Site icon Vistara News

Festive Earrings Trend: ಫೆಸ್ಟಿವ್‌ ಸೀಸನ್‌ ಗ್ರ್ಯಾಂಡ್‌ ಲುಕ್‌ಗೆ ಬಂತು ಜಗಮಗಿಸುವ 5 ಆಕರ್ಷಕ ಇಯರಿಂಗ್ಸ್

Festive Earrings Trend

ಶೀಲಾ ಸಿ. ಶೆಟ್ಟಿ, ಬೆಂಗಳೂರು

ಈದ್‌ ಮಿಲಾದ್‌ ಹಬ್ಬದ ಸಂಭ್ರಮಕ್ಕೆ ಸಾಥ್‌ ನೀಡುವ ಜಗಮಗಿಸುವ ಇಯರಿಂಗ್‌ಗಳು (Festive Earrings Trend) ಮಾರುಕಟ್ಟೆಗೆ ಕಾಲಿಟ್ಟಿದ್ದು, ಇದೀಗ ಟ್ರೆಂಡಿಯಾಗಿವೆ. ನೋಡಲು ಆಕರ್ಷಕವಾಗಿ ಕಾಣುವ ನಾನಾ ವಿನ್ಯಾಸದ ಈ ಬಿಗ್‌ ಇಯರಿಂಗ್‌ಗಳು ಬೇಡಿಕೆ ಹೆಚ್ಚಿಸಿಕೊಂಡಿವೆ.

“ಪ್ರತಿ ಹಬ್ಬಕ್ಕೂ ಆಯಾ ಸಮುದಾಯದವರು ಹೆಚ್ಚಾಗಿ ಧರಿಸುವ ಇಯರಿಂಗ್ಸ್ ಕಾಲಿಡುತ್ತವೆ. ಅದರಲ್ಲೂ ಹಬ್ಬಗಳೆಂದರೇ ಕೇಳಬೇಕೇ! ಆದಷ್ಟೂ ಜಗಮಗಿಸುವಂತಹ ಗ್ರ್ಯಾಂಡ್‌ ಲುಕ್‌ ನೀಡುವಂತವು ಪ್ರತಿ ಬಾರಿಯೂ ಆಗಮಿಸುತ್ತವೆ. ಇದಕ್ಕೆ ಪೂರಕ ಎಂಬಂತೆ, ಬಂಗಾರದ್ದು ಮಾತ್ರವಲ್ಲ, ಗೋಲ್ಡ್ ಪ್ಲೇಟೆಡ್‌, ವನ್‌ ಗ್ರಾಮ್‌ ಗೋಲ್ಡ್‌ ಹಾಗೂ ಇಮಿಟೇಷನ್‌ ಇಯರಿಂಗ್‌ಗಳು ಎಂಟ್ರಿ ನೀಡಿವೆ. ಫೆಸ್ಟಿವ್‌ ಸೀಸನ್‌ಗೆ ಮ್ಯಾಚ್‌ ಆಗುವಂತ ಗ್ರ್ಯಾಂಡ್‌ ವಿನ್ಯಾಸದಲ್ಲಿ ಲಗ್ಗೆ ಇಟ್ಟಿವೆ” ಎನ್ನುತ್ತಾರೆ ಜ್ಯುವೆಲ್‌ ಸ್ಟೈಲಿಸ್ಟ್‌ಗಳು.

ಟ್ರೆಂಡ್‌ನಲ್ಲಿರುವ ಇಯರಿಂಗ್ಸ್

ಈ ಫೆಸ್ಟಿವ್‌ ಸೀಸನ್‌ನಲ್ಲಿ ಟ್ರೆಂಡ್‌ನಲ್ಲಿರುವ ಇಯರಿಂಗ್‌ಗಳಲ್ಲಿ ಇದೀಗ ಬಿಗ್‌ ಚಾಂದ್‌ಬಾಲಿ, ಶ್ಯಾಂಡೆಲಿಯರ್‌ ಡ್ಯಾಂಗ್ಲಿಂಗ್ಸ್, ಕುಂದನ್ ಹ್ಯಾಂಗಿಂಗ್ಸ್, ಟರ್ಕಿಶ್ ಇಯರಿಂಗ್ಸ್, ಬಾಲಿವುಡ್‌ ಸ್ಟೈಲ್‌ ಕುಂದನ್‌ ಇಯರಿಂಗ್ಸ್ ಸೇರಿವೆ. ಲೆಕ್ಕವಿಲ್ಲದಷ್ಟು ಡಿಸೈನ್‌ನಲ್ಲಿ ಇವು ಬಿಡುಗಡೆಗೊಂಡಿದ್ದು, ಫ್ಯಾನ್ಸಿ ಶಾಪ್‌ಗಳಲ್ಲಿ ಮಾತ್ರವಲ್ಲ, ಆನ್‌ಲೈನ್‌ನಲ್ಲೂ ದೊರೆಯುತ್ತಿವೆ.

ಬಿಗ್‌ ಮಲ್ಟಿ ಲೆಯರ್‌ ಚಾಂದ್‌ಬಾಲಿ

ಬಿಗ್‌ ಮಲ್ಟಿ ಲೇಯರ್‌ ಲುಕ್‌ ಇರುವಂತಹ ಚಾಂದಬಾಲಿ ಇದೀಗ ಹೆಚ್ಚು ಟ್ರೆಂಡ್‌ನಲ್ಲಿವೆ. ಒಂದರ ಬದಲು ಎರಡು ಚಂದ್ರನ ಆಕಾರದೊಂದಿಗೆ ಸಾಲು ಸಾಲು ಮುತ್ತಿನ ಲೈನ್‌ಗಳಿಂದ ಸಿಂಗಾರಗೊಂಡಿರುವಂತವು ಬಂದಿವೆ.

ಶ್ಯಾಂಡೆಲಿಯರ್‌ ಡ್ಯಾಂಗ್ಲಿಂಗ್ಸ್

ನೋಡಲು ಭುಜವನ್ನು ಮುಟ್ಟತ್ತವೆ ಎನಿಸುವ ಉದ್ದನೆಯ ಶ್ಯಾಂಡೆಲಿಯರ್‌ ಇಯರಿಂಗ್ಸ್‌ನಲ್ಲಿ ಇದೀಗ ಮುತ್ತು, ಬೀಡ್ಸ್ ಹಾಗೂ ನಾನಾ ವರ್ಣದ ಮಣಿಗಳಿರುವ ಗ್ರ್ಯಾಂಡ್‌ ಲುಕ್‌ ನೀಡುವ ಡಿಸೈನ್‌ನವು ಚಾಲ್ತಿಯಲ್ಲಿವೆ.

ಕುಂದನ್ ಹ್ಯಾಂಗಿಂಗ್ಸ್

ಚಿಕ್ಕ ಚಿಕ್ಕ ಕನ್ನಡಿಯಂತೆ ಕಾಣುವ ಕುಂದನ್‌ ಡಿಸೈನ್‌ನ ದೊಡ್ಡದಾದ ಕಿವಿಯೊಲೆ ಹಾಗೂ ಅದಕ್ಕೆ ಅಟ್ಯಾಚ್‌ ಆದಂತಿರುವ ಹ್ಯಾಂಗಿಂಗ್ಸ್‌ ಇದೀಗ ಮನಮೋಹಕ ವಿನ್ಯಾಸದಲ್ಲಿ ಎಂಟ್ರಿ ನೀಡಿವೆ.

ಟರ್ಕಿಶ್‌ ಇಯರಿಂಗ್ಸ್

ನೋಡಲು ವಿಭಿನ್ನ ವಿನ್ಯಾಸ ಎಂದೆನಿಸುವ ಟರ್ಕಿಶ್‌ ವಿನ್ಯಾಸದ ಇಯರಿಂಗ್‌ಗಳು ಕಂಪ್ಲೀಟ್‌ ಗೋಲ್ಡ್‌ ಕೋಟೆಡ್‌ ಹಾಗೂ ಇಮಿಟೇಷನ್‌ ಆಭರಣಗಳ ಕೆಟಗರಿಯಲ್ಲಿ ಸಿಗುತ್ತವೆ. ಇವು ಗೋಲ್ಡನ್‌ ಲುಕ್‌ಗೆ ಸಹಕಾರಿ.

ಬಾಲಿವುಡ್‌ ಸ್ಟೈಲ್‌ ಹ್ಯಾಂಗಿಂಗ್ಸ್

ಉಡುಪಿಗೆ ಮ್ಯಾಚ್‌ ಆಗುವಂತಹ ಬಾಲಿವುಡ್‌ ಸ್ಟೈಲ್‌ಗೆ ಸಾಥ್‌ ನೀಡುವ ಸ್ಟೇಟ್‌ಮೆಂಟ್‌ ಇಯರಿಂಗ್ಸ್‌, ನಾನಾ ಬಣ್ಣದ ಡಿಸೈನರ್‌ವೇರ್‌ಗಳಿಗೆ ಮ್ಯಾಚ್‌ ಆಗುವಂತಹ ಡಿಸೈನ್‌ಗಳಲ್ಲಿ ದೊರೆಯುತ್ತಿವೆ.

(ಲೇಖಕಿ : ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Salwar Suit Fashion: ಈದ್‌ ಮಿಲಾದ್‌ ಫೆಸ್ಟಿವ್‌ ಸಂಭ್ರಮಕ್ಕೆ ಎಂಟ್ರಿ ನೀಡಿದ ಆ್ಯಂಕೆಲ್‌ ಲೆಂಥ್ ಸಲ್ವಾರ್‌ ಸೂಟ್ಸ್

Exit mobile version