Site icon Vistara News

Fashion Show News: ಪ್ರೈಮ್‌ ಫ್ಯಾಷನ್‌ ವೀಕ್‌ನಲ್ಲಿ ಶ್ವೇತಾ ನಂದಕುಮಾರ್‌ ಚೀತಾ ಪ್ರಿಂಟ್ಸ್‌ ಡಿಸೈನರ್‌ವೇರ್ಸ್‌

Fashion Show News

ಶೀಲಾ ಸಿ. ಶೆಟ್ಟಿ, ಬೆಂಗಳೂರು

ಉದ್ಯಾನನಗರಿಯಲ್ಲಿ ನಡೆದ ಪ್ರೈಮ್‌ ಫ್ಯಾಷನ್‌ ವೀಕ್‌ ಸೀಸನ್‌ 2ರ ಫ್ಯಾಷನ್‌ ವೀಕ್‌ನಲ್ಲಿ ಬೆಂಗಳೂರಿನ ಡಿಸೈನರ್‌, ಕನ್ನಡತಿ ಶ್ವೇತಾ ನಂದಕುಮಾರ್‌ ಅವರ ಬ್ರಾಂಡ್‌ನ ಎಕ್ಸ್‌ಕ್ಲೂಸೀವ್‌ ಚೀತಾ ಪ್ರಿಂಟ್‌ ಇರುವ ಡಿಸೈನರ್‌ವೇರ್‌ಗಳನ್ನು ಧರಿಸಿದ ಪ್ರೊಫೆಷನಲ್‌ ಮಾಡೆಲ್‌ಗಳು ರ್ಯಾಂಪ್‌ ವಾಕ್‌ (Fashion Show News) ಮಾಡಿ ನೋಡುಗರ ಮನ ಸೆಳೆದರು.

ಅನಿಮಲ್‌ ಇನ್​ಸ್ಟಿಕ್ಟ್​ ಥೀಮ್‌

ಎಸ್‌ಎನ್‌ಕೆ ಫ್ಯಾಷನ್‌ ಹೌಸ್‌ ಮತ್ತು ಸ್ಟೈಲ್‌ ಸ್ಟುಡಿಯೋನ ಸ್ಯಾಂಡ್‌ ಲೆಬೆಲ್‌ನ ಶ್ವೇತಾ ನಂದಕುಮಾರ್‌ ಅವರ ಇಮ್ಯಾಜೀನೇಷನ್‌ನಲ್ಲಿ ಸಿದ್ಧಪಡಿಸಿದ ಅನಿಮಲ್‌ ಇನ್‌ಸ್ಟಿಕ್ಟ್‌ ಆಧಾರಿತ ಚೀತಾ ಪ್ರಿಂಟ್‌ನ ಈ ಡಿಸೈನರ್‌ವೇರ್‌ಗಳು ನಾನಾ ವಿನ್ಯಾಸದಲ್ಲಿ ರೂಪುಗೊಂಡಿದ್ದವು. ನೋಡಲು ಅತ್ಯಾಕರ್ಷಕವಾಗಿದ್ದ ಈ ಡಿಸೈನರ್‌ವೇರ್‌ಗಳು ನಮ್ಮ ಸುತ್ತಮುತ್ತಲಿನ ಪರಿಸರ ಹಾಗೂ ವೈಲ್ಡ್‌ಲೈಫ್‌ಗೆ ಸನಿಹವಾಗಿದೆ.

ಚೀತಾ ಪ್ರಿಂಟ್‌ನಲ್ಲಿ ಕಾಕ್‌ಟೇಲ್‌ ಡಿಸೈನರ್‌ವೇರ್‌

ಸುಮಾರು 1 ದಶಕಗಳಿಂದ ಫ್ಯಾಷನ್‌ ಕ್ಷೇತ್ರದಲ್ಲಿ ನಿರತವಾಗಿರುವ ಡಿಸೈನರ್‌ ಶ್ವೇತಾ ನಂದಕುಮಾರ್‌, ಮೂಲತಃ ಕಾರ್ಪೋರೇಟ್‌ ಉದ್ಯೋಗಿ. ಫ್ಯಾಷನ್‌ ನನ್ನ ಪ್ಯಾಷನ್‌ ಎನ್ನುವ ಶ್ವೇತಾ ಈಗಾಗಲೇ ಸಾಕಷ್ಟು ಡಿಸೈನರ್‌ವೇರ್‌ಗಳನ್ನು ಡಿಸೈನ್‌ ಮಾಡಿದ್ದಾರೆ. ತಮ್ಮದೇ ಆದ ಬೋಟಿಕ್‌ ಕೂಡ ಹೊಂದಿದ್ದಾರೆ. ಇದೀಗ ಪ್ರೈಮ್‌ ಫ್ಯಾಷನ್‌ ವೀಕ್‌ನ ಸೀಸನ್‌-2 ನಲ್ಲಿ ವೈಲ್ಡ್‌ಲೈಫ್‌ಗೆ ಸನಿಹವೆನಿಸುವ ಚೀತಾ ಪ್ರಿಂಟ್‌ನಲ್ಲಿ ನಾನಾ ಕಾಕ್‌ಟೇಲ್‌ ಡಿಸೈನ್‌ನ ಡಿಸೈನರ್‌ಗಳನ್ನು ವಿನ್ಯಾಸಗೊಳಿಸಿದ್ದಾರೆ.

ಡಿಸೈನರ್‌ ಶ್ವೇತಾ ನಂದಕುಮಾರ್‌ ಫ್ಯಾಷನ್‌ ಮಾತು

“ನನ್ನ ಲೆಬೆಲ್‌ನ ಸಾಕಷ್ಟು ಕಲೆಕ್ಷನ್‌ಗಳು ಪರಿಸರ, ಪ್ರಕೃತಿಗೆ ಸಂಬಂಧಿಸಿದ್ದಾಗಿವೆ. ಕಳೆದ ಬಾರಿ ಡಿಸೈನರ್‌ವೇರ್‌ಗಳು ಗ್ಯಾಲಕ್ಸಿ, ಸ್ಟಾರ್ಸ್‌ ಕುರಿತಾಗಿತ್ತು. ಈ ಬಾರಿ ವೈಲ್ಡ್‌ಲೈಫ್‌ ಕೆಟಗರಿಗೆ ಸಂಬಂಧಿಸಿದ್ದಾಗಿದೆ. ಚೀತಾ ಪ್ರಿಂಟ್ಸ್‌ನ ಡಿಸೈನರ್‌ವೇರ್‌ಗಳಲ್ಲಿ ಬೋಲ್ಡ್‌ನೆಸ್‌ ತೋರಿಸಿದ್ದೇನೆ. ಫ್ಯಾಷನ್‌ಗೆ ಹೇಳಿ ಮಾಡಿಸಿದ ವೈಲ್ಡ್‌ ಪ್ರಿಂಟ್ಸ್‌ ಚೀತಾ ಪ್ರಿಂಟ್ಸ್‌ ಎನ್ನಬಹುದು” ಎನ್ನುತ್ತಾರೆ ಡಿಸೈನರ್‌ ಶ್ವೇತಾ ನಂದಕುಮಾರ್.

ಫ್ಯಾಷನ್‌ವೀಕ್‌ನಲ್ಲಿ ನಾನಾ ಡಿಸೈನರ್‌ಗಳ ಪಾಲ್ಗೊಳ್ಳುವಿಕೆ

ಈ ಫ್ಯಾಷನ್‌ ವೀಕ್‌ನಲ್ಲಿ ರೂಪಾ ಸುಧಾ ಅವರ ಗಂಗಾಧರ್‌ ಲೆಬೆಲ್‌, ತನು ಗೌಡ ಅವರ ಮಿಸ್ಟಿಕ್‌ ಡಿಸೈನ್‌, ಒಡೆಟ್‌, ಸೆಕ್ಯೂರ್‌ ಎಕ್ಸ್‌ಕ್ಲೂಸೀವ್‌, ಮೈಕಲ್‌ ಸಾಲಿನ್ಸ್‌, ಶ್ರೀಕೃಷ್ಣ ಡೈಮಂಡ್ಸ್‌ ಹೀಗೆ ನಾನಾ ಬ್ರಾಂಡ್‌ಗಳ ಡಿಸೈನರ್‌ವೇರ್‌ ಹಾಗೂ ಪ್ರಾಡಕ್ಟ್ಸ್ ಧರಿಸಿದ ಮಾಡೆಲ್‌ಗಳು ರನ್‌ವೇ ವಾಕ್‌ ಮಾಡಿದರು.

(ಲೇಖಕಿ : ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Big Nosepin Fashion: ಜ್ಯುವೆಲ್‌ ಫ್ಯಾಷನ್‌ನಲ್ಲಿ ಟ್ರೆಂಡಿಯಾದ ಕಾಸಗಲದ ಮೂಗುತಿ

Exit mobile version