-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಈ ಬಾರಿಯ ವಿಂಟರ್ ಸೀಸನ್‌ನಲ್ಲಿ (Winter Fashion 20233) ವುಲ್ಲನ್ ಹಾಗೂ ನಿಟ್ಟೆಡ್ ಟಾಪ್‌ಗಳು ಟ್ರೆಂಡಿಯಾಗಿವೆ. ಈ ಚಳಿಗಾಲದ ಸೀಸನ್‌ಗೆ ಗ್ಲಾಮರಸ್ ಲುಕ್ ನೀಡುವ ವೆರೈಟಿ ವುಲ್ಲನ್ ಅಥವಾ ನಿಟ್ಟೆಡ್ ಕ್ರಾಪ್ ಟಾಪ್‌ಗಳು ಜೆನ್ ಜಿ ಹುಡುಗಿಯರನ್ನು ಸವಾರಿ ಮಾಡತೊಡಗಿವೆ. ನೋಡಲು ಬಿಂದಾಸ್ ಲುಕ್ ನೀಡುವ ಈ ಟಾಪ್‌ಗಳು ಸದ್ಯ ಟ್ರೆಂಡಿಯಾಗಿವೆ. ಬಹಳಷ್ಟು ಮಂದಿ ಇವನ್ನು ವುಲ್ಲನ್ ಕ್ರಾಪ್ ಸ್ಟೆಟರ್ಸ್ ಎಂದೂ ಕರೆಯುತ್ತಾರೆ. ಆದರೆ ಇವು ಸ್ವೆಟರ್ ಡಿಸೈನ್ ಹೊಂದಿರುವುದಿಲ್ಲ, ಬದಲಿಗೆ ಸಾಮಾನ್ಯವಾಗಿ ಬರುವ ಗ್ಲಾಮರಸ್ ಟಾಪ್ ಡಿಸೈನ್‌ಗಳನ್ನು ಹೊಂದಿರುತ್ತವೆ. ಹೀಗಾಗಿ ಇವು ವುಲ್ಲನ್ ಕ್ರಾಪ್ ಟಾಪ್ ಎಂದೇ ಕರೆಯಬಹುದು ಎನ್ನುತ್ತಾರೆ ಸ್ಟೈಲಿಸ್ಟ್ ದೀಕ್ಷಾ.
ಅವರ ಪ್ರಕಾರ ವುಲ್ಲನ್‌ನಲ್ಲೂ ನಾನಾ ಬಗೆಯ ಥ್ರೆಡ್‌ಗಳಿವೆ. ಆಯಾ ಥ್ರೆಡ್‌ಗಳ ಸೈಝಿನ ಆಧಾರದ ಮೇಲೆ ಹೆಣೆಯಲಾದ ಡಿಸೈನ್‌ಗಳು ಡಿಫರೆಂಟಾಗಿ ರೂಪುಗೊಳ್ಳುತ್ತವೆ. ಹೆಣೆದ ನಂತರ ಟ್ರಾನ್ಸಪರೆಂಟ್ ಇರುವಂತವನ್ನು ಇನ್ನರ್ ಧರಿಸಿ, ಅದರ ಮೇಲೆ ಹಾಕಿಕೊಳ್ಳಬೇಕಾಗುತ್ತದೆ ಎನ್ನುತ್ತಾರೆ ಅವರು.
ಇದನ್ನೂ ಓದಿ : Star Fashion: ಗ್ಲಾಮರಸ್ ಕಟೌಟ್ ಡ್ರೆಸ್‌ನಲ್ಲಿ ನಟಿ ಮೌನ ಗುಡ್ಡೆಮನೆ ಹಾಲಿಡೇ ಫ್ಯಾಷನ್
ನಿಟ್ಟೆಡ್ ಕ್ರಾಪ್ ಟಾಪ್
ಇದು ಕೂಡ ವುಲ್ಲನ್ ಕ್ರಾಪ್ ಟಾಪ್‌ಗಳಂತೆಯೇ ಇರುತ್ತವೆ. ಥ್ರೆಡ್ ತೆಳುವಾಗಿರುತ್ತವೆ. ಲೇಯರ್ ಲುಕ್‌ಗಾಗಿಯೂ ಬಳಸಲಾಗುತ್ತದೆ. ಆದರೆ, ಇಂದಿನ ಜೆನ್ ಜಿ ಹುಡುಗಿಯರು ಇವನ್ನು ಡಿಫರೆಂಟ್ ಸ್ಟೈಲ್‌ನಲ್ಲಿ ಧರಿಸುತ್ತಿದ್ದಾರೆ. ಇವುಗಳಲ್ಲೂ ನಾನಾ ಡಿಸೈನ್ಸ್ ಲಭ್ಯ. ಮೆಷಿನ್ ವುಲ್ಲನ್ ಕ್ರಾಪ್ ಟಾಪ್‌ಗಳು ಇಂದು ಅತಿ ಹೆಚ್ಚಾಗಿ ಕಾಣಸಿಗುತ್ತವೆ. ಮೊದಲಿನಂತೆ ಇದೀಗ ಹ್ಯಾಂಡ್‌ಮೇಡ್ ಅಂದರೆ, ಕೈಗಳಲ್ಲಿ ಹೆಣೆದ ವುಲ್ಲನ್ ಕ್ರಾಪ್ ಟಾಪ್ ಸಿಗುವುದು ತೀರಾ ಕಡಿಮೆಯಾಗಿದೆ ಎನ್ನುತ್ತಾರೆ ಸ್ಟೈಲಿಸ್ಟ್ ಜಾನ್.
ವುಲ್ಲನ್/ನಿಟ್ಟೆಡ್ ಕ್ರಾಪ್ ಟಾಪ್ ಬಗ್ಗೆ ತಿಳಿದಿರಬೇಕಾದ ಸಂಗತಿಗಳು
- · ಜೆನ್ ಜಿ ಹುಡುಗಿಯರ ಆಯ್ಕೆಯ ಲಿಸ್ಟ್ನಲ್ಲಿರುವ ಇವನ್ನು ಡಿಸೈನ್ ನೋಡಿ ಇತರರು ಧರಿಸುವುದು ಉತ್ತಮ.
- · ಗಿಡ್ಡವಾಗಿರುವುದರಿಂದ ಇವು ನೋಡಲು ಸ್ಟೈಲಾಗಿ ಕಾಣುತ್ತವೆಯೇ ಹೊರತು ಬೆಚ್ಚಗಿಡುವುದಿಲ್ಲ.
- · ಇದು ವಿದೇಶಿ ಕಾನ್ಸೆಪ್ಟ್. ಇದೀಗ ಇಲ್ಲಿ ಪ್ರಚಲಿತದಲ್ಲಿದೆ.
- · ವೆಸ್ಟೆರ್ನ್ ಲುಕ್ಗಾಗಿ ಇದನ್ನು ಧರಿಸಬಹುದು.