Site icon Vistara News

Fashion Colour Trend: ಫ್ಯಾಷನ್ ನಲ್ಲಿ ಸನ್ ಕಲರ್ ಡಿಸೈನ್ ವೇರ್

ಶೀಲಾ ಸಿ. ಶೆಟ್ಟಿ, ಬೆಂಗಳೂರು

ಸನ್ ಕಲರ್ ಶೇಡ್ ನ ಉಡುಪುಗಳು ಇದೀಗ ಫ್ಯಾಷನ್ ಪ್ರಿಯರನ್ನು ಆಕರ್ಷಿಸತೊಡಗಿವೆ. ಸನ್ ಕಲರ್ ಎಂದೇ ಕರೆಸಿಕೊಳ್ಳುವ ಹಳದಿಯ ನಾನಾ ಲೈಟ್ ಹಾಗೂ ಬ್ರೈಟ್ ಶೇಡ್ ಗಳ ಉಡುಪುಗಳು ಬಿಡುಗಡೆಯಾಗಿದ್ದು ಟ್ರೆಂಡಿಯಾಗಿವೆ. ಹಳದಿ ಎಂದರೆ ಮುಖ ತಿರುಗಿಸುತ್ತಿದ್ದವರೂ ಈ ಶೇಡ್ ನ ಡಿಸೈನ್ ವೇರ್ ಗಳತ್ತ ಮುಖ ಮಾಡತೊಡಗಿದ್ದಾರೆ.

ಫ್ಯಾಷನ್ ವೇರ್ ನಿಂದ ಹಿಡಿದು ನಾನಾ ಆ್ಯಕ್ಸಿಸರಿಸ್ ಗಳು ಹಳದಿ ಬಣ್ಣದಲ್ಲಿ ಕಾಣಿಸಿಕೊಳ್ಳುತ್ತಿವೆ. ಹೌದು. ಹಳದಿ ಬಣ್ಣದ ನಾನಾ ಶೇಡ್ ಗಳು ಈ ಸೀಸನ್ ಗೆ ಎಂಟ್ರಿ ನೀಡಿದ್ದು, ಬಹುತೇಕ ಕ್ಯಾಶುವಲ್ ಹಾಗೂ ಫಾರ್ಮಲ್ ಉಡುಪುಗಳಲ್ಲಿ ಕಾಣಿಸಕೊಳ್ಳತೊಡಗಿದೆ.

ಶಿಲ್ಪಾ ಮಂಜುನಾಥ್, ನಟಿ

ಫ್ಯಾಷನಿಸ್ಟ್ ಜೂಹಿ ಪ್ರಕಾರ ಇಂದು ಹಳದಿ ಬಣ್ಣ ಎಂದರೆ ದೂರ ಸರಿಯುವವರು ಕಡಿಮೆಯಾಗಿದ್ದಾರೆ.

ಹಳದಿ ಬಣ್ಣ ಒಂದು ಪ್ರಯೋಗಾತ್ಮಕ ವರ್ಣ. ಈ ಶೇಡ್, ಡಿಸೈನ್ ವೇರನ್ನು ಎದ್ದು ಕಾಣುವಂತೆ ಮಾಡುತ್ತದೆ. ಅಷ್ಟೇಕೆ? ಬಹಳಷ್ಟು ಫ್ಯಾಷನ್ ಶೋಗಳಲ್ಲಿ ಎಥ್ನಿಕ್ ವಿಭಾಗದಲ್ಲಿ ಮಾತ್ರವಲ್ಲ, ವೆಸ್ಟರ್ನ್ ಔಟ್ ಲೆಟ್ ಗಳಲ್ಲೂ ಸನ್ ಕಲರ್ ನ ಉಡುಪುಗಳನ್ನೇ ಬಳಸಲಾಗುತ್ತಿದೆ ಎನ್ನುತ್ತಾರೆ ಫ್ಯಾಷನ್ ಕೊರಿಯಾಗ್ರಾಫರ್ ಸುಜೀತ್.

ಫ್ಯಾಷನ್ ವೀಕ್ ನಲ್ಲಿ ಸನ್ ಕಲರ್ಸ್

ನ್ಯೂಯಾರ್ಕ್ ಫ್ಯಾಷನ್ ವೀಕ್ ನಲ್ಲಿ ಸನ್ ಕಲರ್ಸ್ ಎನ್ನಲಾದ ನಾನಾ ಹಳದಿ ಶೇಡ್ ಗಳು ಫಾರ್ಮಲ್ಸ್ ಹಾಗೂ ಕ್ಯಾಶುವಲ್ಸ್ ನಲ್ಲಿ ಬಿಡುಗಡೆಗೊಂಡ ನಂತರ ನಿಧಾನಗತಿಯಲ್ಲಿ ನಮ್ಮ ರಾಷ್ಟ್ರದಲ್ಲೂ ಈ ವರ್ಣ ಟ್ರೆಂಡಿಯಾಗಲಾರಂಭಿಸಿತು.
ಆರಂಭದಲ್ಲಿ ವೆಸ್ಟರ್ನ್ ಔಟ್ ಫಿಟ್ ಜತೆಗೆ ಕಾಣಿಸಿಕೊಂಡರೂ ಪ್ರಚಲಿತಕ್ಕೆ ಬಂದದ್ದು ಮಾತ್ರ ಇಂಡಿಯನ್ ಅಟೈರ್ ಗಳೊಂದಿಗೆ. ತಿಳಿ ಹಳದಿ, ಡಾರ್ಕ್ ಹಳದಿ, ಶೈನಿಂಗ್ ಯೆಲ್ಲೋ, ನಿಯಾನ್ ಸನ್ಶೈನ್ ವರ್ಣ, ಕ್ಲಾಸಿಕ್ ಯೆಲ್ಲೋ, ಆರೆಂಜ್ ಯೆಲ್ಲೋ ಹೀಗೆ ಊಹೆಗೂ ಮೀರಿದ ವರ್ಣಗಳಲ್ಲಿ ಡಿಸೈನ್ ವೇರ್ ಗಳಲ್ಲಿ ಬಿಡುಗಡೆಗೊಂಡಿದೆ. ಸ್ಪ್ರಿಂಗ್ ಸೀಸನ್ ನಲ್ಲಿ ಬಿಡುಗಡೆಗೊಂಡಥವು ಮಾನ್ಸೂನ್ ನಲ್ಲೂ ಮುಂದುವರಿದಿವೆ ಎನ್ನುತ್ತಾರೆ ಸ್ಟೈಲಿಸ್ಟ್ ಜೂಹಿ.

ಖುಷಿಯ ಸಂಕೇತ

ಇನ್ನು ಡಿಸೈನರ್ ರಾಕಿ ಪ್ರಕಾರ ಹಳದಿ ವರ್ಣ ಸಂತೋಷ ಹಾಗೂ ಖುಷಿಯ ಸಂಕೇತವಂತೆ. ನೋಡಲು ಎದ್ದು ಕಾಣುವ ಈ ವರ್ಣ ವಾತಾವರಣವನ್ನು ಲೈವ್ಲಿಯಾಗಿರಿಸುತ್ತದಂತೆ. ಹಾಗೆಂದು ಸಾಕಷ್ಟು ಅಧ್ಯಯನಗಳು ಕೂಡ ಹೇಳಿವೆ. ಸನ್ ಕಲರ್ ಮೂಡನ್ನು ಸಕ್ರಿಯವಾಗಿರಿಸಲು ಇದು ಸಹಕರಿಸುತ್ತದಂತೆ.

ಸನ್ ಕಲರ್ ಔಟ್ ಫಿಟ್ಸ್

ವೆಸ್ಟರ್ನ್ ಔಟ್ ಫಿಟ್ ಗಳಲ್ಲಿ ಯೆಲ್ಲೊ ಕಲರ್ ನ ಬ್ಲೇಝರ್ ಹಾಗೂ ಲೆಯರ್ ಲುಕ್ ನೀಡುವ ಶ್ರಗ್ ಗಳು ಬಿಡುಗಡೆಗೊಂಡಿವೆ. ಅಷ್ಟೇಕೆ ಲಾಂಗ್ ಸ್ಲಿಟ್ ಮ್ಯಾಕ್ಸಿ ಶೈಲಿಯವು, ಫ್ರಾಕ್ ಗಳು ಈಗಾಗಲೇ ಹಾಲಿ ಡೇ ಫ್ಯಾಷನ್ ನಲ್ಲಿ ಮನಸೂರೆಗೊಂಡಿವೆ. ಇನ್ನು ಎಥ್ನಿಕ್ ಡಿಸೈನ್ ವೇರ್ ಗಳಲ್ಲಿ ಸಲ್ವಾರ್ ಕಮೀಜ್, ಸ್ಲಿಟ್ ಕುರ್ತಾ, ಲಾಂಗ್ ಲೆಂಥ್ ಅನಾರ್ಕಲಿ, ಫ್ಲೋರ್ ಲೆಂಥ್ ಫ್ರಾಕ್, ಚೂಡಿದಾರ, ಲೆಹೆಂಗಾ, ಗಾಗ್ರ ಹೀಗೆ ನಾನಾ ಡಿಸೈನರ್ ವೇರ್ ಗಳಲ್ಲಿ ಬಿಡುಗಡೆಗೊಂಡಿವೆ.

ಬ್ಯೂಟಿಫುಲ್ ಆಗಿರಲಿ ಯೆಲ್ಲೋ ಡ್ರೆಸ್

ಯಾವುದೇ ಹಳದಿ ಕಲರ್ ಜತೆ ಆದಷ್ಟೂ ನಿಯಾನ್ ಗ್ರೀನ್, ಬ್ಲಾಕ್, ಮರೂನ್, ಮೆಜಂತಾದಂತಹ ಕಾಂಟ್ರಸ್ಟ್ ಜಿಯೋಮೆಟ್ರಿಕಲ್ ಡಿಸೈನ್ ಇರುವಂಥವನ್ನು ಮಿಕ್ಸ್ ಮ್ಯಾಚ್ ಮಾಡಿ. ಕ್ರೇಪ್ ಹಾಗೂ ಜಾರ್ಜೆಟ್ ನ ಸೆಲ್ವಾರ್ ಹಾಗೂ ಟಾಪ್ ಗಳು ಈ ವರ್ಣದಲ್ಲಿ ಚೆನ್ನಾಗಿ ಕಾಣುತ್ತವೆ. ಹಳದಿ ಬಣ್ಣವೊಂದರಲ್ಲೆ ಸುಮಾರು 10ಕ್ಕೂ ಹೆಚ್ಚು ಫ್ಯಾಷನ್ ಶೇಡ್ ಗಳಿವೆ. ಗಾಢ ಹಳದಿ ಹಾಗೂ ಗೋಲ್ಡನ್ ಶೇಡ್ ಇರುವಂತಹ ಪುರುಷರ ಶೆರ್ವಾನಿ, ಮಹಿಳೆಯರ ಸೆಲ್ವಾರ್ ಹಾಗೂ ಸೀರೆಗಳು ಹೆಚ್ಚು ಪ್ರಚಲಿತದಲ್ಲಿದೆ.

ಸನ್ ಕಲರ್ಸ್ ಧರಿಸುವವರಿಗೆ ಸಿಂಪಲ್ ಸಲಹೆಗಳಿವು…
• ಹಳದಿ ಬಣ್ಣ ಎಲ್ಲರಿಗೂ ಮ್ಯಾಚ್ ಆಗದು. ಸ್ಕಿನ್ ಟೋನ್ ಗೆ ತಕ್ಕಂತೆ ಸೂಟ್ ಆಗುವ ಯೆಲ್ಲೋ ಶೇಡ್ ಆಯ್ಕೆ ಉತ್ತಮ.
• ಡಿಸೈನ್ಸ್ ಹಾಗೂ ಫ್ಯಾಬ್ರಿಕ್ ಚೆನ್ನಾಗಿದ್ದಲ್ಲಿ ಚೆನ್ನಾಗಿ ಕಾಣುತ್ತದೆ.
• ನೈಟ್ ಪಾರ್ಟಿಗಳಿಗೆ ಫುಲ್ ಮಾರ್ಕ್ಸ್.
• ಬ್ಲಾಕ್, ಮರೂನ್, ಗ್ರೀನ್ ಬಣ್ಣದ ಫಂಕಿ ಆಕ್ಸಿಸರೀಸ್ ಬೆಸ್ಟ್ ಮ್ಯಾಚಿಂಗ್.
• ಡ್ರೆಸ್ ಸಂಪೂರ್ಣ ಹಳದಿ ವರ್ಣದಾಗಿದ್ದರೇ ಅದಕ್ಕೆ ಕಾಂಟ್ರಸ್ಟ್ ಬಣ್ಣದ ಸ್ಕಾರ್ಫ್ – ಸ್ಟೋಲ್ಸ್ ಬಳಸಬಹುದು.

ಇದನ್ನೂ ಓದಿ| Fashion Shopping: ಎಲ್ಲೆಡೆ ಶುರುವಾಯ್ತು ಸೀಸನ್‌ ಸೇಲ್‌

Exit mobile version