Site icon Vistara News

Fashion Shopping: ಎಲ್ಲೆಡೆ ಶುರುವಾಯ್ತು ಸೀಸನ್‌ ಸೇಲ್‌

ಶೀಲಾ ಸಿ. ಶೆಟ್ಟಿ, ಬೆಂಗಳೂರು

ಎಲ್ಲೆಡೆ ಸೀಸನ್‌ ಸೇಲ್‌ ಶುರುವಾಗಿದೆ. ಬೇಸಿಗೆ ನಂತರ ಮಾನ್ಸೂನ್‌ ಆರಂಭವಾಗುತ್ತಿದ್ದಂತೆ ತಿಂಗಳಾನುಗಟ್ಟಲೆ ಮಾಲ್‌ ಸೇರಿದಂತೆ ಸಾಕಷ್ಟು ರಿಟೈಲ್‌ ಫ್ಯಾಷನ್‌ ಸ್ಟೋರ್ ಗಳು, ಶಾಪ್‌ಗಳಲ್ಲಿ ಫ್ಯಾಷನ್‌ವೇರ್‌ ಹಾಗೂ ಆಕ್ಸೆಸರೀಸ್‌ನ ಸೀಸನ್‌ ಸೇಲ್‌ ಆರಂಭಗೊಂಡಿದೆ. ಒಟ್ಟಿನಲ್ಲಿ ಎಲ್ಲಿ ನೋಡಿದರೂ ಸೇಲ್‌, ಸೇಲ್‌, ಸೇಲ್‌ ಬೋರ್ಡ್ ಗಳು ರಾರಾಜಿಸುತ್ತಿವೆ.

ಈ ಸೀಸನ್‌ ಸೇಲ್‌ನಲ್ಲಿ ಶಾಪಿಂಗ್‌ ಮಾಡುವ ಮುನ್ನ ಒಂದಿಷ್ಟು ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಫ್ಯಾಷನ್‌ವೇರ್‌ ಹಾಗೂ ಆಕ್ಸೆಸರೀಸ್‌ಗಳನ್ನು ಖರೀದಿಸಿದಲ್ಲಿ ಒಂದಿಷ್ಟು ಉಳಿತಾಯ ಮಾಡಬಹುದು. ಹೆಚ್ಚು ಬೆಲೆಬಾಳುವ ಉಡುಪುಗಳನ್ನು ಕಡಿಮೆ ಬೆಲೆಗೆ ಖರೀದಿಸಬಹುದು ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕಿ ವಿದ್ಯಾ.
ಅವರು ಹೇಳುವಂತೆ “ಈಗಾಗಲೇ ಎಲ್ಲೆಡೆ ನಾನಾ ಬಗೆಯ ಫ್ಯಾಷನ್‌ ಔಟ್‌ಫಿಟ್ಸ್‌ ಹಾಗೂ ಆಕ್ಸೆಸರೀಸ್‌ ಮೇಲೆ ಸೀಸನ್‌ ಎಂಡ್‌ ಸೇಲ್‌ ಬೋರ್ಡ್‌ಗಳು ನೇತಾಡುತ್ತಿವೆ. ಬೇಸಿಗೆ ಮುಗಿದು ಆಗಲೇ ತಿಂಗಳುಗಟ್ಟಲೇ ಸಮಯ ಕಳೆದಿದ್ದರೂ ಎಲ್ಲಾ ಶಾಪಿಂಗ್‌ ಮಾಲ್‌ಗಳು ತಂತಮ್ಮ ಅಳಿದುಳಿದ ಸಮ್ಮರ್‌ ಫ್ಯಾಷನ್‌ವೇರ್‌ ಹಾಗೂ ಆಕ್ಸೆಸರೀಸ್‌ ಸರಕುಗಳನ್ನು ಮಾರಾಟ ಮಾಡಲು ಮುಂದಾಗಿದ್ದಾರೆ. ಪ್ರತಿ ವರ್ಷದಂತೆ ಈ ಬಾರಿಯೂ ಸಾಕಷ್ಟು ಡಿಸ್ಕೌಂಟ್ಸ್‌ ಹಾಗೂ ಆಫರ್‌ಗಳನ್ನು ನೀಡಿ ಗ್ರಾಹಕರನ್ನು ಆಕರ್ಷಿಸುತ್ತಿದ್ದಾರೆ. ಇವುಗಳ ಪ್ರಯೋಜನವನ್ನು ಫ್ಯಾಷನ್‌ ಪ್ರಿಯರು ಪಡೆದುಕೊಳ್ಳಬಹುದು”.

ಫ್ಯಾಷನ್‌ವೇರ್‌ಗಳ ಮೇಲೆ ಡಿಸ್ಕೌಂಟ್ಸ್‌

ಬಹುತೇಕ ಮಾಲ್‌ ಹಾಗೂ ರಿಟೇಲ್‌ ಸ್ಟೋರ್‌ಗಳಲ್ಲಿ ಕಳೆದ ಸೀಸನ್‌ನಲ್ಲಿ ಬಿಡುಗಡೆಯಾದ ಸಾಕಷ್ಟು ಸಮ್ಮರ್‌ ಹಾಗೂ ಸ್ಪ್ರಿಂಗ್‌ ಫ್ಯಾಷನ್‌ವೇರ್‌ಗಳ ಮೇಲೆ ಶೇಕಡಾ 20ರಿಂದ 60ರಷ್ಟು ಡಿಸ್ಕೌಂಟ್ಸ್‌ ಘೋಷಿಸಿರುವುದು ಇನ್ನೂ ಹಾಗೆಯೇ ಮುಂದುವರೆದಿದೆ.

ಅಷ್ಟೇ ಏಕೆ! ಆಕ್ಸೆಸರೀಸ್‌ ಹಾಗೂ ಫುಟ್‌ವೇರ್‌ಗಳ ಮೇಲೂ ಇದು ಮುಂದುವರಿದಿದೆ. ಉದಾಹರಣೆಗೆ, ಒಂದು ಸಾವಿರ ಬೆಲೆ ಬಾಳುವ ಎಥ್ನಿಕ್‌ ಕಮೀಝ್‌ಗೆ 50 ಪರ್ಸೆಂಟ್‌ ಡಿಸ್ಕೌಂಟ್ ಇದ್ದಲ್ಲಿ ಕೇವಲ 500 ರೂ.ಗಳಿಗೆ ದೊರೆಯುತ್ತದೆ. ಇನ್ನು ಎರಡು ಸಾವಿರ ಇಲ್ಲವೇ ಐದು ಸಾವಿರ ರೂ. ಮೌಲ್ಯದ ಫ್ಯಾಷನ್‌ವೇರ್‌ ಖರೀದಿಸಿದವರಿಗೆ ಪರ್ಸೆಂಟೇಜ್‌ ಆಧಾರದ ಮೇಲೆ ವಿಶೇಷ ವಿನಾಯಿತಿಗಳು ದೊರೆಯುತ್ತಿವೆ ಎನ್ನುತ್ತಾರೆ ಮಾಲ್‌ವೊಂದರ ಸೇಲ್ಸ್‌ ಮ್ಯಾನೇಜರ್‌.

ಕಾಸ್ಮೆಟಿಕ್ಸ್ ಖರೀದಿಗೆ ಗಿಫ್ಟ್ಸ್

ಬಹಳಷ್ಟು ಕಡೆ ಕಾಸ್ಮೆಟಿಕ್‌ ಸೇಲ್‌ ಕೂಡ ನಡೆಯುತ್ತಿದೆ. ಮೇಕಪ್‌ ಪ್ರಿಯರಿಗೆ ಇದು ಸುಗ್ಗಿ ಕಾಲ. ಅಂದರೆ, ರಿಯಾಯತಿ ವಿನಾಯತಿಗಳ ಭರಪೂರ ಆಫರ್‌ಗಳು ದೊರೆಯುತ್ತಿವೆ. ಸಾವಿರ ರೂ. ಬೆಲೆಬಾಳುವ ಬ್ರಾಂಡೆಡ್‌ ಪ್ರಾಡಕ್ಟ್ಗಳ ಮೇಲೆ ಜತೆಗೆ ಫ್ರೀ ಗಿಫ್ಟ್‌ ಆಫರ್‌ ಕೂಡ ನೀಡಲಾಗುತ್ತಿದೆ ಹಾಗೆನ್ನುತ್ತಾರೆ ಕಾಸ್ಮೆಟಿಕ್‌ ಬ್ರಾಂಡ್‌ವೊಂದರ ಬ್ರಾಂಚ್‌ ಸೇಲ್ಸ್‌ಗರ್ಲ್.

ಆಷಾಢವೂ ಕಾರಣ

ಈ ಡಿಸ್ಕೌಂಟ್ಸ್‌ ಹಾಗೂ ಆಫರ್ಸ್‌ಗೆ ಆಷಾಢವೂ ಕಾರಣ ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕಿ ವಿದ್ಯಾ. ಆಷಾಢದಲ್ಲಿ ಯಾವುದೇ ಹಬ್ಬ-ಸಭೆ-ಸಮಾರಂಭಗಳು ನಡೆಯುವುದು ಕಡಿಮೆ. ಹಾಗಾಗಿ ಫ್ಯಾಷನ್‌ವೇರ್‌ ಮಾತ್ರವಲ್ಲ, ಯಾವುದೇ ಖರೀದಿಯೂ ಕಡಿಮೆ. ಹಾಗಾಗಿ ಫ್ಯಾಷನ್‌ವೇರ್‌ಗಳ ಮೇಲೆ ಸಾಕಷ್ಟು ಕಡಿತ ನೀಡಲಾಗುತ್ತದೆ. ಫ್ಯಾಷನ್‌ ಪ್ರಿಯರನ್ನು ಸೆಳೆಯುವ ಎಲ್ಲಾ ತಂತ್ರಗಳನ್ನು ರೂಪಿಸಲಾಗುತ್ತದೆ ಎಂಬುದು ಅವರ ಅಭಿಪ್ರಾಯ.

ಫೆಸ್ಟಿವ್‌ ಸೀಸನ್‌ಗೂ ಮುನ್ನ…

ಫೆಸ್ಟಿವ್‌ ಸೀಸನ್‌ ಇನ್ನೂ ದೂರವಿದೆ. ಅದಕ್ಕೂ ಮುನ್ನ ಪ್ರತಿ ವರ್ಷವೂ ಕೂಡ ಮಾಲ್‌ಗಳಲ್ಲಿ ಹಾಗೂ ಬಹುತೇಕ ಶಾಪ್‌ಗಳಲ್ಲಿ ತಮ್ಮ ಸಮ್ಮರ್‌ –ಸ್ಪ್ರಿಂಗ್‌ ಸೀಸನ್‌ನ ಉಳಿದಿರುವ ಪ್ರಾಡಕ್ಟ್ಗಳ ಸೀಸನ್‌ ಎಂಡ್‌ ಸೇಲ್‌ ನಡೆಯುವುದು ಸಾಮಾನ್ಯ. ಹಾಗಾಗಿ ಫೆಸ್ಟಿವ್‌ ಸೀಸನ್‌ ಮುನ್ನ ಶಾಪಿಂಗ್‌ ಮಾಡುವುದಾದಲ್ಲಿ ಮೊದಲೇ ವಿವರ ತಿಳಿದುಕೊಂಡು, ಅಗತ್ಯವಿದ್ದಲ್ಲಿ ಮಾತ್ರ ಶಾಪಿಂಗ್‌ ಮಾಡಿ ಎಂದು ಸಲಹೆ ನೀಡುತ್ತಾರೆ ಎಕ್ಸ್‌ಪರ್ಟ್ಸ್.

ಸೀಸನ್‌ ಸೇಲ್‌ ಫ್ಯಾಷನ್‌ವೇರ್‌ ಶಾಪಿಂಗ್‌ಗೆ ಸಲಹೆಗಳೇನು?

ಇದನ್ನೂ ಓದಿ| Ethnic Fashion: ಡಿಸೈನರ್‌ ಸಲ್ವಾರ್ ಸೂಟ್ ನ ರೀ ಎಂಟ್ರಿ

Exit mobile version