Site icon Vistara News

Fashion Pageant News: ಮಿಸ್ಟರ್‌ ಮತ್ತು ಮಿಸ್‌ ಐಕಾನ್‌ ಸೌಂದರ್ಯ ಸ್ಪರ್ಧೆಯಲ್ಲಿ ಕಾಲೇಜು ಹುಡುಗ-ಹುಡುಗಿಯರ ಸಂಭ್ರಮ

Fashion Pageant News

ಶೀಲಾ ಸಿ. ಶೆಟ್ಟಿ, ಬೆಂಗಳೂರು

ಮಿಸ್ಟರ್‌ ಹಾಗೂ ಮಿಸ್‌ ಐಕಾನ್‌ ಇಂಡಿಯಾ ಸೌಂದರ್ಯ ಸ್ಪರ್ಧೆಯಲ್ಲಿ (Fashion Pageant News) ಕಾಲೇಜು ಹುಡುಗ-ಹುಡುಗಿಯರದ್ದೇ ಕಾರುಬಾರು! ಫಿನಾಲೆಗೆ ಆಯ್ಕೆಯಾದವರು ಎಥ್ನಿಕ್‌ ರೌಂಡ್‌ನಲ್ಲಿ ಮನಮೋಹಕವಾಗಿ ರ್ಯಾಂಪ್‌ ಮೇಲೆ ಹೆಜ್ಜೆ ಹಾಕಿದರು. ವೆಸ್ಟರ್ನ್ ರೌಂಡ್‌ನಲ್ಲೂ ಕೂಡ ತಮ್ಮದೇ ಆದ ಸ್ಟೈಲ್‌ನಲ್ಲಿ ವಾಕ್‌ ಮಾಡಿದರು. ಜೊತೆಗೆ ಜ್ಯೂರಿ ಟೀಮ್‌ನ ಪ್ರಶ್ನೆಗಳಿಗೆ ಮುಗ್ಧವಾಗಿ ಉತ್ತರಿಸಿ ಸೈ ಎನಿಸಿಕೊಂಡರು.

ಅಂದಹಾಗೆ, ಈ ಸೌಂದರ್ಯ ಸ್ಪರ್ಧೆಯು ಉದ್ಯಾನನಗರಿಯ ಬಿಜಿಎಸ್‌ ಹಾಗೂ ಎಸ್‌ಜೆಪಿ ಅಡಿಟೋರಿಯಂನಲ್ಲಿ ರಿಯೋ ಪ್ರೊಡಕ್ಷನ್‌, ಬಿಜಿಎಸ್‌ ಮತ್ತು ಎಸ್‌ಜೆಪಿ ಗ್ರೂಪ್‌ ಆಫ್‌ ಇನ್ಸ್‌ಸ್ಟಿಟ್ಯೂಟ್ಸ್‌ ಸಂಯುಕ್ತಾಶ್ರಯದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಬಿಜಿಎಸ್‌ ಮತ್ತು ಎಸ್‌ಜೆಪಿ ಗ್ರೂಪ್‌ ಆಫ್‌ ಇನ್ಸ್ಟಿಟ್ಯೂಟ್ಸ್‌ನ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಶ್ರೀ ಪ್ರಕಾಶನಾಥ ಸ್ವಾಮಿಜೀ ದೀಪ ಬೆಳಗುವುದರ ಮೂಲಕ ಸೌಂದರ್ಯ ಸ್ಪರ್ಧೆಗೆ ಚಾಲನೆ ನೀಡಿದರು. ಮಾಡೆಲ್‌ ಸಂತೋಷ್ ರೆಡ್ಡಿ, ಸೆಲೆಬ್ರೆಟಿ ಸ್ಟೈಲಿಸ್ಟ್‌ ಚಂದನ್‌ ಗೌಡ, ಸೆಲೆಬ್ರೆಟಿ ಡಿಸೈನರ್‌ ಮೀರಜ್‌ ಅನ್ವರ್‌, ಪೇಜೆಂಟ್‌ ಡೈರೆಕ್ಟರ್‌ಗಳಾದ ಶಂಕರ್‌, ರಂಜಿನಿಯವರು ಜೊತೆಗಿದ್ದರು.

ಭಾವಿ ಡಿಸೈನರ್‌ಗಳ ಡಿಸೈನರ್‌ವೇರ್ಸ್ ಪ್ರದರ್ಶನ

ಬಹುತೇಕ ಕಾಲೇಜು ವಿದ್ಯಾರ್ಥಿಗಳೇ ಭಾಗವಹಿಸಿದ್ದ ಈ ಸೌಂದರ್ಯ ಸ್ಪರ್ಧೆಯಲ್ಲಿ ಫ್ಯಾಷನ್‌ ವಿಭಾಗದ ಡಿಸೈನರ್‌ ವಿದ್ಯಾರ್ಥಿಗಳ ಪೊಟ್ರೈಟ್‌ ಫೋಟೋಗ್ರಾಫಿ ಹಾಗೂ ಡಿಸೈನ್‌ ಮಾಡಲಾದ ಡಿಸೈನರ್‌ವೇರ್‌ಗಳು ಕೂಡ ಪ್ರದರ್ಶನಗೊಂಡವು. ಟ್ರಾಪಿಕಲ್‌, ಡೆನಿಮ್‌, ರೆಸಾರ್ಟ್ವೇರ್‌ ಸೇರಿದಂತೆ ಸುಮಾರು 10 ಥೀಮ್‌ವನ್ನೊಳಗೊಂಡ ಡಿಸೈನರ್‌ವೇರ್‌ಗಳ ಪ್ರದರ್ಶನ ನಡೆಯಿತು.

ಟೈಟಲ್‌ ವಿಜೇತರ ಲಿಸ್ಟ್‌

ಮಿಸ್‌ ಐಕಾನ್‌ ಇಂಡಿಯಾ ಟೈಟಲ್‌ ವಿಜೇತರಾದ ಅನಿಮಾ ದಾರ್ಜಿ ಕಿರೀಟವನ್ನು ಮುಡಿಗೇರಿಸಿಕೊಂಡರು. ಮೊದಲ ರನ್ನರ್‌ ಅಪ್‌ ರುಚಿತಾ, ಎರಡನೇ ರನ್ನರ್‌ ಅಪ್‌ ಸ್ನೇಹಾ ಸಿಂಗ್‌, ಮೂರನೇ ರನ್ನರ್‌ ಅಪ್‌ ಅರ್ಚನಾ ಭಟ್‌ ಕ್ರಮವಾಗಿ ಪೇಜೆಂಟ್‌ನಲ್ಲಿ ವಿಜೇತರಾದರು. ಇನ್ನು ಮಿಸ್ಟರ್‌ ಐಕಾನ್‌ ಪಟ್ಟವನ್ನು ಜಾನ್‌ ಜಾನ್ಸನ್‌ ಪಡೆದರು. ನಂತರ ಕ್ರಮವಾಗಿ ದಿವ್ಯೇಶ್‌, ಮನೀಶ್‌, ಸಂಕೀರ್ತ್ ವಿಜೇತರಾದರು. ವ್ಯಾಸಂಗದೊಂದಿಗೆ ಸೌಂದರ್ಯ ಸ್ಪರ್ಧೆಯಲ್ಲೂ ಭಾಗವಹಿಸಿದ ಕಾಲೇಜು ಹುಡುಗ-ಹುಡುಗಿಯರ ಸಂಭ್ರಮ ಎಲ್ಲೆಡೆ ಮನೆ ಮಾಡಿತ್ತು. ತಮ್ಮ ಸಹಪಾಠಿಗಳನ್ನು ಹುರಿದುಂಬಿಸುತ್ತಿದ್ದ ಪರಿ ಕೂಡ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು.

(ಲೇಖಕಿ : ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ:Neel Ranaut : Tripura’s village fashion influencer Neel Ranaut Different Style

Exit mobile version