ಶೀಲಾ ಸಿ. ಶೆಟ್ಟಿ, ಬೆಂಗಳೂರು
ಫ್ಯಾಷನ್ ರ‍್ಯಾಂಪ್ (Fashion Ramp News) ಮೇಲೆ ಮುದ್ದು ಮುದ್ದಾದ ಮಕ್ಕಳ ವಾಕ್ ನೋಡುವುದೇ ಚೆನ್ನ! ಒಬ್ಬೊಬ್ಬರು ಒಂದೊಂದು ಬಗೆಯಲ್ಲಿ ವಾಕ್ ಮಾಡುತ್ತಾರೆ. ತಮ್ಮದೇ ಆದ ಕ್ಯೂಟ್ ಸ್ಟೈಲಿಂಗ್‌ನಲ್ಲಿ ಬೆಸ್ಟ್ ಎನಿಸಿಕೊಳ್ಳುತ್ತಾರೆ. ಅವರದ್ದೇ ಆದ ಸ್ಟೈಲ್‌ನಲ್ಲಿ ಆಕರ್ಷಕವಾಗಿ ಕಾಣಿಸುತ್ತಾರೆ. ಅಂದಹಾಗೆ, ಈ ಚಿತ್ರಣ ಕಂಡು ಬಂದಿದ್ದು, ಉದ್ಯಾನನಗರಿಯ ಎಲಿಮೆಂಟ್ಸ್ ಮಾಲ್‌ನಲ್ಲಿ ನಡೆದ ಲಿಟಲ್ ಐಕಾನ್ ಇಂಡಿಯಾ 2023 ಫ್ಯಾಷನ್ ರ್ಯಾಂಪ್‌ನಲ್ಲಿ ಪುಟ್ಟ ಪುಟ್ಟ ಹೆಜ್ಜೆ ಹಾಕಿದ ಮಕ್ಕಳು ಮಾತ್ರವಲ್ಲ, ಟೀನೇಜ್ ಮಕ್ಕಳು ಕೂಡ ವಾಕ್ ಮಾಡಿ, ವೀಕ್ಷಕರ ಮನ ಸೆಳೆದರು.
ಕಿಡ್ಸ್ ಫ್ಯಾಷನ್ ಶೋ
ಮೊದಲಿಗೆ ದೀಪ ಬೆಳಗುವುದರೊಂದಿಗೆ ಆರಂಭವಾದ ಮಕ್ಕಳ ರ‍್ಯಾಂಪ್ ಶೋನಲ್ಲಿ ಎಥ್ನಿಕ್ ರೌಂಡ್‌ನಲ್ಲಿ ಸೆಮಿ ಎಥ್ನಿಕ್, ಎಥ್ನಿಕ್ ಹಾಗೂ ಫಾರ್ಮಲ್ ಡಿಸೈನರ್‌ವೇರ್‌ನಲ್ಲಿ ಕಾಣಿಸಿಕೊಂಡು ಹೆಜ್ಜೆ ಹಾಕಿದರು. ಎರಡನೇ ರೌಂಡ್‌ನಲ್ಲಿ ಇಂಡೋ-ವೆಸ್ಟರ್ನ್ ಡಿಸೈನರ್‌ವೇರ್‌ಗಳು ಮಕ್ಕಳನ್ನು ಅಲಂಕರಿಸಿದ್ದವು. ಈ ಶೋ ಮಧ್ಯೆ, ಮಕ್ಕಳ ಟ್ಯಾಲೆಂಟ್ ಪ್ರದರ್ಶನ ಕೂಡ ನಡೆಯಿತು. ಮಕ್ಕಳ ಹುಲಾ ಹೂಪ್ ಡಾನ್ಸ್, ಭರತನಾಟ್ಯ ಕೂಡ ಎಲ್ಲರನ್ನು ಸೆಳೆಯಿತು.
ಲಿಟಲ್ ಐಕಾನ್ ಇಂಡಿಯಾದಲ್ಲಿ ಫ್ಯಾಷನ್ ಮಾತು
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಸೂಪರ್ ಮಾಡೆಲ್ ಸಂತೋಷ್ ರೆಡ್ಡಿ ಮಾತನಾಡಿ, ಪ್ರತಿ ಮಕ್ಕಳಲ್ಲೂ ಒಂದೊಂದು ಬಗೆಯ ಟ್ಯಾಲೆಂಟ್ ಇರುತ್ತದೆ. ಅದನ್ನು ಗುರುತಿಸಬೇಕು. ಫ್ಯಾಷನ್ ಶೋಗಳು ಮಕ್ಕಳಿಗೆ ವೇದಿಕೆ ಕಲ್ಪಿಸಲಾರಂಭಿಸಿವೆ. ಇದೇ ರೀತಿ ಕೆಲವು ಶೋಗಳು ಭಾವಿ ಮಾಡೆಲ್‌ಗಳನ್ನು ಹುಟ್ಟು ಹಾಕುತ್ತವೆ ಎಂದು ಹೇಳಿದರು.
ಸಂಸ್ಥೆಯ ಪ್ರೋತ್ಸಾಹ
ಲಿಟಲ್ ಐಕಾನ್ ಇಂಡಿಯಾ ಸಂಸ್ಥಾಪಕ ಶಂಕರ್ ಮಾತನಾಡಿ, ತಮ್ಮ ಸಂಸ್ಥೆಯು ಫ್ಯಾಷನ್ ಶೋಗಳಲ್ಲಿ ಕೇವಲ ಟೀನೇಜ್ ಹಾಗೂ ಮಕ್ಕಳಿಗೆ ವೇದಿಕೆ ಕಲ್ಪಿಸುವುದರೊಂದಿಗೆ ಮಾಡೆಲಿಂಗ್‌ಗೆ ಹೋಗಬಯಸುವ ಯುವಕ-ಯುವತಿಯರಿಗೂ ಅವಕಾಶ ಕಲ್ಪಿಸುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಫ್ಯಾಷನ್ ಡಿಸೈನರ್ ಗೋವಿಂದ್ ಕುಮಾರ್ ಸಿಂಗ್, ಮಾಡೆಲ್ ಶಿಲ್ಪಾ ಸಿಂಗ್, ಡರ್ಮಾಟಲಾಜಿಸ್ಟ್ ಮಿನು ಜೈನ್, ಡಾ. ಲತಾ, ಮಾಡೆಲ್ ಮೇಘನಾ, ಬ್ಯೂಟಿ ಎಕ್ಸ್‌ಪರ್ಟ್ ಹೇಮಲತಾ ಶ್ರೀಜಿ ಇನ್ನಿತರರು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಮುದುಡಿದ ಎಲೆಗಳು ಸಿನಿಮಾ ಟೈಟಲ್ ಲಾಂಚ್ ಆಯಿತು.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Star Singer Fashion: ನೆಕ್ಲೇಸ್ ಧರಿಸಿ ಹಾಡಿದ ಸಂಜಿತ್ ಹೆಗಡೆ; ಜೆಂಡರ್ ಫ್ಯಾಷನ್ ರೂಲ್ಸ್ ಬ್ರೇಕ್!