ಶೀಲಾ ಸಿ. ಶೆಟ್ಟಿ, ಬೆಂಗಳೂರು
ಫೆಸ್ಟಿವ್ ಸೀಸನ್‌ನಲ್ಲಿ ಯುವತಿಯರ ಸಂಭ್ರಮ ಹೆಚ್ಚಿಸಲು ಕೋ ಆರ್ಡ್ ಸೆಟ್‌ನಂತೆ ಕಾಣುವ ಡಿಸೈನರ್ ಲಂಗ-ದಾವಣಿಗಳು ಫ್ಯಾಷನ್ ಲೋಕಕ್ಕೆ ಕಾಲಿಟ್ಟಿವೆ (Festive Fashion). ಹೌದು. ಈ ಬಾರಿಯ ಗೌರಿ-ಗಣೇಶ ಹಬ್ಬದ ಸೆಲೆಬ್ರೇಷನ್‌ಗಾಗಿ ವೈವಿಧ್ಯಮಯ ಕೋ ಆರ್ಡ್ ಸೆಟ್‌ನ ಲಂಗ-ದಾವಣಿಗಳು ಕಾಲಿಟ್ಟಿವೆ. ನೋಡಲು ಟ್ರೆಡಿಷನಲ್ ಆಗಿ ಕಾಣುವ ಈ ಲಂಗ –ದಾವಣಿಗಳು ಇತ್ತೀಚಿನ ಕೋ ಆರ್ಡ್ ಸೆಟ್‌ಗೆ ಹೊಂದುವಂತೆ ನಯಾ ಕಾನ್ಸೆಪ್ಟ್‌ನಲ್ಲಿ ಬಿಡುಗಡೆಗೊಂಡಿವೆ.
ಏನಿದು ಕೋ ಆರ್ಡ್ ಸೆಟ್ ಲಂಗ-ದಾವಣಿ ?
ಎಲ್ಲರಿಗೂ ಗೊತ್ತಿರುವಂತೆ, ಕಳೆದ ಸೀಸನ್‌ನಿಂದ ಇಂದಿನವರೆಗೂ ಕೋ ಆರ್ಡ್ ಸೆಟ್ ಉಡುಪುಗಳು ಟ್ರೆಂಡ್‌ನಲ್ಲಿವೆ. ಇವು ಯಾವ ಮಟ್ಟಿಗೆ ಟ್ರೆಂಡಿಯಾಗಿವೆ ಎಂದರೇ, ವೆಸ್ಟರ್ನ್ ಔಟ್‌ಫಿಟ್‌ಗಳಲ್ಲಿ ಮಾತ್ರವಲ್ಲ, ಇಂಡಿಯನ್ ಉಡುಪುಗಳಲ್ಲೂ ಕಾಣಿಸಿಕೊಳ್ಳುತ್ತಿವೆ. ಪ್ರತ್ಯೇಕವಾದ ಎರಡು, ಮೂರು ಪೀಸ್‌ನ ಉಡುಪುಗಳು ಒಂದೇ ಶೇಡ್‌ನಲ್ಲಿ ವಿನ್ಯಾಸದಲ್ಲಿ ಕಂಡು ಬರುತ್ತಿವೆ. ಅಚ್ಚರಿ ಎಂದರೇ, ಹಬ್ಬದ ಎಥ್ನಿಕ್ ಉಡುಪುಗಳಲ್ಲೂ ಈ ಕಾನ್ಸೆಪ್ಟ್ ಪರಿಚಿತಗೊಂಡಿದೆ. ಅದರಲ್ಲೂ ಲಂಗ ದಾವಣಿಯಲ್ಲೂ ಈ ರೀತಿಯ ಕಾನ್ಸೆಪ್ಟ್ ಎಂಟ್ರಿ ನೀಡಿರುವುದು ಫ್ಯಾಷನ್ ಹಿಟ್ ಆಗಿದೆ. ಎಂದಿನಂತೆ ಟ್ರೆಡಿಷನಲ್ ಲುಕ್‌ಗೆ ಸಾಥ್ ನೀಡುವ ಪಫ್ ಸ್ಲೀವ್ ಬ್ಲೌಸ್, ಜೋಡಿಸಿಟ್ಟಂತೆ ಕಾಣುವ ನೆರಿಗೆಯ ಲಂಗ ಹಾಗೂ ದುಪಟ್ಟಾ ಎಲ್ಲವೂ ಮಾನೋಕ್ರೋಮ್ ಶೇಡ್‌ನಲ್ಲಿದ್ದು, ಕೋ ಆರ್ಡ್ ಸೆಟ್‌ನಂತೆ ಕಾಣುತ್ತಿವೆ ಎನ್ನುತ್ತಾರೆ ಮಾಡೆಲ್ ಹಾಗೂ ನಟಿ ದೀಪ್ತಿ ಮೋಹನ್. ಅವರ ಪ್ರಕಾರ, ಕಾಂಟ್ರಾಸ್ಟ್ ಶೇಡ್‌ಗಳ ಲಂಗ ದಾವಣಿ ಫ್ಯಾಷನ್ ನಡುವೆ ಈ ಶೈಲಿಯವು ಇದೀಗ ಪ್ರಚಲಿತದಲ್ಲಿವೆಯಂತೆ. ಇನ್ನು, ಹಬ್ಬದ ಈ ಸೀಸನ್‌ನಲ್ಲಿ ಸಾಕಷ್ಟು ಸೆಮಿ ಸ್ಟಿಚ್ ಕೋ ಆರ್ಡ್ ಸೆಟ್ ಲಂಗ ದಾವಣಿಗಳು ಗ್ರ್ಯಾಂಡ್ ಹ್ಯಾಂಡ್‌ವರ್ಕ್ ಹಾಗೂ ಮೆಷಿನ್ ವರ್ಕ್‌ನಲ್ಲೂ ದೊರೆಯುತ್ತಿವೆ. ಆಯಾ ವಿನ್ಯಾಸಕ್ಕೆ ತಕ್ಕಂತೆ ಬೆಲೆ ನಿಗಧಿಯಾಗಿರುತ್ತದೆ ಎನ್ನುತ್ತಾರೆ ಡಿಸೈನರ್ಸ್.
ಲಂಗ ದಾವಣಿ ಕೋ ಆರ್ಡ್ ಸೆಟ್ ಆಯ್ಕೆ ಹೀಗಿರಲಿ
- ಸೆಮಿ ಸ್ಟಿಚ್ ಫ್ಯಾಬ್ರಿಕ್ನಲ್ಲಿ ದೊರಕುವ ಇವುಗಳ ಬಣ್ಣ ನಿಮ್ಮ ಸ್ಕಿನ್ ಟೋನ್ಗೆ ಮ್ಯಾಚ್ ಆಗಬೇಕು.
- ಆದಷ್ಟೂ ಫ್ರೆಶ್ ಎನಿಸುವ ಕಲರ್ಗಳ ಆಯ್ಕೆ ಮಾಡಿ.
- ಟ್ರೆಡಿಷನಲ್ ಲುಕ್‌ಗೆ ಮ್ಯಾಚ್ ಆಗುವಂತಹ ವಿನ್ಯಾಸ ಇವುಗಳದ್ದಾಗಿರಬೇಕು.
- ನೋಡಲು ದೇಸಿ ಲುಕ್ ನೀಡುವುದು ಅಗತ್ಯ.
- ದುಪಟ್ಟಾ ಕೂಡ ಒಂದೇ ಶೇಡ್ನದ್ದಾಗಿರುವುದು ಅವಶ್ಯ.
- ತ್ರೀ ಪೀಸ್ ಉಡುಪಾದ ಲಂಗ-ಬ್ಲೌಸ್-ದಾವಣಿ ಒಂದಕ್ಕೊಂದು ಹೊಂದುವಂತಿರಬೇಕು.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Gowri Ganesha Kids Fashion: ಹಬ್ಬದ ಫ್ಯಾಷನ್‌ನಲ್ಲಿ ಹೆಣ್ಣು ಮಕ್ಕಳಿಗೆ ಬಂತು ಟ್ರೆಡಿಷನಲ್ ಉದ್ದ ಲಂಗದ ಡ್ರೆಸ್