ಶೀಲಾ ಸಿ. ಶೆಟ್ಟಿ, ಬೆಂಗಳೂರು
ತಮ್ಮದೇ ಆದ ಸ್ಟೈಲ್ ಹಾಗೂ ಫ್ಯಾಷನ್ ಸ್ಟೇಟ್‌ಮೆಂಟ್‌ನಲ್ಲಿ (Fashion Pageant) ಒಬ್ಬೊಬ್ಬರು ರ್ಯಾಂಪ್ ಮೇಲೆ ಗಾಂಭೀರ್ಯದಿಂದ ಹೆಜ್ಜೆ ಹಾಕಿದರು. ಮದುವೆಯಾಗಿದ್ದರೂ, ಒಂದಲ್ಲ ಒಂದು ದಿನ ತಾವು ರ್ಯ್ಯಾಂಪ್ ವಾಕ್ ಮಾಡಬೇಕೆಂಬ ಅಭಿಲಾಷೆ ಹೊಂದಿದ್ದ ಈ ಮಹಿಳೆಯರು ಆತ್ಮವಿಶ್ವಾಸದಿಂದ ಉದ್ಯಾನನಗರಿಯಲ್ಲಿ ನಡೆದ ಡ್ಯಾಜ್ಲಿಂಗ್ ಮಿಸೆಸ್ ಇಂಡಿಯಾ 2023 ಸೌಂದರ್ಯ ಸ್ಪರ್ಧೆಯಲ್ಲಿ ಪಾಲ್ಗೊಂಡು ವಾಕ್ ಮಾಡಿ, ಸೈ ಎನಿಸಿಕೊಂಡರು.
ಒಬ್ಬರಿಗಿಂತ ಒಬ್ಬರು ತಾವೇನೂ ಕಮ್ಮಿಯಿಲ್ಲ ಎಂಬಂತೆ, ಟ್ರೆಡಿಷನಲ್ ಹಾಗೂ ಕ್ಯಾಶುವಲ್ ರೌಂಡ್‌ಗಳಲ್ಲಿ ವಾಕ್ ಮಾಡಿ, ಜ್ಯುರಿ ಟೀಮ್‌ನ ಪ್ರಶ್ನೆಗಳಿಗೆ ತಮ್ಮದೇ ಆದ ಸ್ಟೈಲ್‌ನಲ್ಲಿ ಉತ್ತರಿಸಿದರು. ಸನ್ ರೈಸರ್ಸ್ ಇವೆಂಟ್ ಪ್ಲಾನರ್ ಹಾಗೂ ಸ್ವರ್ಣ ಭಾರತ ಫೌಂಡೇಷನ್‌ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಡ್ಯಾಜ್ಲಿಂಗ್ ಮಿಸೆಸ್ ಇಂಡಿಯಾ 2023 ಸೌಂದರ್ಯ ಸ್ಪರ್ಧೆಯಲ್ಲಿ ನಾನಾ ಕಡೆಗಳಿಂದ ವಿವಾಹಿತ ಮಹಿಳೆಯರು ಆಗಮಿಸಿ, ಪಾಲ್ಗೊಂಡಿದ್ದರು.
ಪೇಜೆಂಟ್ ವಿಜೇತರ ಪಟ್ಟಿ
ಮಿಸೆಸ್ ಕೆಟಗರಿಯಲ್ಲಿ ಶಿಲ್ಪಾ ವಿಜೇತರಾದರು. ಅಶ್ವಿನಿ, ಅನುಷಾ ರೆಡ್ಡಿ ಕ್ರಮವಾಗಿ ಮುಂದಿನೆರಡು ಸ್ಥಾನಗಳನ್ನು ಪಡೆದರು. 40ರಿಂದ 60 ವರ್ಷದೊಳಗಿನ ಕೆಟಗರಿಯಲ್ಲಿ ಮಾಧವಿ ಅಭಿಷೇಕ್ ವಿಜೇತರಾದರು. ಮಾನಿನಿ ಸಾವಂತ್, ವಿಜಯಲಕ್ಷ್ಮಿ ಕ್ರಮವಾಗಿ ಪ್ರಶಸ್ತಿ ಮುಂದಿನ ಗಳಿಸಿದರು. ಮಿಸ್ ಕೆಟಗರಿಯಲ್ಲಿ ಭಾವನಾ ಪ್ರಶಸ್ತಿ ಪಡೆದರು. ಕ್ರಮವಾಗಿ ಅಭಿಲಾಷಾ, ಸುಷ್ಮಾ ಮುಂದಿನೆರಡು ಸ್ಥಾನಗಳನ್ನು ಗಳಿಸಿದರು.
ಸೌಂದರ್ಯ ಸ್ಪರ್ಧೆಯಿಂದ ಹೆಚ್ಚಾಗುವ ಆತ್ಮವಿಶ್ವಾಸ
ಹಿರಿಯ ಸಮಾಜ ಸೇವಕಿ, ಯೋಗ ಎಕ್ಸ್‌ಪರ್ಟ್ ಆರ್. ವಿ. ಮಮತಾ ದೇವರಾಜ್ ಅವರು ಕೂಡ ಮಹಿಳೆಯರೊಂದಿಗೆ ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು. “ಮಹಿಳೆಯರು ಆತ್ಮವಿಶ್ವಾಸವನ್ನು ದಿನದಿಂದ ದಿನಕ್ಕೆ ಹೆಚ್ಚಿಸಿಕೊಳ್ಳಬೇಕು. ಜೊತೆಗೆ ಗುರಿಯತ್ತ ಸಾಗಬೇಕು. ಹಾಗಾದರೆ ಮಾತ್ರ ಮಹಿಳೆಯರು ತಾವು ಮಾತ್ರವಲ್ಲ, ತಮ್ಮ ಕುಟುಂಬವನ್ನು ಅಭಿವೃದ್ಧಿಪಡಿಸಬಹುದು. ಸ್ವಾವಲಂಬಿಗಳಾಗಿ ಬದುಕಬಹುದು ಎಂದು ಕರೆ ನೀಡಿದರು.
ಸಾಮಾಜಿಕ ಕಳಕಳಿ
ಕಾರ್ಯಕ್ರಮದ ಆಯೋಜಕರಾದ ಸಂತೋಷ್ ಮಾತನಾಡಿ, ಪ್ರತಿವರ್ಷದಂತೆ ಈ ಬಾರಿಯೂ ಸೌಂದರ್ಯ ಸ್ಪರ್ಧೆಯೂ ನಡೆದಿದ್ದು, ಎಂದಿನಂತೆ ಇಲ್ಲಿ ಸಂಗ್ರಹವಾದ ದೇಣಿಗೆಯನ್ನು ಕ್ಯಾನ್ಸರ್ ಪೀಡಿತ ಮಕ್ಕಳ ಸಹಾಯಕ್ಕಾಗಿ ಬಳಸಲಾಗುವುದು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಸೌಂದರ್ಯ ಸ್ಪರ್ಧೆಯ ಮೆಂಟರ್ ನಿತ್ಯಾ ದೀಕ್ಷಿತ್, ಪದಾಧಿಕಾರಿ ವಿಜಯ್‌ಕುಮಾರ್, ಮಾಡೆಲ್ ಸಂಗೀತಾ ಹೊಳ್ಳ ಉಪಸ್ಥಿತರಿದ್ದರು.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Star Fashion: ಕಾರ್ಪೆಂಟರ್ ಪ್ಯಾಂಟ್‌ನಲ್ಲಿ ನಟಿ ಶುಭಾರಕ್ಷಾ ಸಮ್ಮರ್ ಕೂಲ್ ಲುಕ್