-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಮನೋಲ್ಲಾಸ ಹೆಚ್ಚಿಸುವಂತಹ ವೈವಿಧ್ಯಮಯ ಪ್ರಿಂಟ್ಸ್‌ನ ಫ್ಲೋರಲ್ ಜಂಪ್‌ಸೂಟ್‌ಗಳು (Floral Jumpsuit fashion) ಇದೀಗ ಕಾಲೇಜು ಹುಡುಗಿಯರನ್ನು ಸವಾರಿ ಮಾಡತೊಡಗಿವೆ. ಈಗಾಗಲೇ ಫ್ಯಾಷನ್‌ನಲ್ಲಿ ಲೆಕ್ಕವಿಲ್ಲದಷ್ಟು ಬಗೆಯ ಜಂಪ್‌ಸೂಟ್‌ಗಳು ಲಗ್ಗೆ ಇಟ್ಟಿದ್ದು, ಅವುಗಳಲ್ಲಿ ನೋಡಲು ಲೈವ್ಲಿಯಾಗಿ ಬಿಂಬಿಸುವಂತಹ ವೆರೈಟಿ ಫ್ಲೋರಲ್ ಪ್ರಿಂಟ್ಸ್ನವು ಹೆಚ್ಚು ಬೇಡಿಕೆ ಸೃಷ್ಟಿಸಿಕೊಂಡಿವೆ.
ಆಕರ್ಷಕ ಫ್ಲೋರಲ್ ಜಂಪ್‌ಸೂಟ್ಸ್
“ಜಂಪ್‌ಸೂಟ್ ಎಂದಿಗೂ ಫ್ಯಾಷನ್‌ನಿಂದ ಆಚೆ ಹೋಗದ ಔಟ್‌ಫಿಟ್‌ಗಳು. ಇವುಗಳ ಒಂದಲ್ಲ ಒಂದು ಡಿಸೈನ್ಸ್ ಅಥವಾ ವಿಭಿನ್ನ ಪ್ರಿಂಟ್ಸ್‌ನಿಂದಾಗಿ ಆಗಾಗ್ಗೆ ಫ್ಯಾಷನ್ ಲೋಕದಲ್ಲಿ ಸುದ್ದಿ ಮಾಡುತ್ತಿರುತ್ತವೆ. ಸೆಲೆಬ್ರೆಟಿಗಳು ಕೂಡ ತಮ್ಮ ಔಟಿಂಗ್‌ನಲ್ಲಿ ಹಾಗೂ ರಿಲಾಕ್ಸೇಷನ್ ಸಮಯದಲ್ಲಿ ಹಾಗೂ ಮಕ್ಕಳೊಂದಿಗೆ ಟ್ವಿನ್ನಿಂಗ್ ಮಾಡುವ ಸಮಯದಲ್ಲಿ ಈ ಫ್ಲೋರಲ್ ಜಂಪ್ ಸೂಟ್‌ಗಳನ್ನು ಧರಿಸುವುದು ಕಂಡು ಬರುತ್ತಿದೆ. ಎಲ್ಲದಕ್ಕಿಂತ ಹೆಚ್ಚಾಗಿ ಈ ಮೊದಲು ಸೀಸನ್‌ಗೆ ತಕ್ಕಂತೆ ಬಿಡುಗಡೆಯಾಗುತ್ತಿದ್ದ ಈ ಜಂಪ್‌ಸೂಟ್‌ಗಳು ಇದೀಗ ಎಲ್ಲಾ ಸೀಸನ್‌ಗೂ ಮ್ಯಾಚ್ ಆಗುವಂತಹ ಡಿಸೈನ್‌ನಲ್ಲಿ ಬಿಡುಗಡೆಗೊಳ್ಳುತ್ತಿವೆ. ಅದರಲ್ಲೂ ಮಕ್ಕಳು ಹಾಗೂ ಯುವತಿಯರ ಅಭಿರುಚಿಗೆ ಹೊಂದುವಂತಹ ಕಲರ್ಸ್ ಹಾಗೂ ಪ್ರಿಂಟ್ಸ್‌ನಲ್ಲಿ ಬರುತ್ತಿರುವುದು ಟ್ರೆಂಡಿಯಾಗಲು ಕಾರಣವಾಗುತ್ತಿದೆ” ಎಂದು ಹೇಳುತ್ತಾರೆ ವೆಸ್ಟರ್ನ್ ಔಟ್‌ಫಿಟ್ಸ್ ಸ್ಟೈಲಿಸ್ಟ್ ಗಾನ. ಅವರ ಪ್ರಕಾರ, ಇವು ಧರಿಸುವವರಿಗೆ ಯಂಗ್ ಲುಕ್ ನೀಡುತ್ತವಂತೆ.
ಟ್ರೆಂಡಿಯಾಗಿರುವ ಫ್ಲೋರಲ್ ಜಂಪ್‌ಸೂಟ್‌ಗಳಿವು
ಮೊದಲೆಲ್ಲಾ ಕೇವಲ ವಿದೇಶೀ ಹೂವುಗಳ ಪ್ರಿಂಟ್ಸ್‌ನಲ್ಲಿ ಲಭ್ಯವಿದ್ದ ಇವು ಇದೀಗ ದೇಸಿ ಹೂವುಗಳ ಪ್ರಿಂಟ್ಸ್‌ನಲ್ಲೂ ಕಾಣಬಹುದು. ಲಿಲ್ಲಿ, ಆರ್ಕಿಡ್, ಟುಲಿಪ್, ಸೇವಂತಿ, ಸನ್‌ಫ್ಲವರ್ಸ್ ಬಂಚ್, ರೋಸ್ ಗಾರ್ಡನ್, ಬಟನ್ ರೋಸ್, ಕಲರ್‌ಫುಲ್ ರೋಸ್ ಹೀಗೆ ನಾನಾ ಹೂವುಗಳ ಚಿಕ್ಕ ಹಾಗೂ ದೊಡ್ಡ ಫ್ಲೋರಲ್ ಪ್ರಿಂಟ್ಸ್ ಇದೀಗ ಚಾಲ್ತಿಯಲ್ಲಿವೆ.
ಇದನ್ನೂ ಓದಿ: Mini Coins Jewel Fashion: ಹುಡುಗಿಯರನ್ನು ಸೆಳೆಯುತ್ತಿರುವ ಮಿನಿ ಕಾಯಿನ್ಸ್ ನೆಕ್ಲೇಸ್
ಫ್ಲೋರಲ್ ಜಂಪ್‌ಸೂಟ್ ಪ್ರಿಯರಿಗೆ 7 ಟಿಪ್ಸ್
- ಈ ಶೈಲಿಯ ಜಂಪ್‌ಸೂಟ್ ಧರಿಸುವಾಗ ಆದಷ್ಟೂ ಸೀಸನ್‌ಗೆ ಹೊಂದುವ ಫ್ಯಾಬ್ರಿಕ್ನದ್ದನ್ನು ಆಯ್ಕೆ ಮಾಡಬಹುದು. ಇದರಿಂದ ಕಂಫರ್ಟಬಲ್ ಫೀಲ್ ಆಗುತ್ತದೆ.
- ಹೈ ಹೀಲ್ಸ್ ಈ ಔಟ್ಫಿಟ್ನ ಸೌಂದರ್ಯ ಹೆಚ್ಚಿಸುತ್ತದೆ.
- ಆಕ್ಸೆಸರೀಸ್ ಧರಿಸುವ ಅಗತ್ಯವಿಲ್ಲ.
- ಸ್ಲಿವ್ಲೆಸ್ ಹಾಗೂ ಸ್ಲೀವ್ ಡಿಸೈನ್ ಇರುವಂತವು ದೊರೆಯುತ್ತವೆ.
- ಜಿಪ್ ಹಾಗೂ ಬಟನ್ನ ಫ್ಲೋರಲ್ ಜಂಪ್ಸೂಟ್ಗಳಲ್ಲಿ ಜಿಪ್ನದ್ದು ಬೆಸ್ಟ್. ಇವನ್ನು ಇನ್ನರ್ ಫ್ಯಾಷನ್ವೇರ್ ಮೇಲೆ ಧರಿಸಬಹುದು.
- ಒಮ್ಮೆ ಧರಿಸಿದರೇ ಇದನ್ನು ಸುಲಭವಾಗಿ ಬಿಚ್ಚಲು ಸಾಧ್ಯವಿಲ್ಲ.
- ಆದಷ್ಟೂ ದೊಗಲೆಯಾದ್ದನ್ನು ಆವಾಯ್ಡ್ ಮಾಡಿ. ಸ್ಲಿಮ್ ಫಿಟ್ ಆಕರ್ಷಕವಾಗಿ ಕಾಣಿಸುತ್ತದೆ.
( ಲೇಖಕಿ ಫ್ಯಾಷನ್ ಪತ್ರಕರ್ತೆ )