ಶೀಲಾ ಸಿ. ಶೆಟ್ಟಿ, ಬೆಂಗಳೂರು
ಉದ್ಯಾನನಗರಿಯ ಕೆಎಲ್‌ಇ ಸೊಸೈಟಿಯ ನಿಜಲಿಂಗಪ್ಪ ಕಾಲೇಜಿನಲ್ಲಿ ಭಾವಿ ಡಿಸೈನರ್‌ಗಳ ಆಕರ್ಷಕ ಡಿಸೈನರ್‌ವೇರ್‌ಗಳು ಪ್ರತಿಬಿಂಬ ಕಾರ್ಯಕ್ರಮದ ಫ್ಯಾಷನ್ ಶೋನಲ್ಲಿ (Fashion Show News) ಅನಾವರಣಗೊಂಡವು. ಶೋ ಡೈರೆಕ್ಟರ್, ಸೆಲೆಬ್ರೆಟಿ ಡಿಸೈನರ್ ಸಂಜಯ್ ಚೊರಾರಿಯಾ ಅವರ ನೇತೃತ್ವದಲ್ಲಿ ನಡೆದ ಈ ಫ್ಯಾಷನ್ ಶೋನಲ್ಲಿ ಊಹೆಗೂ ಮೀರಿದ ಡಿಸೈನರ್ ವೇರ್‌ಗಳನ್ನು ಆಯ್ದ 11 ಫ್ಯಾಷನ್ ಡಿಸೈನಿಂಗ್ ವಿದ್ಯಾರ್ಥಿಗಳು ಪ್ರದರ್ಶಿಸಿದರು.
ಕೆಎಲ್‌ಇ ಕಾಲೇಜಿನ ಪ್ರತಿಬಿಂಬ
“ಕೆಎಲ್‌ಇ ಕಾಲೇಜಿನ ಫ್ಯಾಷನ್ ವಿದ್ಯಾರ್ಥಿಗಳ ವಿನೂತನ ಡಿಸೈನಿಂಗ್ ಟ್ಯಾಲೆಂಟ್ ಎಲ್ಲರನ್ನು ಆಕರ್ಷಿಸಿದೆ. ಅದರಲ್ಲೂ ಕೆಲವು ಡಿಸೈನ್‌ಗಳಂತೂ ವಾವ್ ಎನ್ನುವಷ್ಟು ಚೆನ್ನಾಗಿದೆ. ಇನ್ನು ವಿಜೇತರಾದ ನವೀನ್ ಡಿಸೈನ್ ಮಾಡಿದ ಡಿಸೈನರ್ ವೇರ್‌ಗಳಂತೂ ತೀರಾ ಆಕರ್ಷಣೀಯವಾಗಿದ್ದವು. ಡಿಸೈನಿಂಗ್ ವಿಭಾಗದ ಮೆಂಟರ್ಸ್ ಹಾಗೂ ಟೀಚರ್ಸ್ ಸೇರಿದಂತೆ ಎಲ್ಲಾ ವಿದ್ಯಾರ್ಥಿಗಳ ಹಾರ್ಡ್ವರ್ಕ್ ಎದ್ದು ಕಾಣಿಸುತ್ತಿತ್ತು. ಒಟ್ಟಿನಲ್ಲಿ, ಈ ಫ್ಯಾಷನ್ ಶೋ ಎಲ್ಲರ ಮನದಲ್ಲಿ ಅಚ್ಚೊತ್ತಿದ್ದು ನೆನಪಿನಲ್ಲಿ ಉಳಿಯಲಿದೆ “ ಎಂದು ಶೋ ಡೈರೆಕ್ಟರ್ ಹಾಗೂ ಸೆಲೆಬ್ರೆಟಿ ಫ್ಯಾಷನ್ ಡಿಸೈನರ್ ಸಂಜಯ್ ಚೋರಾರಿಯಾ ಮಾತನಾಡಿದರು.
“ಇಂದು ಫ್ಯಾಷನ್ ಡಿಸೈನಿಂಗ್ ಎಂಬುದು ಇಂದು ವ್ಯಾಪ್ತಿ ಪ್ರದೇಶವನ್ನು ವಿಸ್ತರಿಸಿದೆ. ವಿನೂತನ ಡಿಸೈನಿಂಗ್ ಕಾನ್ಸೆಪ್ಟ್‌ಗಳು ಪರಿಚಿತಗೊಳ್ಳುತ್ತಿವೆ. ಅದರಲ್ಲೂ ಟೆಕ್ನಾಲಜಿಗೆ ಹೊಂದುವಂತಹ ಹಾಗೂ ಈ ಜನರೇಷನ್‌ಗೆ ಹೊಂದುವಂತಹ ಡಿಸೈನಿಂಗ್ ವಿನ್ಯಾಸಗಳು ರೂಪುಗೊಳ್ಳುತ್ತಿವೆ. ಇದು ಈ ಕ್ಷೇತ್ರದಲ್ಲಿ ಕಾಂಪಿಟೇಷನ್ ಹೆಚ್ಚಾಗುವಂತೆ ಮಾಡುತ್ತಿದೆ ಎಂದು ಅಭಿಪ್ರಾಯಪಟ್ಟರು.
ಪ್ರಯೋಗಾತ್ಮಕ ಫ್ಯಾಷನ್
ನಟಿ ಸೋನಿಕಾ ಗೌಡ ಮಾತನಾಡಿ, ಇಂದು ಫ್ಯಾಷನ್ ಎಂಬುದು ಪ್ರತಿಯೊಬ್ಬರ ಲೈಫ್‌ಸ್ಟೈಲ್‌ನ ಭಾಗವಾಗಿದೆ. ಈ ಕ್ಷೇತ್ರ ದಿನ ಕಳೆದಂತೆ ಮುಂದುವರಿಯುತ್ತಿದೆ. ಅದರಲ್ಲೂ ಕೆಎಲ್‌ಇ ಕಾಲೇಜಿನ ವಿದ್ಯಾರ್ಥಿಗಳು ಪ್ರದರ್ಶಿಸಿದ ಪ್ರಯೋಗಾತ್ಮಕ ಫ್ಯಾಷನ್ ವೇರ್‌ಗಳಲ್ಲಿ ಇವರೆಲ್ಲರ ಭವಿಷ್ಯ ಕಾಣಬಹುದಾಗಿದೆ ಎಂದು ಹೇಳಿದರು.
ಪ್ರತಿಬಿಂಬದಲ್ಲಿ ಪಾಲ್ಗೊಂಡವರು
ಫ್ಯಾಷನ್ ಶೋನಲ್ಲಿ ಖಾದಿ ಬೋರ್ಡ್ ಸಿಇಒ ರಾಜಪ್ಪ, ವಿಜೆ ಮನೋಜ್ ಹಾಗೂ ಭಾಗ್ಯಮ್ಮ ನಾಗರಾಜ್, ಮಾಡೆಲ್ ಶ್ವೇತಾ ನಿರಂಜನ್ ಹಾಗೂ ಶ್ವೇತಾ ಮಯೂರ ಭಾಗವಹಿಸಿದ್ದರು.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Fashion Show News: ಫೋರಂ ಮಾಲ್‌ನಲ್ಲಿ ರ‍್ಯಾಂಪ್ ವಾಕ್ ಮಾಡಿ ಜನರನ್ನು ಸೆಳೆದ ಮಾಡೆಲ್‌ಗಳು