Site icon Vistara News

Festive Fashion | ಗೌರಿ ಹಬ್ಬಕ್ಕೆ ಬಂತು ಮಿನುಗುವ ಮ್ಯಾಚಿಂಗ್‌ ಗಾಜಿನ ಬಳೆಗಳು

Festive Fashion

ಶೀಲಾ ಸಿ. ಶೆಟ್ಟಿ, ಬೆಂಗಳೂರು

ಗೌರಿ ಹಬ್ಬಕ್ಕೆ ವಿಶೇಷವಾಗಿ ನಾನಾ ವರ್ಣದ ಡಿಸೈನ್‌ ಇರುವಂತಹ ಮಿನುಗುವ ಮ್ಯಾಚಿಂಗ್‌ ಗಾಜಿನ ಬಳೆಗಳು ಎಂಟ್ರಿ ನೀಡಿವೆ.

ಹಬ್ಬದ ಸಂಭ್ರಮ ಹೆಚ್ಚಿಸಲು ಲೆಕ್ಕವಿಲ್ಲದಷ್ಟು ಡಿಸೈನ್‌ನಲ್ಲಿ ಈ ಗಾಜಿನ ಬಳೆಗಳು ಬಂದಿದ್ದು, ಎಲ್ಲಾ ವಯೋಮಾನದ ಹೆಣ್ಣುಮಕ್ಕಳ ಮನ ಸೆಳೆದಿವೆ. ನೋಡಲು ಒಂದಕ್ಕಿಂತ ಒಂದು ಡಿಸೈನ್‌ ಮನಮೋಹಕವಾಗಿದ್ದು, ಹಬ್ಬ ಸಮೀಪಿಸುತ್ತಿದ್ದಂತೆಯೇ ಕೊಳ್ಳುಗರ ಸಂಖ್ಯೆ ಹೆಚ್ಚಾಗಿದೆ.

ಮಿನುಗುವ ಗಾಜಿನ ಬಳೆಗಳು

ಹಸಿರು, ಕೆಂಪು, ಹಳದಿ, ಗುಲಾಬಿ, ಮೆಜೆಂಟಾ ಹೀಗೆ ನಾನಾ ವರ್ಣಗಳಲ್ಲಿ ಲಭ್ಯವಿರುವ ಗಾಜಿನ ಬಳೆಗಳು ಇಂದು ಹೊಸ ವಿನ್ಯಾಸದಲ್ಲೂ ಬಂದಿವೆ. ಬಾಕ್ಸ್‌ ಗಾಜಿನ ಬಳೆಗಳೆಂದೇ ಕರೆಯಲ್ಪಡುವ ಈ ಗಾಜಿನ ಬಳೆಗಳಿಗೆ ಇದೀಗ ಹೊಸ ರೂಪ ದೊರೆತಿದೆ. ಗೋಲ್ಡನ್‌ ವರ್ಣ ಮಿಕ್ಸ್‌ ಆದಂತವು ಚಾಲ್ತಿಯಲ್ಲಿವೆ. ಇನ್ನು ಕಂಪ್ಲೀಟ್‌ ಗೋಲ್ಡ್‌ ಹಾಗೂ ಸಿಲ್ವರ್‌ನವು ಲಭ್ಯ. ಅಷ್ಟೇಕೆ! ನೋಡಲು ಥೇಟ್‌ ಗೋಲ್ಡ್ ಮೆಟಲ್‌ನಂತೆ ಕಾಣುವಂತಹ ಗಾಜಿನ ಬಳೆಗಳು ಲಭ್ಯ ಎನ್ನುತ್ತಾರೆ ಬಳೆ ಮಾರಾಟಗಾರರು.

ಬಣ್ಣಬಣ್ಣದ ಥ್ರೆಡ್‌ ಗಾಜಿನ ಬಳೆಗಳು

ಬಣ್ಣಬಣ್ಣದ ದಾರ ಸುತ್ತಿರುವ ಸಾದಾ ವರ್ಣದ ಥ್ರೆಡ್‌ ಗಾಜಿನ ಬಳೆಗಳು ಈ ಬಾರಿಯ ಹಬ್ಬಕ್ಕೆ ಆಗಮಿಸಿವೆ. ಇವು ನೋಡಲು ತಕ್ಷಣಕ್ಕೆ ಮೆಟಲ್‌ ಬಳೆಗಳು ಎಂದನಿಸುತ್ತವೆ. ಹೆಚ್ಚು ಘಲ್‌ ಎನ್ನುವುದಿಲ್ಲ. ಬದಲಿಗೆ ಯಾವುದೇ ಮ್ಯಾಚಿಂಗ್‌ಗೆ ಬೇಕಾಗುವ ವರ್ಣದಲ್ಲಿ ಡಜನ್‌ ಲೆಕ್ಕದಲ್ಲಿ ದೊರೆಯುತ್ತವೆ. ನೋಡಲು ಕೂಡ ಆಕರ್ಷಕವಾಗಿ ಕಾಣುತ್ತವೆ. ಟ್ರೆಂಡಿಯಾಗಿವೆ ಎನ್ನುತ್ತಾರೆ ಮಾರಾಟಗಾರರು.

ಗೌರಿಗೆ ಶ್ರೇಷ್ಠ ಈ ಗಾಜಿನ ಬಳೆಗಳು

ಹೆಣ್ಣು ಮಕ್ಕಳು ಗಾಜಿನ ಬಳೆಗಳನ್ನು ಧರಿಸುವುದು ಸಮೃದ್ಧಿಯ ಸಂಕೇತ. ಅದರಲ್ಲೂ ಹಬ್ಬದಂದು ಗೌರಿಯ ಪೂಜೆಗೆ ಗಾಜಿನ ಬಳೆಗಳನ್ನು ಇರಿಸಲಾಗುತ್ತದೆ. ಮನೆಗೆ ಬಂದ ಹೆಣ್ಣುಮಕ್ಕಳಿಗೂ ಬಳೆಗಳನ್ನು ನೀಡುವುದು ಶ್ರೇಷ್ಠ ಎಂಬುದಾಗಿ ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ಹಾಗಾಗಿ ಪ್ರತಿ ಗೌರಿ ಹಬ್ಬಕ್ಕೂ ಬಾಗಿನದ ಜತೆಗೆ ಹೆಣ್ಣುಮಕ್ಕಳಿಗೆ ಡಜನ್‌ಗಟ್ಟಲೆ ಗಾಜಿನ ಬಳೆಗಳನ್ನು ನೀಡುವುದು ಸಾಮಾನ್ಯವಾಗಿದೆ. ಅಷ್ಟು ಮಾತ್ರವಲ್ಲ, ಗಾಜಿನ ಬಳೆಗಳನ್ನು ಧರಿಸುವುದರಿಂದ ಸುತ್ತಮುತ್ತಲಿರುವ ನೆಗೆಟಿವ್‌ ಎನರ್ಜಿ ದೂರಾಗುತ್ತದೆ. ಪಾಸಿಟಿವ್‌ ಎನರ್ಜಿ ಎಲ್ಲೆಡೆ ಹರಡಿಸುವ ಶಕ್ತಿ ಇವುಗಳಿಗಿದೆಯಂತೆ ಹಾಗೆನ್ನುತ್ತಾರೆ ಸ್ಪಿರಿಚ್ಯುವಲ್‌ ಎಕ್ಸ್‌ಪರ್ಟ್ ಆರತಿ. ಅವರ ಪ್ರಕಾರ, ಗಾಜಿನ ಬಳೆಗಳನ್ನು ಧರಿಸುವುದರಿಂದ ನಮ್ಮತನ ಹಾಗೂ ಸಂಸ್ಕೃತಿಯನ್ನು ಕಾಪಾಡಿದಂತಾಗುತ್ತದಂತೆ.

ಇನ್ನು, ಮದುವೆ ಹಾಗೂ ನಿಶ್ಚಿತಾರ್ಥದಲ್ಲಿ ಮದುಮಗಳು ಗಾಜಿನ ಬಳೆಗಳನ್ನು ಧರಿಸುವ ರಿವಾಜು ಇಂದಿಗೂ ಮುಂದುವರೆದಿದೆ.

ಗಾಜಿನ ಬಳೆ ಪ್ರಿಯರಿಗೆ ಒಂದಿಷ್ಟು ಸಲಹೆ:

(ಲೇಖಕಿ: ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ| Festive Shopping | ವಾರಕ್ಕೂ ಮುನ್ನವೇ ಆರಂಭವಾದ ಗೌರಿ-ಗಣೇಶನ ಹಬ್ಬದ ಶಾಪಿಂಗ್

Exit mobile version