ಶೀಲಾ ಸಿ. ಶೆಟ್ಟಿ, ಬೆಂಗಳೂರು
ಬಾರ್ಡೋಟ್ ಡಿಸೈನರ್‌ವೇರ್‌ಗಳು ಮತ್ತೆ ಮರಳಿವೆ. ಸೆಲೆಬ್ರಿಟಿಗಳ ಗ್ಲಾಮರಸ್ ಲುಕ್(celebrity look) ಹೈಲೈಟ್ ಮಾಡುವ ಈ ಡಿಸೈನರ್‌ವೇರ್‌ಗಳು ಕೋರೋನಾ ನಂತರದ ಫ್ಯಾಷನ್‌ನಲ್ಲಿ ಮತ್ತೊಮ್ಮೆ ನ್ಯೂ ಲುಕ್‌ನಲ್ಲಿ ಬಿಡುಗಡೆಗೊಂಡಿವೆ.
ಕಾಲರ್ ಬೋನ್ ಹಾಗೂ ಆಕರ್ಷಕ ಭುಜವನ್ನು ಎಕ್ಸ್‌ಪೋಸ್ ಮಾಡುವ ಬಾರ್ಡೋಟ್ ಡಿಸೈನರ್‌ವೇರ್‌ಗಳನ್ನು ಸಾಮಾನ್ಯ ಭಾಷೆಯಲ್ಲಿ ಆಫ್ ಶೋಲ್ಡರ್ ಡ್ರೆಸ್ ಎಂದು ಕೂಡ ಕರೆಯಲಾಗುತ್ತದೆ.
ಬಾರ್ಡೋಟ್ ಹಿಸ್ಟರಿ:
ಫ್ಯಾಷನ್ ಡಿಸೈನರ್ ರಶ್ಮಿ ಪ್ರಕಾರ: ಬಾರ್ಡೋಟ್ ಡ್ರೆಸ್ ಗಳು ಖ್ಯಾತಿ ಹೊಂದಿದ್ದೇ ಫ್ಯಾಷನ್ ಐಕಾನ್ ಹಾಗೂ ನಟಿ ಬ್ರಿಗಿಟ್ಟೆ ಬಾರ್ಡೋಟ್ನಿಂದಾಗಿ. ಗ್ಲಾಮರಸ್ ಲುಕ್‌ಗಾಗಿ ಈ ಡಿಸೈನರ್‌ವೇರ್‌ಗಳನ್ನು ನಾನಾ ಶೈಲಿಯಲ್ಲಿ ಆಕೆ ಧರಿಸುತ್ತಿದ್ದದ್ದು ಈ ಉಡುಪು ಫ್ಯಾಷನ್‌ನಲ್ಲಿ ಸ್ಥಾನ ಗಿಟ್ಟಿಸಲು ಕಾರಣವಾಯಿತು. ಕಾಲಕ್ಕೆ ತಕ್ಕಂತೆ ರೂಪ ಬದಲಿಸಿತು ಅಷ್ಟೇ!
ಬಾರ್ಡೋಟ್ ಡಿಸೈನರ್‌ವೇರ್‌ನ ನೆಕ್‌ಲೈನ್‌ಗಳು ಎಲ್ಲದರಲ್ಲೂ ಕಾಮನ್. ನೆಕ್‌ಲೈನ್ ಕಾನ್ಸೆಪ್ಟ್ ಇದರಲ್ಲಿಲ್ಲ ಎನ್ನಬಹುದು. ಅದು ಟಾಪ್ ಆಗಬಹುದು ಅಥವಾ ಡ್ರೆಸ್ ಆಗಬಹುದು. ಶೋಲ್ಡರ್ ವಿನ್ಯಾಸ ಮಾತ್ರ ಬಗೆಬಗೆಯವು ಸಿಗುತ್ತವೆ. ಇನ್ನು ಈ ಉಡುಪಿನೊಂದಿಗೆ ಮಾತ್ರ ಸಾಕಷ್ಟು ಬಗೆಯ ಸ್ಲೀವ್ ವಿನ್ಯಾಸಗಳು ಕಂಡು ಬರುತ್ತವೆ. ಅವುಗಳಲ್ಲಿ ಡ್ರಾಪ್ ಶೋಲ್ಡರ್, ಬೆಲ್ ಸ್ಲೀವ್, ಲೇಸೀ, ಫಿಟ್ಟೆಡ್, ಸ್ಟ್ರಾಪಿ ಟಾಪ್, ಕೋಲ್ಡ್ ಶೋಲ್ಡರ್ ಟ್ರೆಂಡ್‌ನಲ್ಲಿವೆ.
ಬಾರ್ಡೋಟ್ ಡಿಸೈನರ್‌ವೇರ್:
ಮೊದಲೆಲ್ಲಾ ಕೇವಲ ಹೈಟೆಕ್ ಫ್ಯಾಷನ್‌ನಲ್ಲಿದ್ದ ಈ ಉಡುಪು ಇದೀಗ ತಾರೆಯರ ಮೂಲಕ ಸಾಮಾನ್ಯ ಯುವತಿಯರ ವಾರ್ಡ್ರೋಬ್ ಸೇರಿದೆ. ಇದಕ್ಕೆ ಕಾರಣ. ಎರಡು ಬಗೆಯಲ್ಲಿ ಈ ಉಡುಪನ್ನು ಧರಿಸಬಹುದು. ಗ್ಲಾಮರಸ್ ಲುಕ್‌ಗಾಗಿ ಭುಜದಿಂದ ಕೆಳಗೆ ಈ ಉಡುಪು ಧರಿಸುವುದು ಒಂದು ಶೈಲಿಯಾದರೇ, ನೆಕ್‌ಲೈನನ್ನು ಭುಜದಿಂದ ಕೊಂಚ ಮೇಲೆ ಎಳೆದರೇ ಬ್ರಾಡ್ ನೆಕ್‌ಲೈನ್‌ನಂತೆ ಕಾಣುವುದು, ಸಾಮಾನ್ಯ ಡ್ರೆಸ್ನಂತೆ ಇಲ್ಲವೇ ಟಾಪ್ನಂತೆ ಕಾಣುವುದು ಎನ್ನುತ್ತಾರೆ ಡಿಸೈನರ್ ಬೃಂದಾ.
ಬಾರ್ಡೋಟ್ ಗೌನ್:
ಈ ಶೈಲಿಯ ಗೌನ್‌ಗಳು ಕೂಡ ಸೆಲೆಬ್ರಿಟಿಗಳ ಫ್ಯಾಷನ್‌ನಲ್ಲಿದೆ(celebrity look). ಅದರಲ್ಲೂ ಹಾಲಿವುಡ್, ಬಾಲಿವುಡ್ ತಾರೆಯರು ಈ ಗೌನ್‌ಗಳ ಪ್ರೇಮಿಗಳು. ನಟಿಯರಾದ ಜೆನಿಫರ್, ವಾಟ್ಸಾನ್, ಜೆಸ್ಸಿಕಾ, ಆ್ಯಮಿ ಹಾಗೂ ಬಾಲಿವುಡ್‌ನ ಅದಿತಿ, ಸಾರಾ, ಅನನ್ಯಾ ಪಾಂಡೇ, ಅಲಯಾ, ಮೃನಾಲ್ ಠಾಕೂರ್ ಸೇರಿದಂತೆ ಹಲವು ತಾರೆಯರು ಬಾರ್ಡೋಟ್ ಗೌನ್ ಹೆಚ್ಚಾಗಿ ಧರಿಸುತ್ತಾರೆ. ರೆಡ್ ಕಾರ್ಪೆಟ್ ಸಮಾರಂಭಗಳಲ್ಲಿ ಇವನ್ನು ಸಾಮಾನ್ಯವಾಗಿ ಧರಿಸುವುದನ್ನು ಕಾಣಬಹುದು.
ಗ್ಲಾಮರಸ್ ಲುಕ್‌ಗಾಗಿ ಮಿಕ್ಸ್ ಮ್ಯಾಚ್ ಮಾಡಿ:
ಸ್ಕರ್ಟ್ಸ್ ಜತೆ ಬಾರ್ಡೋಟ್ ಧರಿಸುವುದಾದಲ್ಲಿಆದಷ್ಟೂ ಟ್ರೆಂಡಿ ಶೇಡ್‌ನದ್ದನ್ನು ಚೂಸ್ ಮಾಡಬೇಕು. ಸ್ಟ್ರೈಫ್ಸ್, ಪ್ರಿಂಟ್ಸ್ ವಿನ್ಯಾಸದ್ದು ಚೆನ್ನಾಗಿ ಕಾಣುತ್ತದೆ. ತೀರಾ ಸ್ಲಿಮ್ ಇರುವವರಿಗೆ ನಾಟ್ ಓಕೆ. ಹೆಲ್ತಿ ಬಾಡಿ ಹೊಂದಿರುವವರಿಗೆ ಬಾರ್ಡೋಟ್ ಹೇಳಿಮಾಡಿಸಿದಂತಿರುತ್ತದೆ. ಬಾರ್ಡೋಟ್ ಟಾಪ್‌ಗಳನ್ನು ಸ್ಕರ್ಟ್ಸ್, ಪ್ಯಾಂಟ್, ಬರ್ಮಡಾ, ಸ್ಲಿಟ್ ಪ್ಯಾಂಟ್ಸ್, ಕೇಪ್ರೀಸ್ ಹೀಗೆ ನಾನಾ ಬಗೆಯಲ್ಲಿ ಮಿಕ್ಸ್ ಮ್ಯಾಚ್ ಮಾಡಿ ಧರಿಸಬಹುದು.
ಬಾರ್ಡೋಟ್ ಟಾಪ್‌ಗಾದಲ್ಲಿಆದಷ್ಟೂ ಕ್ಯೂಲ್ಲೊಟ್ಸ್ ಆಯ್ಕೆ ಮಾಡಬಹುದು. ಮಿಡಿ ಸ್ಕರ್ಟ್ಸ್, ಲೂಸರ್ಸ್, ಫ್ರಿಲ್ಲರ್ಸ್ ಜತೆ ಮ್ಯಾಚ್ ಮಾಡಬಹುದು. ಟೊರ್ನ್ ಜೀನ್ಸ್‌ಗೂ ಸೂಟ್ ಆಗುತ್ತದೆ. ಫಂಕಿ ಲುಕ್ ನೀಡಬಹುದು. ಉದ್ದಗಿರುವವರಿಗೂ ಕಾಲರ್ ಬೋನ್ ಹೈಲೈಟಾಗುತ್ತದೆ. ಗ್ಲಾಮರಸ್ ಲುಕ್ ನೀಡುತ್ತದೆ.
ಖರೀದಿಸುವಾಗ ಗಮನದಲ್ಲಿಡಿ:
ಬಾರ್ಡೋಟ್ ಡ್ರೆಸ್‌ಗಳನ್ನು ಕೊಳ್ಳುವಾಗ ಆದಷ್ಟೂ ಫಿಟ್ಟಿಂಗ್ ಇರುವಂತದ್ದನ್ನೇ ಖರೀದಿಸಬೇಕು. ಇಲ್ಲವಾದಲ್ಲಿದೊಗಲೆಯಾಗಿ ಜಾರಿ ಬೀಳುವ ಪ್ರಸಂಗ ಎದುರಾಗಬಹುದು.
(ಲೇಖಕಿ ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ| ಮರ್ಲಿನ್ ಮನ್ರೋ ಐತಿಹಾಸಿಕ ಉಡುಗೆ ಹಾಳು ಮಾಡಿದ ಕಾರ್ಡಾಶಿಯಾನ್?