Site icon Vistara News

Fashion News: ಮಕ್ಕಳ ಶ್ರೇಯೋಭಿವೃದ್ಧಿ ಧ್ಯೇಯದೊಂದಿಗೆ ನಡೆದ ಬಿಯಿಂಗ್‌ ಸೋಷಿಯಲ್‌ ಫ್ಯಾಷನ್‌ ಶೋ

Fashion News

ಶೀಲಾ ಸಿ. ಶೆಟ್ಟಿ, ಬೆಂಗಳೂರು

ವಿಶೇಷವಾಗಿ ಈ ಫ್ಯಾಷನ್‌ ಶೋನಲ್ಲಿ ನಡೆದವರೆಲ್ಲರೂ ಸಾಮಾಜಿಕ ಕಳಕಳಿಯನ್ನಿಟ್ಟುಕೊಂಡು ರ‍್ಯಾಂಪ್‌ ವಾಕ್‌ ಮಾಡಿದರು. ಮಾಡೆಲ್‌ಗಳು ಮಾತ್ರವಲ್ಲ, ನಾನಾ ಕ್ಷೇತ್ರದ ಸೆಲೆಬ್ರೆಟಿಗಳು ಈ ಫ್ಯಾಷನ್‌ ಶೋಗೆ (Fashion News) ಕೈ ಜೋಡಿಸಿದರು. ಒಂದೇ ರ‍್ಯಾಂಪ್‌ ಮೇಲೆ ಎಲ್ಲಾ ಕ್ಷೇತ್ರದವರು ಕಂಡು ಬಂದದ್ದು ವಿಶೇಷವಾಗಿತ್ತು.

ಬಿಯಿಂಗ್‌ ಸೋಷಿಯಲ್‌-ಏಕ್‌ ನಯಿ ಶುರುವಾತ್‌ ಎನ್‌ಜಿಒ ಸಂಸ್ಥೆಯ ಕಾರ್ಯಕ್ರಮ

ಹೌದು. ಮಕ್ಕಳ ಶ್ರೇಯೋಭಿವೃದ್ಧಿ ಹಾಗೂ ಆಶ್ರಯ ಕಲ್ಪಿಸುವ ನಿಟ್ಟಿನಲ್ಲಿ ಸಾಮಾಜಿಕ ಕಳಕಳಿಯ ಉದ್ದೇಶವನ್ನಿಟ್ಟುಕೊಂಡು, ಬಿಯಿಂಗ್‌ ಸೋಷಿಯಲ್‌-ಏಕ್‌ ನಯಿ ಶುರುವಾತ್‌ ಎನ್‌ಜಿಒ ಸಂಸ್ಥೆಯ ಆಶ್ರಯದಲ್ಲಿ, ನೆಕ್ಸಸ್‌ ಕೋರಮಂಗಲ ಮಾಲ್‌ನಲ್ಲಿ ನಡೆದ ರ‍್ಯಾಂಪ್‌ ಫಾರ್‌ ಎ ಕಾಸ್‌ ಹೆಸರಿನ ಫ್ಯಾಷನ್‌ ಶೋ ವಿಭಿನ್ನವಾಗಿ ಎಲ್ಲರ ಮನ ಸೆಳೆಯುವಲ್ಲಿ ಯಶಸ್ವಿಯಾಯಿತು. ಈ ಬೃಹತ್‌ ವೇದಿಕೆಯಲ್ಲಿ ಬಡ ಮಕ್ಕಳ ಟ್ಯಾಲೆಂಟ್‌ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಇದು ಯಶಸ್ವಿಯಾಗಿ ನಡೆಯಿತು ಕೂಡ.

ಗ್ಲಾಮರಸ್‌ ಮತ್ತು ಸಾಮಾಜಿಕ ಕಳಕಳಿ

ಕೋರಮಂಗಲ ಮಾಲ್‌ನಲ್ಲಿ ನಡೆದ ಈ ಕಾರ್ಯಕ್ರಮ ಸಾರ್ವಜನಿಕರ ವೀಕ್ಷಣೆಗೂ ಅವಕಾಶ ಕಲ್ಪಿಸಿತ್ತು. ಭಾರಿ ಜನಸ್ತೋಮದ ನಡುವೆ ನಡೆದ ಈ ಫ್ಯಾಷನ್‌ ಶೋನಲ್ಲಿ ಮಕ್ಕಳಾಶ್ರಯ ಹಾಗೂ ವಿದ್ಯಾಭ್ಯಾಸಕ್ಕೆ ಸವಲತ್ತು ನೀಡುವ ಬಗ್ಗೆ ವಹಿಸಿರುವ ಸಾಮಾಜಿಕ ಕಳಕಳಿಯನ್ನು ಕಾರ್ಯಕ್ರಮ ಆಯೋಜಕರು ವಿವರಿಸಿದರು. ಒಟ್ಟಾರೆ, ಗ್ಲಾಮರ್‌ ಪ್ರಪಂಚದಲ್ಲಿ ಮಕ್ಕಳ ಶ್ರೇಯೋಭಿವೃದ್ಧಿಯನ್ನು ಬಯಸುವ ಸೆಲೆಬ್ರೆಟಿಗಳು ತಂತಮ್ಮ ಸ್ಟೈಲ್‌ನಲ್ಲಿ ವಾಕ್‌ ಮಾಡಿದುದಲ್ಲದೇ, ಈ ಕುರಿತಂತೆ ತಮ್ಮದೇ ಆದ ಅಭಿಪ್ರಾಯ ವ್ಯಕ್ತಪಡಿಸಿದರು.

ಸೆಲೆಬ್ರೆಟಿ ಶೋ ಸ್ಟಾಪರ್ಸ್ ವಾಕ್‌

ರ‍್ಯಾಂಪ್‌ವಾಕ್‌ನಲ್ಲಿ ಸೆಲೆಬ್ರೆಟಿ ಶೋ ಸ್ಟಾಪರ್‌ ಆಗಿ ವಾಕ್‌ ಮಾಡಿದ ಮಾಡೆಲ್‌ ವ್ಯೂಮಾ ಶರ್ಮಾ ನೋಡುಗರ ಮನ ಸೆಳೆದರು. ಸೂಪರ್‌ ಮಾಡೆಲ್‌ ಸಂತೋಷ್‌ ರೆಡ್ಡಿ ಈ ಸಂಸ್ಥೆಯ ಕಾರ್ಯ ಚಟುವಟಿಕೆ ಬಗ್ಗೆ ಪ್ರಂಸೆ ವ್ಯಕ್ತಪಡಿಸಿದರು. ಮಿಸೆಸ್‌ ಇಂಡಿಯಾ ಎಲಿಗೆಂಟ್‌ 2022 ಸ್ಮಿತಾ ಪ್ರಕಾಶ್‌, ಸೆಲೆಬ್ರೆಟಿ ಡಾಗ್‌ ಬ್ರೀಡರ್‌ ಸತೀಶ್‌ ಕಡಬಮ್‌ ಇನ್ನಿತರರು ಕೂಡ ಭಾಗವಹಿಸಿದ್ದರು. ಕಾರ್ಯಕ್ರಮಕ್ಕೆ ಫ್ಯಾಷನ್‌ ಡಿಸೈನರ್‌ಗಳು, ಮೇಕಪ್‌ ಆರ್ಟಿಸ್ಟ್‌ಗಳು ಕೈ ಜೋಡಿಸಿದ್ದರು.

(ಲೇಖಕಿ : ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Festival Fashion: ಟ್ರೆಡಿಷನಲ್‌ವೇರ್ಸ್‌ನಲ್ಲಿ ಮಹಾಲಕ್ಷ್ಮಿಯರಂತೆ ಹಬ್ಬವನ್ನು ಸಂಭ್ರಮಿಸಿದ ಸೆಲೆಬ್ರೆಟಿಗಳು

Exit mobile version