Site icon Vistara News

Non Vegetarian Population: ಜಗತ್ತಿನಲ್ಲಿ ಕುಸಿಯುತ್ತಿದೆ ಮಾಂಸಾಹಾರಿಗಳ ಸಂಖ್ಯೆ! ಕಡಿಮೆ ಮಾಂಸಾಹಾರದ ದೇಶಗಳಲ್ಲಿ ಭಾರತವೇ ನಂ.1

Non Vegetarian Population

ಆರೋಗ್ಯಕರ ಜೀವನಶೈಲಿಗಾಗಿ ಅನೇಕರು ಮಾಂಸಾಹಾರವನ್ನು (Non Vegetarian Population) ತ್ಯಜಿಸಿ ಸಸ್ಯಾಹಾರವನ್ನು (vegetarian) ಆಯ್ಕೆ ಮಾಡಿಕೊಳ್ಳುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಹೆಚ್ಚು ಹೆಚ್ಚು ಜನರು ಪ್ರಾಣಿಗಳ ಬಗ್ಗೆ ವಿಶೇಷ ಪ್ರೀತಿ ಮತ್ತು ಕಾಳಜಿಯಿಂದಾಗಿ ಸಸ್ಯಾಹಾರವನ್ನೇ ಆಹಾರದಲ್ಲಿ (food) ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.

ಕೆಲವು ಸಂದರ್ಭಗಳಲ್ಲಿ ಜನರು ಧರ್ಮ ಮತ್ತು ಸಂಸ್ಕೃತಿಯ ಕಾರಣದಿಂದ ಸಸ್ಯಾಹಾರಿ ಆಹಾರವನ್ನು ಅನುಸರಿಸುತ್ತಾರೆ. ವಿಶ್ವದಲ್ಲಿ ಹಲವು ದೇಶಗಳಲ್ಲಿ ಮಾಂಸಾಹಾರಿಗಳು ಕಡಿಮೆಯಾಗುತ್ತಿದ್ದಾರೆ. ಅದರಲ್ಲೂ ಈ ಪ್ರಮುಖ ಏಳು ದೇಶಗಳು ಕಡಿಮೆ ಮಾಂಸಾಹಾರಿ ಜನರನ್ನು ಹೊಂದಿದೆ.


ಭಾರತ

ಭಾರತವು ವಿಶ್ವದಲ್ಲೇ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಮಾಂಸಾಹಾರ ಸೇವಿಸುವ ಜನರನ್ನು ಹೊಂದಿರುವ ದೇಶವಾಗಿದೆ. ʼವರ್ಲ್ಡ್‌ ಅಟ್ಲಾಸ್ʼ ಪ್ರಕಾರ ಪ್ರತಿ ವರ್ಷಕ್ಕೆ ತಲಾ ಒಬ್ಬರು ಕೇವಲ 3 ಕೆಜಿ ಮಾಂಸವನ್ನು ಮಾತ್ರ ಸೇವಿಸುತ್ತಾರೆ. ಇದಕ್ಕೆ ಹಲವಾರು ಅಂಶಗಳು ಕೊಡುಗೆ ನೀಡುತ್ತದೆ. ಇದರಲ್ಲಿ ಧರ್ಮವು ಅತ್ಯಂತ ಪ್ರಮುಖವಾದದ್ದು.


ಮೆಕ್ಸಿಕೋ

ಮೆಕ್ಸಿಕೋದಲ್ಲಿ ಸುಮಾರು ಶೇ. 19ರಷ್ಟು ಜನರು ಸಸ್ಯಾಹಾರಿಗಳು. ಅಲ್ಲಿನ ಜನರು ಆರೋಗ್ಯ ಕಾಳಜಿ, ಪ್ರಾಣಿ ಹಕ್ಕುಗಳು ಮತ್ತು ಪರಿಸರ ಸಮಸ್ಯೆಗಳಿಂದಾಗಿ ಸಸ್ಯ ಆಧಾರಿತ ಆಹಾರಕ್ಕೆ ಬದಲಾಗುತ್ತಿದ್ದಾರೆ. ಪ್ರಮುಖ ನಗರಗಳಲ್ಲಿ ಹೆಚ್ಚು ಸಸ್ಯಾಹಾರಿ ರೆಸ್ಟೋರೆಂಟ್‌ಗಳೇ ಇವೆ.

ಇಸ್ರೇಲ್

ಮಾಂಸಾಹಾರ ಸೇವನೆಯನ್ನು ನಿರ್ಬಂಧಿಸುವ ಜುದಾಯಿಸಂನಿಂದಾಗಿ ಇಸ್ರೇಲ್ ಕಡಿಮೆ ಮಾಂಸಾಹಾರಿ ಜನಸಂಖ್ಯೆಯನ್ನು ಹೊಂದಿದೆ. ದೇಶವು ವೇಗವಾಗಿ ಸಸ್ಯಾಹಾರಿಗಳಿಗೆ ಸ್ವರ್ಗವಾಗಿ ಮಾರ್ಪಡುತ್ತಿದೆ. ನೂರಾರು ರೆಸ್ಟೋರೆಂಟ್‌ಗಳು ಇಲ್ಲಿ ಸಸ್ಯಾಹಾರಿ ಊಟವನ್ನೇ ನೀಡುತ್ತಿವೆ. 2014 ರಲ್ಲಿ ವಿಶ್ವದ ಅತಿದೊಡ್ಡ ಸಸ್ಯಾಹಾರಿ ಉತ್ಸವವನ್ನು ಟೆಲ್ ಅವಿವ್‌ನಲ್ಲಿ ಆಯೋಜಿಸಲಾಯಿತು.

ಇಥಿಯೋಪಿಯಾ

ಆಫ್ರಿಕನ್ ದೇಶವು ಮಾಂಸ ಸೇವನೆಯ ಪ್ರಮಾಣವನ್ನು ಬಹಳ ಕಡಿಮೆ ಹೊಂದಿದೆ. ಬಡತನದ ಪ್ರಮಾಣ ಹೆಚ್ಚಿರುವುದರಿಂದ ಹೆಚ್ಚಿನ ಜನರಿಗೆ ಮಾಂಸಾಹಾರ ಇಲ್ಲಿ ದೊರೆಯುತ್ತಿಲ್ಲ. ಸರಾಸರಿಯಾಗಿ ದೇಶದ ಜನರು ತಲಾ 2.58 ಕೆ.ಜಿ. ಗೋಮಾಂಸ ಮತ್ತು ಕರುವಿನ ಮಾಂಸವನ್ನು ಸೇವಿಸುತ್ತಾರೆ. ಕೇವಲ 0.45 ಕೆ.ಜಿ. ಕೋಳಿ ಮಾಂಸಗಳನ್ನು ಸೇವಿಸುತ್ತಾರೆ.

ತೈವಾನ್

ಬೌದ್ಧಧರ್ಮದ ಕಾರಣದಿಂದಾಗಿ ತೈವಾನ್ ಗಣನೀಯ ಪ್ರಮಾಣದ ಸಸ್ಯಾಹಾರಿ ಜನಸಂಖ್ಯೆಯನ್ನು ಹೊಂದಿದೆ. ಯಾಕೆಂದರೆ ಧರ್ಮವು ಮಾಂಸ ಮುಕ್ತ ಆಹಾರಕ್ಕಾಗಿ ಪ್ರತಿಪಾದಿಸುತ್ತದೆ. ಅಲ್ಲದೇ ದೇಶದಲ್ಲಿ ಹಲವಾರು ಬಾಯಲ್ಲಿ ನೀರೂರಿಸುವಂತ ಸಸ್ಯಾಹಾರಿ ಪಾಕಪದ್ಧತಿಗಳಿವೆ. ಸರ್ಕಾರವು ಶಾಲೆಗಳು ಮತ್ತು ಸಾರ್ವಜನಿಕ ಸಂಸ್ಥೆಗಳಲ್ಲಿ ಸಸ್ಯಾಹಾರಿ ಆಯ್ಕೆಗಳನ್ನೇ ಒದಗಿಸುತ್ತದೆ.


ಜರ್ಮನಿ

ಜರ್ಮನಿಯಲ್ಲಿ ಹೆಚ್ಚು ಜನರು ಮಾಂಸಾಹಾರಿ ಜೀವನಶೈಲಿಯನ್ನು ಬಿಟ್ಟು ಸಸ್ಯಾಹಾರಿ ಆಹಾರವನ್ನು ಆರಿಸಿಕೊಳ್ಳುತ್ತಿದ್ದಾರೆ. ಇಲ್ಲಿ ಬಲವಾದ ಪ್ರಾಣಿ ಹಕ್ಕುಗಳ ಆಂದೋಲನವನ್ನು ಹೊಂದಿದೆ. ಇದು ಮಾಂಸಾಹಾರಿ ಜನಸಂಖ್ಯೆಯ ಕುಸಿತಕ್ಕೆ ಕಾರಣವಾಗಿದೆ. ಬರ್ಲಿನ್‌ನಂತಹ ಪ್ರಮುಖ ನಗರಗಳು ಹೆಚ್ಚು ಸಸ್ಯಾಹಾರಿ ರೆಸ್ಟೊರೆಂಟ್‌ಗಳನ್ನು ಹೊಂದಿದ್ದು ಅವು ಸೌರ್‌ಕ್ರಾಟ್ ಮತ್ತು ಪ್ರಿಟ್ಜೆಲ್‌ಗಳಂತಹ ಸಾಂಪ್ರದಾಯಿಕ ಭಕ್ಷ್ಯಗಳನ್ನು ನೀಡುತ್ತವೆ.

ಇದನ್ನೂ ಓದಿ: Indian Dessert 2024: ವಿಶ್ವದ ಪ್ರಸಿದ್ಧ ʼಸಿಹಿತಿಂಡಿ ತಾಣʼಗಳ ಪಟ್ಟಿಯಲ್ಲಿ ಸ್ಥಾನ ಪಡೆದ 10 ಭಾರತೀಯ ಸ್ವೀಟ್‌ ಸ್ಟಾಲ್‌ಗಳಿವು

ಮೊಜಾಂಬಿಕ್

ಪೂರ್ವ ಆಫ್ರಿಕಾದ ದೇಶವು ವಿಶ್ವದ ಅತ್ಯಂತ ಬಡ ದೇಶಗಳಲ್ಲಿ ಒಂದಾಗಿದೆ. ಪರಿಣಾಮವಾಗಿ, ಸರಾಸರಿ ಮಾಂಸ ಸೇವನೆಯು ಅಲ್ಲಿ ಕಡಿಮೆಯಾಗಿದೆ. ಮೊಜಾಂಬಿಕ್‌ನಲ್ಲಿರುವ ಜನರು ಹೆಚ್ಚಾಗಿ ಆಮದು ಮಾಡಿಕೊಂಡ ಮಾಂಸವನ್ನು ಸೇವಿಸುತ್ತಾರೆ.

Exit mobile version