Site icon Vistara News

Eyebrow Tattoo Pen: ದಟ್ಟ ಹುಬ್ಬಿನ ಸೌಂದರ್ಯಕ್ಕೆ ಬಂತು ಐಬ್ರೋ ಟ್ಯಾಟೂ ಪೆನ್!

Eyebrow Tattoo Pen

ಶೀಲಾ ಸಿ. ಶೆಟ್ಟಿ, ಬೆಂಗಳೂರು

ಇದೀಗ ಹುಡುಗಿಯರ ಹುಬ್ಬಿನ ಸೌಂದರ್ಯ ಹೆಚ್ಚಿಸುವ ಐಬ್ರೋ ಟ್ಯಾಟೂ ಪೆನ್‌ಗಳು ಐ ಮೇಕಪ್‌ ಬ್ಯೂಟಿ ಟ್ರೆಂಡ್‌ನ ಲಿಸ್ಟ್‌ಗೆ ಸೇರಿವೆ. ಹೌದು. ಇದುವರೆಗೂ ಪೆನ್ಸಿಲ್‌ನಲ್ಲಿ ತೀಡುತ್ತಿದ್ದ ಹುಬ್ಬಿನ ಸೌಂದರ್ಯ ಹೆಚ್ಚಿಸಲು, ನಾನಾ ಬಗೆಯ ಐಬ್ರೋ ಟ್ಯಾಟೂ ಪೆನ್‌ ಹಾಗೂ ಸ್ಕೆಚ್‌ ಪೆನ್‌ (Eyebrow Tattoo Pen) ಶೈಲಿಯವು ಬ್ಯೂಟಿ ಲೋಕಕ್ಕೆ ಕಾಲಿಟ್ಟಿವೆ. ಅತಿ ಸುಲಭವಾಗಿ ಬಳಸಬಹುದಾದ ಇವು ಇದೀಗ ಜಾಗತೀಕ ಬ್ಯೂಟಿ ಟ್ರೆಂಡ್‌ನಲ್ಲಿ ಒಂದಾಗಿವೆ.

ಐಬ್ರೋ ಟ್ಯಾಟೂ ಪೆನ್‌ ಬಳಕೆ ಹೇಗೆ?

ನೋಡಲು ಸಾಮಾನ್ಯ ಜೆಲ್‌ ಪೆನ್‌ನಂತೆಯೇ ಕಾಣುವ ಈ ಐಬ್ರೋ ಟ್ಯಾಟೂ ಸ್ಕೆಚ್‌ ಪೆನ್‌ಗಳನ್ನು ಸಾಮಾನ್ಯವಾಗಿ ಐಬ್ರೋ ಪೆನ್‌ಗಳೆಂದೇ ಕರೆಯಲಾಗುತ್ತದೆ. ಹಚ್ಚುವುದು ಕೂಡ ಸುಲಭ. ಪೆನ್ಸಿಲ್‌ನಂತೆ ತಿದ್ದಿ ತೀಡುವ ಅಗತ್ಯವಿಲ್ಲ! , ಮೈಕ್ರೋ ಬ್ಲೇಡ್‌ ಮಾದರಿಯ ಸ್ಕೆಚ್‌ ಇಂಕ್‌ ರಿಲೀಸ್‌ ಮಾಡುವ ಇವು ಮೈಕ್ರೋ ಬ್ರಶ್‌ನಂತೆ ಕಾರ್ಯ ನಿರ್ವಹಿಸುತ್ತವೆ. ಇವು ಹೊರಸೂಸುವ ಇಂಕ್‌ ಹುಬ್ಬಿನ ಮೇಲೆ ಬರೆದಾಗ ನೈಜ ಕೂದಲಿನಂತೆಯೇ ಕಾಣುತ್ತವೆ. ಅವರವರ ಹುಬ್ಬಿನ ಆಕಾರಕ್ಕೆ ತಕ್ಕಂತೆ ಬರೆಯುವ ಕಲೆ ಇದ್ದರಾಯಿತು. ತಾವೇ ಖುದ್ದಾಗಿ ಐಬ್ರೋ ಪೆನ್‌ನಿಂದ ತಾತ್ಕಲಿಕವಾದ ಶೇಡ್‌ ಬರೆದಲ್ಲಿ ಟ್ಯಾಟೂವಿನಂತೆ ಅಂಟಿಕೊಳ್ಳುತ್ತದೆ, ನೋಡಲು ನಹೈಜ ಹುಬ್ಬನ್ನು ತೀಡಿದಂತೆ ಕಾಣುತ್ತದೆ ಎನ್ನುತ್ತಾರೆ ಸೌಂದರ್ಯ ತಜ್ಞರು.

ನಾನಾ ಬ್ರಾಂಡ್‌ಗಳಲ್ಲಿ ಲಭ್ಯವಿರುವ ಈ ಐಬ್ರೋ ಟ್ಯಾಟೂ ಪೆನ್‌ಗಳ ಬೆಲೆ ದುಬಾರಿ. ಒಮ್ಮೆ ಹಚ್ಚಿದಲ್ಲಿ ಕನಿಷ್ಠವೆಂದರೂ ಎರಡ್ಮೂರು ದಿನ ಅಳಿಸಿ ಹೋಗುವುದಿಲ್ಲ. ನಂತರ ಪೀಲ್‌ ಆಗುತ್ತದೆ. ಒಂದೊಂದು ಬಗೆಯ ಐಬ್ರೋ ಪೆನ್‌ಗಳು ಒಂದೊಂದು ಬಗೆಯಲ್ಲಿ ಕಾರ್ಯನಿರ್ವಹಿಸುತ್ತವೆ ಎನ್ನುತ್ತಾರೆ.

ಖರೀದಿಸುವ ಮುನ್ನ ಟ್ರಯಲ್‌ ನೋಡಿ

ಐಬ್ರೋ ಪೆನ್ಸಿಲ್‌ ಖರೀದಿಸುವ ಮುನ್ನ ಯಾವುದೇ ಕಾಸ್ಮೆಟಿಕ್‌ ಸೆಂಟರ್‌ನಲ್ಲಿ ನೀಡುವ ಟ್ರಯಲ್‌ ಅಥವಾ ಡೆಮೋ ನೋಡಿ. ನಿಮಗೆ ಮ್ಯಾಚ್‌ ಆಗುವ ಬ್ಲಾಕ್‌ ಇಲ್ಲವೇ ಬ್ರೌನ್‌ ಶೇಡ್‌ನವನ್ನು ಕೊಳ್ಳಿ. ಆನ್‌ಲೈನ್‌ ಕೊಳ್ಳುವಾಗ ಎಚ್ಚರ. ಕಾಸ್ಮೆಟಿಕ್ಸ್ ಪ್ರಾಡಕ್ಟ್ಸ್ ಬದಲಿಸುವುದಿಲ್ಲ ಎನ್ನುತ್ತಾರೆ ಬ್ಯೂಟಿ ಎಕ್ಸ್‌ಪಟ್ರ್ಸ್.

ಐಬ್ರೋ ಟ್ಯಾಟೂ ಪೆನ್‌ ಪ್ರಿಯರು ಗಮನಿಸಬೇಕಾದ್ದು

(ಲೇಖಕಿ : ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Jeans Saree Fashion: ಜೀನ್ಸ್‌ ಮೇಲೆ ಸೀರೆ ಧರಿಸಿದರೆ ಹೇಗಿರುತ್ತದೆ? ಜೀನ್ಸ್‌ ಸೀರೆ ಫ್ಯಾಷನ್‌ ಟ್ರೆಂಡ್‌!

Exit mobile version