆಯ ಸದಸ್ಯನಂತಿರುವ ಇವುಗಳನ್ನು ಅಲಂಕಾರ ಮಾಡಲು ಬಯಸುವವರು ಇವುಗಳ ಗ್ರಾಹಕರು. ಎಲ್ಲದಕ್ಕಿಂತ ಹೆಚ್ಚಾಗಿ ತಮ್ಮ ಶ್ವಾನಗಳನ್ನು ಡಿಫರೆಂಟ್‌ ಲುಕ್‌ನಲ್ಲಿ ಕಾಣಲು ಬಯಸುವವರು ಹಾಗೂ ಫೋಟೋ ಶೂಟ್‌ ಮಾಡುವವರು ಇಂತವುಗಳನ್ನು ಖರೀದಿಸಲು ಬಯಸುತ್ತಾರೆ. ಹಾಗಾಗಿ ಇವುಗಳ ಬೇಡಿಕೆ ಹೆಚ್ಚಾಗಿದೆ” ಎನ್ನುತ್ತಾರೆ ಮಾರಾಟಗಾರರು.

ಕ್ಯೂಟ್‌ ನಾಯಿಯ ವಿಂಟವೇರ್ಸ್‌ನಲ್ಲಿ ಏನೇನಿದೆ?

ಫರ್‌ ಪಫರ್‌ ಜಾಕೆಟ್‌, ರಿವರ್ಸಿಬಲ್‌ ಡಾಗ್‌ ಜಾಕೆಟ್‌, ಪೆಟ್‌ ಸ್ವೆಟ್‌ ಶರ್ಟ್, ಕ್ವಿಲ್ಟೆಡ್‌ ಡಾಗ್‌ ಜಾಕೆಟ್‌, ನಿಟ್‌ ಡಾಗ್‌ ಸ್ವೆಟಡ್ಸ್, ವಿಂಟರ್‌ ಸ್ನಗ್ಮಲರ್ಸ್ ಡಾಗ್‌ ಜಾಕೆಡ್‌, ಕ್ರಿಸ್ಮಸ್‌ ಸ್ನೋ ಫ್ಲೇಕ್‌ ಡಾಗ್‌ ಸ್ವೆಟರ್‌, ಡಾಗ್‌ ಹೂಡಿ, ರೆಡ್‌ ಹಾಗೂ ಬ್ಲಾಕ್‌ ಸ್ಟ್ರೈಪ್ಸ್‌ ಬೆಲ್ಟ್‌, ರೆಡ್‌ ಬೋ ಸೇರಿದಂತೆ ನಾನಾ ಬಗೆಯ ಕ್ಯೂಟ್‌ ಕ್ರಿಸ್ಮಸ್‌ ಆಕ್ಸೇಸರೀಸ್‌ಗಳು ಈ ಗಾಗಲೇ ಆನ್‌ಲೈನ್‌ ಹಾಗೂ ಆಫ್‌ಲೈನ್‌ ಪೆಟ್‌ ಶಾಪ್‌ಗಳಲ್ಲಿ ದೊರೆಯುತ್ತಿವೆ. ಈ ಕ್ರಿಸ್ಮಸ್‌ ಸೀಸನ್‌ನಲ್ಲಿ ಈ ಮುದ್ದಾದ ಪೆಟ್‌ಗಳನ್ನು ಸಿಂಗರಿಸಲು ಸಜ್ಜಾಗಿವೆ.

“ನನ್ನ ಮುದ್ದಿನ ನಾಯಿ ಮರಿಗಳನ್ನು ಪ್ರತಿ ಬಾರಿ ಕ್ರಿಸ್ಮಸ್‌ನಲ್ಲಿ ವಿಭಿನ್ನವಾಗಿ ಸಿಂಗರಿಸುತ್ತೇನೆ. ಇದು ವಿಂಟರ್‌ ಸೀಸನ್‌ ಆಗಿರುವುದರಿಂದ ಅವಕ್ಕೂ ಸಾಂತಾ ಲುಕ್‌ ನೀಡುತ್ತೇನೆ. ಕೆಲವೊಮ್ಮೆ ರೆಡ್‌ ಶೇಡ್‌ನ ಆಕ್ಸೆಸರೀಸ್‌ಗಳನ್ನು ಹಾಕಿ ಫೋಟೋಶೂಟ್‌ ಮಾಡಿ ಹಂಚಿಕೊಳ್ಳುತ್ತೇನೆ” ಎನ್ನುವ ಶ್ವಾನ ಪ್ರಿಯರಾದ ದಿವಾ ಹಾಗೂ ಸ್ಮಿತಾ ಅವರು ಈಗಾಗಲೇ ಆನ್‌ಲೈನ್‌ನಲ್ಲಿ ಶಾಪಿಂಗ್‌ ಕೂಡ ಮಾಡಿದ್ದಾರಂತೆ.

ಶ್ವಾನಕ್ಕೆ ಶಾಪಿಂಗ್‌ ಮಾಡುವ ಮುನ್ನ

(ಲೇಖಕಿ : ಫ್ಯಾಷನ್ ಪತ್ರಕರ್ತೆ)

ಇದನ್ನೂ ಓದಿ: Winter Wedding Fashion: ವೆಡ್ಡಿಂಗ್ ಫ್ಯಾಷನ್‌ಗೆ ಲಗ್ಗೆ ಇಟ್ಟ ಎಥ್ನಿಕ್ ಲೇಯರ್ ಕೋ ಆರ್ಡ್ ಸೂಟ್ !

Exit mobile version