Site icon Vistara News

Fashion News: ರ‍್ಯಾಂಪ್‌ ಮೇಲೆ ರಾಷ್ಟ್ರ ಪ್ರೇಮ ಸಾರಿದ ಮಹಿಳೆಯರ ಫ್ಯಾಷನ್ ಶೋ

Fashion News

ಶೀಲಾ ಸಿ. ಶೆಟ್ಟಿ, ಬೆಂಗಳೂರು

ಮಹಿಳೆಯರು ಮಕ್ಕಳು ಸೇರಿದಂತೆ ಎಲ್ಲಾ ವಯಸ್ಸಿನವರೂ ರ‍್ಯಾಂಪ್‌ ಮೇಲೆ ರಾಷ್ಟ್ರ ಪ್ರೇಮ ಬಿಂಬಿಸುವಂತಹ ಮ್ಯೂಸಿಕ್‌ಗೆ ಜೋಷ್‌ನಲ್ಲಿ ಕ್ಯಾಟ್ ವಾಕ್ ಮಾಡಿದರು. ದೇಶ ಪ್ರೇಮ ಸಾರುವಂತಹ ನಾನಾ ಬಗೆಯ ದೇಸಿ ಉಡುಗೆಗಳಲ್ಲಿ ಕಾಣಿಸಿಕೊಂಡು ಫ್ಯಾಷನ್ ಶೋ (Fashion News) ಕಳೆ ಹೆಚ್ಚಿಸಿದರು. ಇದರೊಂದಿಗೆ ಮಕ್ಕಳ ಟ್ಯಾಲೆಂಟ್ ಶೋ ಕೂಡ ಯಶಸ್ವಿಯಾಗಿ ನಡೆಯಿತು. ಅಂದ ಹಾಗೆ, ಉದ್ಯಾನನಗರಿಯ ಮಲ್ಲೇಶ್ವರದ ಶುಕ್ರ ಅಡಿಟೋರಿಯಂನಲ್ಲಿ ಫ್ಯಾಷನ್ ಸ್ಟ್ರೀಕ್ಸ್ ಮತ್ತು ಮಾಡೆಲಿಂಗ್ ಸಂಸ್ಥೆಯ ಆಶ್ರಯದಲ್ಲಿ ಅನಿ ಥಾಮಸ್ ನೇತೃತ್ವದಲ್ಲಿ ನಡೆದ ಫ್ಯಾಷನ್ ಶೋನಲ್ಲಿ, ನಾನಾ ರೌಂಡ್‌ಗಳಲ್ಲಿ ರ‍್ಯಾಂಪ್‌ ವಾಕ್ ಮುಖಾಂತರ ರಾಷ್ಟ್ರ ಪ್ರೇಮ ಬಿಂಬಿಸಲಾಯಿತು.

ಸರಕಾರಿ ಮಕ್ಕಳ ಕ್ರಿಯೇಟಿವಿಟಿಗೆ ಸಾಕ್ಷಿಯಾದ ವೇದಿಕೆ

ದೇವನಹಳ್ಳಿಯ ಸರಕಾರಿ ಶಾಲೆಯಿಂದ ಬಂದಂತಹ ಮಕ್ಕಳು ಕೂಡ ರ‍್ಯಾಂಪ್‌ ಮೇಲೆ ವಾಕ್ ಮಾಡಿದರು. ಅವರಲ್ಲಿ ಒಂದು ಹುಡುಗ ಡಿಸೈನ್ ಮಾಡಿದಂತಹ ಬಿಗ್ ಫ್ಲೋರಲ್ ಡಿಸೈನರ್ವೇರ್ ಧರಿಸಿದ ಮಾಡೆಲ್ ರ‍್ಯಾಂಪ್‌ ಮೇಲೆ ವಾಕ್ ಮಾಡಿದ್ದು ನೋಡುಗರ ಮೆಚ್ಚುಗೆ ಗಳಿಸಿತು. ಎಲ್ಲದಕ್ಕಿಂತ ಹೆಚ್ಚಾಗಿ ನೋಡಲು ಸಾಮಾನ್ಯರಂತಿದ್ದ ಮಕ್ಕಳು ಕೂಡ ತಮ್ಮದೇ ಆದ ಔಟ್‌ಫಿಟ್‌ನಲ್ಲಿ ಫ್ಯಾಷನ್ ಶೋನಲ್ಲಿ ವಾಕ್ ಮಾಡಿದ್ದು, ಮಾಡೆಲ್‌ಗಳ ರೂಲ್ಸ್ ಬ್ರೇಕ್ ಮಾಡಿತ್ತು. ರ‍್ಯಾಂಪ್‌ ಶೋನಲ್ಲಿ ವಾಕ್ ಮಾಡುವವರೆಲ್ಲರೂ ತೆಳ್ಳಗೆ ಬೆಳ್ಳಗೆ ಇರಬೇಕೆಂಬ ನಿಯಮ ಇಲ್ಲಿ ಮರೆಯಾಗಿತ್ತು. ಮಕ್ಕಳು ರ್ಯಾಂಪ್ ವಾಕ್ ಮಾಡಿ ಖುಷಿಯಿಂದ ನಲಿದಾಡಿದರು.

ಪರಿಮಳಾ ಜಗ್ಗೇಶ್ ಫ್ಯಾಷನ್ ವಾಕ್

ಫ್ಯಾಷನ್ ಶೋಗೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಸ್ಟಾರ್ ಡಯಟೀಶಿಯನ್ ಪರಿಮಳಾ ಜಗ್ಗೇಶ್ ಅವರು ಫ್ಯಾಷನ್ ಶೋನಲ್ಲಿ ಭಾಗವಹಿಸಿದ್ದವರೊಂದಿಗೆ ಸೆಲೆಬ್ರೆಟಿ ಶೋ ಸ್ಟಾಪರ್ ಆಗಿ ಹೆಜ್ಜೆ ಹಾಕಿದರು. ನಂತರ ಮಾತನಾಡಿದ ಅವರು ಯಾವುದೇ ಭೇಧ-ಬಾವವಿಲ್ಲದೇ ಭಾಗವಹಿಸಿರುವ ಮಹಿಳೆಯರು ಹಾಗೂ ಮಕ್ಕಳ ಉತ್ಸಾಹವನ್ನು ಕೊಂಡಾಡಿದರು. ದೇಶ ಪ್ರೇಮ ಬಿಂಬಿಸುವ ಈ ಶೋ ವಿಭಿನ್ನವಾಗಿದೆ ಎಂದರು. ಸರಕಾರಿ ಮಕ್ಕಳು ಪಾಲ್ಗೊಂಡು ರ‍್ಯಾಂಪ್‌ ವಾಕ್ ಮಾಡಿ ಸೈ ಎನಿಸಿಕೊಂಡಿದ್ದರ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.

ಸಂಸ್ಥೆಯ ರೂವಾರಿ ಅನಿ ಥಾಮಸ್ ಫ್ಯಾಷನ್ ವಾಕ್

ನಾನಾ ವರ್ಗದ ಹಾಗೂ ವಯಸ್ಸಿನ ಮಹಿಳೆಯರಿಗೆ ವೇದಿಕೆ ಕಲ್ಪಿಸುತ್ತಿರುವ ಅನಿ ಥಾಮಸ್ ಕೂಡ ಮಹಿಳೆಯರೊಂದಿಗೆ ದ್ವಜ ಹಿಡಿದು ಹೆಜ್ಜೆ ಹಾಕಿದರು. ಫ್ಯಾಷನ್ ಶೋನಲ್ಲಿ ಸೆಲೆಬ್ರೆಟಿ ಡಿಸೈನರ್ ನವೀನ್ ಕುಮಾರ್, ನಟ ಭಾರ್ಗವ್ ಭಟ್, ಮಾಡೆಲ್ ಶೃತಿ ಇನ್ನಿತರರು ಭಾಗವಹಿಸಿದ್ದರು.

(ಲೇಖಕಿ : ಫ್ಯಾಷನ್ ಪತ್ರಕರ್ತೆ)

ಇದನ್ನೂ ಓದಿ: Fashion News: ಮಕ್ಕಳ ಶ್ರೇಯೋಭಿವೃದ್ಧಿ ಧ್ಯೇಯದೊಂದಿಗೆ ನಡೆದ ಬಿಯಿಂಗ್‌ ಸೋಷಿಯಲ್‌ ಫ್ಯಾಷನ್‌ ಶೋ

Exit mobile version