Site icon Vistara News

Fashion Show News: ಎಕ್ವಿನಾಕ್ಸ್ ಅವಂತ್‌ ಫ್ಯಾಷನ್‌ ಶೋಗೆ ಸೆಲೆಬ್ರೆಟಿ ಸ್ಟೈಲಿಸ್ಟ್ ಶಿಲ್ಪಾ ಹೆಗಡೆ ಸಾಥ್‌

Fashion Show News

ಶೀಲಾ ಸಿ. ಶೆಟ್ಟಿ, ಬೆಂಗಳೂರು

ಒಂದೊಂದು ಡಿಸೈನರ್‌ವೇರ್‌ಗಳು ನೋಡಲು ವೈವಿಧ್ಯಮಯವಾಗಿದ್ದವು. ಆಕರ್ಷಕ ವಿನ್ಯಾಸ ಮಾತ್ರವಲ್ಲ, ಶೇಡ್‌ಗಳು ಕೂಡ ಭಿನ್ನ-ವಿಭಿನ್ನವಾಗಿದ್ದವು. ಪ್ರಯೋಗಾತ್ಮಕ ಡಿಸೈನ್‌ನ ಈ ಫ್ಯಾಷನ್‌ವೇರ್‌ಗಳು ನೋಡುಗರ ಮನ ಸೆಳೆದವು. ಕಾಲೇಜಿನ ವಿದ್ಯಾರ್ಥಿಗಳೇ ವಿನ್ಯಾಸ ಮಾಡಿದ ಈ ಉಡುಪುಗಳು ಮನಮೋಹಕವಾಗಿದ್ದವು. ಈ ಆಕರ್ಷಣೀಯ ಹಾಗೂ ಪ್ರಯೋಗಾತ್ಮಕ ಉಡುಗೆ ತೊಡುಗೆಗಳನ್ನು ಧರಿಸಿದ ಮಾಡೆಲ್‌ಗಳು ಕ್ಯಾಟ್‌ವಾಕ್‌ ಮಾಡುತ್ತಾ ರ‍್ಯಾಂಪ್‌ ಮೇಲೆ ಹೆಜ್ಜೆ ಹಾಕುತ್ತಿದ್ದರೆ ನೆರೆದಿದ್ದ ಪ್ರೇಕ್ಷಕರ ದೃಷ್ಟಿ ಅವರ ಇಡೀ ಡಿಸೈನರ್‌ವೇರ್‌ಗಳ ಮೇಲಿತ್ತು. ಆಕರ್ಷಕವಾಗಿದ್ದ ಈ ಉಡುಪುಗಳು ಮುಂದಿನ ಭಾವಿ ಡಿಸೈನರ್‌ಗಳ ಪ್ರತಿಭಾ ಪ್ರದರ್ಶನಕ್ಕೆ ನಾಂದಿ ಹಾಡಿತ್ತು. ಮಣಿಪಾಲ್‌ ಸ್ಕೂಲ್‌ ಆಫ್‌ ಆರ್ಕಿಟೆಕ್ಚರ್‌ ಮತ್ತು ಪ್ಲಾನಿಂಗ್‌ ಆಶ್ರಯದಲ್ಲಿನಡೆದ ಎಕ್ವಿನಾಕ್ಸ್‌ ಅವಂತ್‌ 2023 ಫ್ಯಾಷನ್‌ ಶೋನಲ್ಲಿ (Fashion Show News) ವಿದ್ಯಾರ್ಥಿಗಳ ರೂಪಿಸಿದ ಡಿಸೈನರ್‌ವೇರ್‌ಗಳು ಈ ಫ್ಯಾಷನ್‌ ಶೋನಲ್ಲಿ ಪ್ರದರ್ಶನಗೊಂಡವು.

Celebrity stylist Shilpa Hegde

ಸೆಲೆಬ್ರೆಟಿ ಸ್ಟೈಲಿಸ್ಟ್‌ ಶಿಲ್ಪಾ ಹೆಗಡೆ ಮಾತು

ಸ್ಯಾಂಡಲ್‌ವುಡ್‌ ಸೆಲೆಬ್ರೆಟಿ ಸ್ಟೈಲಿಸ್ಟ್‌ ಹಾಗೂ ಫ್ಯಾಷನ್‌ ಕನ್ಸಲ್ಟಂಟ್‌ ಶಿಲ್ಪಾ ಹೆಗಡೆ, ಫ್ಯಾಷನ್‌ ಶೋನಲ್ಲಿ ಅತಿಥಿಯಾಗಿ ಪಾಲ್ಗೊಂಡಿದ್ದರು. ಡಿಸೈನರ್‌ಗಳ ಈ ಭಿನ್ನ-ವಿಭಿನ್ನ ಪ್ರಯೋಗಾತ್ಮಕ ಡಿಸೈನರ್‌ವೇರ್‌ಗಳನ್ನು ನೋಡಿ ಆನಂದಿಸಿದರು. ಒಂದಕ್ಕಿಂತ ಒಂದು ಆಕರ್ಷಕವಾಗಿದೆ ಹಾಗೂ ಎಲ್ಲದಕ್ಕಿಂತ ಹೆಚ್ಚಾಗಿ ಕ್ರಿಯೇಟಿವಿಟಿಗೆ ಈ ಡಿಸೈನರ್‌ವೇರ್‌ಗಳು ಸ್ಫೂರ್ತಿ ನೀಡುತ್ತವೆ ಹಾಗೂ ಮಾದರಿಯಾಗಿವೆ ಎಂದು ಅಭಿಪ್ರಾಯಪಟ್ಟರು.

ಗ್ರಾಜುಯೇಷನ್‌ ಕಲೆಕ್ಷನ್‌ ಅನಾವರಣ

ಎಮ್‌ಎಸ್‌ಎಪಿ, ಎನ್‌ಎಎಚ್‌ಇ ಕಾಲೇಜಿನ ಫ್ಯಾಷನ್‌ ಡಿಸೈನ್‌ ವಿದ್ಯಾರ್ಥಿಗಳು ಸಿದ್ಧಪಡಿಸಿದ ನಾನಾ ಡಿಸೈನ್‌ನ ಗ್ರಾಜುಯೇಷನ್‌ ಕಲೆಕ್ಷನ್ಸ್ ಪ್ರದರ್ಶನ ಯಶಸ್ವಿಯಾಗಿ ಅನಾವರಣಗೊಂಡಿತು.

ಗಣ್ಯರ ಹಾಜರಿ

ಫ್ಯಾಷನ್‌ ಶೋನಲ್ಲಿ ಮಣಿಪಾಲದ ಎಮ್‌ಎಎಚ್‌ಇ ಟೆಕ್ನಾಲಜಿ ಮತ್ತು ಸೈನ್ಸ್‌ ವಿಭಾಗದ ಉಪಕುಲಪತಿ ಪ್ರೊ. ನಾರಾಯಣ ಸಬಾಹಿತ್‌ ಪಾಲ್ಗೊಂಡಿದ್ದರು. ಇವರೊಂದಿಗೆ ಡಿಸೈನ್‌ ವಿಭಾಗದ ಮುಖ್ಯಸ್ಥರಾದ ಡಾ. ವೀಣಾ ರಾವ್‌, ಸಹ ನಿರ್ದೇಶಕರಾದ ಡಾ. ಪ್ರದೀಪ್‌ ಕಿಣಿ, ನಿರ್ದೇಶಕ ಡಾ. ನಂದನೇನಿ ರಮಾದೇವಿ ಪಾಲ್ಗೊಂಡಿದ್ದರು. ಸೆಲೆಬ್ರೆಟಿ ಸ್ಟೈಲಿಸ್ಟ್‌ ಶಿಲ್ಪಾ ಹೆಗಡೆಯವರನ್ನು ಗೌರವಿಸಿ ಸನ್ಮಾನಿಸಲಾಯಿತು.

(ಲೇಖಕಿ : ಫ್ಯಾಷನ್‌ ಪ್ರತಕರ್ತೆ)

ಇದನ್ನೂ ಓದಿ: Paris Fashion Week: ಪ್ಯಾರಿಸ್‌ ಫ್ಯಾಷನ್‌ ವೀಕ್‌ನಲ್ಲಿ ಬಾಲಿವುಡ್‌ ನಟಿ ಖುಷಿ ಕಪೂರ್‌

Exit mobile version