ಶೀಲಾ ಸಿ. ಶೆಟ್ಟಿ, ಬೆಂಗಳೂರು
ಆರ್ಟಿಫಿಶಿಯಲ್ ಅಥವಾ ಫೇಕ್ ಸ್ಟ್ರಿಪ್ ಐ ಲ್ಯಾಶೆಸ್‌ಗಳು (False Eyeslashes Trend) ಇದೀಗ ಸ್ತ್ರೀಯರ ಮುಖದ ಸೌಂದರ್ಯವನ್ನು ಹೆಚ್ಚಿಸುತ್ತಿವೆ. ಇತ್ತೀಚೆಗೆ ಈ ಫೇಕ್ ಐ ಲ್ಯಾಶೆಸ್ ಯಾವ ಮಟ್ಟಿಗೆ ಟ್ರೆಂಡಿಯಾಗಿವೆ ಎಂದರೆ, ಮೇಕಪ್‌ನ ಒಂದು ಭಾಗವಾಗಿರುವುದರೊಂದಿಗೆ ಸ್ತ್ರೀಯರ ಕಂಗಳ ಸೌಂದರ್ಯವನ್ನು ಇಮ್ಮಡಿಗೊಳಿಸಿವೆ.
ಮೇಕಪ್ ಆರ್ಟಿಸ್ಟ್ ರೆಷಲ್ ಪ್ರಕಾರ, ಕೇವಲ ಸೆಲೆಬ್ರೆಟಿಗಳಿಗೆ ಮಾತ್ರ ಸೀಮಿತವಾಗಿದ್ದ ಆರ್ಟಿಫಿಶಿಯಲ್ ಕಣ್ಣಿನ ರೆಪ್ಪೆಗಳು ಇದೀಗ ಸಾಮಾನ್ಯ ಹುಡುಗಿಯರ, ಮಹಿಳೆಯರ ಮೇಕಪ್ ಬಾಕ್ಸ್ ಸೇರಿವೆ. ಆ ಮಟ್ಟಿಗೆ ಇವು ಇದೀಗ ಚಾಲ್ತಿಯಲ್ಲಿವೆ ಹಾಗೂ ಪ್ರಚಲಿತದಲ್ಲಿವೆ ಎನ್ನುತ್ತಾರೆ. ಬಾಲಿವುಡ್, ಸ್ಯಾಂಡಲ್‌ವುಡ್ ಹಾಗೂ ಮಾಡೆಲ್‌ಗಳ ಡೈಲಿ ರುಟೀನ್ ಮೇಕಪ್ ಕಿಟ್‌ನಲ್ಲಿ ಇವು ಅಗ್ರಸ್ಥಾನ ಪಡೆದಿವೆ.
ಏನಿದು ಫೇಕ್ ಅಥವಾ ಆರ್ಟಿಫಿಶಿಯಲ್ ಐ ಲ್ಯಾಶೆಸ್?
ಕೃತಕ ಕಣ್ಣಿನ ರೆಪ್ಪೆಗಳಿವು. ನಾನಾ ಬ್ರಾಂಡ್‌ಗಳಲ್ಲಿ ದೊರೆಯುತ್ತವೆ. ಎಲ್ಲಾ ಬ್ಯೂಟಿ ಪ್ರಾಡಕ್ಸ್ಟ್ ದೊರೆಯುವ ಸ್ಥಳದಲ್ಲಿ ಸಿಗುತ್ತವೆ. ಫ್ಯಾನ್ಸಿ ಶಾಪ್‌ಗಳಲ್ಲೂ ದೊರೆಯುತ್ತವೆ. ಕೆಲವು ಮೂರ್ನಾಲ್ಕು ಸೆಟ್‌ನಲ್ಲಿ ದೊರೆತರೆ, ಮತ್ತೆ ಕೆಲವು ಸಿಂಗಲ್ ಸೆಟ್‌ನಲ್ಲೂ ದೊರೆಯುತ್ತವೆ. ಅದರೊಂದಿಗೆ ಇವುಗಳನ್ನು ಸುಲಭವಾಗಿ ಅಂಟಿಸುವ ಗ್ಲ್ಯೂ ಕೂಡ ದೊರೆಯುತ್ತದೆ. ಮೇಕಪ್ ಆರ್ಟಿಸ್ಟ್‌ಗಳು ಅತಿ ಹೆಚ್ಚಾಗಿ ಇವನ್ನು ಬಳಸುತ್ತಾರೆ. ಬಹುತೇಕರು ಇದನ್ನು ಮರು ಬಳಕೆಯೂ ಮಾಡುತ್ತಾರೆ ಎನ್ನುವ ಬ್ಯೂಟಿ ಎಕ್ಸ್‌ಪಟ್ರ್ಸ್ ರೀನಾ ಹೇಳುವಂತೆ ಎಥ್ನಿಕ್ ಔಟ್‌ಫಿಟ್‌ಗಳಿಗೆ ಇವನ್ನು ಹೆಚ್ಚಾಗಿ ಬಳಸಲಾಗುತ್ತಿದೆ. ಕ್ಯಾಶುವಲ್ ಲುಕ್‌ನಲ್ಲಿ ಆದಷ್ಟೂ ಮಸ್ಕರಾ ಬಳಸಲಾಗುತ್ತಿದೆ ಎನ್ನುತ್ತಾರೆ.
ಸಾಮಾನ್ಯ ಹುಡುಗಿ ಕೂಡ ಇಂದು ಯೂಟ್ಯೂಬ್ ನೋಡಿ ಐ ಲ್ಯಾಶೆಸ್ ಅಪ್ಲೈ ಮಾಡುವುದು ಸಾಮಾನ್ಯವಾಗಿದೆ. ಬಳಸುವುದು ಸುಲಭವಾಗಿರುವುದರಿಂದ ಖರೀದಿಯು ಹೆಚ್ಚಾಗಿದೆ ಎನ್ನುತ್ತಾರೆ ಮಾರಾಟಗಾರರು.
ಫಾಲ್ಸ್/ಫೇಕ್ ಐ ಲ್ಯಾಶೆಸ್ ಬಳಸುವ ಮುನ್ನ ಗೊತ್ತಿರಲಿ
- ಸದಾ ಫೇಕ್ ಐ ಲ್ಯಾಶೆಸ್ ಬಳಸುವುದರಿಂದ ರೆಪ್ಪೆ ಭಾಗಕ್ಕೆ ಸಮಸ್ಯೆಯಾಗಬಹುದು.
- ಕಣ್ಣಿನ ರೆಪ್ಪೆಯ ಮೇಲೆ ಅಂಟಿಸುವುದರಿಂದ ಒರಿಜಿನಲ್ ರೆಪ್ಪೆ ಕೂದಲು ಉದುರಬಹುದು.
- ಅಂಟಿಸಿದ ರೆಪ್ಪೆ ತೆಗೆಯದೇ ಮಲಗಿದಲ್ಲಿ ಕಣ್ಣಿನ ಭಾಗಕ್ಕೆ ತೊಂದರೆಯಾಗಬಹುದು.
- ಬ್ರಾಂಡೆಡ್ ಐ ಲ್ಯಾಶೆಸ್ ಖರೀದಿಸಿ.
- ಕಡಿಮೆ ದರದ ಲ್ಯಾಶೆಸ್ ಬಳಸಬೇಡಿ.
- ಲ್ಯಾಶೆಸ್ ಗಮ್ನಿಂದ ಚರ್ಮಕ್ಕೆ ಕಿರಿಕಿರಿಯಾದಲ್ಲಿ, ಬಳಸುವುದನ್ನು ಆವಾಯ್ಡ್ ಮಾಡಿ.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Monsoon Fashion: ಮಳೆಗಾಲಕ್ಕೆ ಫುಲ್ ಸ್ಲೀವ್ ಆಗಿ ಕಾಲಿಟ್ಟ 3 ಶೈಲಿಯ ಕ್ರಾಪ್ ಟಾಪ್ಸ್