Site icon Vistara News

Festive Jewel Fashion: ರಂಜಾನ್‌ ಫೆಸ್ಟಿವ್‌ ಸೀಸನ್‌ನಲ್ಲಿ ಟ್ರೆಂಡಿಯಾದ ಚಾಂದ್‌ ಬಾಲಿ ಇಯರಿಂಗ್ಸ್

Festive Jewel Fashion

ಶೀಲಾ ಸಿ. ಶೆಟ್ಟಿ, ಬೆಂಗಳೂರು

ರಂಜಾನ್‌ ಫೆಸ್ಟಿವ್‌ ಸೀಸನ್‌ನಲ್ಲಿ ಚಾಂದ್‌ ಬಾಲಿ ಇಯರಿಂಗ್‌ಗಳು ಮಾನಿನಿಯರ ಮನ ಗೆದ್ದಿವೆ. ಧರಿಸಿದಾಗ ಗ್ರ್ಯಾಂಡ್‌ ಆಗಿ ಕಾಣುವ ಇವು ಇದೀಗ ಲೆಕ್ಕವಿಲ್ಲದಷ್ಟು ವಿನ್ಯಾಸದಲ್ಲಿ ಬಂಗಾರ ಹಾಗೂ ಬಂಗಾರೇತರ ಲೋಹದಲ್ಲಿ ಬಿಡುಗಡೆಗೊಂಡಿವೆ.

ಬಂಗಾರದ ಚಾಂದ್‌ ಬಾಲಿ

ಮೊದೆಲೆಲ್ಲಾ ಬಂಗಾರದ ಚಾಂದ್‌ ಬಾಲಿ ಇಯರಿಂಗ್‌ಗಳನ್ನು ಮಾಡಿಸಲು ಸಾಕಷ್ಟು ಗ್ರಾಮ್‌ ಚಿನ್ನ ಬೇಕಾಗಿತ್ತು. ಆದರೆ, ಇದೀಗ ಲೈಟ್‌ವೈಟ್‌ನಲ್ಲಿ ಈ ಬಂಗಾರದ ಚಾಂದ್‌ಬಾಲಿ ಕಿವಿಯೊಲೆಗಳು ಲಭ್ಯವಿದ್ದು, ಈ ಇಯರಿಂಗ್‌ ಪ್ರಿಯರು ಕೊಳ್ಳುವ ಹಾಗಾಗಿದೆ. ಕಡಿಮೆ ಗ್ರಾಮ್‌ನಲ್ಲಿ ದೊರೆಯುತ್ತಿರುವುದರಿಂದ ಚಾಂದ್‌ಬಾಲಿ ಕಿವಿಯೊಲೆಗಳನ್ನು ಇಷ್ಟಪಡುವವರು ಖರೀದಿ ಮಾಡುವುದು ಹೆಚ್ಚಾಗಿದೆ ಎನ್ನುತ್ತಾರೆ ಜ್ಯುವೆಲ್‌ ಡಿಸೈನರ್ ರಾಜನ್‌. ಅವರ ಪ್ರಕಾರ, ಬಂಗಾರ ಚಾಂದ್‌ ಬಾಲಿ ಇಯರಿಂಗ್‌ಗಳಲ್ಲಿ ಇದೀಗ ಇದಕ್ಕೆ ಮ್ಯಾಚ್‌ ಆಗುವಂತಹ ಇತರೇ ಮ್ಯಾಚಿಂಗ್‌ ಆಭರಣಗಳು ಲಭ್ಯ ಎನ್ನುತ್ತಾರೆ ಅವರು.

ನಾನಾ ವಿನ್ಯಾಸದಲ್ಲಿ ಚಾಂದ್‌ ಬಾಲಿ ಇಯರಿಂಗ್ಸ್‌

ಬಂಗಾರೇತರ ಚಾಂದ್‌ ಬಾಲಿ ಇಯರಿಂಗ್‌ಗಳಲ್ಲಿ ಒಂದಲ್ಲ, ಎರಡಲ್ಲ ನೂರಾರು ಬಗೆಯ ಡಿಸೈನ್‌ಗಳು ಲಭ್ಯ. ಮೊದಲೆಲ್ಲಾ ಒಂದೇ ವಿನ್ಯಾಸದಲ್ಲಿ ದೊರೆಯುತ್ತಿದ್ದ ಇವು ಇದೀಗ ಮಿಕ್ಸ್‌ ಮ್ಯಾಚ್‌ ವಿನ್ಯಾಸದೊಂದಿಗೆ ದೊರೆಯುತ್ತಿವೆ. ಉದಾಹರಣೆಗೆ., ಪರ್ಲ್, ಬೀಡ್ಸ್‌, ಕುಂದನ್‌, ಎಮರಾಲ್ಡ್, ರೂಬಿ, ಅಮೆರಿಕನ್‌ ಡೈಮಂಡ್‌ವನ್ನೊಳಗೊಂಡಂತಹ ಹೂವಿನ ಕಿವಿಯೊಲೆಯೊಂದಿಗೆ, ಜುಮ್ಕಾದೊಂದಿಗೆ, ಹೂಪ್‌ನಂತಹ ಡಿಸೈನ್‌ನೊಂದಿಗೆ ಅಥವಾ ಬಿಗ್‌ ಶಾಂಡೆಲಿಯರ್‌ ಡಿಸೈನ್‌ನೊಂದಿಗೆ ಸಿಗುತ್ತಿವೆ. ಒಂದಕ್ಕಿಂತ ಒಂದು ಮನಮೋಹಕ ವಿನ್ಯಾಸದಲ್ಲಿ ದೊರೆಯುತ್ತಿದ್ದು, ಹೊಸ ರೂಪ ಪಡೆದಿವೆ. ಭುಜವನ್ನು ಮುಟ್ಟುವಂತಹ ಬಿಗ್‌ ಶ್ಯಾಂಡೆಲಿಯರ್‌ ರೂಪದ ಚಾಂದ್‌ ಬಾಲಿಗಳು ಇಂದು ಬಾಲಿವುಡ್‌ ತಾರೆಯರನ್ನು ಸೆಳೆದಿವೆ. ಅಷ್ಟೇಕೆ! ಧರಿಸುವ ಉಡುಪಿಗೆ ತಕ್ಕಂತೆ ಸ್ಟೇಟ್‌ಮೆಂಟ್‌ ಚಾಂದ್‌ ಬಾಲಿಗಳು ಕೂಡ ಇಂದು ಪ್ರಚಲಿತದಲ್ಲಿವೆ ಎನ್ನುತ್ತಾರೆ ಆಭರಣ ವಿನ್ಯಾಸಕಾರರು.

ಚಾಂದ್‌ ಬಾಲಿ ಇಯರಿಂಗ್ಸ್‌ ಪ್ರಿಯರಿಗೆ 4 ಟಿಪ್ಸ್‌

(ಲೇಖಕಿ : ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: wedding Fashion: ಸಮ್ಮರ್‌ ಗ್ರ್ಯಾಂಡ್‌ ವೆಡ್ಡಿಂಗ್‌ ಫ್ಯಾಷನ್‌ನ ಹಿಟ್‌ ಲಿಸ್ಟ್‌ಗೆ 3 ಗ್ಲಾಮರಸ್‌ ಶೈಲಿಯ ಲೆಹೆಂಗಾ

Exit mobile version