ತಂಪಾದ ಹವಾಮಾನ ಸೋಂಕಿನ ಅಪಾಯವನ್ನು ಹೆಚ್ಚಿಸುತ್ತದೆ. ಹೀಗಾಗಿ ಮಳೆಗಾಲದಲ್ಲಿ (rainy season) ರೋಗ ನಿರೋಧಕ ಶಕ್ತಿಯನ್ನು (Boost Immunity) ವೃದ್ಧಿಸಿಕೊಳ್ಳುವುದು ಬಹುಮುಖ್ಯ. ಇದಕ್ಕಾಗಿ ನಮ್ಮ ಆಹಾರದ (food) ಮೂಲಕ ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ನಾವು ಪ್ರಯತ್ನಿಸಲೇಬೇಕು.
ಪೌಷ್ಟಿಕಾಂಶಯುಕ್ತ ಉಪಹಾರವು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಮತ್ತು ಕಾಯಿಲೆಗಳನ್ನು ದೂರವಿರಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಹೀಗಾಗಿ ಮಳೆಗಾಲಕ್ಕೆ ಸೂಕ್ತವಾದ ಎರಡು ರುಚಿಕರವಾದ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಉಪಾಹಾರ ಮಾಡುವ ವಿಧಾನ ಇಲ್ಲಿದೆ.
ಅರಿಶಿನ ಶುಂಠಿ ಓಟ್ಸ್ ಮೀಲ್
ದೇಹಕ್ಕೆ ಬೇಕಾದ ಪೋಷಕಾಂಶವನ್ನು ಕೊಡುವ ಅರಿಶಿನ ಶುಂಠಿ ಓಟ್ಸ್ ಮೀಲ್ ನಲ್ಲಿರುವ ಅರಿಶಿನ ಮತ್ತು ಶುಂಠಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.
ಬೇಕಾಗುವ ಸಾಮಗ್ರಿಗಳು: 1 ಕಪ್ ಓಟ್ಸ್, 2 ಕಪ್ ನೀರು ಅಥವಾ ಹಾಲು, 1 ಟೀಸ್ಪೂನ್ ಅರಿಶಿನ ಪುಡಿ, 1 ಟೀಸ್ಪೂನ್ ನುಣ್ಣಗೆ ಕತ್ತರಿಸಿ ಇಟ್ಟಿರುವ ಶುಂಠಿ, ರುಚಿಗೆ ತಕ್ಕಷ್ಟು ಜೇನುತುಪ್ಪ ಅಥವಾ ಮೇಪಲ್ ಸಿರಪ್, ಕತ್ತರಿಸಿರುವ ಬೀಜ ಮತ್ತು ಹಣ್ಣುಗಳು
ಮಾಡುವ ವಿಧಾನ: ಒಂದು ಪಾತ್ರೆಯಲ್ಲಿ ನೀರು ಅಥವಾ ಹಾಲನ್ನು ಹಾಕಿ ಕುದಿಸಿ. ಓಟ್ಸ್, ಅರಿಶಿನ ಪುಡಿ ಮತ್ತು ತುರಿದ ಶುಂಠಿಯನ್ನು ಸೇರಿಸಿ ನಿಧಾನವಾದ ಉರಿಯಲ್ಲಿ ಸುಮಾರು 5- 7 ನಿಮಿಷಗಳ ಕಾಲ ಬೇಯಿಸಿ. ಜೇನುತುಪ್ಪ ಅಥವಾ ಮೇಪಲ್ ಸಿರಪ್ ಸೇರಿಸಿ ಸಿಹಿಗೊಳಿಸಿ. ಕತ್ತರಿಸಿರುವ ಬೀಜಗಳು ಮತ್ತು ಹಣ್ಣುಗಳನ್ನು ಹಾಕಿ ಬಿಸಿಯಾಗಿರುವಾಗಲೇ ಸೇವಿಸಿ.
ಪಾಲಕ್ ಮತ್ತು ಮಶ್ರೂಮ್ ಎಗ್ ವೈಟ್ ಸ್ಕ್ರಾಂಬಲ್
ಪ್ರೊಟೀನ್ ಹೇರಳವಾಗಿರುವ ಪಾಲಕ್, ಮಶ್ರೂಮ್, ಮೊಟ್ಟೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.
ಬೇಕಾಗುವ ಸಾಮಗ್ರಿಗಳು: 4 ಮೊಟ್ಟೆಯ ಬಿಳಿಭಾಗ, 1 ಕಪ್ ಕತ್ತರಿಸಿದ ಪಾಲಕ್, ಅರ್ಧ ಕಪ್ ಹೋಳು ಮಾಡಿದ ಅಣಬೆಗಳು, ಕಾಲು ಕಪ್ ಸುರುಳಿಯಾಗಿ ಕತ್ತರಿಸಿದ ಈರುಳ್ಳಿ, ರುಚಿಗೆ ತಕ್ಕಷ್ಟು ಉಪ್ಪು ಮತ್ತು ಮೆಣಸು, ಅಡುಗೆಗಾಗಿ ಆಲಿವ್ ಎಣ್ಣೆ
ಇದನ್ನೂ ಓದಿ: Seeds For Weight Loss: ತೂಕ ಇಳಿಸಿಕೊಳ್ಳಬೇಕೆ? ಈ 7 ಬೀಜಗಳನ್ನು ನಿಯಮಿತವಾಗಿ ಸೇವಿಸಿ
ಮಾಡುವ ವಿಧಾನ: ಮಧ್ಯಮ ಉರಿಯಲ್ಲಿ ಬಾಣಲೆಯಲ್ಲಿ ಆಲಿವ್ ಎಣ್ಣೆಯನ್ನು ಬಿಸಿ ಮಾಡಿ. ಈರುಳ್ಳಿಯನ್ನು ಹಾಕಿ ಹುರಿಯಿರಿ. ಅನಂತರ ಅಣಬೆಗಳನ್ನು ಸೇರಿಸಿ ಬೇಯಿಸಿ. ಬಳಿಕ ಕತ್ತರಿಸಿದ ಪಾಲಕ್ ಅನ್ನು ಸೇರಿಸಿ ಬೇಯಿಸಿ. ಮೊಟ್ಟೆಯ ಬಿಳಿಭಾಗವನ್ನು ಸುರಿಯಿರಿ. ರುಚಿಗೆ ತಕ್ಕಷ್ಟು ಉಪ್ಪು ಮತ್ತು ಕತ್ತರಿಸಿದ ಮೆಣಸು ಸೇರಿಸಿ. ಬಿಸಿಯಾಗಿರುವಾಗಲೇ ಬಡಿಸಿ.