ಶೀಲಾ ಸಿ. ಶೆಟ್ಟಿ, ಬೆಂಗಳೂರು
ಹಬ್ಬಕ್ಕೆ ಟ್ರೆಡಿಷನಲ್ ಲುಕ್ ನೀಡುವ ಮೇಕಪ್ ನಿಮ್ಮದಾಗಲಿ ಎನ್ನುತ್ತಾರೆ ಮೇಕಪ್ ಎಕ್ಸ್‌ಪಟ್ರ್ಸ್ .
ಹಬ್ಬದಂದು ಹೆಣ್ಣುಮಕ್ಕಳು ಮಾಡುವ ಮೇಕಪ್ ನೋಡಲು ಆಕರ್ಷಕವಾಗಿರಬೇಕು. ಕುಟುಂಬ ಹಾಗೂ ಸ್ನೇಹಿತರೊಂದಿಗೆ ಆಚರಿಸುವ ಸಮಯವಾದ್ದರಿಂದ ಆದಷ್ಟೂ ಮೇಕಪ್ ಎಲಿಗೆಂಟ್ ಲುಕ್ ನೀಡಬೇಕು ಎನ್ನುತ್ತಾರೆ ಮೇಕಪ್ ತಜ್ಞೆ ರಾಶಿ ಮೇಘನಾ. ಈ ಗೌರಿ-ಗಣೇಶ ಹಬ್ಬದ ಮೇಕಪ್‌ಗೆ ಒಂದೈದು ಸಿಂಪಲ್ ಸಲಹೆಗಳನ್ನು ನೀಡಿದ್ದಾರೆ.
- ಟ್ರೆಡಿಷನಲ್ ಉಡುಪಿಗೆ ತಕ್ಕಂತಿರಲಿ ಮೇಕಪ್
ಧರಿಸುವ ಟ್ರೆಡಿಷನಲ್ ಉಡುಪು ಹಾಗೂ ಸೀರೆಗೆ ಮೇಕಪ್ ಮ್ಯಾಚ್ ಆಗಬೇಕು. ಸೀರೆಯೊಂದಿಗೆ ಮೇಕಪ್, ಹೇರ್‌ಸ್ಟೈಲ್ ಹಾಗೂ ಜುವೆಲ್ ವೇರ್ ಮಾಡಿದಲ್ಲಿ ಲುಕ್ ಕಂಪ್ಲೀಟ್ ಆಗುವುದು. ಸೀರೆಗಾದಲ್ಲಿ ಮೇಕಪ್ ಕಂಪ್ಲೀಟ್ ಟ್ರೆಡಿಷನಲ್ ಆಗಿ ಕಾಣಿಸುವಂತಿರಬೇಕು. ಇನ್ನು ಸಲ್ವಾರ್ ಕಮೀಝ್, ಗಾಗ್ರ, ಲೆಹೆಂಗಾ, ಲಂಗ-ದಾವಣಿಗಾದಲ್ಲಿ ಕೊಂಚ ನ್ಯಾಚುರಲ್ ಲುಕ್ ನೀಡಬಹುದು.
- ಸ್ಕಿನ್‌ಟೋನ್‌ಗೆ ತಕ್ಕಂತೆ ಮೇಕಪ್
ಹಬ್ಬದಂದು ಮಾಡುವ ಮೇಕಪ್ ಕಣ್ಮನ ಸೆಳೆಯಬೇಕು. ನೋಡುಗರಿಗೆ ಖುಷಿಯಾಗಬೇಕು. ಹಾಗಾಗಿ ಮೇಕಪ್ ಮಾಡುವವರು ತಮ್ಮ ಸ್ಕಿನ್ ಟೋನ್‌ಗೆ ಮ್ಯಾಚ್ ಆಗುವ ಮಾನ್ಸೂನ್ ಸೀಸನ್‌ಗೆ ಸೂಟ್ ಆಗುವಂತದ್ದನ್ನು ಆಯ್ಕೆ ಮಾಡಬೇಕು
- ಬ್ಲಷರ್ಸ್ ಬಳಸಿ
ಹಬ್ಬದಂದು ಧರಿಸುವ ಉಡುಪು ಮತ್ತು ಆಭರಣಗಳಿಗೆ ಹೊಂದುವ ಫೌಂಡೇಷನ್ ಮತ್ತು ಬ್ಲಷರ್ಸ್ ಬಳಸಿದಾಗ ಮುಖದ ಅಂದ ಹೆಚ್ಚುವುದು. .ಮ್ಯಾಟ್ ಫಿನಿಶ್ ಫೌಂಡೇಷನ್ ಹಾಗೂ ಗ್ಲಾಸಿ ಲುಕ್ ಕೊಡುವ ಬ್ಲಷರ್ಸ್ ಬಳಸುವುದು ಉತ್ತಮ.
- ಐ ಮೇಕಪ್ ಹೀಗಿರಲಿ
ಝಗಮಗಿಸುವ ಸೀರೆಯಾದಲ್ಲಿ ಗೋಲ್ಡನ್ ಅಥವಾ ಸಿಲ್ವರ್ ಕಲರ್ ಫೌಂಡೇಷನ್ ಮತ್ತು ಗ್ಲಿಟರ್ ಐ ಶ್ಯಾಡೋ ಬಳಸಬಹುದು. ಕಣ್ಣಿಗೆ ಐ ಲೈನರ್ ಬಳಸಬಹುದು. ರೆಪ್ಪೆಗಳ ಗಾಢತೆ ಹೆಚ್ಚಿಸಲು ಆರ್ಟಿಫಿಶಿಯಲ್ ಲ್ಯಾಶಸ್ ಸ್ಟಿಕ್ ಮಾಡಬಹುದು. ಕಣ್ಣಿಗೆ ಕಾಡಿಗೆ ಹಬ್ಬದ ಅಂದ ಹೆಚ್ಚಿಸುವುದು.
- ಹೊಂದುವ ಲಿಪ್‌ಸ್ಟಿಕ್ ಲೇಪಿಸಿ
ಎಲ್ಲದಕ್ಕಿಂತ ಹೆಚ್ಚಾಗಿ ಸ್ಕಿನ್‌ಟೋನ್‌ಗೆ ಹೊಂದುವಂತಹ ಲಿಪ್‌ಸ್ಟಿಕ್ ಲೇಪಿಸಬೇಕು. ಯಾವುದೇ ಕಾರಣಕ್ಕೂ ಟ್ರೆಂಡ್ ಹೆಸರಲ್ಲಿ ಗಾಢ ವರ್ಣದ ಲಿಪ್‌ಶೇಡ್ ಬಳಕೆ ಬೇಡ. ಮಾನ್ಸೂನ್ ಸೀಸನ್‌ನಲ್ಲಿ ಬಂದಿರುವ ಮ್ಯಾಟ್ ಲಿಪ್‌ಶೇಡ್ ಬಳಕೆ ಮಾಡಬಹುದು.
(ಲೇಖಕಿ: ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ| Festive Shopping | ವಾರಕ್ಕೂ ಮುನ್ನವೇ ಆರಂಭವಾದ ಗೌರಿ-ಗಣೇಶನ ಹಬ್ಬದ ಶಾಪಿಂಗ್