Site icon Vistara News

Krishna janmastami 2024: ಕೃಷ್ಣ ಜನ್ಮಾಷ್ಟಮಿಗೆ ಏನೆಲ್ಲ ಸಿಹಿ ತಿನಿಸು ತಯಾರಿಸಬಹುದು? ಇಲ್ಲಿದೆ ಟಿಪ್ಸ್‌

Krishna janmastami 2024

ಕೃಷ್ಣ ಜನ್ಮಾಷ್ಟಮಿ (Krishna janmastami 2024) ಎಂದರೆ ದೇವರಿಗೆ ನೈವೇದ್ಯ ಮಾಡಲು, ಬಂದಂಥ ಅತಿಥಿಗಳನ್ನು ಸತ್ಕರಿಸಲು ಮನೆಯಲ್ಲಿ ಬಗೆಬಗೆಯ ಖಾದ್ಯ, ಸಿಹಿ ತಿಂಡಿಗಳನ್ನು (sweets) ಮಾಡಲೇಬೇಕು. ಹಾಗಂತ ಹಬ್ಬದ ಸಂದರ್ಭದಲ್ಲಿ ಆರೋಗ್ಯವನ್ನೂ ಕಡೆಗಣಿಸುವಂತಿಲ್ಲ. ಹೀಗಾಗಿ ಈ ಬಾರಿ ಜನ್ಮಾಷ್ಟಮಿಯಲ್ಲಿ (janmastami) ಸಿಹಿ ಜೊತೆಗೆ ಆರೋಗ್ಯಕರವಾದ (Healthy Sweets) ಖಾದ್ಯಗಳನ್ನು ಮನೆಯಲ್ಲೇ ಮಾಡಲು ಟ್ರೈ ಮಾಡಿನೋಡಬಹುದು.

ನಾಲಿಗೆಯ ರುಚಿಯನ್ನು ತೃಪ್ತಿ ಪಡಿಸುವ, ಜೊತೆಗೆ ಆರೋಗ್ಯವನ್ನೂ ಕಾಪಾಡುವ ಕೆಲವು ಪೌಷ್ಟಿಕ ಖಾದ್ಯಗಳ ಕುರಿತು ಮಾಹಿತಿ ಇಲ್ಲಿದೆ. ಈ ಬಾರಿ ಜನ್ಮಾಷ್ಟಮಿಯಲ್ಲಿ ಇದನ್ನು ಮಾಡಿ ದೇವರಿಗೂ ನೈವೇದ್ಯ ಮಾಡಬಹುದು. ಆರೋಗ್ಯದ ಬಗ್ಗೆ ಹೆಚ್ಚು ಚಿಂತೆ ಮಾಡದೇ ನೀವು ಮೆಲ್ಲಬಹುದು, ಅತಿಥಿಗಳಿಗೂ ನೀಡಬಹುದು.


ಖರ್ಜೂರ ಮತ್ತು ಒಣ ಹಣ್ಣಿನ ಲಡ್ಡು

ಖರ್ಜೂರದ ನೈಸರ್ಗಿಕ ಮಾಧುರ್ಯವನ್ನು ವಿವಿಧ ಒಣ ಹಣ್ಣುಗಳೊಂದಿಗೆ ಸವಿಯಬಹುದು. ಖರ್ಜೂರದ ಬೀಜಗಳನ್ನು ತೆಗೆದು ಹಾಲಿನಲ್ಲಿ ಎರಡು ಗಂಟೆಗಳ ಕಾಲ ನೆನೆಸಿ ಇಡಿ. ಬಾದಾಮಿ, ಗೋಡಂಬಿ ಮತ್ತು ಪಿಸ್ತಾಗಳಂತಹ ಬೀಜಗಳನ್ನು ಖರ್ಜೂರದೊಂದಿಗೆ ಸೇರಿಸಿ ಮಿಶ್ರಣವನ್ನು ಸಣ್ಣ ಉಂಡೆಗಳಾಗಿ ಮಾಡಿ ಫ್ರಿಜ್‌ನಲ್ಲಿ ಇಡಿ. ಜನ್ಮಾಷ್ಟಮಿಗೆ ಪರಿಪೂರ್ಣವಾದ ಆರೋಗ್ಯಕರ, ಶಕ್ತಿ-ಉತ್ತೇಜಿಸುವ ಲಡ್ಡು ಇದಾಗಿದೆ.


ಸೀಡ್ಸ್ ಲಡ್ಡು

ಚಿಯಾ, ಫ್ಲಾಕ್ಸ್ ಮತ್ತು ಸೂರ್ಯಕಾಂತಿಗಳಂತಹ ಬೀಜಗಳ ಮಿಶ್ರಣವನ್ನು ಲಘುವಾಗಿ ಹುರಿದು ಪುಡಿ ಮಾಡಿ. ಬೀಜದ ಪುಡಿಯನ್ನು ಜೇನುತುಪ್ಪದೊಂದಿಗೆ ಸೇರಿಸಿ ಲಡ್ಡು ಮಾಡಿ. ಪೋಷಕಾಂಶಗಳಿರುವ ಈ ಲಡ್ಡಿನಲ್ಲಿ ಒಮೆಗಾ-3 ಕೊಬ್ಬಿನಾಮ್ಲಗಳು ಮತ್ತು ಫೈಬರ್‌ ಸಮೃದ್ಧವಾಗಿವೆ.


ಫ್ರೂಟ್ ಸಲಾಡ್

ಬಾಳೆಹಣ್ಣು, ಸೇಬು, ದ್ರಾಕ್ಷಿ ಮತ್ತು ದಾಳಿಂಬೆಗಳಂತಹ ತಾಜಾ ಹಣ್ಣುಗಳನ್ನು ಕತ್ತರಿಸಿ ಹಾಲಿನ ಕೆನೆಯೊಂದಿಗೆ ಸೇರಿಸಿ. ಜೇನುತುಪ್ಪ ಬೆರೆಸಿ ಸಿಹಿಗೊಳಿಸಿ. ಈ ತಿಳಿ ಮತ್ತು ಕೆನೆ ಖಾದ್ಯವು ರುಚಿಕರವಾದದ್ದು ಮಾತ್ರವಲ್ಲದೆ ಅಗತ್ಯವಾದ ಜೀವಸತ್ವ, ಖನಿಜಾಂಶಗಳನ್ನು ಹೊಂದಿದೆ.


ಡ್ರೈ ಫ್ರೂಟ್ ಚಿಕ್ಕಿ

ಒಣ ಹಣ್ಣುಗಳಾದ ಶೇಂಗಾ, ಬಾದಾಮಿ ಮತ್ತು ಎಳ್ಳನ್ನು ಬೆಲ್ಲದೊಂದಿಗೆ ಹುರಿದು ಬೆರೆಸಿ ಡ್ರೈಫ್ರೂಟ್ ಚಿಕ್ಕಿ ತಯಾರಿಸಿ. ಮಿಶ್ರಣವನ್ನು ತುಪ್ಪ ಹಚ್ಚಿದ ಟ್ರೇಗೆ ಸುರಿಯಿರಿ. ಅದನ್ನು ತಣ್ಣಗಾಗಲು ಬಿಡಿ, ತದನಂತರ ತುಂಡುಗಳಾಗಿ ಕತ್ತರಿಸಿ. ಇದು ಪ್ರೋಟೀನ್ ಮತ್ತು ಆರೋಗ್ಯಕರ ಕೊಬ್ಬಿನ ಉತ್ತಮ ಮೂಲವಾಗಿದೆ.

ಇದನ್ನೂ ಓದಿ: Health Tips Kannada: ಮಾರಕ ರೋಗಗಳನ್ನು ದೂರ ಇರಿಸುತ್ತದೆ ಬೂದುಗುಂಬಳದ ರಸ!


ಡ್ರೈಫ್ರೂಟ್ ಲಡ್ಡು

ವಾಲ್‌ನಟ್ಸ್, ಬಾದಾಮಿ, ಗೋಡಂಬಿ ಮತ್ತು ಖರ್ಜೂರದಂತಹ ಒಣ ಹಣ್ಣುಗಳನ್ನು ಬ್ಲೆಂಡರ್‌ನಲ್ಲಿ ಮಿಶ್ರಣ ಮಾಡಿ. ಮಿಶ್ರಣಕ್ಕೆ ಜೇನುತುಪ್ಪವನ್ನು ಸೇರಿಸಿ ಮತ್ತು ಚೆನ್ನಾಗಿ ಮಿಶ್ರಣ ಮಾಡಿ. ಸಣ್ಣ ಉಂಡೆಗಳಾಗಿ ಆಕಾರ ಮಾಡಿ ಮತ್ತು ತಣ್ಣಗಾಗಿಸಿ. ಸಣ್ಣ ಸಣ್ಣ ಉಂಡೆಗಳಾಗಿ ಮಾಡಿ. ಅತ್ಯಧಿಕ ಪೋಷಕಾಂಶಗಳನ್ನು ಹೊಂದಿರುವ ಇದು ನೈಸರ್ಗಿಕ ಸಿಹಿಯನ್ನು ನೀಡುತ್ತದೆ.

Exit mobile version