Site icon Vistara News

Flea Market Shopping Trend: ಶಾಪಿಂಗ್‌ ಪ್ರಿಯರನ್ನು ಸೆಳೆಯುತ್ತಿರುವ ಫ್ಲೀ ಮಾರ್ಕೆಟ್ ಎಂಬ ಹೈ ಟೆಕ್‌ ಸಂತೆ

Flea market shopping trend

ಶೀಲಾ ಸಿ. ಶೆಟ್ಟಿ, ಬೆಂಗಳೂರು

ಫ್ಲೀ ಮಾರ್ಕೆಟ್‌ಗಳು (Flea Market Shopping Trend) ಇದೀಗ ಶಾಪಿಂಗ್‌ ಪ್ರಿಯರ ಹೈ ಟೆಕ್‌ ಸಂತೆಯಾಗುತ್ತಿವೆ. ಹೌದು, ಇತ್ತೀಚೆಗೆ ಮಾಲ್‌ಗಳಲ್ಲಿ ಈ ಕಾನ್ಸೆಪ್ಟ್‌ ಸಾಮಾನ್ಯವಾಗುತ್ತಿದೆ. ದೇಸಿ ಫ್ಯಾಷನ್‌ವೇರ್‌, ಆಕ್ಸೆಸರೀಸ್‌ ಮತ್ತು ಸ್ಥಳೀಯ ಲೋಕಲ್‌ ಉತ್ಪನ್ನಗಳನ್ನು ಖರೀದಿಗೆ ಇವು ಸಹಕರಿಸುತ್ತಿವೆ.

ಮಾಲ್‌ಗಳಲ್ಲಿ ಫ್ಲೀ ಮಾರ್ಕೆಟ್‌ ಅಬ್ಬರ

ಬೆಂಗಳೂರಿನ ಬಹುತೇಕ ಮಾಲ್‌ಗಳಲ್ಲಿ ವಾರದ ಕೊನೆಯಲ್ಲಿ ನಾನಾ ಹೆಸರಲ್ಲಿ ಅಥವಾ ಸೀಸನ್‌ ಹೆಸರಲ್ಲಿ ಫ್ಲೀ ಮಾರ್ಕೆಟ್‌ಗಳು ನಡೆಯುತ್ತವೆ. ಹೆಚ್ಚಾಗಿ ಮಾಲ್‌ನ ಹೊರಭಾಗದಲ್ಲಿ ನಡೆಯುವ ಈ ಹೈ ಟೆಕ್‌ ಸಂತೆಯಲ್ಲಿ ಕಡಿಮೆಯೆಂದರೂ 20ಕ್ಕಿಂತ ಹೆಚ್ಚು ಅಂಗಡಿಗಳು ಅಥವಾ ಸ್ಟಾಲ್‌ಗಳಿರುತ್ತವೆ. ನೋಡಲು ಒಂದೇ ಶೈಲಿಯ ಶಾಪ್‌ಗಳಿದ್ದರೂ, ನಾನಾ ಬಗೆಯ ಫ್ಯಾಷನ್‌ಗೆ ಸಂಬಂಧಿಸಿದ ಹಾಗೂ ಡೆಕೋರೇಟಿವ್‌ ಐಟಂಗಳು ದೊರೆಯುತ್ತವೆ. ಅತಿ ಹೆಚ್ಚಾಗಿ ಫ್ಯಾಷನ್‌ವೇರ್‌ಗಳು ಸಿಗುತ್ತವೆ ಎನ್ನುತ್ತಾರೆ ಫ್ಲೀ ಮಾರ್ಕೆಟ್‌ ಆಯೋಜಕರು.

ಆಕರ್ಷಕ ಫ್ಯಾಷನ್‌ವೇರ್‌ –ಆಕ್ಸೆಸರಿಸ್‌

ಇನ್ನು ಈ ಶಾಪ್‌ಗಳಲ್ಲಿ ಯಾವುದೂ ಬ್ರಾಂಡೆಡ್‌ ಐಟಂಗಳು ದೊರೆಯುವುದಿಲ್ಲ! ಬದಲಿಗೆ ಮಧ್ಯಮವರ್ಗದವರ ಕೈಗೆಟಕಬಹುದಾದ ದೇಸಿ ಹಾಗೂ ಸ್ಥಳಿಯ ಬೋಟಿಕ್‌ಗಳಿಂದ ಸಿದ್ಧಪಡಿಸಿದ ಫ್ಯಾಷನ್‌ವೇರ್‌ಗಳು ಸಿಗುತ್ತವೆ. ಇನ್ನು ಚಿಕನ್‌ಕಾರಿ ಹಾಗೂ ಕಶ್ಮಿರಿ ಕುರ್ತಾದಂತಹ ಅಪ್ಪಟ ದೇಸಿ ವರ್ಕ್ ಇರುವಂತವು, ಹ್ಯಾಂಡ್‌ಲೂಮ್‌ ಸೀರೆಗಳು, ಹ್ಯಾಂಡ್‌ಮೇಡ್‌ ಡಿಸೈನ್‌ನ ಫ್ಯಾಬ್ರಿಕ್‌ಗಳಿಂದಿಡಿದು ನಾನಾ ಫ್ಯಾಷನ್‌ವೇರ್‌ಗಳು ದೊರೆಯುತ್ತವೆ. ಇನ್ನು ಆಕ್ಸೆಸರೀಸ್‌ ವಿಷಯಕ್ಕೆ ಬಂದಲ್ಲಿ, ಸಿನಿಮಾಗಳಲ್ಲಿ ಟ್ರೆಂಡಿಯಾದ ಜುಮ್ಕಾಗಳಿಂದಿಡಿದು ಸ್ಕಾರ್ಫ್ ವರೆಗೂ ನಾನಾ ಡಿಸೈನ್‌ವು ಇಲ್ಲಿ ಬಂದಿರುತ್ತವೆ. ಇವನ್ನು ಕೊಳ್ಳಲು ಹುಡುಕಿಕೊಂಡು ನಮ್ಮಲ್ಲಿ ಬರುತ್ತಾರೆ ಎನ್ನುತ್ತಾರೆ ಸ್ಟಾಲ್‌ವೊಂದರ ಮಾರಾಟಗಾರರು.

ಫೆಸ್ಟಿವ್‌ ಸೀಸನ್‌ ಫ್ಲೀ ಮಾರ್ಕೆಟ್

ಇನ್ನು ಫೆಸ್ಟಿವ್‌ ಸೀಸನ್‌ನಲ್ಲಂತೂ ಟ್ರೆಂಡಿ ಹಾಗೂ ಫ್ಯಾಷನ್‌ನಲ್ಲಿರುವ ಎಲ್ಲಾ ಬಗೆಯ ಫ್ಯಾಷನ್‌ವೇರ್‌, ಆಕ್ಸೆಸರೀಸ್‌ ಮತ್ತು ಡೆಕೋರೇಟಿವ್‌ ಐಟಂಗಳು ಇಲ್ಲಿ ಲಭ್ಯ. ಆಯಾ ಸೀಸನ್‌ ಹಬ್ಬಗಳಿಗೆ ತಕ್ಕಂತೆ ದೊರೆಯುತ್ತವೆ ಎನ್ನುತ್ತಾರೆ ಮಾರಾಟಗಾರರಾದ ರಾಶಿ ಹಾಗೂ ಮೇಘನಾ.

ಶಾಪಿಂಗ್‌ ಮಾಡುವಾಗ ಗಮನದಲ್ಲಿಟ್ಟುಕೊಳ್ಳಬೇಕಾದ್ದು

(ಲೇಖಕಿ : ಫ್ಯಾಷನ್‌ ಪತ್ರಕರ್ತೆ)

Exit mobile version