: ಶೀಲಾ ಸಿ. ಶೆಟ್ಟಿ, ಬೆಂಗಳೂರು
ಉದ್ಯಾನನಗರಿಯ ಫೋರಂ ಮಾಲ್ನ ಡೋನರ್ ಮತ್ತು ಜೈರೋಸ್ನ ಕಾರ್ಯಕ್ರಮದಲ್ಲಿ (Fashion Show News) ಭಿನ್ನ-ವಿಭಿನ್ನವಾಗಿ ಸಿಂಗರಿಸಿಕೊಂಡ ಮಾಡೆಲ್ಗಳು, ಆಕರ್ಷಕವಾಗಿ ರ್ಯಾಂಪ್ ವಾಕ್ ಮಾಡುತ್ತಾ ನೆರೆದಿದ್ದ ಸುತ್ತಮುತ್ತಲಿನ ಜನರನ್ನು ಕೆಲಕಾಲ ಸಮ್ಮೋಹನಗೊಳಿಸಿದರು. ನಟ ಹಾಗೂ ಎಂಟಿವಿ ರೋಡೀಸ್ನ ವಿಜೆ ರಣ್ ವಿಜಯ್ ಸಿಂಗ್ ಆಗಮಿಸಿದ್ದರು.
ಜನ ಸಮೂಹವನ್ನು ಸೆಳೆದ ಶೋ
ಮಾಲ್ನಲ್ಲಿ ಎಲ್ಲಿ ನೋಡಿದರೂ ಜನವೋ ಜನ! ಕೆಲವರು ಶಾಪಿಂಗ್ ಮಾಡುವುದರಲ್ಲಿ ಬಿಝಿಯಾಗಿದ್ದರೆ, ಸ್ನೇಹಿತರು ಹರಟೆ ಹೊಡೆಯುತ್ತಾ ಕಾಲ ಕಳೆಯುತ್ತಿದ್ದರು, ಇನ್ನು ಕೆಲವರು ಕುಟುಂಬದೊಂದಿಗೆ ಓಡಾಡಿಕೊಂಡಿದ್ದರು. ಇವೆಲ್ಲದರ ಮಧ್ಯೆ ಮಾಲ್ನ ಸೆಂಟ್ರಲ್ ಜಾಗದಲ್ಲಿ ಆರಂಭವಾದ ಫ್ಯಾಷನ್ ಶೋ ಕ್ಷಣ ಕಾಲ ಸುತ್ತಮುತ್ತ ನೆರೆದಿದ್ದ ಜನ ಸಮೂಹವನ್ನು ಹಿಡಿದಿಟ್ಟಿತು. ಎಲ್ಲರೂ ಅಚ್ಚರಿಯಿಂದ ನೋಡುತ್ತಾ ನಿಲ್ಲುವಂತೆ ಮಾಡಿತು. ಹಾಗಿತ್ತು, ಮಾಲ್ನಲ್ಲಿ ನಡೆದ ಫ್ಯಾಷನ್ ಶೋನ ಜಾದೂ. ಆ ಮಟ್ಟಿಗೆ ಕೆಲಕಾಲ ಜನ ಸಮೂಹವನ್ನು ತಮ್ಮತ್ತ ಸೆಳೆಯುವಲ್ಲಿ ಮಾಡೆಲ್ಗಳು ಯಶಸ್ವಿಯಾದರು.
ಸೆಲೆಬ್ರಿಟಿ ಶೋ ಡೈರೆಕ್ಟರ್ ರಾಜೇಶ್ ಶೆಟ್ಟಿ ಕೊರಿಯೋಗ್ರಫಿ
ಸೆಲೆಬ್ರಿಟಿ ಡಿಸೈನರ್, ಶೋ ಡೈರೆಕ್ಟರ್ ರಾಜೇಶ್ ಶೆಟ್ಟಿಯವರ ಕೊರಿಯೋಗ್ರಫಿ ಈ ಫ್ಯಾಷನ್ ಶೋಗಿತ್ತು. ಆದಿತ್ಯಾ ಶ್ರೀ ವಾತ್ಸವ್ ಅವರ ಸಾಥ್ ಇವರಿಗಿತ್ತು. ಇತರೇ ಫ್ಯಾಷನ್ ಶೋಗಳಿಗಿಂತ ಈ ಶೋನಲ್ಲಿ ಮಾಡೆಲ್ಗಳ ಕಾಸ್ಟ್ಯೂಮ್ ಭಿನ್ನವಾಗಿತ್ತು. ಇಂಗ್ಲೀಷ್ ಸಿನಿಮಾಗಳಲ್ಲಿನ ವಾರಿಯರ್ಗಳ ಕಾಸ್ಟ್ಯೂಮ್ಗಳಂತಿತ್ತು.
ನೋಡುಗರನ್ನು ಸೆಳೆದ ಮಾಡೆಲ್ಗಳ ಹೆಡ್ ಆಕ್ಸೆಸರೀಸ್
ಮಾಡೆಲ್ಗಳು ಧರಿಸಿದ್ಧ ಕಾಸ್ಟ್ಯೂಮ್ ಮಾತ್ರವಲ್ಲ, ಅವರುಗಳು ಧರಿಸಿದ್ದ ಚಿತ್ರ-ವಿಚಿತ್ರ ಹೆಡ್ ಆಕ್ಸೆಸರೀಸ್ ಎಲ್ಲರನ್ನೂ ಆಕರ್ಷಿಸಿತು. ಕೊಂಬು, ಕಿರೀಟ, ಅಬ್ಸ್ಟ್ರಾಕ್ಟ್ ಡಿಸೈನ್ನ ಹೆಡ್ ಗೇರ್ಗಳು ಇಡೀ ಶೋನ ಆಕರ್ಷಣೆಯ ಕೇಂದ್ರ ಬಿಂದುವಾಗಿತ್ತು ಎನ್ನಬಹುದು. ಶನಿಫಾ, ಅಕಾಂಕ್ಷಾ, ಹರಿಕ ರೆಡ್ಡಿ, ವಂಶೀ, ಅಶಿಕಾ ಶೆಟ್ಟಿ, ಅನಘಾ, ಪ್ರಕೃತಿ, ರವಿ ತೇಜ್, ನಿತಿನ್ ಭಾರ್ಗವ್ ಸೇರಿದಂತೆ ರಷ್ಯಾದ ಮಾಡೆಲ್ಗಳು ಶೋನಲ್ಲಿ ಭಾಗವಹಿಸಿದ್ದರು.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Lakme Fashion Week: ಲ್ಯಾಕ್ಮೆ ಫ್ಯಾಷನ್ ವೀಕ್; ಏನು ಈ ಬಾರಿಯ ವಿಶೇಷ?