ಶೀಲಾ ಸಿ. ಶೆಟ್ಟಿ, ಬೆಂಗಳೂರು
ಫ್ಯಾಷನ್ ಕ್ಷೇತ್ರ ಕೇವಲ ಶ್ರೀಮಂತರ ಸ್ವತ್ತಲ್ಲ, ಸಾಮಾನ್ಯ ಹುಡುಗಿಯೂ ಈ ಕ್ಷೇತ್ರಕ್ಕೆ ಕಾಲಿಡಲು ಸಾಧ್ಯ ಎಂದು ಯಶ್ ಇಂಟರ್‌ನ್ಯಾಷನಲ್ ಫ್ಯಾಷನ್ ವೀಕ್‌ನ ಸಂಸ್ಥಾಪಕ ಹಾಗೂ ಸೂಪರ್ ಮಾಡೆಲ್ ಯಶ್ ಹೇಳಿದರು.
ಗ್ರೂಮಿಂಗ್, ಮೇಕೋವರ್, ಬೋಟಿಕ್, ರ್ಯಾಂಪ್ ವಾಕ್ ಕಲಿಕೆ, ಪೋಟೋಶೂಟ್ ಹೀಗೆ ಒಂದೊಂದಕ್ಕೂ ಒಂದೊಂದು ಕಡೆ ಮಾಡೆಲ್‌ಗಳು ಅಲೆದಾಡುವ ತಲೆ ಬಿಸಿಯಿಲ್ಲ. ಒಂದೇ ಸೂರಿನಡಿ ಎಲ್ಲಾ ಸೌಲಭ್ಯಗಳನ್ನು ಪಡೆದು ಈ ಕ್ಷೇತ್ರದಲ್ಲಿ ಮುಂದುವರಿಯಬಹುದು. ಇದಕ್ಕೆ ಪೂರಕ ಎಂಬಂತೆ ಉದ್ಯಾನನಗರಿಯಲ್ಲಿ ನಮ್ಮ ಸಂಸ್ಥೆಯು ಈ ಹೊಸ ಸೌಲಭ್ಯ ಕಲ್ಪಿಸುತ್ತಿದೆ. ರ್ಯಾಂಪ್ ವಾಕ್‌ನಿಂದಿಡಿದು ವೇದಿಕೆ ಕಲ್ಪಿಸುವವರೆಗೂ ಎಲ್ಲವನ್ನೂ ಖುದ್ದು ನಿಂತು ಮಾಡಲಿದೆ ಎಂದು ತಿಳಿಸಿದರು.
ಅಂದಹಾಗೆ, ಉದ್ಯಾನನಗರಿಯಲ್ಲಿ ಹೊಸದಾಗಿ ಆರಂಭಗೊಂಡ ಫ್ಯಾಷನ್ ವೀಕ್ ಸಂಸ್ಥೆಯ ಉದ್ಘಾಟನಾ ಸಮಾರಂಭದಲ್ಲಿ ಈ ವಿಷಯವನ್ನು ಹೇಳಿದರು.
ಸೂಪರ್ ಮಾಡೆಲ್ ಸಂತೋಷ್ ರೆಡ್ಡಿ ಹೇಳಿದ್ದೇನು?
ಫ್ಯಾಷನ್ ಪ್ರಪಂಚ ಎಂದಾಕ್ಷಣಾ ಕನ್ನಡ ಭಾಷೆಯ ಬಳಕೆ ಕಡಿಮೆಯಾಗುತ್ತದೆ. ಆದರೆ, ಯಶ್ ಇಂಟರ್‌ನ್ಯಾಶನಲ್ ಫ್ಯಾಷನ್ ವೀಕ್ ಸಂಸ್ಥೆಯು ಇದರಿಂದ ಹೊರತಾಗಿದೆ. ಒಂದೇ ಸೂರಿನಡಿ ಮಾಡೆಲ್‌ಗಳಿಗೆ ನಾನಾ ಸೌಲಭ್ಯಗಳನ್ನು ಕಲ್ಪಿಸುವುದರೊಂದಿಗೆ ಸ್ಟೇಜ್ ಶೋಗಳಲ್ಲಿ ಕನ್ನಡಕ್ಕೂ ಪ್ರಾಧಾನ್ಯತೆ ನೀಡಲು ಮುಂದಾಗಿದೆ. ಕನ್ನಡ ಪ್ರೇಮವನ್ನು ತನ್ನ ಕಾರ್ಯಚಟುವಟಿಕೆಗಳಲ್ಲಿ ತೋರ್ಪಡಿಸಲು ಮುಂದಾಗಿದೆ. ಇದು ಶ್ಲಾಘನೀಯ ಎಂದು ಸೂಪರ್ ಮಾಡೆಲ್ ಹಾಗೂ ನಟ ಸಂತೋಷ್ ರೆಡ್ಡಿ ತಿಳಿಸಿದರು.
ಟೈಟಲ್ ವಿಜೇತ ಮಾಡೆಲ್‌ಗಳ ಫ್ಯಾಷನ್ ವಾಕ್
ಫ್ಯಾಷನ್ ವೀಕ್‌ಗಳಲ್ಲಿ ವಿಜೇತರಾಗಿರುವ ಮಾಡೆಲ್‌ಗಳು ರ್ಯಾಂಪ್ ಮೇಲೆ ಹೆಜ್ಜೆ ಹಾಕಿ ನೋಡುಗರ ಮನ ಸೆಳೆದರು. ಸಂಸ್ಥೆಯ ಸಂಸ್ಥಾಪಕ ಹಾಗೂ ಸೂಪರ್ ಮಾಡೆಲ್ ಯಶ್ ಹಾಗೂ ನಟ, ಸೂಪರ್‌ಮಾಡೆಲ್ ಸಂತೋಷ್ ರೆಡ್ಡಿಯವರೊಂದಿಗೆ ರ್ಯಾಂಪ್ ಮೇಲೆ ಶೋ ಸ್ಟಾಪರ್ ಆಗಿ ವಾಕ್ ಮಾಡಿದರು.
ಕಾರ್ಯಕ್ರಮದಲ್ಲಿ ಸ್ಥಳೀಯ ಗಣ್ಯರು ಹಾಗೂ ಫ್ಯಾಷನ್ ಕ್ಷೇತ್ರದ ನಾನಾ ಮಂದಿ ಭಾಗವಹಿಸಿ, ಕಾರ್ಯಕ್ರಮ ಯಶಸ್ವಿಗೊಳಿಸಿದರು.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Star Fashion: ಸ್ಟೈಲಿಶ್ ಕಿರುತೆರೆ ನಟಿ ದೀಪಿಕಾ ದಾಸ್ ಬಿಂದಾಸ್ ಫ್ಯಾಷನ್‌ಗೆ ಅಭಿಮಾನಿಗಳು ಫಿದಾ