Site icon Vistara News

Festive Jewel Trend | ಹಬ್ಬಕ್ಕೆ ಟ್ರೆಂಡಿಯಾಯ್ತು ಇಮಿಟೇಷನ್ ಜುವೆಲರಿ

Festive Jewel trend

ಶೀಲಾ ಸಿ. ಶೆಟ್ಟಿ, ಬೆಂಗಳೂರು

ಬಂಗಾರದ ಒಡವೆಗಳನ್ನು ನಾಚಿಸುವ ಇಮಿಟೇಷನ್ ಜುವೆಲರಿಗಳು ಗೌರಿ-ಗಣೇಶ ಹಬ್ಬದ ಸೀಸನ್‌ನಲ್ಲಿ ಟ್ರೆಂಡಿಯಾಗಿವೆ.
ಇದಕ್ಕೆ ಕಾರಣವೂ ಇದೆ. ಆಯಾ ಸೀರೆ ಹಾಗೂ ಉಡುಪಿಗೆ ತಕ್ಕಂತೆ ಇದನ್ನು ಧರಿಸಬಹುದಾಗಿದ್ದು, ಲಕ್ಷಗಟ್ಟಲೆ ಖರ್ಚು ಮಾಡದೇ ಕೈಗೆಟಕುವ ಬೆಲೆಯಲ್ಲಿ ಕೊಳ್ಳಬಹುದಾದ ಈ ಇಮಿಟೇಷನ್ ಮಹಿಳೆಯರ ಮನ ಗೆದ್ದಿದೆ.


ಏನಿದು ಇಮಿಟೇಷನ್ ಜುವೆಲರಿಗಳು
ನೋಡಲು ಸೇಮ್ ಟು ಸೇಮ್ ಬಂಗಾರದ ಆಭರಣಗಳಂತೆ ಕಾಣುವ ಇಮಿಟೇಷನ್ ಜುವೆಲರಿಗಳು ಥೇಟ್ ಬಂಗಾರದ ಒಡವೆಗಳಂತೆಯೇ ಕಾಣುತ್ತವೆ. ಲಕ್ಷಗಟ್ಟಲೇ ಸುರಿದುಕೊಂಡು ಧರಿಸಲಾಗದಿದ್ದಲ್ಲಿ, ಇವನ್ನು ಧರಿಸಿ ಸಂತೋಷ ಪಡಬಹುದು. ಸೀರೆಗಳಿಗೆ ಹಾಗೂ ಸಾಂಪ್ರದಾಯಿಕ ಉಡುಪುಗಳಿಗೆ ಮ್ಯಾಚ್ ಆಗುವ ಇವು ನೋಡಲು ಟ್ರೆಡಿಷನಲ್ ಲುಕ್ ನೀಡುತ್ತವೆ.


ಏನೇನು ಲಭ್ಯ ?
ಲೆಕ್ಕವಿಲ್ಲದಷ್ಟು ವಿನ್ಯಾಸದಲ್ಲಿ ಇಮಿಟೇಷನ್ ಜುವೆಲರಿಗಳು ಲಭ್ಯ. ಕಿವಿಗೆ ಹಾಕುವ ಇಯರಿಂಗ್‌ಗಳಿಂದ ಹಿಡಿದು, ಚೋಕರ್, ಹಾರ, ಬಾಜುಬಂಧ್, ಕಮರ್ಬಾಂದ್, ಜುಮಕಿ, ಮಾಟಿ ಹೀಗೆ ಸಾವಿರಾರು ವಿನ್ಯಾಸದವು ಈ ಇಮಿಟೇಷನ್ ಜುವೆಲರಿಗಳಲ್ಲಿ ಲಭ್ಯ. ಚಿಕ್ಕ ಆಭರಣಗಳಿಗೆ ನೂರು ರೂ.ಗಳಿಂದ ಹಿಡಿದು ಸಾವಿರ ರೂ.ಗಳಲ್ಲಿ ಹಾರ, ನೆಕ್ಲೇಸ್ ಹಾಗೂ ಭಾರಿ ಆಭರಣಗಳು ದೊರೆಯುತ್ತವೆ. ಇಡೀ ಸೆಟ್‌ಗಳು ಸಾವಿರ ರೂ.ಗಳಲ್ಲೆ ದೊರೆಯುತ್ತವೆ. ಆದರೆ, ಇವುಗಳಲ್ಲಿ ಕೆಲವಕ್ಕೆ ಗ್ಯಾರಂಟಿ ಇರುವುದಿಲ್ಲ ಎಂಬುದು ನೆನಪಿರಲಿ ಎನ್ನುತ್ತಾರೆ ಮಾರಾಟಗಾರರು. ಟ್ರೆಂಡಿ ಬಂಗಾರದ ಆಭರಣಗಳ ವಿನ್ಯಾಸವನ್ನು ಮೀರಿಸುವಂತೆ ಇವುಗಳ ಡಿಸೈನ್‌ಗಳು ಎದ್ದು ಕಾಣುತ್ತವೆ. ವನ್ ಗ್ರಾಮ್ ಗೋಲ್ಡ್ ಹಾಗೂ ಗೋಲ್ಡ್ ಕೋಟೆಡ್‌ನಲ್ಲಿ ಇವು ದೊರೆಯುತ್ತವೆ ಎನ್ನುತ್ತಾರೆ ಇಮಿಟೇಷನ್ ಜುವೆಲರಿ ಪ್ರಿಯರಾದ ರಾಣಿ.


ತದ್ರೂಪಿ ಆಭರಣಗಳಿವು
ಅಷ್ಟೇ ಏಕೆ? ಬಂಗಾರದ ಹಾಗೂ ಡೈಮಂಡ್ ಆಭರಣಗಳ ತದ್ರೂಪದಂತಿರುವ ಈ ಆಭರಣಗಳು ಸೆಮಿ ಪ್ರಿಶಿಯಸ್ ಹಾಗೂ ಅಮೆರಿಕನ್ ಡೈಮಂಡ್ ಸೆಟ್‌ಗಳಲ್ಲೂ ದೊರೆಯುತ್ತವೆ. ಬಹಳಷ್ಟು ಮಂದಿ ಮದುವೆ ಸಮಾರಂಭಗಳಿಗೆ ಇವುಗಳನ್ನೇ ನಾಲ್ಕೈದು ಸೆಟ್ ಕೊಳ್ಳುತ್ತಾರೆ ಎನ್ನುತ್ತಾರೆ ಮಾರಾಟಗಾರರು. ಕೆಲವಕ್ಕೆ ಒಂದು ವರ್ಷ ಗ್ಯಾರಂಟಿ ಕೂಡ ಸಿಗುತ್ತದೆ. ಆಯಾ ಡಿಸೈನ್‌ಗೆ ತಕ್ಕಂತೆ ಬೆಲೆ ನಿಗದಿಯಾಗಿರುತ್ತದೆ. ವೆಡ್ಡಿಂಗ್ ಸೀಸನ್ ಹಾಗೂ ಹಬ್ಬದ ಸಮಯದಲ್ಲಿ ಇವುಗಳ ಮಾರಾಟ ಎಂದಿಗಿಂತ ಹೆಚ್ಚಾಗಿರುತ್ತದೆ ಎನ್ನುತ್ತಾರೆ ಮಾರಾಟಗಾರರು.


“ಇಮಿಟೇಷನ್ ಜುವೆಲರಿಗಳನ್ನು ಅತಿ ಹೆಚ್ಚಾಗಿ ಬಳಸುವುದು ಬ್ಯೂಟಿ ಪಾರ್ಲರ್‌ನವರು, ಮೇಕ್ಓವರ್ ಮಾಡುವವರು ಮತ್ತು ಫೋಟೋ ಶೂಟ್ ಮಾಡಿಸುವವರು” ಎನ್ನುತ್ತಾರೆ ನಟಿ, ಮಾಡೆಲ್ ಶುಭಾರಕ್ಷಾ. ಇನ್ನು ಬ್ರೈಡಲ್ ಮೇಕಪ್ ಮಾಡುವ ಮಂಗಲಾ ಅವರ ಪ್ರಕಾರ: ಇಮಿಟೇಷನ್ ಜುವೆಲರಿಗಳನ್ನು ಧರಿಸಿದಾಗ ಯಾವುದೇ ಕಳ್ಳಕಾಕರ ಭಯವಿರುವುದಿಲ್ಲ. ಆರಾಮವಾಗಿ ಓಡಾಡಿಕೊಂಡಿರಬಹುದು.


ಇಮಿಟೇಷನ್ ಜುವೆಲರಿ ಪ್ರಿಯರು ಗಮನಿಸಬೇಕಾದ ಅಂಶಗಳು:

ಇದನ್ನೂ ಓದಿ| Festive makeup | ಹಬ್ಬದ ಆಕರ್ಷಕ ಮೇಕಪ್‌ಗೆ 5 ಐಡಿಯಾ

Exit mobile version