ಶೀಲಾ ಸಿ. ಶೆಟ್ಟಿ, ಬೆಂಗಳೂರು
ಫ್ಯಾಷನ್ ಗುರು ಪ್ರಸಾದ್ (Fashion Guru Desi Style) ಬಿದ್ದಪ್ಪ ಸ್ಟೈಲ್ ಸ್ಟೇಟ್‌ಮೆಂಟ್‌ನಲ್ಲಿ ಇದೀಗ ಖಾದಿ ಹಾಗೂ ಹ್ಯಾಂಡ್‌ಲೂಮ್‌ವೇರ್‌ಗಳದ್ದೇ ಕಾರುಬಾರು. ನೋಡಲು ವಿಭಿನ್ನ ಲುಕ್‌ನಿಂದ ಕಾಣಿಸಿಕೊಳ್ಳುವ ಪ್ರಸಾದ್ ಬಿದ್ದಪ್ಪ ಅವರದ್ದು ಕಂಪ್ಲೀಟ್ ಡಿಫರೆಂಟ್ ಸ್ಟೈಲ್‌ಸ್ಟೇಟ್‌ಮೆಂಟ್. ಒಮ್ಮೆ ಕಾಣಿಸಿಕೊಂಡ ಹಾಗೆ ಮತ್ತೊಮ್ಮೆ ಕಾಣಿಸಿಕೊಳ್ಳದಿರುವುದು ಅವರ ಯೂನಿಕ್ ದೇಸಿ ಫ್ಯಾಷನ್ ಸ್ಟೇಟ್‌ಮೆಂಟ್‌ಗಳಲ್ಲೊಂದಾಗಿದೆ.
ಪ್ರತಿಬಾರಿಯೂ ಹೊಸತನ ಮೂಡಿಸುವ ದೇಸಿ ಲುಕ್
ಪ್ರತಿಬಾರಿಯೂ ನಾನಾ ದೇಸಿ ಲುಕ್‌ಗಳಲ್ಲಿ, ಇವೆಂಟ್‌ಗಳಲ್ಲಿ ಕಾಣಿಸಿಕೊಳ್ಳುವ ಪ್ರಸಾದ್ ಬಿದ್ದಪ್ಪ ಅವರು ತಮ್ಮದೇ ಆದ ಡಿಫರೆಂಟ್ ಸ್ಟೈಲ್ ಸ್ಟೇಟ್‌ಮೆಂಟ್‌ಪ್ರಯೋಗ ಮಾಡುತ್ತಲೇ ಇರುತ್ತಾರೆ. ಇದು ಹೊಸ ದೇಸಿ ಫ್ಯಾಷನ್ ರೂಲ್ಸ್‌ಗೆ ನಾಂದಿ ಹಾಡಿದೆ. ಇತರೇ ಫ್ಯಾಷನಿಸ್ಟ್‌ಗಳು ಹೇಳುವಂತೆ, ಬಿದ್ದಪ್ಪ ಅವರು ಕೇವಲ ಸೂಪರ್ ಮಾಡೆಲ್‌ಗಳ ಸೃಷ್ಠಿಕರ್ತರಲ್ಲ! ಖುದ್ದು ಫ್ಯಾಷನ್ ಪ್ರೇಮಿ ಕೂಡ. ಆಗಾಗ್ಗೆ ಭಾಗವಹಿಸುವ ಇವೆಂಟ್‌ಗಳಲ್ಲಿ ತಮ್ಮದೇ ಆದ ವಿಭಿನ್ನ ಪ್ರಯೋಗಾತ್ಮಕ ಸ್ಟೈಲ್‌ಮೆಂಟ್ ಮೂಲಕ ಕಾಣಿಸಿಕೊಂಡು ಫ್ಯಾಷನ್ ಪ್ರಿಯರನ್ನು ಸೆಳೆಯುತ್ತಿರುತ್ತಾರೆ.
ಪ್ರಸಾದ್ ಬಿದ್ದಪ್ಪರ ಖಾದಿ ಲವ್
ಇತ್ತೀಚಿಗಿನ ಪ್ರಸಾದ್ ಬಿದ್ದಪ್ಪ ಅವರ ದೇಸಿ ಲುಕ್‌ನಲ್ಲಿ, ಈ ಕೆಳಕಂಡತಿರುವ ಔಟ್‌ಫಿಟ್ಸ್ ಕಾಣಬಹುದು. ಪ್ರಸನ್ನ ಅವರ ನೇತೃತ್ವದ ಚರಕ ಸಂಸ್ಥೆಯ ಶಾರ್ಟ್ ಕುರ್ತಿ ಜೊತೆಗೆ ಫ್ಯಾಬ್ ಇಂಡಿಯಾದ ಚೂಡಿದಾರ್ ಮ್ಯಾಚ್ ಮಾಡಿದ್ದು, ಇವೆರೆಡಕ್ಕೂ ಹೊಂದುವಂತೆ 100 ಹ್ಯಾಂಡ್ಸ್ನ ಬ್ಲಾಕ್ ಪ್ರಿಂಟೆಡ್‌ನ ಗಂಚಾ ಮಿಕ್ಸ್ ಮ್ಯಾಚ್ ಸ್ಟೋಲ್‌ನಂತೆ ಹಾಕಿರುವುದು ಇಡೀ ಲುಕ್‌ಗೆ ಕಂಪ್ಲೀಟ್ ದೇಸಿ ಇಮೇಜ್ ನೀಡಿದೆ. ಮತ್ತೊಂದು ಲುಕ್‌ನಲ್ಲಿ ತಸ್ವಾಗಾಗಿ ತರುಣ್ ತೆಹ್ಲೆಯಾನಿ ವಿನ್ಯಾಸ ಮಾಡಿರುವ ಸಿಂಪಲ್ ಕಾಟನ್ ಕುರ್ತಾ ಚೂಡಿದಾರ್‌ನೊಂದಿಗೆ ಗುಜರಾತಿನಲ್ಲಿ ತಯಾರಾಗುವ ವೂಲ್‌ನ ಟ್ರೆಡಿಷನಲ್ ಲುಕ್ ನೀಡುವ ಬುಜೋಡಿ ಶಾಲ್ ಸಿಂಪಲ್ ದೇಸಿ ಲುಕ್ ನೀಡಿದೆ. ಇನ್ನು ಖ್ಯಾತ ಫ್ಯಾಷನಿಸ್ಟ್ ಬಿಬಿ ರಸೂಲ್ ಅವರ ವಿನ್ಯಾಸದ ಮೆನ್ಸ್ ಕುರ್ತಾ ಚೂಡಿದಾರ್ ಹಾಗೂ ಶಾಲ್‌ನಲ್ಲಿ ಪ್ರಸಾದ್ ಬಿದ್ದಪ್ಪ ಅವರು ಕಾಣಿಸಿಕೊಂಡಿರುವುದು ಮತ್ತೊಂದು ಬಗೆಯ ದೇಸಿ ಸ್ಟೈಲ್ ಸ್ಟೇಟ್‌ಮೆಂಟ್ ರೂಪಿಸಿದೆ.
ಪ್ರಸಾದ್ ಬಿದ್ದಪ್ಪ ದೇಸಿ ಫ್ಯಾಷನ್ ಟಾಕ್
ವಿಸ್ತಾರದೊಂದಿಗೆ ತಮ್ಮ ಯೂನಿಕ್ ದೇಸಿ ಸ್ಟೈಲ್ ಸ್ಟೇಟ್‌ಮೆಂಟ್ ಬಗ್ಗೆ ಮಾತನಾಡಿರುವ ಫ್ಯಾಷನ್ ಗುರು ಪ್ರಸಾದ್ ಬಿದ್ದಪ್ಪ, ದೇಸಿ ಲುಕ್ ತಮ್ಮ ಆಲ್‌ಟೈಮ್ ಫೇವರಿಟ್ ಉಡುಪು ಎಂದಿದ್ದಾರೆ. ಪ್ರತಿ ಬಾರಿಯೂ ಇವೆಂಟ್‌ಗಳಲ್ಲಿ ಆದಷ್ಟೂ ತಮ್ಮದೇ ಆದ ನಯಾ ದೇಸಿ ಸ್ಟೈಲ್‌ನಲ್ಲಿ ಕಾಣಿಸಿಕೊಳ್ಳುತ್ತೇನೆ. ಇದು ನನ್ನ ಯೂನಿಕ್ ದೇಸಿ ಲುಕ್ ಎಂದಿದ್ದಾರೆ.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Bangalore Fashion Week: ಬೆಂಗಳೂರು ಫ್ಯಾಷನ್ ವೀಕ್‌ನಲ್ಲಿ ಡಿಸೈನರ್‌ಗಳ ಸಂಗಮ!