ಶೀಲಾ ಸಿ. ಶೆಟ್ಟಿ, ಬೆಂಗಳೂರು
ಸಾಲು ಸಾಲಾಗಿ ಗ್ಲಾಮರಸ್ ಗೌನ್‌ಗಳಲ್ಲಿ ರ್ಯಾಂಪ್ ಮೇಲೆ ಯುವಕ- ಯುವಕರು ಕ್ಯಾಟ್ ವಾಕ್ ಮಾಡುತ್ತಿದ್ದರೆ ಸ್ವರ್ಗವೇ ಕೆಳಗಿಳಿದು ಬಂದಂತೆ ಭಾಸವಾಗುತ್ತಿತ್ತು. ನೋಡಲು ಆಕರ್ಷಕವಾಗಿರುವ ಡಿಸೈನರ್‌ವೇರ್‌ಗಳಂತೆಯೇ ವೇದಿಕೆಯೂ ಕೂಡ ಫೇರಿಟೇಲ್ ಥೀಮ್‌ನಲ್ಲಿ ಅಲಂಕೃತಗೊಂಡಿತ್ತು. ಇಲ್ಲಿ ಹಮ್ಮಿಕೊಂಡಿದ್ದ ಸ್ಪರ್ಧೆಯೂ ಕೂಡ ಯಾವ ಅಂತರಾಷ್ಟ್ರೀಯ ಮಟ್ಟದ ಫ್ಯಾಷನ್ (Fashion Show) ಶೋಗೂ ಕಡಿಮೆ ಇಲ್ಲದಂತೆ ಗ್ರ್ಯಾಂಡ್ ಆಗಿ ನಡೆಯಿತು.
ಯಶಸ್ವಿ ಬ್ಯೂಟಿ ಪೇಜೆಂಟ್
ಅಂದ ಹಾಗೆ ಈ ಶೋ ಯಶಸ್ವಿಯಾಗಿ ನಡೆದದ್ದು, ಯಶ್ ಇಂಟರ್‌ನ್ಯಾಷನಲ್ ಫ್ಯಾಷನ್ (Fashion Show) ವೀಕ್‌ನಲ್ಲಿ. ಗ್ರ್ಯಾಂಡ್ ಆಗಿ ನಡೆದ ಈ ಬ್ಯೂಟಿ ಪೇಜೆಂಟ್‌ನಲ್ಲಿ ಸುಮಾರು 72 ಮಾಡೆಲ್‌ಗಳು ನಾನಾ ರಾಜ್ಯದಿಂದ ಆಗಮಿಸಿ ಭಾಗವಹಿಸಿದ್ದರು. ಕರ್ನಾಟಕ, ತಮಿಳುನಾಡು, ಆಂದ್ರಪ್ರದೇಶ, ಅಸ್ಸಾಂ, ಬಿಹಾರ, ಮೇಘಾಲಯ, ಪುಣೆ ಸೇರಿದಂತೆ ನಾನಾ ರಾಜ್ಯಗಳಿಂದ ಸ್ಫರ್ಧಾಳುಗಳು ಆಗಮಿಸಿ, ತರಬೇತಿ ಪಡೆದು ಸ್ಪರ್ಧೆಯ ನಾನಾ ರೌಂಡ್‌ಗಳಲ್ಲಿ ಪಾಲ್ಗೊಂಡರು.
ವಿಜೇತರು ಯಾರು?
ವರ್ಲ್ಡ್ ಇಂಟರ್‌ನ್ಯಾಷನಲ್‌ನ ಮಿಸ್ಟರ್ ವಿಭಾಗದಲ್ಲಿ ಆಸಿಫ್, ಮಿಸ್ ಕೆಟಗರಿಯಲ್ಲಿ ಶ್ರಾವ್ಯ, ಮಿಸೆಸ್ ವಿಭಾಗದಲ್ಲಿ ರಶ್ಮಿ ಹೆಗಡೆ, ಇನ್ನು ಪ್ರಿನ್ಸ್ ವಿಭಾಗದಲ್ಲಿ ಮೋಕ್ಷ್, ಪ್ರಿನ್ಸೆಸ್ ವಿಭಾಗದಲ್ಲಿ ಅನನ್ಯಾ ವಲ್ರ್ಡ್ ಇಂಟರ್‌ನ್ಯಾಷನಲ್ ಕೀರೀಟವನ್ನು ತಮ್ಮದಾಗಿಸಿಕೊಂಡರು. ವಿಜೇತರಿಗೆ ಸ್ಯಾಶ್ ಹಾಕಲಾಯಿತು. ವಿಜೇತರೆಲ್ಲರಿಗೂ ಚಿನ್ನದ ಪದಕವನ್ನು ವಿತರಿಸಲಾಯಿತು.
ಜ್ಯುರಿ ಟೀಮ್‌ನಲ್ಲಿ ಫಿಟ್ನೆಸ್ ದಿವಾ ಸೀಮಾ ನಾಯ್ಡು ಹಾಗೂ ಸೂಪರ್ ಮಾಡೆಲ್ ಸಂತೋಷ್ ರೆಡ್ಡಿ ಪಾಲ್ಗೊಂಡಿದ್ದರು.
ಜ್ಯುರಿ ಟೀಮ್ ಟಾಕ್
“ರ್ಯಾಂಪ್ ವಾಕ್‌ನಲ್ಲಿ ವಾಕ್ ಮಾಡುವ ಮಾಡೆಲ್‌ಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದಾರೆ. ಇದು ಮಾಡೆಲಿಂಗ್ ಕ್ಷೇತ್ರ ವೃದ್ಧಿಗೊಳ್ಳಲು ಕಾರಣವಾಗುತ್ತಿದೆ. ಸಂತೋಷದ ವಿಚಾರವೆಂದರೇ, ಕೋವಿಡ್ ನಂತರ ಫ್ಯಾಷನ್ ಕ್ಷೇತ್ರ ಮತ್ತೊಮ್ಮೆ ಚಿಗುರುತ್ತಿದೆ. ಇದು ಹೀಗೆಯೇ ಮುಂದುವರೆಯಲಿ’’ ಎಂದು ಸೂಪರ್ ಮಾಡೆಲ್ ಸಂತೋಷ್ ರೆಡ್ಡಿ ಹೇಳಿದರು.
ಇನ್ನು ಬೆಂಗಳೂರಿನ ಫಿಟ್ನೆಸ್ ದಿವಾರಲ್ಲಿ ಒಬ್ಬರಾದ ಸೀಮಾ ನಾಯ್ಡು, ಮಾಡೆಲ್‌ಗಳಿಗೆ ಹಾರೈಸಿ, ಒಂದಿಷ್ಟು ಫಿಟ್ನೆಸ್ ಟಿಪ್ಸ್ ಕೂಡ ನೀಡಿದರು.
ಪುನೀತ್ ಗೆ ಗೌರವ ಅರ್ಪಣೆ
ಪವರ್‌ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಗೂ ಸೈನಿಕರಿಗೆ ಈ ಕಾರ್ಯಕ್ರಮವನ್ನು ಅರ್ಪಿಸಲಾಗಿತ್ತು. ಪುನೀತ್ ರಾಜ್‌ಕುಮಾರ್ ಅವರ ಹಾಡಿಗೆ ವೇದಿಕೆ ಮೇಲೆ ಸುಮಾರು ೧೦೦ ಮಂದಿಗೂ ಹೆಜ್ಜೆ ಹಾಕಿ ಗೌರವಾರ್ಪಣೆ ಸಲ್ಲಿಸಿದರು
ಇದನ್ನೂ ಓದಿ: Glamorous Fashion: ಸೆಲೆಬ್ರೆಟಿ ಲುಕ್‌ಗಾಗಿ ಬಾರ್ಡೋಟ್ ಡ್ರೆಸ್