Site icon Vistara News

Festive Fashion: ಗೌರಿ-ಗಣೇಶ ಹಬ್ಬದ ಸಂಭ್ರಮಕ್ಕೆ ರೇಷ್ಮೆಯ ಲಂಗ-ದಾವಣಿ

Festive Fashion

ಶೀಲಾ ಸಿ. ಶೆಟ್ಟಿ, ಬೆಂಗಳೂರು
ಗೌರಿ-ಗಣೇಶ ಹಬ್ಬದ ಸಂಭ್ರಮ ಹೆಚ್ಚಿಸಲು ರೇಷ್ಮೆಯ ಡಿಸೈನರ್‌ ಲಂಗ-ದಾವಣಿಗಳು ಫ್ಯಾಷನ್‌ ಲೋಕಕ್ಕೆ ಕಾಲಿಟ್ಟಿವೆ. ನೋಡಲು ಅತ್ಯಾಕರ್ಷಕ ಡಿಸೈನ್‌ನಲ್ಲಿ ಬಿಡುಗಡೆಗೊಂಡಿರುವ ಈ ಲಂಗ-ದಾವಣಿ ಈಗಾಗಲೇ ಹೆಣ್ಣುಮಕ್ಕಳ ಮನ ಗೆದ್ದಿವೆ. ಸಾಂಪ್ರದಾಯಿಕ ಉಡುಗೆ ಧರಿಸಿ ಹಬ್ಬ ಆಚರಿಸುವ ಹೆಣ್ಣುಮಕ್ಕಳಿಗೆ ಹೊಂದುವಂತಹ ವಿನ್ಯಾಸಗಳಲ್ಲಿ ಇವುಗಳನ್ನು ಸಿದ್ಧಪಡಿಸಲಾಗಿದೆ.

ಕಾಂಟ್ರಾಸ್ಟ್‌ ಕಾಂಬಿನೇಷನ್‌ನಲ್ಲಿ ಲಂಗ-ದಾವಣಿ

ಮೊದಲೆಲ್ಲ ಲಂಗ ದಾವಣಿ ಎಂದಾಕ್ಷಣ ಒಂದೇ ವರ್ಣದ ರೇಷ್ಮೆಯ ಫ್ಯಾಬ್ರಿಕ್‌ ಅಥವಾ ಸೀರೆಯಲ್ಲಿ ಹೊಲಿಸಲಾಗುತ್ತಿತ್ತು. ಆದರೆ, ಈಗ ಹಾಗಿಲ್ಲ. ಲಂಗ ರೇಷ್ಮೆಯದ್ದಾದರೆ, ಅದಕ್ಕೆ ಹೊಂದುವಂತಹ ಬ್ಲೌಸನ್ನು ಇತರೇ ಫ್ಯಾಬ್ರಿಕ್‌ನಲ್ಲಿ ಸಿದ್ಧಪಡಿಸಲಾಗುತ್ತದೆ. ಕಾಂಟ್ರಾಸ್ಟ್‌ ವರ್ಣಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಲಾಗುತ್ತದೆ. ಎಲ್ಲದಕ್ಕಿಂತ ಹೆಚ್ಚಾಗಿ ದಾವಣಿಗೆ ಅತಿ ಹೆಚ್ಚು ಆದ್ಯತೆ ನೀಡಲಾಗುತ್ತದೆ. ಇದಕ್ಕಾಗಿ ನೋಡಲು ಅತ್ಯಾಕರ್ಷಕವಾಗಿ ಕಾಣುವಂತಹ ಫ್ಯಾಬ್ರಿಕ್‌ ಆರಿಸಿಕೊಳ್ಳಲಾಗುತ್ತದೆ. ಒಟ್ಟಿನಲ್ಲಿ ಇಡೀ ಉಡುಗೆಗೆ ಟ್ರಡಿಷನಲ್‌ ಟಚ್‌ ನೀಡಲಾಗುತ್ತದೆ. ಸೌತ್‌ ಇಂಡಿಯನ್‌ ಲುಕ್‌ನ ಲಂಗ-ದಾವಣಿಗೆ ರಾಯಲ್‌ ಲುಕ್‌ ನೀಡಲಾಗುತ್ತದೆ ಎನ್ನುತ್ತಾರೆ ಸೆಲೆಬ್ರಿಟಿ ಫ್ಯಾಷನ್‌ ಡಿಸೈನರ್‌ ಸಿಂಧೂ ರೆಡ್ಡಿ.

ಅವರ ಪ್ರಕಾರ, ಲಂಗ-ದಾವಣಿಯು ಈ ಸಾಲಿನ ಟ್ರಡಿಷನಲ್‌ ಡ್ರೆಸ್‌ಕೋಡ್‌ನಲ್ಲಿ ಟಾಪ್‌ ಲಿಸ್ಟ್‌ನಲ್ಲಿದೆ. ಹೆಣ್ಣು ಮಕ್ಕಳು ಹಬ್ಬಗಳಲ್ಲಿ ಮಾತ್ರವಲ್ಲ, ಮದುವೆ ಹಾಗೂ ಮನೆಯ ಇನ್ನಿತರೇ ಸಮಾರಂಭಗಳಲ್ಲೂ ಧರಿಸುವಂತಹ ನಾನಾ ವಿನ್ಯಾಸಗಳಲ್ಲಿ ಇವು ಬಿಡುಗಡೆಗೊಂಡಿವೆ. ನೋಡಲು ಸಾಂಪ್ರದಾಯಿಕ ಲುಕ್‌ ನೀಡುವ ಈ ಲಂಗ-ದಾವಣಿ ಫೆಸ್ಟೀವ್‌ ಸೀಸನ್‌ನ ಡ್ರೆಸ್‌ಕೋಡ್‌ ಎಂದರೂ ಅತಿಶಯೋಕ್ತಿಯಾಗದು ಎನ್ನುತ್ತಾರೆ.

ಕಸ್ಟಮೈಸ್ಡ್‌ ವಿನ್ಯಾಸದ ಲಂಗ-ದಾವಣಿ

ಲಂಗ-ದಾವಣಿಗಳು ಆದಷ್ಟು ಸೆಮಿ ಸ್ಟಿಚ್ಡ್‌ ಶೈಲಿಯಲ್ಲಿ ದೊರೆಯುತ್ತವೆ. ಆಯಾ ಹೆಣ್ಣುಮಕ್ಕಳ ಪರ್ಸನಾಲಿಟಿಗೆ ತಕ್ಕಂತೆ ಬೊಟಿಕ್‌ ಇಲ್ಲವೇ ಟೈಲರ್‌ ಬಳಿ ಹೊಲಿಸಬೇಕಾಗುತ್ತದೆ. ಸೆಮಿ ಸ್ಟಿಚ್‌ನಲ್ಲಿ ಫ್ಯಾಬ್ರಿಕ್‌ ದೊರೆಯುವುದರಿಂದ ಕಡಿಮೆ ಸಮಯದಲ್ಲಿ ಇವನ್ನು ಸಿದ್ಧಪಡಿಸಬಹುದು ಎನ್ನುತ್ತಾರೆ ಬೊಟಿಕ್‌ನ ಡಿಸೈನರ್‌ಗಳು.

ಮಲ್ಟಿ ಕಲರ್‌ ಡಿಸೈನರ್‌ ದಾವಣಿ ಲಂಗ

ಒಂದು ಕಲರ್‌ನ ಬ್ಲೌಸ್‌, ಮತ್ತೊಂದು ರೇಷ್ಮೆಯ ಫ್ಯಾಬ್ರಿಕ್‌ನ ಲಂಗ, ಇದಕ್ಕೆ ಗ್ರ್ಯಾಂಡ್‌ ಲುಕ್‌ ನೀಡುವಂತಹ ವಿನ್ಯಾಸದ ದುಪಟ್ಟಾ, ಹೀಗೆ ಮಲ್ಟಿ ಕಲರ್‌ನ ಲಂಗ-ದಾವಣಿ ಸೆಟ್‌ ಇಂದು ಟಿನೇಜ್‌ ಹುಡುಗಿಯರನ್ನು ಹೆಚ್ಚು ಆಕರ್ಷಿಸುತ್ತಿವೆ ಎನ್ನುತ್ತಾರೆ ಮಾಡೆಲ್‌ ಅಶ್ವಿನಿ ಚಾವ್ರೆ. ನಮ್ಮ ಸಂಸ್ಕೃತಿಯನ್ನು ಬಿಂಬಿಸುವ ಈ ರೇಷ್ಮೆಯ ಲಂಗ-ದಾವಣಿ, ಹಬ್ಬದ ಸಂಭ್ರಮವನ್ನು ಇಮ್ಮಡಿಗೊಳಿಸುತ್ತವೆ ಎನ್ನುತ್ತಾರೆ.

ಲಂಗ-ದಾವಣಿ ಪ್ರಿಯರಿಗೆ ಟಿಪ್ಸ್‌:

(ಲೇಖಕಿ : ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ| Festive Fashion | ಗೌರಿ ಹಬ್ಬಕ್ಕೆ ಬಂತು ಮಿನುಗುವ ಮ್ಯಾಚಿಂಗ್‌ ಗಾಜಿನ ಬಳೆಗಳು

Exit mobile version