Site icon Vistara News

Fashion News: ಯಶಸ್ವಿಯಾದ ಸೂಪರ್‌ ಮಾಡೆಲ್‌ ಆಫ್‌ ಇಂಡಿಯಾ 2ನೇ ಎಡಿಷನ್‌

Fashion News

ಶೀಲಾ ಸಿ. ಶೆಟ್ಟಿ, ಬೆಂಗಳೂರು

ಆಕರ್ಷಕ ಡಿಸೈನರ್‌ವೇರ್‌ಗಳಲ್ಲಿ ಭಾವಿ ಮಾಡೆಲ್‌ಗಳು ರ್ಯಾಂಪ್‌ ವಾಕ್‌ ಮಾಡುತ್ತಿದ್ದರೇ ಫ್ಯಾಷನ್‌ (Fashion News) ಪ್ರಿಯರು ಸಮ್ಮೋಹನಗೊಂಡಿದ್ದರು. ದೇಸಿ ಹಾಗೂ ವೆಸ್ಟರ್ನ್ ರೌಂಡ್‌ನಲ್ಲಿ ಈ ಮಾಡೆಲ್‌ಗಳು ತಮ್ಮದೇ ಆದ ಸ್ಟೈಲ್‌ ಸ್ಟೇಟ್‌ಮೆಂಟ್‌ನಲ್ಲಿ ಕ್ಯಾಟ್‌ ಮಾಡಿ ಜ್ಯೂರಿ ಟೀಮ್‌ನ ಮನಗೆದ್ದರು. ಅಂದಹಾಗೆ, ಇದು ನಡೆದದ್ದು, ಮಿಸ್ಟರ್‌ ಮತ್ತು ಮಿಸ್‌ ಸೂಪರ್‌ ಮಾಡೆಲ್‌ ಆಪ್‌ ಇಂಡಿಯಾ 2ನೇ ಎಡಿಷನ್‌ ಬ್ಯೂಟಿ ಪೇಜೆಂಟ್‌ನಲ್ಲಿ. ಹೌದು, ಎರಡನೇ ಸೀಸನ್‌ನ ಈ ಫ್ಯಾಷನ್‌ ಪೇಜೆಂಟ್‌ನಲ್ಲಿ ನಾನಾ ಕಡೆಗಳಿಂದ ಭಾವಿ ಮಾಡೆಲ್‌ಗಳು ಸ್ಪರ್ಧಿಸಿದ್ದರು. ನಾನಾ ರೌಂಡ್‌ಗಳಲ್ಲಿ ಡಿಸೈನರ್‌ವೇರ್‌ ಧರಿಸಿ, ತಮ್ಮನ್ನು ಪರಿಚಯಿಸಿಕೊಂಡು, ರ್ಯಾಂಪ್‌ ವಾಕ್‌ ಮಾಡಿ ಜ್ಯೂರಿ ಟೀಮ್‌ನಿಂದ ಸೈ ಎನಿಸಿಕೊಂಡರು. ಅವರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದರು.

ಮಾಡೆಲ್‌ಗಳಿಗೆ ಸದಾವಕಾಶ

ಈ ಪೇಜೆಂಟ್‌ನ ಸಂಸ್ಥಾಪಕ ಅಜಯ್‌ ಪ್ರಸಾದ್‌, ಈ ಕಾರ್ಯಕ್ರಮದ ನೇತೃತ್ವವಹಿಸಿಕೊಂಡಿದ್ದರು. ಮಾತ್ರವಲ್ಲದೇ , ಪ್ರತಿಭಾನ್ವಿತರಿಗೆ ಆವಾರ್ಡ್ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಈ ಸೌಂದರ್ಯ ಸ್ಪರ್ಧೆ 2ನೇ ಎಡಿಷನ್‌ನದ್ದಾಗಿದ್ದು, ಕಳೆದ ಸಾಲಿನಲ್ಲೂ ಯಶಸ್ವಿಯಾಗಿ ನಡೆಸಿದ್ದೆವು. ಈ ಬಾರಿಯೂ ನಡೆಸಿದ್ದೇವೆ. ಭಾವಿ ಮಾಡೆಲ್‌ಗಳಿಗೆ ಸದಾವಕಾಶವನ್ನು ಕಲ್ಪಿಸಿದ್ದೇವೆ. ಇದು ಮುಂಬರುವ ಭವಿಷ್ಯಕ್ಕೆ ಇದು ಸಹಕಾರಿಯಾಗಲಿದೆ. ಜತೆಗೆ ಮಾರ್ಗದರ್ಶನವನ್ನು ನೀಡಿದ್ದೇವೆ ಎಂದು ಹೇಳಿದರು.

ಪೇಜೆಂಟ್‌ ಜ್ಯೂರಿ ಪ್ಯಾನೆಲ್‌

ಮಿಸ್ಟರ್‌ ಹಾಗೂ ಮಿಸ್‌ ಸೂಪರ್‌ ಮಾಡೆಲ್‌ ಆಫ್‌ ಇಂಡಿಯಾ ಪೇಜೆಂಟ್‌ನ ಜ್ಯೂರಿ ಪ್ಯಾನೆಲ್‌ನಲ್ಲಿ ಸಿಬಲ್‌ ಮ್ಯಾಥ್ಯೂ ಹಾಗೂ ಕಿರಣ್‌ ಗೌಡ ಉಪಸ್ಥಿತರಿದ್ದು, ವಿಜೇತರನ್ನು ಆಯ್ಕೆ ಮಾಡಿದರು.

ಪೇಜೆಂಟ್‌ನಲ್ಲಿ ವಿಜೇತರಾದವರ ಪಟ್ಟಿ

ಮಿಸ್ಟರ್‌ ಕೆಟಗರಿಯಲ್ಲಿ ರವಿ ವಿಜೇತರಾಗಿ ಟೈಟಲ್‌ ಪಡೆದರು. ನಂತರ ಕ್ರಮವಾಗಿ ನಿಖಿಲ್‌, ವಿನಾಯಕ್‌ ಟೈಟಲ್‌ ಪಡೆದರು. ಇನ್ನು ಮಿಸ್‌ ಕೆಟಗರಿಯಲ್ಲಿ ಸುಶ್ಮಿತಾ ವಿಜೇತರಾದರು. ಕ್ರಮವಾಗಿ ಜೀವಿಕಾ ಹಾಗೂ ಹೇಮಾ ಗೌಡ ನಂತರದ ಸ್ಥಾನ ಗಳಿಸಿದರು. ಕಾರ್ಯಕ್ರಮದಲ್ಲಿ ಗಾಯಕಿ ಆಶಾ ಭಟ್‌ಗೆ ಸ್ಟಾರ್‌ ಐಕಾನ್‌ ಆವಾರ್ಡ್ ನೀಡಿ ಗೌರವಿಸಲಾಯಿತು. ನಟ ವೆಂಕಟ್‌ ರಾಜ್‌ ಹಾಗೂ ದಿನಿಯವರನ್ನು ಗೌರವಿಸಲಾಯಿತು.

(ಲೇಖಕಿ : ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Fashion Show News: ಡಿಸೈನರ್‌ಗಳಿಗೆ ವೇದಿಕೆ ಕಲ್ಪಿಸುತ್ತಿರುವ ಬೆಂಗಳೂರು ಫ್ಯಾಷನ್‌ ಸಾಗಾ

Exit mobile version