ಶೀಲಾ ಸಿ. ಶೆಟ್ಟಿ, ಬೆಂಗಳೂರು
ಮುಂಬರುವ ನವರಾತ್ರಿಯ ಫೆಸ್ಟಿವ್ ಶಾಪಿಂಗ್ ಎಲ್ಲೆಡೆ ಶುರುವಾಗಿದೆ. ಮಾಲ್‌ಗಳಲ್ಲಿ ಮಾತ್ರವಲ್ಲ, ಲೋಕಲ್ ಶಾಪಿಂಗ್ ಸ್ಟ್ರೀಟ್‌ಗಳಲ್ಲೂ ಶಾಪಿಂಗ್ ಮಾಡುವವರ ಮೊದಲಿಗಿಂತ ಸಂಖ್ಯೆ ಹೆಚ್ಚಾಗಿದೆ.
ಇನ್ನು ನವರಾತ್ರಿಗೆಂದೇ ಮಾರುಕಟ್ಟೆಗೆ ಹೊಸ ವಿನ್ಯಾಸದ ಡಿಸೈನರ್‌ವೇರ್ ಹಾಗೂ ಜುವೆಲರಿಗಳು ಆಗಮಿಸಿವೆ. ಅವುಗಳ ಮೇಲೆ ರಿಯಾಯಿತಿ ಹಾಗೂ ಆಫರ್‌ಗಳ ಸುರಿಮಳೆ ಕೂಡ ನೀಡುತ್ತಿರುವುದು ಕಂಡುಬರುತ್ತಿದೆ. ಪರಿಣಾಮ, ಬಹುತೇಕರು ಹಬ್ಬಕ್ಕೂ ಮುಂಚೆಯೇ ಶಾಪಿಂಗ್ ಮಾಡಲು ಮುಂದಾಗಿದ್ದಾರೆ. ಅಷ್ಟೇಕೆ! ರಸ್ತೆ ಬದಿಯ ಅಂಗಡಿಗಳಲ್ಲಿಯೂ ಡಿಸ್ಕೌಂಟ್ಸ್ ನೀಡುತ್ತಿರುವುದು ಸಾಮಾನ್ಯವಾಗಿದೆ. ಹಾಗಾಗಿ ಸ್ಟ್ರೀಟ್ ಶಾಪಿಂಗ್ ಕೂಡ ಭರ್ಜರಿಯಾಗಿಯೇ ನಡೆಯುತ್ತಿದೆ.
ಎಥ್ನಿಕ್ ಧಿರಿಸುಗಳಿಗೆ ಡಿಮ್ಯಾಂಡ್
ನವರಾತ್ರಿ ಸೀಸನ್‌ನಲ್ಲಿ ಸಾಮಾನ್ಯವಾಗಿ ಎಲ್ಲರೂ ಸಾಂಪ್ರದಾಯಿಕ ಉಡುಗೆಗಳನ್ನೇ ಹೆಚ್ಚು ಧರಿಸುವುದರಿಂದ ಮಾರುಕಟ್ಟೆಯಲ್ಲಿ ಇವುಗಳಿಗೆ ಕೊಂಚ ಡಿಮ್ಯಾಂಡ್ ಹೆಚ್ಚಾಗಿದೆ. ಕುರ್ತಾ, ಲೆಹಂಗಾ, ರೇಷ್ಮೇ ಸೀರೆ, ಸಿಲ್ಕ್ ಸೀರೆ. ಗೌನ್, ಲಂಗ ದಾವಣಿ, ಸಲ್ವಾರ್‌ಗಳು ಹೊಸ ವಿನ್ಯಾಸಗಳಲ್ಲಿ ಬಂದಿವೆ ಎನ್ನುತ್ತಾರೆ ಶಾಪ್‌ವೊಂದರ ಸೇಲ್ಸ್ ಮ್ಯಾನೇಜರ್.
“ದಸರಾ ಆಫರ್‌ಗಳ ಸುರಿಮಳೆ ಎಲ್ಲೆಡೆ ಲಭ್ಯವಿರುವುದರಿಂದ ಖರೀದಿದಾರರು ಹೆಚ್ಚಾಗಿದ್ದಾರೆ. ಹಾಗೆಂದು ಕಂಡಕಂಡದ್ದನ್ನು ಕೊಳ್ಳುವುದು ತರವಲ್ಲ. ಟ್ರೆಂಡಿಯಾಗಿರುವುದನ್ನು ನೋಡಿ ಸೆಲೆಕ್ಟ್ ಮಾಡುವುದು ಉತ್ತಮ. ಎರಡು ಮೂರು ಕಡೆ ವಿಚಾರಿಸಿ. ನಂತರ ಖರೀದಿಸಿ ಎಂದು ಸಲಹೆ ನೀಡುತ್ತಾರೆ ಶಾಪಿಂಗ್ ಎಕ್ಸ್‌ಪರ್ಟ್ಸ್. ನವರಾತ್ರಿಗೂ ಮುನ್ನವೇ ಶಾಪಿಂಗ್ ಮಾಡಿದಲ್ಲಿ ಜನಜಂಗುಳಿಯ ತಲೆಬಿಸಿಯಿರುವುದಿಲ್ಲ, ಆರಾಮವಾಗಿ ಖರೀದಿ ಮಾಡಬಹುದುʼʼ ಎನ್ನುತ್ತಾರೆ ನಟ ವಿನಯ್.
ಜುವೆಲರಿಗಳ ಖರೀದಿ
ಇನ್ನು ಬಂಗಾರದ ಆಭರಣಗಳನ್ನು ಖರೀದಿಸುವವರು ಮಾತ್ರವಲ್ಲ, ಆರ್ಟಿಫಿಷಿಯಲ್ ಜುವೆಲ್ ಸೆಟ್‌ಗಳನ್ನು ಖರೀದಿಸುವವರು ಈ ಬಾರಿ ಹೆಚ್ಚಾಗಿದ್ದಾರೆ. ಇದಕ್ಕೆ ಪೂರಕ ಎಂಬಂತೆ ಎಥ್ನಿಕ್‌ವೇರ್‌ಗೆ ಸೂಟ್ ಆಗುವಂತಹ ನಾನಾ ಬಗೆಯ ಆಭರಣಗಳು ಲಗ್ಗೆ ಇಟ್ಟಿವೆ ಎನ್ನುತ್ತಾರೆ ಶಾಪಿಂಗ್ ಪ್ರಿಯೆ ಪ್ರಿಯಾ.
ಹಬ್ಬಕ್ಕೆ ಕಲರ್‌ಫುಲ್ ಗೊಂಬೆಗಳ ಖರೀದಿ
ಎಂದಿನಂತೆ ಈ ಬಾರಿಯೂ ನವರಾತ್ರಿಗೆ ಬೊಂಬೆಗಳನ್ನು ಖರೀದಿ ಮಾಡುವವರು ಈಗಾಗಲೇ ಖರೀದಿಯಲ್ಲಿ ಬ್ಯುಸಿಯಾಗಿದ್ದಾರೆ. ರಸ್ತೆ ಬದಿ, ಅಂಗಡಿಗಳಲ್ಲಿ ವ್ಯಾಪಾರ ಶುರುವಾಗಿದೆ. ಹಬ್ಬಕ್ಕೂ ಮುನ್ನ ಗೊಂಬೆಗಳನ್ನು ಖರೀದಿಸಿದಲ್ಲಿ ಕಡಿಮೆ ಬೆಲೆಗೆ ದೊರೆಯುತ್ತದೆ. ಹಬ್ಬದ ದಿನ ದರ ದುಪ್ಪಟ್ಟಾಗುತ್ತದೆ ಎನ್ನುತ್ತಾರೆ ಮಾರಾಟಗಾರರು.
ನವರಾತ್ರಿ ಶಾಪಿಂಗ್ ಮಾಡುವವರಿಗೆ ಸಲಹೆ:
· ಆದಷ್ಟೂ ವೀಕೆಂಡ್ ಶಾಪಿಂಗ್ ಮಾಡಿ. ಹೆಚ್ಚು ಸಮಯ ಲಭ್ಯವಿರುತ್ತದೆ.
· ವೆರೈಟಿ ಟ್ರೆಂಡಿ ಎಥ್ನಿಕ್ ಉಡುಪುಗಳನ್ನು ಕೊಳ್ಳಬಹುದು.
· ಗುಂಪು ಗುಂಪಾಗಿ ಶಾಪಿಂಗ್ ತೆರಳುವುದು ನಾಟ್ ಓಕೆ. .
· ಕೃತಕ ತೋರಣ, ಹೂವುಗಳನ್ನು ವಾರಕ್ಕೆ ಮುನ್ನವೇ ಖರೀದಿಸಬಹುದು.
· ಹೋಗುವ ಮುನ್ನ ವಸ್ತುಗಳ ಪಟ್ಟಿಯ ಲಿಸ್ಟ್ ಮಾಡಿಕೊಂಡು ತೆರಳಿ.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ| Festive Shopping | ವಾರಕ್ಕೂ ಮುನ್ನವೇ ಆರಂಭವಾದ ಗೌರಿ-ಗಣೇಶನ ಹಬ್ಬದ ಶಾಪಿಂಗ್