ಶೀಲಾ ಸಿ. ಶೆಟ್ಟಿ, ಬೆಂಗಳೂರು
ಜಾಗತಿಕ ಮಟ್ಟದಲ್ಲಿ ಮೊದಲ ಫ್ಯಾಷನ್ ಹಬ್ ಹಾಗೂ ಫ್ಯಾಷನ್ ಸಿಟಿ ಎಂದೇ ಹೆಸರಾಗಿರುವ ಪ್ಯಾರೀಸ್‌ನಲ್ಲಿ ಈ ವರ್ಷದ ಮೊದಲ ಫಾಲ್/ವಿಂಟರ್ ೨೦೨೩ರ (Fall/winter Paris Fashion Week 2023) ಪ್ಯಾರೀಸ್ ಫ್ಯಾಷನ್ ವೀಕ್ ನಡೆಯಿತು. ಊಹೆಗೂ ಮೀರಿದಂತಹ ಡಿಸೈನರ್‌ವೇರ್‌ಗಳ ಅನಾವರಣ, ಅಂತರಾಷ್ಟ್ರೀಯ ಮಟ್ಟದಲ್ಲಿ ಬೆರಗು ಮೂಡಿಸುವಲ್ಲಿ ಯಶಸ್ವಿಯಾಯಿತು.
ಪ್ಯಾರೀಸ್ ಫ್ಯಾಷನ್ ವೀಕ್ ವಿಶೇಷತೆ ಏನು?
ಅಂದಹಾಗೆ, ಜಗತ್ತಿನಾದ್ಯಂತ ಇರುವ ಫ್ಯಾಷನ್ ಡಿಸೈನರ್‌ಗಳು ಹಾಗೂ ಫ್ಯಾಷನ್ ಕೊರಿಯಗ್ರಾಫರ್‌ಗಳು ಮತ್ತು ಸೂಪರ್ ಮಾಡೆಲ್‌ಗಳು ಪ್ಯಾರೀಸ್ ಫ್ಯಾಷನ್ ವೀಕ್ (Paris Fashion week 2023) ಎಂದಾಕ್ಷಣ ಕಣ್ಣರಳಿಸುತ್ತಾರೆ, ಕಾರಣ, ಇದು ನಂಬರ್ ವನ್ ಸ್ಥಾನದಲ್ಲಿರುವ ಫ್ಯಾಷನ್ ಹಬ್. ಇಲ್ಲಿ ಬಿಡುಗಡೆಯಾಗುವ ಡಿಸೈನರ್‌ವೇರ್‌ಗಳಿಂದಿಡಿದು ವಾಕ್ ಮಾಡುವ ಮಾಡೆಲ್‌ಗಳು ಹಾಗೂ ಡಿಸೈನರ್‌ಗಳು ಎಲ್ಲರೂ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಡುತ್ತಾರೆ. ಚಿಕ್ಕ ಶೋ ನಡೆಸುವ ಸಾಮಾನ್ಯ ಡಿಸೈನರ್‌ಗಳ ಕನಸು ಕೂಡ ಒಮ್ಮೆಯಾದರೂ ಪ್ಯಾರೀಸ್ ಫ್ಯಾಷನ್ ವೀಕ್‌ನಲ್ಲಿ ಭಾಗವಹಿಸಬೇಕೆಂಬುದಾಗಿರುತ್ತದೆ. ಇಲ್ಲವೇ ಒಮ್ಮೆಯಾದರೂ ವೀಕ್ಷಿಸಬೇಕು ಎಂಬುದಾಗಿರುತ್ತದೆ. ಹಾಗಾಗಿ ಪ್ಯಾರೀಸ್ ಫ್ಯಾಷನ್ ವೀಕ್ ಪ್ರತಿಷ್ಠಿತ ಫ್ಯಾಷನ್ ವೀಕ್ ಎಂದೆನಿಸಿಕೊಂಡಿದೆ ಎನ್ನುತ್ತಾರೆ ಫ್ಯಾಷನ್ ವಿಮರ್ಶಕರು .
ಫ್ಯಾಷನ್ ವೀಕ್‌ನಲ್ಲಿ ಪ್ರತಿಷ್ಠಿತ ಬ್ರಾಂಡ್‌ಗಳ ಸಮಾಗಮ
ಪ್ರತಿಷ್ಠಿತ ಲೂಯಿಸ್ ವ್ಯಾಟನ್ ಬ್ರಾಂಡ್‌ನಿಂದಿಡಿದು ಡಿಯೋರ್, ಗಿವೆನ್ಕಿ, ಡ್ರೈಸ್ ವಾನ್ ನೋಟೆನ್ ಸೇರಿದಂತೆ ಜಗತ್ತಿನ ನಾನಾ ಬ್ರಾಂಡ್ ಡಿಸೈನರ್ಸ್ ಈ ಫ್ಯಾಷನ್ ವೀಕ್‌ನಲ್ಲಿ ಸೇರಿದ್ದರು. ಫಾಲ್ ವಿಂಟರ್ ಹೆಸರಲ್ಲಿ ಬಗೆಬಗೆಯ ಫರ್ ಫ್ಯಾಬ್ರಿಕ್‌ನಿಂದಿಡಿದು ಓವರ್‌ಸೈಜ್‌ನ ಕೋಟ್, ಶರ್ಟ್, ವಿಂಟೇಜ್ ಲುಕ್ ನೀಡುವ ಟ್ರೆಂಚ್ ಕೋಟ್ ಶೈಲಿಯ ಮಿಕ್ಸ್ಡ್ ಫ್ಯಾಷನ್, ಫೆಮಿನೈನ್ ಲುಕ್ ನೀಡುವ ಡಿಸೈನರ್ ಜಾಕೆಟ್ ಪುಲ್‌ಓವರ್, ಯೂನಿಸೆಕ್ಸ್ ಡಿಸೈನರ್‌ವೇರ್ಸ್ ಸೇರಿದಂತೆ ಊಹೆಗೂ ಮೀರಿದ ಡಿಸೈನರ್‌ವೇರ್‌ಗಳನ್ನು ಧರಿಸಿದ ಮಾಡೆಲ್‌ಗಳು ಕ್ಯಾಟ್‌ವಾಕ್ ಮಾಡಿದರು.
ಎಂದಿನಂತೆ ಪ್ಯಾರೀಸ್ ಫ್ಯಾಷನ್‌ವೀಕ್‌ನಲ್ಲಿ (Paris Fashion week 2023) ಈ ಬಾರಿಯೂ ಮಾಡೆಲ್‌ಗಳಿಗಿಂತ ಡಿಸೈನರ್‌ಗಳ ಹಂಗಾಮ ಹೆಚ್ಚಾಗಿತ್ತು. ಮಹಿಳೆಯರಿಗಿಂತ ಪುರುಷ ಮಾಡೆಲ್‌ಗಳ ಕಾರುಬಾರು ಹೆಚ್ಚಾಗಿತ್ತು. ಲೇಡಿ ಮಾಡೆಲ್‌ಗಳು ಭಾಗವಹಿಸಿದ್ದಾರಾದರೂ ಹೆಚ್ಚಾಗಿ ಹುಡುಗರ ಡಿಸೈನರ್‌ವೇರ್‌ಗಳು ಹೈಲೈಟಾದವು ಎನ್ನುತ್ತಾರೆ ಫ್ಯಾಷನ್ ಎಕ್ಸ್‌ಪಟ್ರ್ಸ್.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Stars Fashion | ಅಂಬಾನಿ ಫ್ಯಾಮಿಲಿ ಸಮಾರಂಭದಲ್ಲಿ ಗ್ರ್ಯಾಂಡ್ ಎಥ್ನಿಕ್ ವೇರ್ಸ್‌ನಲ್ಲಿ ಎಂಟ್ರಿ ಕೊಟ್ಟ ತಾರೆಯರು