ಶೀಲಾ ಸಿ. ಶೆಟ್ಟಿ, ಬೆಂಗಳೂರು
ಕಲರ್‌ಫುಲ್ ಫ್ರೇಮ್ ಹಾಗೂ ನಾನಾ ಶೇಪ್‌ಗಳ ಸನ್‌ಗ್ಲಾಸ್‌ಗಳು (Funky Sunglasses Fashion) ಇದೀಗ ಟ್ರೆಂಡಿಯಾಗಿವೆ. ಹೌದು. ಟ್ರಾವೆಲಿಂಗ್ ಹಾಗೂ ಔಟಿಂಗ್‌ನಲ್ಲಿ ಮೊದಲಿನಂತೆ ಡಿಸೆಂಟಾಗಿ ಸನ್‌ಗ್ಲಾಸ್ ಧರಿಸುವುದು ಇದೀಗ ಫ್ಯಾಷನ್‌ನಲ್ಲಿಲ್ಲ! ಬದಲಿಗೆ ಉಡುಪಿಗೆ ಮ್ಯಾಚ್ ಆಗುವಂತಹ ಇಲ್ಲವೇ ಕಾಂಟ್ರಾಸ್ಟ್ ಕಲರ್‌ಫುಲ್ ಫ್ರೇಮ್ ಇರುವಂತಹ ನಾನಾ ಶೇಪ್‌ಗಳ ಫಂಕಿ ಶೇಡ್ಸ್ ಅನ್ನು ಧರಿಸುವುದು ಟ್ರೆಂಡಿಯಾಗಿದೆ.
ಚಿತ್ರ-ವಿಚಿತ್ರ ಫ್ರೇಮ್ ಹಾಗೂ ಆಕಾರದ ಸನ್‌ಗ್ಲಾಸ್
ಟ್ರೆಂಡ್‌ನಲ್ಲಿರುವ ಸನ್‌ಗ್ಲಾಸ್‌ಗಳಲ್ಲಿ ಇದೀಗ ರೆಕ್ಟಾಂಗಲ್, ಪೆಂಟಾಂಗನಲ್, ಟ್ರಾಂಗಲ್, ಒವಲ್, ರೌಂಡ್, ಅಕ್ಟಾಗನಲ್ ಆಕಾರದವು ಸೇರಿವೆ. ಇನ್ನು ಇವುಗಳ ಫ್ರೇಮ್‌ಗಳು ಕೂಡ ಅಷ್ಟೇ! ಬ್ಲಡ್‌ರೆಡ್, ವೈನ್, ಪರ್ಪಲ್, ವೈಟ್, ಕ್ರೀಮ್, ಲೈಲಾಕ್, ಯೆಲ್ಲೋ. ನಿಯಾನ್ ಹೀಗೆ ಊಹೆಗೂ ಮೀರಿದ ಕಲರ್‌ನವಲ್ಲಿ ಬಿಡುಗಡೆಗೊಂಡಿವೆ. ಅತ್ಯಂತ ದುಬಾರಿಯಿರುವ ಬ್ರಾಂಡ್‌ಗಳಲ್ಲಿ ಇವುಗಳನ್ನು ಖರೀದಿ ಮಾಡುವುದು ಕಡಿಮೆ. ಯಾಕೆಂದರೇ. ಇವು ಕೇವಲ ಟ್ರಾವೆಲಿಂಗ್, ವೀಕೆಂಡ್, ಔಟಿಂಗ್ ಹಾಗೂ ಪಾರ್ಟಿಗಳಿಗೆ ಮಾತ್ರ ಆಕರ್ಷಕ ಎನಿಸುತ್ತವೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು. ಅವರ ಪ್ರಕಾರ, ಇತ್ತೀಚೆಗೆ ಮಾರುಕಟ್ಟೆಯಲ್ಲಿ ನಾನಾ ಬ್ರಾಂಡ್‌ಗಳಲ್ಲಿ ಕೈಗೆಟಕುವ ದರದಲ್ಲಿ ಇಂತಹ ಫ್ಯಾಷೆನಬಲ್ ಫಂಕಿ ಸನ್‌ಗ್ಲಾಸ್‌ಗಳು ದೊರೆಯುತ್ತಿವೆ ಎನ್ನುತ್ತಾರೆ.
ಹಾಲಿಡೇ ಎಂಜಾಯ್‌ಮೆಂಟ್‌ಗೆ ಹೇಳಿಮಾಡಿಸಿದ ಸನ್‌ಗ್ಲಾಸ್‌ಗಳಿವು
ಅಂದಹಾಗೆ, ಈ ಫಂಕಿ ಫ್ರೇಮ್ ಹಾಗೂ ಶೇಪ್‌ನ ಸನ್‌ಗ್ಲಾಸ್‌ಗಳು ಮೊದಲು ಹಾಲಿವುಡ್ ಸಿನಿಮಾಗಳಿಂದ ಟ್ರೆಂಡ್‌ಗೆ ಬಂದಿತೆಂದು ಹೇಳಬಹುದು. ಅದರಲ್ಲೂ ಬೀಚ್ ಹಾಗೂ ಪಾರ್ಟಿಗಳಲ್ಲಿ ಹೆಚ್ಚು ಕಾಣಿಸಿಕೊಂಡಿತು. ಸೆಲೆಬ್ರೆಟಿಗಳು ಅತಿ ಹೆಚ್ಚಾಗಿ ಬಳಸುತ್ತಿದ್ದರು. ಬರಬರುತ್ತಾ ಇದು ಹಾಲಿಡೇ ಪ್ರೀಯ ಫ್ಯಾಷನ್ ಪ್ರೇಮಿಗಳ ಲಿಸ್ಟ್‌ಗೆ ಸೇರಿಕೊಂಡಿತು ಎನ್ನುತ್ತಾರೆ ಸ್ಟೈಲಿಸ್ಟ್‌ಗಳು. ಕೆಲವರು ಇವುಗಳನ್ನು ಫೋಟೋಶೂಟ್ ಅಥವಾ ಫೋಟೋಗಳಲ್ಲಿ ಆಕರ್ಷಕವಾಗಿ ಕಾಣಿಸಿಕೊಳ್ಳಲು ಬಳಸುತ್ತಾರೆ.
ಫಂಕಿ ಸನ್‌ಗ್ಲಾಸ್ ಪ್ರಿಯರು ತಿಳಿದುಕೊಳ್ಳಬೇಕಾದ್ದು
- ಟೆಸ್ಟೇಡ್ ಸನ್‌ಗ್ಲಾಸ್ ಅಲ್ಲವಾದ್ದರಿಂದ ಹೆಚ್ಚು ಹೊತ್ತು ಕಣ್ಣಿಗೆ ಹಾಕಿಕೊಳ್ಳುವುದು ಸರಿಯಲ್ಲ!
- ಹಾಲಿಡೇಗೆ ಮ್ಯಾಚಿಂಗ್ ಔಟ್ಫಿಟ್ಗೆ ಹೊಂದುವಂತದ್ದನ್ನು ಧರಿಸಬಹುದು.
- ಕೇವಲ ಫೋಟೋಗಾಗಿ ಧರಿಸುವುದಾದಲ್ಲಿ ಕಡಿಮೆ ದರದನ್ನು ಕೊಳ್ಳಬಹುದು.
- ಮುಖದ ಆಕಾರಕ್ಕೆ ತಕ್ಕದ್ದನ್ನು ಮಾತ್ರ ಆಯ್ಕೆ ಮಾಡಿ.
- ಟ್ರೆಡಿಷನಲ್ ಲುಕ್ಗೆ ಮ್ಯಾಚ್ ಆಗದು ನೆನಪಿನಲ್ಲಿರಲಿ.
- ಕ್ಯಾಶುವಲ್ ಹಾಗೂ ವೆಸ್ಟರ್ನ್ ಲುಕ್ಗೆ ಮಾತ್ರ ಓಕೆ.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Ear Piercing Fashion: ಮತ್ತೆ ಮರಳಿದ ಒಂದರ ಮೇಲೊಂದು ಕಿವಿ ಚುಚ್ಚಿಸುವ ಫ್ಯಾಷನ್