ಶೀಲಾ ಸಿ. ಶೆಟ್ಟಿ, ಬೆಂಗಳೂರು
ಹೆಣ್ಣು ಮಕ್ಕಳೇ ಹಬ್ಬದಂದು ಗೌರಿಯಂತೆ ರೆಡಿಯಾಗಿ, ಗೌರಿ ಲುಕ್‌ನಲ್ಲಿ ಕಾಣಿಸಿಕೊಳ್ಳಿ ಎನ್ನುತ್ತಾರೆ ಬ್ಯೂಟಿ ಎಕ್ಸ್‌ಪಟ್ರ್ಸ್.
ಫೆಸ್ಟೀವ್ ಸೀಸನ್‌ಗಳಲ್ಲಿ ಆಯಾ ಹಬ್ಬಕ್ಕೆ ಸೂಟ್ ಆಗುವಂತೆ ಸಿಂಗರಿಸಿಕೊಳ್ಳುವುದು ಪ್ರತಿಯೊಬ್ಬರ ಫ್ಯಾಷನ್ ಸ್ಟೇಟ್‌ಮೆಂಟ್ ಆಗಬೇಕು. ಹಬ್ಬದ ಥೀಮ್‌ನಂತೆ ಸಿಂಗರಿಸಿಕೊಳ್ಳಬೇಕು. ಆಗಷ್ಟೇ ಸುಂದರವಾಗಿ ಕಾಣಲು ಸಾಧ್ಯ ಎನ್ನುತ್ತಾರೆ ಬ್ಯೂಟಿ ಎಕ್ಸ್‌ಪಟ್ರ್ಸ್. ಈ ಹಬ್ಬದಂದು ಟ್ರೆಡಿಷನಲ್ ಆಗಿ ಕಾಣ ಬಯಸುವ ಮಾನಿನಿಯರ ಗೌರಿ ಲುಕ್‌ಗೆ ಒಂದಿಷ್ಟು ಸಲಹೆಗಳನ್ನು ನೀಡಿದ್ದಾರೆ.
- ಟ್ರೆಡಿಷನಲ್ ಉಡುಗೆಗಳಿಗೆ ಪ್ರಾಮುಖ್ಯತೆ ನೀಡಿ
ಸದ್ಯಕ್ಕೆ ವೆಸ್ಟರ್ನ್ ಔಟ್‌ಫಿಟ್ ಮರೆತುಬಿಡಿ. ಹಬ್ಬದಂದು ಕಂಪ್ಲೀಟ್ ಎಥ್ನಿಕ್ ಲುಕ್ ನೀಡುವ ಲಂಗ-ದಾವಣಿ, ರೇಷ್ಮೆ ಸೀರೆಯನ್ನು ಚೂಸ್ ಮಾಡಿ. ಇದು ಟ್ರೆಡಿಷನಲ್ ಲುಕ್‌ಗೆ ಸಾಥ್ ನೀಡುತ್ತದೆ. ಇದು ಗೌರಿ ಲುಕ್‌ಗೆ ಹೊಂದುತ್ತದೆ.
- ರೇಷ್ಮೆ ಸೀರೆಗೆ ಡಿಸೈನರ್ ಬ್ಲೌಸ್ ಆಯ್ಕೆ ಮಾಡಿ
ಇದೀಗ ಟ್ರೆಂಡಿಯಾಗಿರುವ ರೇಷ್ಮೆ ಸೀರೆಗಳನ್ನು ಆಯ್ಕೆ ಮಾಡಬಹುದು. ಇಲ್ಲವೇ ಮನೆಯ ವಾರ್ಡ್‌ರೋಬ್‌ನಲ್ಲಿರುವ ಗ್ರ್ಯಾಂಡ್ ರೇಷ್ಮೆ ಸೀರೆಯನ್ನು ಆಯ್ಕೆ ಮಾಡಿಕೊಳ್ಳಿ. ಒಂದು ಪಿನ್ ಸೆರಗು ಹಾಕುವ ಬದಲು ಫ್ಲೀಟ್ಸ್ ಸೆರಗನ್ನು ಮಾಡಿ. ನಿಮ್ಮ ಪರ್ಸನಾಲಿಟಿಗೆ ಹೊಂದುವಂತಹ ಸೀರೆಗಳನ್ನೇ ಉಡಿ. ಲಕ್ಷಣವಾಗಿ ಕಾಣಿಸುವಂತೆ ಸದೀರೆ ಉಡಿ. ಗ್ಲಾಮರ್ ಲುಕ್ ಬೇಡ. ಸ್ಲೀವ್‌ಲೆಸ್ ಬ್ಲೌಸ್ ಆವಾಯ್ಡ್ ಮಾಡಿ.
- ಸೊಂಟದ ಪಟ್ಟಿ ಧರಿಸಿ
ಇಡೀ ಸೀರೆಗೆ ಮೆರಗು ನೀಡುವ ಕಮರ್‌ಬಾಂದ್ ಅಥವಾ ಬಂಗಾರ ವರ್ಣದ ಸೊಂಟದಪಟ್ಟಿಯನ್ನು ಧರಿಸಿ. ಟ್ರಡಿಷನಲ್ ಲುಕ್ ಬೇಕಿದ್ದಲ್ಲಿ ಫಂಕಿ ಸೊಂಟದ ಪಟ್ಟಿ ಬದಲು ಆದಷ್ಟೂ ಟ್ರೆಡಿಷನಲ್ ಲುಕ್ ಇರುವಂಥದ್ದನ್ನೇ ಧರಿಸಿಬೇಕು.
- ಆಭರಣಗಳನ್ನು ಧರಿಸಿ
ರೇಷ್ಮೆ ಸೀರೆ ಅಥವಾ ಲಂಗ ದಾವಣಿಗೆ ಟ್ರಡಿಷನಲ್ ಲುಕ್ ನೀಡಲು ನೆಕ್ಲೇಸ್, ಹಾರ, ಜುಮಕಿ, ಮಾಟಿ. ಜಡೆ ಬಿಲ್ಲೆ, ಮಾಂಗ್‌ಟೀಕಾ, ಕೈತುಂಬಾ ಗಾಜಿನ ಬಳೆಗಳು, ಕಾಲ್ಗೆಜ್ಜೆ, ಬಾಜುಬಂದ್ ಸೇರಿದಂತೆ ದೇವತೆಯ ಲುಕ್ ನೀಡುವಂತಹ ಆಭರಣಗಳನ್ನು ಧರಿಸಿ. ಎಲ್ಲವೂ ಸೀರೆಗೆ ಮ್ಯಾಚ್ ಆಗುವಂತಿರಬೇಕು ಎಂಬುದು ಗಮನದಲ್ಲಿರಲಿ.
- ಜಡೆಗೆ ಹೂವನ್ನು ಮುಡಿಯಿರಿ
ಉಡುಗೆ ಹೊರತುಪಡಿಸಿದಲ್ಲಿ, ಹಬ್ಬದಂದು ನೀವು ಮಾಡುವ ಹೇರ್‌ಸ್ಟೈಲ್ ಪ್ರಮುಖ ಪಾತ್ರವಹಿಸುತ್ತದೆ. ಫಂಕಿ ಹೇರ್‌ಸ್ಟೈಲ್ ಬದಲು ಜಡೆ ಹೆಣೆದು, ಹೂವುಗಳನ್ನು ಧರಿಸಿ. ಉದಾಹರಣೆಗೆ., ಮಲ್ಲಿಗೆ ದಿಂಡು, ಕನಕಾಂಬರವನ್ನು ಜಡೆಗೆ ಮುಡಿಯಬಹುದು. ಇಲ್ಲವಾದಲ್ಲಿ ಜಡೆ ಬಿಲ್ಲೆಯನ್ನೂ ಕೂಡ ಧರಿಸಬಹುದು. ಇದು ಆಕರ್ಷಕವಾಗಿ ಕಾಣುತ್ತದೆ. - ಕೈತುಂಬಾ ಬಳೆ
ಕೈ ತುಂಬಾ ಬಳೆ ಧರಿಸಿದಾಗ ಟ್ರೆಡಿಷನಲ್ ಲುಕ್ ಮತ್ತಷ್ಟು ಹೈಲೈಟಾಗುವುದು. ಸೀರೆಯ ಮ್ಯಾಚಿಂಗ್‌ಗೆ ಹೊಂದುವಂತೆ ಗಾಜಿನ ಬಳೆಗಳನ್ನು ಧರಿಸಿದಲ್ಲಿ ನೋಡಲು ಆಕರ್ಷಕವಾಗಿ ಕಾಣುವುದು.
- ಹಣೆಗೆ ಅಗಲವಾದ ಬಿಂದಿ
ಅಗಲವಾದ ಇಲ್ಲವೇ ಆಕರ್ಷಕವಾದ ಬಿಂದಿ ಹಣೆಗೆ ಇಟ್ಟಾಗ ಗೌರಿ ಲುಕ್ ಕಂಪ್ಲೀಟ್ ಆಗುವುದು. ಮುಖದ ಕಳೆ ಹೆಚ್ಚಾಗುವುದು. ಮೇಕಪ್ ಕೂಡ ನೋಡಲು ಪ್ಲೆಸೆಂಟ್ ಆಗಿರಲಿ. ಕಣ್ಣಿಗೆ ಕಾಡಿಗೆ ಹಣೆಗೆ ಬಿಂದಿ ಗೌರಿ ಹಬ್ಬದ ಕಳೆ ಹೆಚ್ಚಿಸುವುದು.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ| Festive Look | ಟ್ರೆಂಡಿ ಎಥ್ನಿಕ್‌ವೇರ್ ಧರಿಸಿ ಹಬ್ಬಕ್ಕೆ ಲಕ್ಷ್ಮಿಯಂತೆ ಕಂಗೊಳಿಸಿ