ಶೀಲಾ ಸಿ. ಶೆಟ್ಟಿ, ಬೆಂಗಳೂರು
ಮಿಸೆಸ್ ಇಂಡಿಯಾ ಕರ್ನಾಟಕ ಟೀಮ್‌ನ ಹೊಸ ವರ್ಷದ ಅತ್ಯಾಕರ್ಷಕ ಕ್ಯಾಲೆಂಡರ್ ಉದ್ಯಾನನಗರಿಯಲ್ಲಿ ಬಿಡುಗಡೆಗೊಂಡಿತು. ಈ ಸಾಲಿನಲ್ಲಿ ಸೌಂದರ್ಯ ಸ್ಪರ್ಧೆಯಲ್ಲಿ ವಿಜೇತರಾದ ಬೆಡಗಿಯರು ಈ ಕ್ಯಾಲೆಂಡರ್‌ನ ಫ್ಯಾಷನ್ ಫೋಟೋಗಳಲ್ಲಿ ಫ್ಯಾಷೆನಬಲ್ ಆಗಿ ಕಾಣಿಸಿಕೊಂಡಿದ್ದಾರೆ. ಮಿಸೆಸ್ ಇಂಡಿಯಾ ಕರ್ನಾಟಕ ನಿರ್ದೇಶಕಿ ಹಾಗೂ ಮಿಸೆಸ್ ಏಷಿಯಾ ಇಂಟರ್‌ನ್ಯಾಷನಲ್ ಪ್ರತಿಭಾ ಸೌಂಶಿಮಠ್ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ವಿಜೇತರೇ ಕ್ಯಾಲೆಂಡರ್‌ನ ಮಾಡೆಲ್‌ಗಳು
ಮಿಸೆಸ್ ಇಂಡಿಯಾ ಕರ್ನಾಟಕ ಪೇಜೆಂಟ್ ಪ್ರತಿವರ್ಷವೂ ತಮ್ಮದೇ ಆದ ಕ್ಯಾಲೆಂಡರನ್ನು ಬಿಡುಗಡೆಗೊಳಿಸುತ್ತದೆ. ವಿಶೇಷವೆಂದರೇ, ಆಯಾ ವರ್ಷದಲ್ಲಿ ವಿಜೇತರಾಗುವ ಮಹಿಳೆಯರು ಈ ಕ್ಯಾಲೆಂಡರ್‌ನ ಮಾಡೆಲ್‌ಗಳಾಗುತ್ತಾರೆ. ಇದು ಅವರಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಮಾಡಲಾಗುತ್ತದೆ. ಜತೆಗೆ ಅವರಿಗೆ ಸಾರ್ವಜನಿಕವಾಗಿ ವೇದಿಕೆ ಕಲ್ಪಿಸಿದಂತಾಗುತ್ತದೆ ಎನ್ನುತ್ತಾರೆ ಪ್ರತಿಭಾ ಸೌಂಶಿಮಠ್.
ಅಚ್ಚರಿಯ ವಿಚಾರವೆಂದರೇ, ಇತರೇ ಕ್ಯಾಲೆಂಡರ್‌ಗಳಂತೆ ಇದು ಕೇವಲ ಗ್ಲಾಮರಸ್ ಹುಡುಗಿಯರಿಗೆ ಸೀಮಿತವಾಗಿಲ್ಲ! ಬದಲಿಗೆ ಚಿಕ್ಕ ವಯಸ್ಸಿನ ವಿವಾಹಿತೆಯರಿಂದಿಡಿದು ೭೦ರ ವಯಸ್ಸಿನ ಸೀನಿಯರ್ ಮಾನಿನಿಯರು ಈ ಟೀಮ್‌ನಲ್ಲಿದ್ದಾರೆ. ಅವರ ಉತ್ಸಾಹ ಹಾಗೂ ಎನರ್ಜಿ ಲೆವೆಲ್ ಎಂತಹವರಿಗೂ ಸ್ಪೂರ್ತಿ ನೀಡುವಂತಿದೆ ಎನ್ನುತ್ತಾರೆ ಪ್ರತಿಭಾ.
ಸ್ಫೂರ್ತಿ ನೀಡುವ ಮಹಿಳೆಯರು
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಹಿರಿಯ ನಿರೂಪಕ, ನಟ, ನಿರ್ದೇಶಕ ಮುರಳಿ ಅವರು ಮಾತನಾಡಿ, ಈ ಟೀಮ್‌ನಲ್ಲಿರುವ ಮಹಿಳೆಯರು ಇದೀಗ ಕೇವಲ ಮಾಡೆಲಿಂಗ್‌ಗೆ ಮಾತ್ರ ಸೀಮಿತವಾಗಿಲ್ಲ! ಮಾಡೆಲಿಂಗ್ ಜತೆಜತೆಗೆ ತಮ್ಮದೇ ಆದ ಸಾಕಷ್ಟು ಟ್ಯಾಲೆಂಟ್ ಹೊಂದಿದ್ದಾರೆ. ಎಲ್ಲರೂ ಬಿಝಿಯಾಗಿದ್ದಾರೆ. ಇದು ಅವರ ಜೀವನೋತ್ಸಾಹ ಹೆಚ್ಚಿಸುವುದರೊಂದಿಗೆ ಇತರೇ ಮಹಿಳೆಯರಿಗೂ ಸ್ಪೂರ್ತಿ ತುಂಬುತ್ತದೆ ಎಂದರು.
ಗ್ಲಾಮರಸ್ ಕ್ಯಾಲೆಂಡರ್ ಬಿಡುಗಡೆಗೊಳಿಸಿದವರು
ಕಾರ್ಯಕ್ರಮದಲ್ಲಿ ಸೆಲೆಬ್ರಿಟಿಗಳಾದ ಒಗ್ಗರಣೆ ಡಬ್ಬಿ ಹಾಗೂ ಸವಿರುಚಿ ಅಡುಗೆ ಕಾರ್ಯಕ್ರಮದ ರೂವಾರಿ ಮುರಳಿ, ನಿರ್ದೇಶಕ ರಘು ಭಟ್, ಸರ್ ಎಂ ವಿಶ್ವೇಶ್ವರಯ್ಯ ಅವರ ಮರಿಮಗ ಮೋಕ್ಷಂ ಗುಂಡಂ ಗುರೂಜಿ, ಕರ್ನಾಟಕ ರಕ್ಷಣಾ ವೇದಿಕೆಯ ಮುಖಂಡರಾದ ಧನಂಜಯ ಗೌಡರು ಸೇರಿದಂತೆ ನಾನಾ ಗಣ್ಯರು ಭಾಗವಹಿಸಿದ್ದರು.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ| Fashion News | ಫ್ಯಾಷನ್ ಗುರು ಪ್ರಸಾದ್ ಬಿದ್ದಪ್ಪಗೆ ಸಂದ ಹಾಲ್ ಆಫ್ ಫೇಮ್ ಅವಾರ್ಡ್