ಶೀಲಾ ಸಿ. ಶೆಟ್ಟಿ, ಬೆಂಗಳೂರು
ಕೈ ಬೆರಳುಗಳ ಮೇಲೆ ಟೈನಿ ಟ್ಯಾಟೂ (Finger Tattoo Trend) ಸಿಂಗಾರ ಇದೀಗ ಹುಡುಗಿಯರ ಹೊಸ ಟ್ಯಾಟೂ ಕ್ರೇಝ್‌ಗೆ ಸೇರಿದೆ. ನೋಡಲು ತೀರಾ ಚಿಕ್ಕದಾದ ಹೂವಿನ ಚಿತ್ತಾರ, ಅಕ್ಷರಗಳು ಅಥವಾ ನಾನಾ ಸಿಂಬಲ್‌ಗಳು ಸೇರಿದಂತೆ ವೆರೈಟಿ ಟ್ಯಾಟೂ ಪುಟ್ಟ ಪುಟ್ಟ ಚಿತ್ತಾರಗಳು ಈ ಹೊಸ ಟ್ರೆಂಡ್ ಲಿಸ್ಟ್‌ಗೆ ಸೇರಿವೆ.
ಏನಿದು ಫಿಂಗರ್ ಟ್ಯಾಟೂ
ಕೈ ಬೆರಳುಗಳ ಮೇಲೆ ಹಾಕಿಸಿಕೊಳ್ಳುವ ಟ್ಯಾಟೂ ಚಿತ್ತಾರವಿದು. ಸಿಂಪಲ್ಲಾಗಿ ಹೇಳಬೇಕೆಂದರೇ, ಪುಟ್ಟದಾಗಿ ನೋಡಲು ಟೈನಿಯಾಗಿ ಕಾಣಿಸುವಂತಹ ಚಿತ್ರಗಳನ್ನು ಅಥವಾ ಯಾವುದೇ ಸಿಂಬಲ್‌ಗಳನ್ನು ಆಯ್ಕೆ ಮಾಡಿದ ಕೈ ಬೆರಳುಗಳ ಮೇಲೆ ಅಥವಾ ಉಂಗುರ ಧರಿಸುವ ಸ್ಥಾನದಲ್ಲಿ ಟ್ಯಾಟು ಹಾಕಿಸಿಕೊಳ್ಳುವುದು ಎನ್ನುತ್ತಾರೆ ಟ್ಯಾಟೂ ಎಕ್ಸ್‌ಪರ್ಟ್ ಜಾನ್. ಅವರು ಹೇಳುವಂತೆ, ಮೂರು ಚುಕ್ಕಿಯಿಂದಿಡಿದು, ಒಂದೇ ಬೆರಳ ಮೇಲೆ ಒಂದತ್ತು ಸೆಂಟಿ ಮೀಟರ್‌ವರೆಗೂ ಇರಬಹುದು. ಇದು ಅವರವರ ಅಭಿರುಚಿಗೆ ತಕ್ಕಂತೆ ರೂಪ ಪಡೆಯುತ್ತದೆ ಎನ್ನುತ್ತಾರೆ.
ಹಾಲಿವುಡ್ ತಾರೆಯರ ಫಿಂಗರ್ ಟ್ಯಾಟೂ
ಸೆಲೆಬ್ರೆಟಿಗಳಾದ ಲೂಸಿ ಹಾಲೆ, ಅರಿಯಾನಾ ಗ್ರಾಂಡೇ, ರಿಹಾನಾ ಸೇರಿದಂತೆ ನಾನಾ ಹಾಲಿವುಡ್ ತಾರೆಯರು ಈ ಫಿಂಗರ್ ಟ್ಯಾಟೂಗಳನ್ನು ಹಾಕಿಸಿಕೊಂಡಿದ್ದಾರೆ. ಸಾರ್ವಜನಿಕವಾಗಿ ಕಾಣಿಸಿಕೊಂಡಾಗ ಅವರ ಕೈ ಬೆರಳುಗಳ ಮೇಲಿನ ಟ್ಯಾಟೂಗಳನ್ನು ನಾವು ಕಾಣಬಹುದು.
ವ್ಯಕ್ತಿತ್ವವನ್ನು ಬಿಂಬಿಸುವ ಕೈ ಬೆರಳುಗಳ ಟ್ಯಾಟೂ
ಆಯಾ ವ್ಯಕ್ತಿಯ ಅಭಿರುಚಿಯನ್ನು ಫಿಂಗರ್ ಟ್ಯಾಟೂವಿನಿಂದಲೂ ಕಂಡು ಹಿಡಿಯಬಹುದು ಎನ್ನುತ್ತಾರೆ ಟ್ಯಾಟೂ ಆರ್ಟಿಸ್ಟ್ ಡೇವಿಡ್. ಅವರ ಪ್ರಕಾರ, ಫಿಂಗರ್ ಟ್ಯಾಟೂಗಳನ್ನು ಹಾಕಿಸಿಕೊಳ್ಳುವುದು ಈ ಮೊದಲು ಕಡಿಮೆಯಾಗಿತ್ತು. ಇದೀಗ ಹುಡುಗಿಯರು ತಾವು ಉಂಗುರಗಳನ್ನು ಧರಿಸುವುದರೊಂದಿಗೆ ಈ ಟ್ಯಾಟೂಗಳು ಕಾಣಬೇಕೆಂದು ಬಯಸುತ್ತಾರೆ. ಕೆಲವರು ತಮ್ಮ ಪ್ರೇಮಿಯ ಅಥವಾ ಸಂಗಾತಿಯ ಹೆಸರಿನ ಮೊದಲ ಅಕ್ಷರವನ್ನು ಹಾಕಿಸಿಕೊಳ್ಳುತ್ತಾರೆ. ಕೆಲವರು ತಮ್ಮ ಫೇವರೇಟ್ ವಸ್ತುವಿನ ಅಥವಾ ಹೂಗಳ ಚಿತ್ತಾರವನ್ನು ಚಿತ್ರಿಸಿಕೊಳ್ಳುತ್ತಾರೆ. ಇವೆಲ್ಲಾ ಅವರವರ ಆಯ್ಕೆಗೆ ಬಿಟ್ಟಿದ್ದು ಎನ್ನುತ್ತಾರೆ ಅವರು.
ಫಿಂಗರ್ ಟ್ಯಾಟೂ ಪ್ರಿಯರಿಗೆ ಎಕ್ಸ್‌ಪಟ್ರ್ಸ್ ಅಭಿಪ್ರಾಯ
- ಫಿಂಗರ್ ಟ್ಯಾಟೂ ಅತಿ ಬೇಗ ಮಾಸುತ್ತದೆ.
- ನಾನಾ ಬಗೆಯ ಟೈನಿ ಟ್ಯಾಟೂಗಳನ್ನು ಒಂದಕ್ಕಿಂತ ಹೆಚ್ಚು ಬೆರಳುಗಳ ಮೇಲೆ ಹಾಕಿಸಿಕೊಳ್ಳುವವರಿದ್ದಾರೆ.
- ಸೆನ್ಸಿಟೀವ್ ಚರ್ಮವಾದ್ದರಿಂದ ಹಾಕಿಸಿದ ಕೆಲವು ದಿನ ನೋವಾಗಬಹುದು.
- ಹಾಕಿಸುವ ಟ್ಯಾಟೂ ಅರ್ಥಗರ್ಭಿತವಾಗಿದ್ದರೇ ಉತ್ತಮ.
- ಇದೀಗ ಮೆಹಂದಿ ಡಿಸೈನ್ನವು ಪ್ರಚಲಿತದಲ್ಲಿವೆ.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Funky Sunglasses Fashion: ಟ್ರೆಂಡಿಯಾಯ್ತು ಕಲರ್‌ಫುಲ್ ಫ್ರೇಮ್‌ನ ಫಂಕಿ ಸನ್‌ಗ್ಲಾಸ್ ಫ್ಯಾಷನ್