ಶೀಲಾ ಸಿ. ಶೆಟ್ಟಿ, ಬೆಂಗಳೂರು
ಮಾನ್ಸೂನ್ ಸೀಸನ್‌ನಲ್ಲಿ ಸಂಜೆ ವೇಳೆ ನಡೆದ ಈ ಕಲರ್‌ಫುಲ್ ಫ್ಯಾಷನ್ ಶೋನಲ್ಲಿ ಪಾಸ್ಟೆಲ್ ನಾನಾ ಶೇಡ್‌ನ ಗೌನ್‌ಗಳನ್ನು ಧರಿಸಿದ ಯುವತಿಯರು, ಬ್ಲೇಝರ್ ಹಾಗೂ ಕೋಟು ಧರಿಸಿದ ಯುವಕರು ರ‍್ಯಾಂಪ್ ವಾಕ್‌ನಲ್ಲಿ ಹೆಜ್ಜೆ ಹಾಕಿದರು.
ಆಗಷ್ಟೇ ಟೀನೇಜ್ ಹಂತ ದಾಟಿ ಮಾಡೆಲಿಂಗ್‌ಗೆ ಕಾಲಿಟ್ಟ ಈ ಹುಡುಗ-ಹುಡುಗಿಯರು ಇಲ್ಲಿಗೆ ಭಾವಿ ಮಾಡೆಲ್‌ಗಳ ಕನಸುಗಳನ್ನು ಹೊತ್ತು ಬಂದಿದ್ದರು. ಒಂದೆರೆಡು ಸುತ್ತಿನಲ್ಲಿ ತಮ್ಮ ಪರಿಚಯ, ಹವ್ಯಾಸ ಹಾಗೂ ತಮ್ಮ ಕನಸಿನ ಬಗ್ಗೆ ಜ್ಯುರಿ ಟೀಮ್‌ನೊಂದಿಗೆ ಅಭಿಪ್ರಾಯಗಳನ್ನು ಹಂಚಿಕೊಂಡರು. ಮುಂಬರುವ ದಿನಗಳಲ್ಲಿ ತಾವು ಮಾಡೆಲಿಂಗ್ ಜಗತ್ತಿನಲ್ಲಿ ತೊಡಗಿಸಿಕೊಳ್ಳುವ ಬಗ್ಗೆ ಮಾತನಾಡಿದರು. ಈ ಎಲ್ಲಾ ಭಾವಿ ಮಾಡೆಲ್‌ಗಳು ಆತ್ಮವಿಶ್ವಾಸದಿಂದ ರ‍್ಯಾಂಪ್ ವಾಕ್ ಮಾಡಿದ್ದು ನೋಡುಗರ ಮೆಚ್ಚುಗೆಗೆ ಪಾತ್ರವಾಯಿತು.
ಅಂದಹಾಗೆ, ಇದೆಲ್ಲಾ ನಡೆದದ್ದು ಉದ್ಯಾನನಗರಿಯ ಕೆಎಸ್ಎಚ್ ಕ್ರೀಯೇಟಿವ್ಸ್ ಆಶ್ರಯದಲ್ಲಿ ನಡೆದ ಮಿಸ್ಟರ್ ಮತ್ತು ಮಿಸ್ ಸೂಪರ್ ಮಾಡೆಲ್ ಆಫ್ ಇಂಡಿಯಾ ಫ್ಯಾಷನ್ ಪೇಜೆಂಟ್‌ನಲ್ಲಿ. ಸ್ಪರ್ಧಾಳುಗಳು ರ‍್ಯಾಂಪ್ ಮೇಲೆ ಹೆಜ್ಜೆ ಹಾಕಿ ಹಲವು ವಿಭಾಗದ ಸುತ್ತಿನಲ್ಲಿ ಪಾಲ್ಗೊಂಡರು.
ಟೈಟಲ್ ವಿಜೇತರ ಪಟ್ಟಿ
ಮಿಸ್ ಕೆಟಗರಿಯಲ್ಲಿ ಅರ್ಪಿತಾ ವಿಜೇತರಾದರೆ, ಶ್ವೇತಾ ಮೊದಲ ರನ್ನರ್ ಅಪ್, ಬೃಂದಾ ಎರಡನೇ ರನ್ನರ್ ಅಪ್ ಆಗಿದ್ದಾರೆ. ಮಿಸ್ಟರ್ ಕೆಟಗರಿಯಲ್ಲಿ ಪ್ರಶಾಂತ್ ವಿಜೇತರಾಗಿದ್ದಾರೆ. ತರುಣ್ ಮೊದಲನೇ ರನ್ನರ್ ಅಪ್ ಸ್ಥಾನ ಪಡೆದರೆ, ಮನು ಎರಡನೇ ರನ್ನರ್ ಅಪ್, ಇನ್ನು ಮೂರನೇ ರನ್ನರ್ ಅಪ್ ಗುಪ್ತಾ ಪಡೆದಿದ್ದಾರೆ.
ಶೋ ಸ್ಟಾಪರ್ರ್ಸ್ ವಾಕ್
ಮಿಸ್ಟರ್ ಮಾಡೆಲ್ ಆಫ್ ಇಂಡಿಯಾದ ಬ್ರಾಂಡ್ ಅಂಬಾಸಡರ್ ಅಜಯ್ ಪ್ರಸಾದ್ ಶೋ ಸ್ಟಾಪರ್ ಆಗಿ ಭಾಗವಹಿಸಿದ್ದರು. ಇನ್ನು ಮಾಡೆಲ್ ಪ್ರಿಯಾ ಕುಮಾರ್ ಕೂಡ ವಿಜೇತ ಮಾಡೆಲ್‌ಗಳೊಂದಿಗೆ ಶೋ ಸ್ಟಾಪರ್ ಆಗಿ ವಾಕ್ ಮಾಡಿದರು.
“ಸೋಲು-ಗೆಲುವು ಸಾಮಾನ್ಯ. ಮಾಡೆಲಿಂಗ್ ಜಗತ್ತು ಎಲ್ಲರನ್ನೂ ಸ್ವಾಗತಿಸುತ್ತದೆ. ಅದನ್ನು ಸಕಾರಾತ್ಮಕವಾಗಿ ತೆಗೆದುಕೊಳ್ಳಬೇಕು. ಪ್ರೊಫೆಷನಲ್ ಆಗಿ ಯೋಚಿಸಬೇಕು” ಎಂದು ಮಾಡೆಲ್ ಹಾಗೂ ಬ್ರಾಂಡ್ ಅಂಬಾಸರ್ ಅಜಯ್ ಪ್ರಸಾದ್ ಈ ಸಂದರ್ಭದಲ್ಲಿ ಅಭಿಪ್ರಾಯಪಟ್ಟರು.
ಚಿತ್ರ ಗಳು
- ರ‍್ಯಾಂಪ್ ಮೇಲೆ ಹೆಜ್ಜೆ ಹಾಕುತ್ತಿರುವ ಸ್ಪರ್ಧಾಳುಗಳು
- ವಿಜೇತರೊಂದಿಗೆ ಜ್ಯುರಿ ಟೀಮ್ ಹಾಗೂ ಅತಿಥಿಗಳು
- ಶೋ ಸ್ಟಾಪರ್ ಆಗಿ ವಾಕ್ಮಾಡುತ್ತಿರುವ ಬ್ರಾಂಡ್ ಅಂಬಾಸಡರ್ ಅಜಯ್ ಪ್ರಸಾದ್.
- ಸೂಪರ್ ಮಾಡೆಲ್ ಆಫ್ ಇಂಡಿಯಾ ವಿಜೇತರೊಂದಿಗೆ ಅತಿಥಿಗಳು ಹಾಗೂ ಜ್ಯುರಿ ಟೀಮ್
- ಮಾಡೆಲ್‌ಗಳ ರ‍್ಯಾಂಪ್ ವಾಕ್
ಇದನ್ನೂ ಓದಿ | Ramp News: ರ‍್ಯಾಂಪ್‌ನಲ್ಲಿ ಮಿನುಗಿದ ಸೌತ್ ಇಂಡಿಯಾ ಕ್ರೌನ್ ವಿಜೇತರು